HomeGovt SchemesPmkisan farmer list-ಪಿ ಎಂ ಕಿಸಾನ್ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ...

Pmkisan farmer list-ಪಿ ಎಂ ಕಿಸಾನ್ 19ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ಹಳ್ಳಿವಾರು(PMkisan farmer list) ರೈತರ ಪಟ್ಟಿಯನ್ನು ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PMKISAN) ಯೋಜನೆಯಡಿ ದೇಶದ ಎಲ್ಲಾ ವರ್ಗದ ರೈತರಿಗೆ ವಾರ್ಷಿಕವಾಗಿ ನಾಲ್ಕು ತಿಂಗಳಿಗೊಮ್ಮೆ ರೂ 2,000 ದಂತೆ ಒಟ್ಟು ರೂ 6,000 ಆರ್ಥಿಕ ನೆರವನ್ನು ನೀಡಲಾಗುತ್ತದೆ ಇದರಂತೆ ಈ ಯೋಜನೆಯಡಿ ಅರ್ಥಿಕ ನೆರವನ್ನು ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ರೈತರು ತಮ್ಮ ಮೊಬೈಲ್ ನಲ್ಲೇ ಹೇಗೆ ಪಡೆಯುವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: PM Usha Scholarship- ಹೆಚ್ಚು ಅಂಕ ಪಡೆದು ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ರೂ ₹20,000 ವಿದ್ಯಾರ್ಥಿ ವೇತನ!

ಅರ್ಹ ಅರ್ಜಿದಾರರು ಎರಡು ವಿಧಾನ ಅನುಸರಿಸಿ ಹಳ್ಳಿವಾರು ರೈತರ ಪಟ್ಟಿಯನ್ನು(fruits) ಪಡೆಯಲು ಅವಕಾಶವಿದ್ದು ಯಾವೆಲ್ಲ ಹಂತಗಳನ್ನು ಅನುಸರಿಸಿ ರೈತರು ಮನೆಯಲ್ಲಿ ಕುಳಿತು ತಮ್ಮ ಮೊಬೈಲ್ ನಲ್ಲಿ ಒಂದೆರಡು ಕ್ಲಿಕ್ ನಲ್ಲೇ ನಿಮ್ಮ ಹಳ್ಳಿಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ಪಡೆಯಬಹುದು ಎಂದು ಈ ಕೆಳಗೆ ವಿವರಿಸಲಾಗಿದೆ.

Kisan Samman Nidhi- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ:

ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಶ್ರ‍ೀ ನರೇಂದ್ರ ಮೋದಿ ಅವರ ಅವಧಿಯಲ್ಲಿ 2019 ರಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ಇಲ್ಲಿಯವರೆಗೆ ಈ ಯೋಜನೆಯಡಿ ತಲಾ ರೂ 2,000 ದಂತೆ ಒಟ್ಟು 18 ಕಂತುಗಳ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ದೇಶದ ಅರ್ಹ ರೈತರ ಬ್ಯಾಂಕ್ ಖಾತೆಗೆ ಆರ್ಥಿಕ ನೆರವನ್ನು ಜಮಾ ಮಾಡಲಾಗಿದೆ.

ಇದನ್ನೂ ಓದಿ: Kuri sakanike yojane- ಕುರಿ ಸಾಕಾಣಿಕೆ ಮಾಡಲು 1.75 ಲಕ್ಷ ನೆರವು! ಇಲ್ಲಿದೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ!

PM-kisan Farmers list- ಮೊಬೈಲ್ ನಲ್ಲೇ ಹಳ್ಳಿವಾರು ಅರ್ಹ ರೈತರ ಪಟ್ಟಿಯನ್ನು ಪಡೆಯುವುದು ಹೇಗೆ?

ಎರಡು ವಿಧಾನವನ್ನು ಅನುಸರಿಸಿ ರೈತರು ತಮ್ಮ ಹಳ್ಳಿಯ ಅರ್ಹರ ಫಲಾನುಭವಿ ರೈತರ ಪಟ್ಟಿಯನ್ನು ಪಡೆಯಲು ಅವಕಾಶವಿರುತ್ತದೆ ಈ ಎರಡು ವಿಧಾನದ ಮಾಹಿತಿಯನ್ನು ಈ ಕೆಳಗೆ ಹಂತವಾರು ವಿವರಿಸಲಾಗಿದೆ.

ವಿಧಾನ-1: ರಾಜ್ಯ ಸರಕಾರದ ಕೃಷಿ ಇಲಾಖೆ ಅಧಿಕೃತ ವೆಬ್ಸೈಟ್ ನಲ್ಲಿ ಪಟ್ಟಿ ಪಡೆಯಬಹುದು:

ರಾಜ್ಯ ಸರಕಾರದ ಕೃಷಿ ಇಲಾಖೆಯಿಂದ ಅಭಿವೃದಿಪಡಿಸಿರುವ PMKISAN FRUITS ತಂತ್ರಾಂಶವನ್ನು ನೇರವಾಗಿ ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಪಿ ಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ನೋಡಬಹುದು.

Step-1: PMkisan Farmers list ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕೃಷಿ ಇಲಾಖೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಹೆಸರನ್ನು ಆಯ್ಕೆ ಮಾಡಿಕೊಂಡು “ವೀಕ್ಷಿಸು” ಬಟನ್ ಕ್ಲಿಕ್ ಮಾಡಬೇಕು.

pmkisan

ಇದನ್ನೂ ಓದಿ: Gruhalakshmi DBT amount-ಬಿಪಿಎಲ್ ಕಾರ್ಡ ರದ್ದಾದ್ರೆ ಗೃಹಲಕ್ಷ್ಮಿ ಹಣ ಜಮಾ ಆಗಲ್ಲವಾ? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ!

Step-3: “ವೀಕ್ಷಿಸು” ಆಯ್ಕೆಯ ಮೇಲೆ ಒತ್ತಿದ ಬಳಿಕ ಇಲ್ಲಿ ನಿಮ್ಮ ಹಳ್ಳಿಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ತೋರಿಸುತ್ತದೆ.

ಈ ಪಟ್ಟಿಯಲ್ಲಿ ರೈತರ ಹೆಸರು, ಪಿಎಂಕೆ ಐಡಿ, ಅರ್ಜಿ ಸ್ಥಿತಿ, ಇತ್ಯಾದಿ ಮಾಹಿತಿ ತೋರಿಸುತ್ತದೆ ಇದರಲ್ಲಿ ನಿಮ್ಮ ಹೆಸರು ಇದಿಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.

ಇದನ್ನೂ ಓದಿ: Aadhaar Card- ಆಧಾರ್ ಕಾರ್ಡ ಹೊಂದಿರುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!

ವಿಧಾನ-2: ಕೇಂದ್ರ ಸರಕಾರದ ಕೃಷಿ ಇಲಾಖೆ ವೆಬ್ಸೈಟ್ ನಲ್ಲಿ ರೈತರ ಪಟ್ಟಿ ಪಡೆಯಬಹುದು:

Step-1: Pmkisan Farmers list check ಪ್ರಥಮದಲ್ಲಿ ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕೇಂದ್ರ ಸರಕಾರದ ಕೃಷಿ ಮಂತ್ರಾಲಯದ ವೆಬ್ಸೈಟ್ ಅನ್ನು ಭೇಟಿ ಮಾಡಿ.

Step-2: ಈ ಪುಟದಲ್ಲಿ State , District , Sub-District , Block , Village ಹೆಸರನ್ನು ಆಯ್ಕೆ ಮಾಡಿಕೊಂಡು “Get Report” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇಲ್ಲಿ ರೈತರ ಹೆಸರುಗಳ ನಿಮ್ಮ ಹಳ್ಳಿಯ ಪಟ್ಟಿ ತೋರಿಸುತ್ತದೆ.

pmkisan list
Most Popular

Latest Articles

- Advertisment -

Related Articles