PM Yasasvi Scholarship-ಪಿಎಂ ಯಶಸ್ವಿ ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

July 10, 2025 | Siddesh
PM Yasasvi Scholarship-ಪಿಎಂ ಯಶಸ್ವಿ ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Share Now:

ಕೇಂದ್ರ ಸರ್ಕಾರದಿಂದ ಪಿ. ಎಂ. ಯಂಗ್ ಅಚೀವರ್ಸ್ ಸ್ಕಾಲರ್ಶಿಪ್(PM Yasasvi Scholarship) ಅವಾರ್ಡ್ ಸ್ಕೀಮ್ ಫಾರ್ ವೈಬ್ರೆಂಟ್ ಇಂಡಿಯಾ(PM-YASASVI) ಯೋಜನೆಯಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸಲು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪಿಎಂ ಯಶಸ್ವಿ ಯೋಜನೆ(PM Yasasvi Scholarship) ಅಡಿಯಲ್ಲಿ ಎರಡು ಹಂತದಲ್ಲಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು ಅರ್ಜಿ ಸಲ್ಲಿಸಿ ಆಯ್ಕೆಯಾಡ 9 ನೇ ತರಗತಿ ಹಾಗೂ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅವಕಾಶವಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: PMAY Yojana-ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ₹2.5 ಲಕ್ಷ ಸಬ್ಸಿಡಿ!ಈಗಲೇ ಅರ್ಜಿ ಸಲ್ಲಿಸಿ!

ಅನೇಕ ಪೋಷಕರಿಗೆ ಈ ಯೋಜನ ಕುರಿತು ಸಮರ್ಪಕ ಮಾಹಿತಿಯೇ ತಿಳಿದಿಲ್ಲ, ಪ್ರಸ್ತುತ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ರಾಜ್ಯ ಮತ್ತು ಕೇಂದ್ರ ಹಾಗೂ ಖಾಸಗಿ ಫೌಂಡೇಶನ್ ಮೂಲಕ ಅನೇಕ ಸ್ಕಾಲರ್ಶಿಪ್(PM Yasasvi Scholarship Yojana) ಕಾರ್ಯಕ್ರಮಗಳು ಲಭ್ಯವಿದ್ದು ಇದರ ಕುರಿತು ಮಾಹಿತಿಯನ್ನು ತಿಳಿದು ಅರ್ಜಿ ಸಲ್ಲಿಸಿ ಆರ್ಥಿಕ ನೆರವನ್ನು ಪಡೆಯಲು ಅವಕಾಶವಿರುತ್ತದೆ ಈ ಸಾಲಿನಲ್ಲಿ ಪಿಎಂ ಯಶಸ್ವಿ ಯೋಜನೆಯು ಒಂದಾಗಿದೆ.

PM Yasasvi Scholarship-ಪಿಎಂ ಯಶಸ್ವಿ ವಿದ್ಯಾರ್ಥಿವೇತನ ಯೋಜನೆ:

ಹಿಂದುಳಿದ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮೆಟ್ರಿಕ್ಯುಲೇಷನ್ ಪೂರ್ವ ಅಥವಾ ಮಾಧ್ಯಮಿಕ ಹಂತದಲ್ಲಿ ಅವರ ಶಿಕ್ಷಣವನ್ನು ಬೆಂಬಲಿಸಲು ಆರ್ಥಿಕ ಸಹಾಯವನ್ನು ಒದಗಿಸುವ ಮೂಲಕ ಸಹಾಯ ಮಾಡಲು ಪ್ರಧಾನ ಮಂತ್ರಿ ಯಶಸ್ವಿ ವಿದ್ಯಾರ್ಥಿವೇತನ ಯೋಜನೆಯು ಸರ್ಕಾರವು ಅಳವಡಿಸಿಕೊಂಡ ಪ್ರಮುಖ ಉಪಕ್ರಮವಾಗಿದೆ. ಈ ಯೋಜನೆಯನ್ನು ಭಾರತದಲ್ಲಿ ಅಧ್ಯಯನ ಮಾಡಲು ಮಾತ್ರ ಪಡೆಯಬಹುದು ಮತ್ತು ವಿದ್ಯಾರ್ಥಿಗಳಿಗೆ ಸೇರಿದ ರಾಜ್ಯ /ಕೇಂದ್ರಾಡಳಿತ ಪ್ರದೇಶದಿಂದ ಧನಸಹಾಯ ನೀಡಲಾಗುತ್ತದೆ.

ಇದನ್ನೂ ಓದಿ: Free Motor Repair-ಉಚಿತ ಎಲೆಕ್ಟ್ರಿಷಿಯನ್ ಮತ್ತು ಮೋಟರ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

PM Yasasvi Scholarship Eligibility-ಪಿಎಂ ಯಶಸ್ವಿ ವಿದ್ಯಾರ್ಥಿವೇತನ ಪಡೆಯಲು ನಿಗದಿಪಡಿಸಿದ ಅರ್ಹತಾ ಮಾನದಂಡಗಳು:

  • ಅರ್ಜಿದಾರ ಅಭ್ಯರ್ಥಿಯು ಭಾರತೀಯ ನಿವಾಸಿಯಾಗಿರಬೇಕು.
  • ಅರ್ಜಿದಾರ ವಿದ್ಯಾರ್ಥಿಯು ಹಿಂದುಳಿದ ವರ್ಗ (OBC), ಆರ್ಥಿಕವಾಗಿ ಹಿಂದುಳಿದ ವರ್ಗ (EBC), ಅಥವಾ ಅಧಿಸೂಚಿತ, ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು (DNT) ವರ್ಗದವರಾಗಿರಬೇಕು.
  • ಅರ್ಜಿದಾರ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯವು 2.50 ಲಕ್ಷದ ಒಳಗಿರಬೇಕು.
  • ವಿದ್ಯಾರ್ಥಿಯು ಪ್ರಸ್ತುತ ಸರ್ಕಾರಿದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 9ನೇ ಅಥವಾ 11ನೇ ತರಗತಿಯಲ್ಲಿ ಹಾಗೂ Pre-Matric Scholarship for OBC, EBC and DNT Students,
  • Post-Matric Scholarship for OBC, EBC and DNT Students,Top Class School Education for OBC,EBC and DNT Students,Top Class College Education for OBC, EBC and DNT Students
  • Construction of Hostel for OBC Boys and Girls ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Horticulture Schemes-ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿಯಲ್ಲಿ ಪವರ್ ಸ್ಪ್ರೇಯರ್,ದೋಟಿ, ಪವರ್ ವೀಡರ್ ಪಡೆಯಲು ಅರ್ಜಿ!

Last Date For Application-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 31 ಆಗಸ್ಟ್ 2025
ಅರ್ಜಿ ಪರಿಶೀಲನೆ- 15 ಸೆಪ್ಟೆಂಬರ್ 2025

Scholarship Selection Process-ಪಿಎಂ ಯಶಸ್ವಿ ವಿದ್ಯಾರ್ಥಿವೇತನಕ್ಕೆ ಆಯ್ಕೆ ವಿಧಾನ:

ಈ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ನೂತನ ಮಾರ್ಗಸೂಚಿಯ ಪ್ರಕಾರ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ ಮತ್ತು ಈಗ ವಿದ್ಯಾರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಈ ಮೊದಲು ವಿದ್ಯಾರ್ಥಿವೇತನವನ್ನು ನೀಡಲು ಅರ್ಹ ವಿದ್ಯಾರ್ಥಿಯನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅರ್ಹ ಅಭ್ಯರ್ಥಿಗಳನ್ನು ಗುರುತಿಸಲು ಯಶಸ್ವಿ ಪ್ರವೇಶ ಪರೀಕ್ಷೆಯನ್ನು (YET) ನಡೆಸುತ್ತಿತ್ತು. ಆದರೆ, ಇತ್ತೀಚಿನ ನವೀಕರಣದ ಪ್ರಕಾರ, ಪ್ರವೇಶ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: Nano Urea-ನಾನ್ಯೋ ಯೂರಿಯಾವನ್ನು ವಿವಿಧ ಬೆಳೆಗಳಲ್ಲಿ ಬಳಕೆ ಮಾಡುವುದು ಹೇಗೆ?

PM Yasasvi Scholarship

Scholarship Amount Payment-ವಿದ್ಯಾರ್ಥಿವೇತನ ಪಾವತಿ ವಿಧಾನ:

ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು ನೇರ ನಗದು ವರ್ಗಾವಣೆ(DBT) ಮೂಲಕ ವಿದ್ಯಾರ್ಥಿವೇನದ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

Scholarship Amount Details-ಎಷ್ಟು ವಿದ್ಯಾರ್ಥಿವೇತನವನ್ನು ಪಾವತಿ ಮಾಡಲಾಗುತ್ತದೆ?

ಪಿಎಂ ಯಶಸ್ವಿ ಯೋಜನೆಯಡಿ ವಿವಿಧ ಪ್ರಕಾರದಲ್ಲಿ ತರಗತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿವೇತನವನ್ನು ಒದಗಿಸಲಾಗುತ್ತದೆ ಇದರ ವಿವರವನ್ನು ಈ ಕೆಳಗಿನ ಚಿತ್ರದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: Ration Card eKYC-ರೇಶನ್ ಕಾರ್ಡ ಇ-ಕೆವೈಸಿ ಕುರಿತು ಮಹತ್ವದ ಮಾಹಿತಿ ಪ್ರಕಟ!

Online Apply Method-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಿ ಅಧಿಕೃತ scholarships.gov.in ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಪ್ರಥಮ ಹಂತದಲ್ಲಿ ಇಲ್ಲಿ ಕ್ಲಿಕ್ "Apply Now" ಮಾಡಿ ಅಧಿಕೃತ scholarships.gov.in ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ "New user? Register yourself" ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ OTR ಸಂಖ್ಯೆಯನ್ನು ರಚನೆ ಮಾಡಿಕೊಳ್ಳಬೇಕು.

Step-3: OTR ಸಂಖ್ಯೆಯನ್ನು ರಚನೆ ಮಾಡಿಕೊಂಡ ಬಳಿಕ ಪುನಃ "Login with OTR" ಪುಟವನ್ನು ಭೇಟಿ ಮಾಡಿ Enter OTR (One Time Registration) no.* ಕಾಲಂ ನಲ್ಲಿ ನಿಮ್ಮ OTR ಸಂಖ್ಯೆಯನ್ನು ಹಾಕಿ ಕೆಳಗೆ ಪಾಸ್ವರ್ಡ ಅನ್ನು ನಮೂದಿಸಿ ಕ್ಯಾಪ್ಚ್ ಕೋಡ್ ಅನ್ನು ಹಾಕಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.

Step-4: ಲಾಗಿನ್ ಅದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ವಿದ್ಯಾರ್ಥಿವೇತನ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Bele Samikshe- ರೈತರು ಈ ಕೆಲಸ ಮಾಡದಿದ್ದರೆ ಬೆಳೆ ವಿಮೆ ಇತರೆ ಯೋಜನೆಗಳ ಸೌಲಭ್ಯ ಬಂದ್ ಆಗಲಿದೆ!

Required Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಪಿಎಂ ಯಶಸ್ವಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿವೇತನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

  • ವಿದ್ಯಾರ್ಥಿಯ ಆಧಾರ್ ಕಾರ್ಡ್/Aadhar
  • ಅಂಕಪಟ್ಟಿ/Markscard
  • ಫೋಟೋ/Photo
  • ಕುಟುಂಬದ ಜಾತಿ ಮತ್ತು ಆದಾಯ ಪ್ರಮಾಣಪತ್ರ/Caste And Income
  • ನಿವಾಸಿ ದೃಡೀಕರಣ ಪ್ರಮಾಣಪತ್ರ/Residential certificate
  • ಬ್ಯಾಂಕ್ ಪಾಸ್ ಬುಕ್/Pass Book
  • ಮೊಬೈಲ್ ಸಂಖ್ಯೆ/Mobile
  • ಇ-ಮೇಲ್ ಐಡಿ/E-mail

ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಪಿಎಂ ಯಶಸ್ವಿ ಯೋಜನೆಯ ಅಧಿಕೃತ ವೆಬ್ಸೈಟ್-Click Here
PM Yasasvi Website-ಯೋಜನೆ ಅನುಷ್ಠಾನ ಇಲಾಖೆಯ ಜಾಲತಾಣ-Click Here
PM Yasasvi Scholarship Guideline-ಯೋಜನೆಯ ಅಧಿಕೃತ ಮಾರ್ಗಸೂಚಿ-Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: