Post Matric Scholarship-ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 20,000 ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

February 12, 2026 | Siddesh
Post Matric Scholarship-ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 20,000 ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!
Share Now:

2026 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು BCWD ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿವೇತನದ(Post Matric Scholarship) ಅಡಿಯಲ್ಲಿ ಆಯ್ಕೆಯಾದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 20,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ವಿದ್ಯಾರ್ಥಿವೇತನವು ಹಾಸ್ಟೆಲ್‌ನಲ್ಲಿರುವ ವಸತಿ ಕಾಲೇಜುಗಳಲ್ಲಿ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ಓದುತ್ತಿರುವ(Government Scholarship Scheme) ಹಿಂದುಳಿದ ವರ್ಗಗಳ ಡೇ ಸ್ಕಾಲರ್ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯದ ಮತ್ತು ವಿದ್ಯಾಸಿರಿ ಯೋಜನೆಯಡಿ ಆಯ್ಕೆಯಾಗದವರಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಸೌಲಭ್ಯವನ್ನು ಪಡೆಯುವುದು ಇದರ ಉದ್ದೇಶವಾಗಿದೆ.

ಇದನ್ನೂ ಓದಿ: Goods Vehicle Subsidy-ಗೂಡ್ಸ್ ವಾಹನ ಖರೀದಿ ಮಾಡಲು 3 ಲಕ್ಷ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ!

ಪ್ರಸ್ತುತ ಈ ಅಂಕಣದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು(OBC Scholarship Scheme) ಅಂತಿಮ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲಾತಿಗಳಾವುವು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಇನ್ನಿತರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.

Ending Date For Apply-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಫೆಬ್ರವರಿ 2026

ಇದನ್ನೂ ಓದಿ: Free Menstrual Cup-ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಹಾಗೂ ಮುಟ್ಟಿನ ಕಪ್!

Scholorship Amount-ಈ ಕಾರ್ಯಕ್ರಮದ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ?

BCWD ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿವೇತನದ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈ ಕೆಳಗೆ ತಿಳಿಸಿರುವ ವೇತನವನ್ನು ಪಡೆಯಬಹುದು:

ವಿವರಗಳು ಭತ್ಯೆ (ವಾರ್ಷಿಕ)ಬೋಧನಾ ಶುಲ್ಕಗಳು (ವಾರ್ಷಿಕ)
ವೃತ್ತಿಪರ ಯುಜಿ ಮತ್ತು ಪಿಜಿ ಕೋರ್ಸ್‌ಗಳು₹10,000₹10,000
ಇತರ ವೃತ್ತಿಪರ ಕೋರ್ಸ್‌ಗಳು₹8,000₹5,000
ಸಾಮಾನ್ಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳು₹6,000₹2,000
ಮೆಟ್ರಿಕ್ಯುಲೇಷನ್ ನಂತರದ ಕೋರ್ಸ್‌ಗಳು₹5,0000

ಇದನ್ನೂ ಓದಿ: Grama Sahayaka Pension-ಕಂದಾಯ ಇಲಾಖೆಯ ಗ್ರಾಮ ಸಹಾಯಕರಿಗೆ ರೂ. 5.00 ಲಕ್ಷ ಇಡಿಗಂಟು ಸೌಲಭ್ಯಕ್ಕೆ ಆದೇಶ ಪ್ರಕಟ!

Documnets required-ಅರ್ಜಿ ಸಲ್ಲಿಸಲು ದಾಖಲಾತಿಗಳಾವುವು?

ಆಧಾರ್ ಕಾರ್ಡ

ಜಾತಿ ಪ್ರಮಾಣಪತ್ರ

ಆದಾಯ ಪ್ರಮಾಣಪತ್ರ

ನಿವಾಸ ಪುರಾವೆ

ಅಂಗವೈಕಲ್ಯ ಪ್ರಮಾಣಪತ್ರ (ಅಗತ್ಯವಿದ್ದರೆ)

ಪ್ರವೇಶ ಪುರಾವೆ/ಗುರುತಿನ ಪುರಾವೆ

ಇದನ್ನೂ ಓದಿ: Property Rights-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲಿದೆ? ಇಲ್ಲಿದೆ ಅಗತ್ಯ ಮಾಹಿತಿ!

Who Can Apply-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರ‍ ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಕೇಂದ್ರ/ರಾಜ್ಯ ಸರ್ಕಾರ ಸೂಚಿಸಿದ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು.

ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಸರ್ಕಾರಿ/ಸ್ಥಳೀಯ ಸಂಸ್ಥೆ/ಅನುದಾನಿತ ಸಂಸ್ಥೆಗಳು/ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ಕುಟುಂಬದ ವಾರ್ಷಿಕ ಆದಾಯದ ಮಿತಿಯು ವರ್ಗ 1 ಅವರಿಗೆ ₹2,50,000 ಮೀರಿರಬಾರದು.

ಹಾಗೂ ವರ್ಗ 2A, 3A, 3B ಯಲ್ಲಿ ಬರುವ ವಿದ್ಯಾರ್ಥಿಗಳಿಗೆ ₹1,00,000 ಮೀರಬಾರದು.

ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 60% (ವರ್ಗ 1) ಅಥವಾ 70% (ಇತರರು) ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಇದನ್ನೂ ಓದಿ: PM Kisan Trator Yojana-ಕೃಷಿ ಇಲಾಖೆಯಿಂದ ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯ ಕುರಿತು ಅಧಿಕೃತ ಮಾಹಿತಿ ಪ್ರಕಟ!

post metric scholorship

ಇದನ್ನೂ ಓದಿ: Free Sewing Machine-ಈ 2 ಜಿಲ್ಲೆಯಲ್ಲಿ ಉಚಿತ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

Online Application Process-ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ:

Step-1: ವಿದ್ಯಾರ್ಥಿಗಳು ಮೊದಲೊಗೆ ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ "Scholorship Application" ಮಾಡಿ ಅಧಿಕೃತ ವಿದ್ಯಾರ್ಥಿವೇತನದ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ನಂತರ ಈ ಪುಟದಲ್ಲಿ ಕಾಣುವ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ. “Create an Account” ಬಟನ್ ಮೇಲೆ ಪ್ರೆಸ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಹೊಸ ಖಾತೆಯನ್ನು ರಚನೆ ಮಾಡಿಕೊಳ್ಳಬೇಕು.

Step-3: ತದನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆಯು ತೆರೆದುಕೊಳ್ಳುತ್ತದೆ.

Step-4: ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ, ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Price Money Application-ವಿವಿಧ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ 35,000/- ವರೆಗೆ ಪ್ರೋತ್ಸಾಹಧನ!

More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ: Website Link

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: