Agriculture Land Documents: ನಿಮ್ಮ ಭೂ ದಾಖಲೆ ಕುರಿತು ಈ ಮಾಹಿತಿ ನಿಮಗೆ ಗೊತ್ತೇ?

September 7, 2023 | Siddesh

ಗ್ರಾಮೀಣ ಭಾಗದ ರೈತಾಪಿ ವರ್ಗದ ಜನರಿಗೆ ತಮ್ಮ ಜಮೀನಿನ ಮೂಲ ದಾಖಲಾತಿಗಳ ಕುರಿತು ದೊಡ್ಡ ಮಟ್ಟದಲ್ಲಿ ಮಾಹಿತಿ ಕೊರತೆ ಇರುತ್ತದೆ ಕಾಲ ಕಾಲಕ್ಕೆ ನಮ್ಮ ಪುಟದಿಂದ ಕಂದಾಯ ಇಲಾಖೆಯಡಿ ಬರುವ ಜಮೀನಿನ ಸರ್ವೆ ಕುರಿತು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಕುರಿತು ಮಾಹಿತಿಯನ್ನು ಹಂಚಿಕೊಂಡು ಬರುತ್ತಿದೆ ಇಂದು ಈ ಅಂಕಣದಲ್ಲಿ ಜಮೀನಿನ ಪೋಡಿ(Podi) ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಜಮೀನಿನ ಪೋಡಿ ಹೇಗೆ ಮಾಡಿಸಬೇಕು? ಪೋಡಿಯಿಂದಾಗುವ ಉಪಯೋಗಗಳ ಸಂಪೂರ್ಣ ಮಾಹಿತಿ , ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ಭಾಗ ಮಾಡುವುದು ಎಂದರ್ಥ. ಒಬ್ಬರಿಗಿಂತ ಹೆಚ್ಚು ಆರ್.ಟಿ.ಸಿ/ಉತಾರ್/ಪಹಣಿ ದಾರರ(Land RTC) ಹೆಸರು ಒಂದೇ ಸರ್ವೇ ನಂಬರ್ ನಲ್ಲಿ(Survey number) ಇದ್ದರೆ ಅದನ್ನು ಬಹುಮಾಲಿಕತ್ವದ ಆರ್.ಟಿಸಿ ಎನ್ನಲಾಗುತ್ತದೆ. ಒಂದು ಸರ್ವೆನಂಬರ್ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಹೆಸರು ಮಾಡುವುದಕ್ಕೆ ಪೋಡಿ ಎನ್ನುವರು.

ಪೋಡಿಯಲ್ಲಿ ನಾಲ್ಕು ವಿಧಗಳಿವೆ.

1) ತತ್ಕಾಲ್ ಪೋಡಿ, 
2) ದರ್ಖಾಸ್ ಪೋಡಿ, 
3) ಅಲಿನೇಷನ್ ಪೋಡಿ ಮತ್ತು 
4) ಮುಟೇಷನ್ ಪೋಡಿ ಈ ನಾಲ್ಕರಲ್ಲಿ ಇಲ್ಲಿ ತತ್ಕಾಲ್ ಪೋಡಿ ಬಗ್ಗೆ ವಿವರಿಸಲಾಗಿದೆ.

ಇದನ್ನೂ ಓದಿ: Kisan credit card loan-2023: ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಬಡ್ಡಿ ರಿಯಾಯಿತಿಯಲ್ಲಿ  ರೂ 3 ಲಕ್ಷದವರೆಗೆ ಸಾಲ ಸೌಲಭ್ಯ!

ಪೋಡಿ ಏಕೆ ಮಾಡಿಸಬೇಕು?

ಒಂದು ಸರ್ವೆನಂಬರ್ ನಲ್ಲಿ ಸುಮಾರು ಹಿಸ್ಸಾ ಸರ್ವೆ ನಂಬರ್ ಇರುತ್ತದೆ. ಆದರೆ ಭೂ ಮಾಲಿಕತ್ವದ ಹೆಸರು ಒಂದೇ ಪೋಡಿಯಲ್ಲಿ ಬಂದಿರುತ್ತದೆ. ಇದರಿಂದಾಗಿ ರೈತರಿಗೆ ಸಮಸ್ಯೆಯಾಗುತ್ತದೆ. ಮುಂದೆ ಸರ್ಕಾರದಿಂದ ಸೌಲಭ್ಯವೂ ಸಿಗುವುದಿಲ್ಲ. ಜಮೀನನ್ನು ಕಾಯ್ದೆ ಪ್ರಕಾರ ವಿಭಜನೆ ಮಾಡಿ ಪ್ರತ್ಯೇಕ ಹಿಸ್ಸಾ ಸಂಖ್ಯೆ ಹಾಗೂ ತಾತ್ಕಾಲಿಕ ಪೋಡಿ ನಂಬರ್ ನೀಡಲಾಗುವುದು. ಇದರೊಂದಿಗೆ ಪೋಡಿ ಮಾಡಲಾಗಿರುವ ಭೂಮಿಗೆ ಆದಾಯ ದಾಖಲೆಗಳನ್ನು ತಯಾರು ಮಾಡಿ ಏಕ ಮಾಲಿಕತ್ವದ ಪಹಣಿ ಮಾಡಲಾಗವುದು.

ಉದಾಹರಣೆಗೆ: ಒಂದು ಸರ್ವೆ ನಂಬರ್ ನಲ್ಲಿ ಐದು ಹಿಸ್ಸಾಗಳಿವೆ ಎಂದಿಟ್ಟುಕೊಳ್ಳೋಣ. ಆದರೆ ಪ್ರತ್ಯೇಕ ಪಹಣಿ ಇರುವುದಿಲ್ಲ. ಒಂದು ಪಹಣಿಯಲ್ಲಿ ಎಲ್ಲರ ಹೆಸರು ಇರುತ್ತದೆ. ಸರ್ವೆ ನಂಬರ್ ನಲ್ಲಿರುವ ಹೆಸರು ಪ್ರತ್ಯೇಕವಾಗಿ ಬರಬೇಕೆಂದರೆ ತಾತ್ಕಾಲಿಕ ಪೋಡಿ ಮಾಡಿಸಬಹುದು.

ಪೋಡಿ(Podi) ಮಾಡಿಸುವುದಕ್ಕಾಗಿ ಬೇಕಾಗುವ ದಾಖಲೆಗಳು:

ಪೋಡಿ ಮಾಡಿಸುವ ಜಮೀನಿನ ಆಧಾರ್ ಕಾರ್ಡ್ ಹಾಗೂ ಪಹಣಿ ಬೇಕು. ಇನ್ನೂ ದಾಖಲೆಗಳು ಬೇಕಾಗಬಹುದು. ನಾಡಕಚೇರಿ ಅಥವಾ ತಹಸೀಲ ಕಚೇರಿಗೆ ಸಂಪರ್ಕಿಸಬಹುದು. ಪಹಣಿ ಪ್ರತ್ಯೇಕ ಮಾಡಲು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಪೋಡಿ ಮಾಡಿಸಲು 1200 ರಿಂದ 1500 ರೂಪಾಯಿಯೊಳಗೆ ಖರ್ಚು ಬರಬಹುದು. ತತ್ಕಾಲ್ ಪೋಡಿಯಲ್ಲಿ ನಿಮ್ಮ ಹೆಸರು ಬದಲಾವಣೆಯಾಗುವುದಿಲ್ಲ. ಬೋಂಡ್ರಿ ಫಿಕ್ಸ್ ಮಾಡಿ ಪಹಣಿ ಪ್ರತ್ಯೇಕವಾಗಿ ಮಾಡಲಾಗುವುದು.

ಪೋಡಿ ಮಾಡುವುದರಿಂದ ಆಗುವ ಪ್ರಯೋಜನ:

ಏಕ ಮಾಲಿಕತ್ವವಿದ್ದರೆ ಕಿಸಾನ್ ಕ್ರೇಡಿಟ್ ಕಾರ್ಡ್, ಬೆಳೆ ಸಾಲ ಸಿಗುತ್ತದೆ. ಭೂಮಿ ಮಾಲಿಕತ್ವ ಖಾತ್ರಿ ಪಡೆದುಕೊಳ್ಳಬಹುದು. ಅಕ್ರಮಣ ಆಗುವುದಿಲ್ಲ. ಬೆಳೆ ವಿಮೆ ಮಾಡಿಸಲು ಸುಲಭವಾಗುತ್ತದೆ. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಕರ್ನಾಟಕದಲ್ಲಿ ಕೃಷಿ ಭೂಮಿ ಖರೀದಿ ಹಾಗೂ ಮಾರಾಟ ಮಾಡಲು ಪೋಡಿ ಮಾಡುವುದು ಕಡ್ಡಾಯವಾಗಿದೆ. ಪೋಡಿ ಮಾಡಿಸುವುದರಿಂದ ಒಂದು ಆರ್.ಟಿ.ಸಿ ಒಂದ ನಕ್ಷೆ ಒದಗಿಸಲಾಗುವುದು. ಬಹುಮಾಲಿಕತ್ವದ ಪಹಣಿ ಪತ್ರಗಳನ್ನು ಹೊಂದಿರುವ ರೈತರಿಗೆ ಪ್ರತ್ಯೇಕ ಪಹಣಿ ನಕಾಶೆ ಒದಗಿಸುವ ಕೆಲಸವನ್ನು ಮಾಡಲಾಗುವುದು. ದರ್ಖಾಸ್ ಪೋಡಿಯನ್ನು ಸಕರ್ಕಾರದ ಜಮೀನು ಗಡಿ ಭಾಗ ಗುರುತಿಸಲು ಬಳಸುತ್ತಾರೆ.

ಇದನ್ನೂ ಓದಿ: ಆಹಾರ ಇಲಾಖೆಯಿಂದ ಸೆಪ್ಟೆಂಬರ್ ತಿಂಗಳ ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ! ನಿಮ್ಮ ಜಿಲ್ಲೆಯ ಪಟ್ಟಿಯಲ್ಲಿರುವ ಹೆಸರನ್ನು ಚೆಕ್ ಮಾಡಿ.

ಪೋಡಿ ಮಾಡಿಸದೆ ಇರುವುದಕ್ಕೆ ಕಾರಣಗಳೇನು?

ಅವಿಭಕ್ತ ಕುಟುಂಬಗಳು ಬೇರೆ ಬೇರೆಯಾದ ನಂತರ ಜಮೀನು ಖಾತಾಗಳು ಇನ್ನೂ ಜಂಟಿಯಾಗಿರುತ್ತವೆ. ಸಹೋದರರ ನಡುವೆ ವ್ಯಾಜ್ಯ, ಸೂಕ್ತ ದಾಖಲೆಗಳ ಕೊರತೆ ಮೊದಲ ಕಾರಣಗಳಿಂದ ಪ್ರತ್ಯೇಕ ಆರ್.ಟಿ.ಸಿ ಪಡೆದುಕೊಳ್ಳುವುದ0ಕ್ಕೆ ಸಾಧ್ಯವಾಗಿರುವುದಿಲ್ಲ. ಬಹುತೇಕ ಮಂದಿ ಪ್ರತ್ಯೇಕ ಆರ್.ಟಿ.ಸಿ ಪಡೆಯುವ ಗೋಜಿಗೆ ಹೋಗುವುದಿಲ್ಲ. ಇದರಿಂದಾಗಿ ಹೆಚ್ಚಿನ ಸರ್ವೆ ನಂಬರ್ ಗಳಲ್ಲಿ ಬಹುಮಾಲಿಕತ್ವವೇ ಉಳಿದುಕೊಂಡಿರುತ್ತದೆ. ಬೇರೆಯವರಿಗೆ ನೀಡುವುದಕ್ಕಾಗಲಿ, ಮಾರಾಟ ಮಾಡುವುದಕ್ಕಾಗಲಿ, ವ್ಯಾಜ್ಯಮುಕ್ತ ಪಹಣ ಹೊಂದುವುದಕ್ಕಾಗಲಿ ಅವಕಾಶವಿರುವುದಿಲ್ಲ. ಈ ಉದ್ಯೇಶದಿಂದ ಪ್ರತ್ಯೇಕ ಆರ್.ಟಿ.ಸಿ ಮಾಡಿಕೊಳ್ಳುವುದು ಅಗತ್ಯವಾಗಿದೆ.

ನಿಮ್ಮ ಜಮೀನಿನ ಎಲ್ಲಾ ದಾಖಲೆಯ ಮಾಹಿತಿಯನ್ನು ಮೊಬೈಲ್ ನಲ್ಲೇ ನೋಡಬವುದು:

ರೈತರು ತಮ್ಮ ಮೊಬೈಲ್ ನಲ್ಲಿ ಈ ಲಿಂಕ್ https://landrecords.karnataka.gov.in ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಭೂಮಿ ಜಾಲತಾಣವನ್ನು ಭೇಟಿ ಮಾಡಿ RTC, khata, Akarband, MR, Mutation Status(ನಿಮ್ಮ ಜಮೀನು ಯಾರಿಂದ ಯಾರಿಗೆ ಯಾವ ವರ್ಷ ವರ್ಗಾವಣೆ ಅಗಿದೆ ಎನ್ನುವ ಮಾಹಿತಿ), ಮತ್ತು ಹಿಂದಿನ ವರ್ಷದ ಪಹಣಿ/ಉತಾರ್ ದಾಖಲೆಗಳನ್ನು ನೀವು ಇರುವಲ್ಲಿಯೇ ಚೆಕ್ ಮಾಡಿಕೊಳ್ಳಬವುದಾಗಿದೆ.

ಮಾಹಿತಿ ಕೃಪೆ: ಚಂದ್ರು ಕೀಲಾರ

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: