Price Money Application-ವಿವಿಧ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ 35,000/- ವರೆಗೆ ಪ್ರೋತ್ಸಾಹಧನ!

February 9, 2026 | Siddesh
Price Money Application-ವಿವಿಧ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ 35,000/- ವರೆಗೆ ಪ್ರೋತ್ಸಾಹಧನ!
Share Now:

ಶಿಕ್ಷಣವು ಸಮಾಜದ ಪ್ರಗತಿಯ ಮೂಲಾಧಾರ. ಆರ್ಥಿಕ ಅಡೆತಡೆಗಳು ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಯಡಿ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಅಂಕಣದಲ್ಲಿ ನಾವು ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯು(Student Price Money Scheme) ಪರಿಶಿಷ್ಟ ಜಾತಿಯ (SC) ವಿದ್ಯಾರ್ಥಿಗಳಿಗಾಗಿ ನೀಡುತ್ತಿರುವ 'ಪ್ರೋತ್ಸಾಹಧನ' ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಈ ಕುರಿತು ಸಂಪೂರ್ಣ ವಿವರವನ್ನು ಹಂಚಿಕೊಳ್ಳಲಾಗಿದೆ.

ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಯಿಂದ 'ಪ್ರೋತ್ಸಾಹಧನ' ಯೋಜನೆಯಡಿ(Price Money Yojana) ಎಸ್.ಎಸ್.ಎಲ್.ಸಿ ಇಂದ ಹಿಡಿದು ಸ್ನಾತಕೋತ್ತರ ಮತ್ತು ವೃತ್ತಿಪರ ಶಿಕ್ಷಣದವರೆಗೆ ವಿದ್ಯಾರ್ಥಿಗಳಿಗೆ ಗರಿಷ್ಠ ರೂ 35,000/- ಸಾವಿರದ ವರೆಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದ್ದು ಇದಕ್ಕಾಗಿ ಈ ಹಿಂದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಮುಖ ಕ್ರಮಗಳ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: PM Kisan Trator Yojana-ಕೃಷಿ ಇಲಾಖೆಯಿಂದ ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯ ಕುರಿತು ಅಧಿಕೃತ ಮಾಹಿತಿ ಪ್ರಕಟ!

ಈ ಲೇಖನದಲ್ಲಿ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ(Price Money Yojane) ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಸೇರಿದಂತೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು? ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಜೊತೆಗೆ ತರಗತಿವಾರು ನಿಗದಿಪಡಿಸಿರುವ ಪ್ರೋತ್ಸಾಹಧನದ ಮೊತ್ತವನ್ನು ಸಹ ಪ್ರಕಟಿಸಲಾಗಿದೆ.

Late Date For Applicaton-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಫೆಬ್ರವರಿ 2026

Class Wise Price Money Amount-ತರಗತಿವಾರು ಎಷ್ಟು ಪ್ರೋತ್ಸಾಹಧನ ನೀಡಲಾಗುತ್ತದೆ?

ಸಮಾಜ ಕಲ್ಯಾಣ ಇಲಾಖೆಯಿಂದ 'ಪ್ರೋತ್ಸಾಹಧನ' ಯೋಜನೆಯಡಿ ಎಸ್.ಎಸ್.ಎಲ್.ಸಿ ಇಂದ ಹಿಡಿದು ಸ್ನಾತಕೋತ್ತರ ಮತ್ತು ವೃತ್ತಿಪರ ಶಿಕ್ಷಣದವರೆಗೆ ವಿದ್ಯಾರ್ಥಿಗಳಿಗೆ ಗರಿಷ್ಠ ರೂ 35,000/- ಸಾವಿರದ ವರೆಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದ್ದು ತರಗತಿವಾರು ನಿಗದಿಪಡಿಸಿರುವ ಪ್ರೋತ್ಸಾಹಧನದ ಮೊತ್ತದ ವಿವರ ಈ ಕೆಳಗಿನಂತಿದೆ:

ಕೋರ್ಸ್ ವಿವರನಿಗದಿತ ಪ್ರೋತ್ಸಾಹಧನ
SSLC (60% ರಿಂದ 75% ಅಂಕ)₹ 7,500/-
SSLC (75% ಕ್ಕಿಂತ ಮೇಲ್ಪಟ್ಟು)₹ 15,000/-
ಪಿಯುಸಿ / ಡಿಪ್ಲೊಮಾ₹ 20,000/-
ಪದವಿ (Degree)₹ 25,000/-
ಸ್ನಾತಕೋತ್ತರ ಪದವಿ (PG)₹ 30,000/-
ವೃತ್ತಿಪರ ಪದವಿ (ವೈದ್ಯಕೀಯ/ತಾಂತ್ರಿಕ/ಕೃಷಿ ಇತ್ಯಾದಿ)₹ 35,000/-

ಇದನ್ನೂ ಓದಿ: Cabinet Meeting Highlights-ಸಚಿವ ಸಂಪುಟ ಸಭೆಯಲ್ಲಿ ಮಹ್ವತದ ನಿರ್ಣಯ! ಕೆರೆ ತುಂಬಿಸುವ ಯೋಜನೆಗೆ 32 ಕೋಟಿ ಅನುದಾನ!

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಪ್ರೋತ್ಸಾಹಧನ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ಇಲಾಖೆಯಿಂದ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ಪಟ್ಟಿ ಈ ಕೆಳಗಿನಂತಿದೆ:

ಅರ್ಜಿದಾರ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

ವಿದ್ಯಾರ್ಥಿಯು ಪರಿಶಿಷ್ಟ ಜಾತಿ ವರ್ಗೆಕ್ಕೆ ಸೇರಿದವರಾಗಿರಬೇಕು.

ವಿದ್ಯಾರ್ಥಿಗಳು ಕನಿಷ್ಠ ಪ್ರಥಮ ದರ್ಜೆಯಲ್ಲಿ (First Class) ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವುದು ಕಡ್ಡಾಯ.

ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Bele Parihara List-ಬೆಳೆ ಹಾನಿ ಪರಿಹಾರ ಪಡೆದ ಅರ್ಹ ರೈತರ ಪಟ್ಟಿ ಬಿಡುಗಡೆ!

Price Money Application

Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಪ್ರೋತ್ಸಾಹಧನ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳು ಆರ್ಥಿಕ ನೆರವನ್ನು ಪಡೆಯಲು ಈ ಕೆಳಗಿನ ಹಂತವನ್ನು ಅನುಸರಿಸಿ ಆನ್ಲೈನ್ ಮೂಲಕ ಒಂದೆರಡು ಕ್ಲಿಕ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಅರ್ಜಿದಾರರು ಮೊದಲಿಗೆ ಇಲ್ಲಿ ಕ್ಲಿಕ್ "Price Money Online Application" ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: SBI Women Loan-ಮಹಿಳೆಯರ ಸ್ವಂತ ಉದ್ಯಮಕ್ಕೆ"ಸ್ತ್ರೀ ಶಕ್ತಿ ಪ್ಯಾಕೇಜ್"! ಇಲ್ಲಿದೆ ಸಂಪೂರ್ಣ ಮಾಹಿತಿ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಕಾಣಿಸುವ Aadhar Details ಬಟನ್ ಮೇಲೆ ಕ್ಲಿಕ್ ಮಾಡಿ One Time Assistance ಬಟನ್ ಮೇಲೆ ಕ್ಲಿಕ್ ಮಾಡಿ Validate Aadhaar ಬಟನ್ ಮೇಲೆ ಒತ್ತಿ ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ OTP ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ ಲಾಗಿನ್ ಅಗಬೇಕು.

Step-3: ಲಾಗಿನ್ ಅದ ನಂತರ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Diploma Scholarship-ಡಿಪ್ಲೊಮಾ ವಿದ್ಯಾರ್ಥಿನಿಯರಿಗೆ 10,000 ವಿದ್ಯಾರ್ಥಿವೇತನ! ಇನ್ನು 4 ದಿನ ಬಾಕಿ!

Reqiured Documents For Price Money Yojana-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು?

ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಹೊಂದಿರಬೇಕು.

  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ (Caste & Income Certificate).
  • ಅಂಕಪಟ್ಟಿ (Marks Card - SSLC/PUC/Degree).
  • ಬ್ಯಾಂಕ್ ಖಾತೆ ವಿವರ (Bank Passbook - ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರಬೇಕು).
  • ಆಧಾರ್ ಕಾರ್ಡ್.
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
  • ವ್ಯಾಸಂಗ ಪ್ರಮಾಣ ಪತ್ರ (Study Certificate).

Helpline Number-ಹೆಚ್ಚಿನ ಮಾಹಿತಿಗಾಗಿ ಅಥವಾ ತಾಂತ್ರಿಕ ತೊಂದರೆಗಳಿದ್ದಲ್ಲಿ ವಿದ್ಯಾರ್ಥಿಗಳು ಇಲಾಖೆಯ 24x7 ಸಹಾಯವಾಣಿ ಸಂಖ್ಯೆ: 94823 00400 ಕ್ಕೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: