Postal Life Insurance-ಪೋಸ್ಟ್ ಆಫೀಸ್ ಲೈಫ್ ಇನ್ಶೂರೆನ್ಸ್ ಕಡಿಮೆ ಕಂತು ಪಾವತಿಸಿ ಹೆಚ್ಚಿನ ಲಾಭ ಪಡೆಯಿರಿ!

December 26, 2025 | Siddesh
Postal Life Insurance-ಪೋಸ್ಟ್ ಆಫೀಸ್ ಲೈಫ್ ಇನ್ಶೂರೆನ್ಸ್ ಕಡಿಮೆ ಕಂತು ಪಾವತಿಸಿ ಹೆಚ್ಚಿನ ಲಾಭ ಪಡೆಯಿರಿ!
Share Now:

ಭಾರತೀಯ ಅಂಚೆ ಇಲಾಖೆಯಡಿ ಕಾರ್ಯನಿರ್ವಹಿಸುವ ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ ವಿವಿಧ ಲೈಫ್ ಇನ್ಶೂರೆನ್ಸ್(Postal Life Insurance) ಯೋಜನೆಗೆ ಅರ್ಜಿಯನ್ನು ಆಹ್ವಾನಿಸಿದ್ದು ಇದರ ಕುರಿತು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಅಂಚೆ ಜೀವ ವಿಮೆಯು(Indian Post) 1884 ರಲ್ಲಿ ಸ್ಥಾಪಿತಗೊಂಡಿದ್ದು ಇದು ಭಾರತ ಸರ್ಕಾರದ ಆಶ್ವಾಸನೆ ಹೊಂದಿರುವ ಅತ್ಯಂತ ಪುರಾತನ ಜೀವ ವಿಮೆಯಾಗಿದೆ. ಈ ಯೋಜನೆಯ ಫಲಾನುಭವಿಗಳ ಅರ್ಹತೆಯನ್ನು ಇಲಾಖೆಯು ವಿಸ್ತರಿಸಿದ್ದು ವೃತ್ತಿಪರ ಕೋರ್ಸಗಳನ್ನು ಮಾಡಿದವರು ಮತ್ತು ಯಾವುದೇ ಪದವಿಯನ್ನು ಪಡೆದವರು ಅಂಚೆ ಜೀವ ವಿಮೆಯನ್ನು ಹೊಂದಬಹುದಾಗಿದೆ.

ಇದನ್ನೂ ಓದಿ: Krishi Honda-ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ!

ಈ ಲೇಖನದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ ಇನ್ಶೂರೆನ್ಸ್(Post Office Life Insurance Schemes) ಯೋಜನೆಗಳ ಪಟ್ಟಿ ಮತ್ತು ಬೋನಸ್ ರೇಟ್ ವಿವರ ಸೇರಿದಂತೆ ಪೋಸ್ಟ್ ಆಫೀಸ್ ನಲ್ಲಿ ಇನ್ಶೂರೆನ್ಸ್ ಮಾಡಿಸುವುದರಿಂದ ಅಗುವ ಅನುಕೂಲಗಳೇನು? ಪಾಲಿಸಿ ಮಾಡಿಸಲು ನಿಗದಿಪಡಿಸಿರುವ ವಯೋಮಿತಿ ಎಷ್ಟು? ಇನ್ಶೂರೆನ್ಸ್ ಮಾಡಿಸಲು ಅವಶ್ಯವಿರುವ ದಾಖಲೆಗಳು ಯಾವುವು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

Postal Life Insurance List 2025-ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ ಇನ್ಶೂರೆನ್ಸ್ ಯೋಜನೆಗಳ ಪಟ್ಟಿ ಮತ್ತು ಬೋನಸ್ ರೇಟ್:

1) ನಿಗಧಿತ ವಯೋಮಿತಿ ವಿಮೆ(ಸಂತೋಷ)-Endowment Assurance: 1 ಲಕ್ಷ ರೂ ಸಮ್ ಅಶ್ಯೂರ್ ಗೆ 5,200ರೂ ಬೋನಸ್ ನೀಡಲಾಗುತ್ತದೆ.

2) ಅಜೀವ ವಿಮೆ(ಸುರಕ್ಷಾ)/ Whole Life Insurance: 1 ಲಕ್ಷ ರೂ ಸಮ್ ಅಶ್ಯೂರ್ ಗೆ 7,600ರೂ

3) ಪರಿವರ್ತಿಸುವ ಅಜೀವ ವಿಮೆ(ಸುವಿಧಾ)/Convertible Whole Life Insurance

4) ಜಂಟಿ ವಿಮಾ ಯೋಜನೆ(ಯುಗಳ ಸುರಕ್ಷಾ)/Joint Life Insurance: 1 ಲಕ್ಷ ರೂ ಸಮ್ ಅಶ್ಯೂರ್ ಗೆ 5,200ರೂ

ಇದನ್ನೂ ಓದಿ: Sewing Machine Training-ಮಹಿಳೆಯರಿಗೆ ಗುಡ್ ನ್ಯೂಸ್! 31 ದಿನಗಳ ಉಚಿತ ಹೊಲಿಗೆ ಯಂತ್ರ ತರಬೇತಿ!

5) ನಿರೀಕ್ಷಿತ ಉಂಬಳ ವಿಮೆ(ಸುಮಂಗಲ)/Anticipated Endowment Assurance: 1 ಲಕ್ಷ ರೂ ಸಮ್ ಅಶ್ಯೂರ್ ಗೆ 4,800 ರೂ

6) ಬಾಲ ಜೀವ ವಿಮೆ/Children policy: 1 ಲಕ್ಷ ರೂ ಸಮ್ ಅಶ್ಯೂರ್ ಗೆ 5,200 ರೂ

Postal Life Insurance Benefits-ಪೋಸ್ಟ್ ಆಫೀಸ್ ನಲ್ಲಿ ಇನ್ಶೂರೆನ್ಸ್ ಮಾಡಿಸುವುದರಿಂದ ಅಗುವ ಅನುಕೂಲಗಳೇನು?

ಅಂಚೆ ಇಲಾಖೆಯ ಪೋಸ್ಟ್ ಆಫೀಸ್ ನಲ್ಲಿ ಇನ್ಶೂರೆನ್ಸ್ ಮಾಡಿಸುವುದರಿಂದ ಗ್ರಾಹಕರಿಗೆ ಯಾವೆಲ್ಲ ಅನುಕೂಲಗಳು ಇವೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

  • ಕನಿಷ್ಠ 20 ಸಾವಿರ ದಿಂದ ಗರಿಷ್ಠ 50 ಲಕ್ಷದವರೆಗೆ ಸಮ್ ಅಶ್ಯೂರ್ ವಿಮಾ ಮಿತಿ.
  • ಪಿ.ಎಲ್.ಆಯ್. ಪಾಲಸಿಯಲ್ಲಿ ತುಂಬಿದ ಹಣವು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 (ಸಿ) ಅಡಿಯಲ್ಲಿ ಗರಿಷ್ಠ 1.5 ಲಕ್ಷ ರೂ. ವರೆಗೆ ತೆರಿಗೆ ರಿಯಾಯ್ತಿ ಪಡೆಯಬಹುದು.
  • ದೇಶದ ಇತರೆ ವಿಮಾ ಕಂಪನಿಗೆ ಹೋಲಿಸಿದರೆ ಪಿ.ಎಲ್.ಐ. ನಲ್ಲಿ ಕಡಿಮೆ ಕಂತು ಅಧಿಕ ಬೋನಸ್ ಅನ್ನು ಗ್ರಾಹಕರಿಗೆ ಒದಗಿಸುತ್ತವೆ.
  • ಭಾರತ ಸರ್ಕಾರದಿಂದ ನಡೆಯುವ ವಿಮಾ ಯೋಜನೆ ಆಗಿರುವುದರಿಂದ ಸಂಪೂರ್ಣ ಸುರಕ್ಷಿತವಾಗಿದೆ.
  • ಪ್ರೀಮಿಯಂ ಕಟ್ಟಿದರೆ ಸಾಕ್ಷಿಗಾಗಿ ಪಾಸ್ ಬುಕ್ ಮತ್ತು ಪಾಲಿಸಿ ಸ್ವೀಕೃತವಾದ ನಂತರ ಒಂದು ಬಾಂಡ್ ವಿತರಿಸಲಾಗುತ್ತದೆ.
  • ಸಾಲ ಸೌಲಭ್ಯ, ನಾಮ ನಿರ್ದೇಶನ ಸೌಲಭ್ಯ, ಅಸೈನಮೆಂಟ್ ಸೌಲಭ್ಯ, ಪಾಲಿಸಿ ಮನಶ್ವೇತನ ಸೌಲಭ್ಯವಿರುತ್ತದೆ.
  • ರಿಬೇಟ್ ಸೌಲಭ್ಯ : ಒಂದು ವರ್ಷದ ಕಂತನ್ನು ಮುಂಗಡವಾಗಿ ಕಟ್ಟಿದೆ 2% ರಿಬೇಟ್, ಆರು ತಿಂಗಳ ಕಂತನ್ನು ಮುಂಗಡವಾಗಿ ಕಟ್ಟಿದರೆ 1% ರಿಬೇಟ್ ನೀಡಲಾಗುತ್ತದೆ.
  • ವಿಮೆಯನ್ನು ಮಾಡಿಸಿದ ಬಳಿಕ ಪ್ರಿಮಿಯಂ ಅನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬಹುದು.
  • ಈ ಯೋಜನೆಗಳಿಗೆ ಸಂಪೂರ್ಣ ಜಿ.ಎಸ್.ಟಿ ವಿನಾಯಿತಿ ಇರುತ್ತದೆ.

ಇದನ್ನೂ ಓದಿ: Digital Property Certificate-ಗ್ರಾಮ ಪಂಚಾಯತಿ ವತಿಯಿಂದ ಕೃಷಿಯೇತರ ಭೂಮಿಗಳಿಗೆ ಡಿಜಿಟಲ್ ಇ-ಖಾತಾ ಪ್ರಮಾಣ ಪತ್ರ!

Postal Life Insurance

Postal Life Insurance Age limit-ಪಾಲಿಸಿ ಮಾಡಿಸಲು ನಿಗದಿಪಡಿಸಿರುವ ವಯೋಮಿತಿ ಎಷ್ಟು?

ಪೋಸ್ಟ್ ಆಫೀಸ್ ನಲ್ಲಿ ಇನ್ಶೂರೆನ್ಸ್ ಮಾಡಿಸಲು ಅರ್ಜಿಯನ್ನು ಸಲ್ಲಿಸಲು ಸರ್ಕಾರದಿಂದ ನಿಗದಿಪಡಿಸಿರುವ ವಯೋಮಿತಿ ವಿವರ:

1) ವೋಲ್ ಲೈಪ್ ಅನ್ಸೂರನ್ಸ್ ಮತ್ತು ಎಂಡೋಮೆಂಟ್ ಅಸ್ಸರನ್ಸ್ ಪಾಲಿಸಿ ತೆಗೆದುಕೊಳ್ಳಬಹುದು. (WLA&EA)- 19 ರಿಂದ 55 ವರ್ಷದೊಳಗಿನವರು.

2) ಮನಿ ಬ್ಯಾಕ್ (AEA) ಪಾಲಿಸಿಗೆ- ಗರಿಷ್ಠ 45 ವರ್ಷ.

3) ಯುಗಳ ಸುರಕ್ಷಾ ಪಾಲಿಸಿಗೆ- ಕನಿಷ್ಠ 21 ವರ್ಷ ಗರಿಷ್ಠ 45 ವರ್ಷ (ದಂಪತಿಗಳಿಗೆ ಮಾತ್ರ).

4) ಬಾಲ ಜೀವ ವಿಮೆ ಪಾಲಸಿಗೆ(CP)- 5 ರಿಂದ 20 ವರ್ಷ.

ಇದನ್ನೂ ಓದಿ: Gruhalakshmi Amount-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ!

Who Can Apply For Postal Life Insurance-ಅಂಚೆ ಜೀವವಿಮಾ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಡಾಕ್ಟರ್ಸ್.

ಇಂಜಿನೀಯರ್ಸ್, ಸಿ.ಎ. ನರ್ಸ, ಐ.ಟಿ.ಐ. ಕೋರ್ಸ್ ಮಾಡಿದವರು, ಎಸ್.ಎಸ್.ಇ./ ಬಿ.ಎಸ್.ಇ.ಯಲ್ಲಿ ನೋಂದಾಯಿತ ಕಂಪನಿಯ ಉದ್ಯೋಗಿಗಳು, ಕೇಂದ್ರ ರಾಜ್ಯ ಸರ್ಕಾರದಿಂದ ಅಂಗೀಕೃತಗೊಂಡ ಶಿಕ್ಷಣ ಸಂಸ್ಥೆಗಳ ಯಾವುದೇ ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ / ಡಿಪ್ಲೋಮಾ ಮುಗಿಸಿದವರು ಇತ್ಯಾದಿ.

ಇದನ್ನೂ ಓದಿ: Parivartan Scholarship-ಪರಿವರ್ತನ್ ಯೋಜನೆಯಡಿ ಪದವಿ ವಿದ್ಯಾರ್ಥಿಗಳಿಗೆ ₹30,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ಮಾಹಿತಿ!

Required Documents For Postal Life Insurance-ಇನ್ಶೂರೆನ್ಸ್ ಮಾಡಿಸಲು ಅವಶ್ಯವಿರುವ ದಾಖಲೆಗಳು:

  • ಅಭ್ಯರ್ಥಿಯ ಅಧಾರ್ ಕಾರ್ಡ
  • ಪಾನ್ ಕಾರ್ಡ
  • ಪದವಿ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ 3 ತಿಂಗಳ ಸ್ಟೇಟ್ಮೆಂಟ್
  • ಅಭ್ಯರ್ಥಿಯ ಪೋಟೋ

Postal Life Insurance Website-ಹೆಚ್ಚಿನ ಮಾಹಿತಿಗಾಗಿ:

ಸಹಾಯವಾಣಿ: 6362609961 | 08384236231
ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: