Pouthi Khata Abhiyana-ಮೃತರ ಹೆಸರಿನಿಂದ ಜಮೀನಿನ ಮಾಲೀಕತ್ವ ವರ್ಗಾವಣೆಗೆ ಸರ್ಕಾರದಿಂದ ನೂತನ ಕ್ರಮ!

April 27, 2025 | Siddesh
Pouthi Khata Abhiyana-ಮೃತರ ಹೆಸರಿನಿಂದ ಜಮೀನಿನ ಮಾಲೀಕತ್ವ ವರ್ಗಾವಣೆಗೆ ಸರ್ಕಾರದಿಂದ ನೂತನ ಕ್ರಮ!
Share Now:

ಕಂದಾಯ ಇಲಾಖೆ(Revenue Department) ಮತ್ತು ಪಂಚಾಯತ್ ರಾಜ್ ಇಲಾಖೆ(Grama Panchayat) ಸಹಯೋಗದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮೃತರ ಹೆಸರಿನಲ್ಲಿರುವ ಕೃಷಿ ಜಮೀನಿನ(Pothi Khate)ಮಾಲೀಕತ್ವವನ್ನು ಪ್ರಸ್ತುತ ವಾರಸುದಾರರಿಗೆ ವರ್ಗಾವಣೆ ಮಾಡಲು ರಾಜ್ಯ ಸರ್ಕಾರದಿಂದ ನೂತನ ಯೋಜನೆ ಜಾರಿಗೆ ಮುಂದಾಗಿದೆ.

ರಾಜ್ಯ ಎಲ್ಲ ಜಿಲ್ಲೆಗಳಲ್ಲಿ ಇನ್ನು ಸಹ ಬಹು ದೊಡ್ಡ ಸಂಖ್ಯೆಯಲ್ಲಿ ಕೃಷಿ ಜಮೀನಿನ(Agriculture Land Records)ಮಾಲೀಕತ್ವವು ಮೃತರ ಹೆಸರಿನಲ್ಲೇ ಇರುವುದರಿಂದ ರೈತರಿಗೆ ಸರ್ಕಾರದ ಯೋಜನೆ ಪ್ರಯೋಜನ ಪಡೆಯಲು ಸಾಧ್ಯವಾಗಿರುವುದಿಲ್ಲ ಇದರೊಟ್ಟಿಗೆ ನಿಖರ ಮಾಲೀಕರನ್ನು ಗುರುತಿಸಲು ಸಹ ಕಷ್ಟಕರವಾಗಿರುತ್ತದೆ ಈ ಎಲ್ಲ ಕಾರಣಗಳಿಂದ ಪ್ರಸ್ತುತ ವಾರಸುದಾರರಿಗೆ ಜಮೀನಿನ ಮಾಲೀಕತ್ವವನ್ನು ಸರಳ ವಿಧಾನವನ್ನು ಅನುಸರಿಸಿ ವರ್ಗಾವಣೆ ಮಾಡಲು ನೂತನ ಕ್ರಮ ಜಾರಿಗೆ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: Farmers Market-ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರುವತಿಯಿಂದ ರೈತ ಸಂತೆ!

ಮೃತರ ಹೆಸರಿನಿಂದ ಜಮೀನಿನ ಖಾತೆಯನ್ನು(RTC) ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಪೌತಿ ಖಾತೆ ಎಂದು ಕರೆಯುತ್ತಾರೆ, ಪೌತಿ ಖಾತೆ(Khata) ಕುರಿತು ಸರ್ಕಾರ ಯಾವೆಲ್ಲ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ ಇದಕ್ಕಾಗಿ ರೈತರು(Farmers) ಅನುಸರಿಸಬೇಕಾದ ಕ್ರಮಗಳು ಯಾವುವು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

Pouthi Khata Abhiyana-2025: ಇನ್ನು ಸಹ ಮೃತರ ಹೆಸರಿನಲ್ಲೇ ಇವೆ ಅರ್ಧ ಕೋಟಿ ಪಹಣಿ:

ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯ ಅಧಿಕೃತ ಅಂಕಿ-ಅಂಶ ಮಾಹಿತಿಯ ಪ್ರಕಾರ ಇನ್ನು ಸಹ ಸುಮಾರು ಅರ್ಧ ಕೋಟಿ  ಕೃಷಿ ಜಮೀನಿನ ಪಹಣಿಗಳು ಮರಣ ಹೊಂದಿದವರ ಹೆಸರಿನಲ್ಲಿ ಇವೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Free Laptop-SSLC ಅಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲಾಪ್ ಟಾಪ್ ವಿತರಣೆ!

RTC

What Is Pouthi Khata-ಪೌತಿ ಖಾತೆ ಎಂದರೇನು?

ಮರಣ ಹೊಂದಿದವರ ಹೆಸರಿನಿಂದ ಕೃಷಿ ಜಮೀನಿನ ಮಾಲೀಕತ್ವವನ್ನು ಪ್ರಸ್ತುತ ವಾರಸುದಾರರ ಹೆಸರಿಗೆ ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಳ್ಳುವುದಕ್ಕೆ ಪೌತಿ ಖಾತೆ ಎಂದು ಕರೆಯುತ್ತಾರೆ.

Pouthi Khate-ರಾಜ್ಯ ಸರ್ಕಾರದಿಂದ ಪೌತಿ ಖಾತೆಗಾಗಿ ನೂತನ ಕ್ರಮ:

ರಾಜ್ಯ ಸರ್ಕಾರದಿಂದ ಮರಣ ಹೊಂದಿವರ ಹೆಸರಿನಿಂದ ಜಮೀನಿನ ಮಾಲೀಕತ್ವವನ್ನು ವರ್ಗಾವಣೆ ಮಾಡಿಕೊಳ್ಳಲು ನೂತನ ಕ್ರಮವನ್ನು ಜಾರಿಗೆ ತರಲು ಮುಂದಾಗಿದ್ದು ಗ್ರಾಮ ಪಂಚಾಯತಿ ಅಧಿಕಾರಿಗಳ ಸಹಯೋಗದಲ್ಲಿ ಕಂದಾಯ ಇಲಾಖೆಯ ಮೂಲಕ ಪೌತಿ ಖಾತೆ ಆಂದೋಲವನ್ನು ಗ್ರಾಮೀಣ ಮಟ್ಟದಲ್ಲಿ ಜಾರಿಗೆ ತರಲು ಯೋಜನೆಯನ್ನು ರೂಪಿಸಲಾಗುತ್ತದೆ.

ಇದನ್ನೂ ಓದಿ: Yashaswini Yojane-ಯಶಸ್ವಿನಿ ಯೋಜನೆಯಡಿ ಮಹತ್ವ ಬದಲಾವಣೆಗೆ ಶಿಫಾರಸು!

Pouthi Khata Date-ಮೇ ಅಂತ್ಯದೊಳಗೆ ಪೌತಿ ಖಾತೆ ಆಂದೋಲನ:

ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪೌತಿ ಖಾತೆ ಆಂದೋಲನವನ್ನು ಆಯೋಜನೆ ಮಾಡಲು ಸರ್ಕಾರ ಸಿದ್ಧತೆಯನ್ನು ನಡೆಸಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Pothi Khata Benefits-ರೈತರಿಗೆ ಇದರಿಂದ ಆಗುವ ಪ್ರಯೋಜನಗಳೇನು?

ಪೌತಿ ಖಾತೆ ಆಂದೋಲನದಿಂದ ರೈತರಿಗೆ ಹಲವು ಪ್ರಯೋಜನಗಳಿವೆ ರೈತರು ಸುಲಭ ಮತ್ತು ಸರಳ ವಿಧಾನವನ್ನು ಅನುಸರಿಸಿ ತಮ್ಮ ಹೆಸರಿಗೆ ಕೃಷಿ ಜಮೀನನ್ನು ವರ್ಗಾವಣೆ ಮಾಡಿಕೊಳ್ಳುವುದರ ಮೂಲಕ ಕೃಷಿ ಜಮೀನಿನ ಮೇಲೆ ಬೆಳೆ ಸಾಲ, ಬೆಳೆ ವಿಮೆ, ಬೆಳೆ ಪರಿಹಾರ, ಬೆಂಬಲ ಬೆಲೆ ಯೋಜನೆಯಡಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು.

ಇದನ್ನೂ ಓದಿ: Horticulture Scheme-ತೋಟಗಾರಿಕೆ ಇಲಾಖೆಯಿಂದ ಈ ಬೆಳೆ ಬೆಳೆಯಲು 1,68 ಲಕ್ಷ ಸಬ್ಸಿಡಿ!

How to apply for pouthi khata-ಜಮೀನಿನ ವರ್ಗಾವಣೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ತೆಗೆದುಕೊಂಡು ಇದರ ಜೊತೆಗೆ ಕುಟುಂಬದ ವಂಶವೃಕ್ಷ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ ಲಗತ್ತಿಸಿ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ/VA ಕಚೇರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Pouthi Khata Details-ಪೌತಿ ಖಾತೆ ಅಭಿಯಾನವನ್ನು ಹೇಗೆ ನಡೆಸಲಾಗುತ್ತದೆ?

ಗ್ರಾಮ ಪಂಚಾಯಿತಿಗೆ ತಹಸೀಲ್ದಾ‌ರ್  ನಿಯೋಜಿಸಿದ ಹಿರಿಯ ಅಧಿಕಾರಿಯ ತಂಡ ಭೇಟಿಕೊಟ್ಟು ಸಾರ್ವಜನಿಕ/ರೈತರ ಸಮ್ಮುಖದಲ್ಲಿ ಪೌತಿ ಖಾತೆ ಆಂದೋಲನ ಕಾರ್ಯಕ್ರಮವನ್ನು ನಿಗದಿಪಡಿಸಿದ ದಿನಾಂಕದಂದು ನಡೆಸಲಾಗುತ್ತದೆ. ಈ ಪ್ರಕ್ರಿಯೆಯ ಭಾಗವಾಗಿ ಮುಂಚಿತವಾಗಿಯೇ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌತಿ ಖಾತೆ ಆಗಬೇಕಾದವರ ಕುಟುಂಬಕ್ಕೆ ಮಾಹಿತಿಯನ್ನು ನೀಡಲಾಗುತ್ತದೆ ಇದಕ್ಕಾಗಿ ಹಳ್ಳಿಮಟ್ಟದಲ್ಲಿ ಪ್ರಚಾರವನ್ನು  ಡಂಗುರವನ್ನೂ ಸಾರಿಸುವ ಮೂಲಕ ಕೈಗೊಳ್ಳಲಾಗುತ್ತದೆ ಆಂದೋಲನ ನಡೆಸುವ ದಿನ ಅಧಿಕಾರಿಗಳ ತಂಡ ಸಾರ್ವಜನಿಕ ಸಮ್ಮುಖದಲ್ಲಿ ಜಿ-ಟೀ (ವಂಶವೃಕ್ಷ) ತಯಾರಿಸುತ್ತಾರೆ. 

ಹೀಗಾಗಿ ಯಾವುದೇ ವ್ಯತ್ಯಾಸಗಳಿದ್ದರೆ ಅಲ್ಲೇ ಬಹಿರಂಗವಾಗುತ್ತದೆ. ಅಲ್ಲೇ ಕುಟುಂಬ ಸದಸ್ಯರನ್ನು ದಾಖಲೆಯಲ್ಲಿ ನಮೂದಿಸುವ ಎರಡನೇ ಹಂತದ ಪ್ರಕ್ರಿಯೆ ನಡೆಸುವರು. ಮುಂದೆ ಡಿಜಿಟಲೀಕರಣ ಆಗಲಿದೆ. ಈ ಆಂದೋಲನ ಪೌತಿ ಖಾತೆಗೆ ಸೀಮಿತವಾಗಿರದೆ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಸಮಸ್ಯೆ ಪರಿಹಾರ ನೀಡುವುದಕ್ಕೂ ಗಮನಕೊಡಬೇಕೆಂಬ ಇರಾದೆ ಇಲಾಖೆಯದ್ದಾಗಿದೆ ಎಂದು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share Now: