Property Rights-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲಿದೆ? ಇಲ್ಲಿದೆ ಅಗತ್ಯ ಮಾಹಿತಿ!

February 10, 2026 | Siddesh
Property Rights-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲಿದೆ? ಇಲ್ಲಿದೆ ಅಗತ್ಯ ಮಾಹಿತಿ!
Share Now:

ನಮ್ಮ ಭಾರತದಲ್ಲಿ ಮಹಿಳೆಯರ ಆಸ್ತಿ ಹಕ್ಕುಗಳ ವಿಚಾರದಲ್ಲಿ ಚರ್ಚೆಗಳು ನೆಡೆಯುತ್ತಿದ್ದು, "ಮಗಳು ಪರರ ವಸ್ತು","ಹೆಣ್ಣು ಹಡೆದವರು ಮಣ್ಣು ಹಡೆದರು" ಎಂಬ ಹಳೆಯ(Married Women Law) ಕಾಲದ ಮಾತುಗಳು ಇಂದು ಅರ್ಥಹೀನವಾಗಿವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳು ಕೇವಲ ಮನೆಯ ಬೆಳಗುವ ದೀಪಗಳಷ್ಟೇ ಅಲ್ಲ, ಕುಟುಂಬದ ಆರ್ಥಿಕ ಮತ್ತು ಕಾನೂನುಬದ್ಧ ವಾರಸುದಾರರೂ ಹೌದು, ಮದುವೆಯಾದ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲ ಎಂಬ ತಪ್ಪು ಕಲ್ಪನೆಯೂ ನಮ್ಮೆಲ್ಲರ ತಪ್ಪು ಕಲ್ಪನೆ ಇತ್ತು,

ಆದರೆ ಕಾನೂನು ಪರಿಷ್ಕರಣೆಗಳ ನಂತರ, ವಿಶೇಷವಾಗಿ Hindu Succession (Amendment) Act, 2005 ಜಾರಿಗೆ ಬಂದ ನಂತರ, ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಿಗೂ(Property Inheritance India) ಸಮಾನ ಹಕ್ಕು ಪಡೆಯ ಬೇಕೆಂಬುದನ್ನು ಈ ಕಾಯ್ದೆ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: Free Sewing Machine-ಈ 2 ಜಿಲ್ಲೆಯಲ್ಲಿ ಉಚಿತ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

ಇಂದು ಹೆಣ್ಣುಮಕ್ಕಳು ವಿವಾಹಿತರಾಗಿರಲಿ ಅಥವಾ ಅವಿವಾಹಿತರಾಗಿರಲಿ, ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಮಗನಿಗೆ(Hindu Succession Act) ಇರುವಷ್ಟೇ ಸಮಾನವಾದ ಹಕ್ಕನ್ನು ಹೊಂದಿದ್ದಾರೆ. ಇದು ಕೇವಲ ಕಾನೂನು ನೀಡಿದ ಹಕ್ಕಲ್ಲ, ಬದಲಾಗಿ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಗೌರವ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವ ಒಂದು ದಾರಿಯಾಗಿದೆ.

What are the types of property-ಆಸ್ತಿಯಲ್ಲಿ ಬರುವ ವಿಧಗಳಾವುವು?

ಆಸ್ತಿಯ ಹಕ್ಕನ್ನು 2 ವಿಧಗಳಾಗಿ ವಿಂಗಡಿಸಲಾಗುತ್ತದೆ:
1) ಪಿತ್ರಾರ್ಜಿತ ಆಸ್ತಿ/ಪರಂಪರಾ ಆಸ್ತಿ
2) ಸ್ವಯಾರ್ಜಿತ ಆಸ್ತಿ/ಸ್ವಯಂ ಸಂಪಾದಿತ

ಇದನ್ನೂ ಓದಿ: Price Money Application-ವಿವಿಧ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ 35,000/- ವರೆಗೆ ಪ್ರೋತ್ಸಾಹಧನ!

1) ಪಿತ್ರಾರ್ಜಿತ/ಪರಂಪರಾ ಆಸ್ತಿ (Ancestral Property): ಪಿತ್ರಾರ್ಜಿತ ಆಸ್ತಿ ಎಂದರೆ ಪೀಳಿಗೆ ಇಂದ ಪೀಳಿಗೆಗೆ ಬಂದ ಆಸ್ತಿ ಅಂದರೆ ಕನಿಷ್ಠ ನಾಲ್ಕು ತಲೆಮಾರುಗಳಿಂದ ಬಂದ ಹಾಗೂ ವಿಭಜನೆಯಾಗದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ. ಇದರಲ್ಲಿ ಮಗಳಿಗೆ ಹುಟ್ಟಿನಿಂದಲೇ ಸಮಾನ ಹಕ್ಕು ಇರುತ್ತದೆ.

2) ಸ್ವಯಾರ್ಜಿತ ಆಸ್ತಿ/ಸ್ವಯಂ ಸಂಪಾದಿತ(Self-Acquired Property): ತಂದೆಯು ತನ್ನ ಸ್ವಂತ ಆದಾಯದಿಂದ ಸಂಪಾದನೆ ಮಾಡಿರುವ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನುವರು.

ಇದನ್ನೂ ಓದಿ: PM Kisan Trator Yojana-ಕೃಷಿ ಇಲಾಖೆಯಿಂದ ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯ ಕುರಿತು ಅಧಿಕೃತ ಮಾಹಿತಿ ಪ್ರಕಟ!

ವಿನೀತಾ ಶರ್ಮಾ ವರ್ಸಸ್ ರಾಕೇಶ್ ಶರ್ಮಾ’ ಅವರು 2005ರ ತಿದ್ದುಪಡಿ ಮತ್ತು 2020ರ ಸುಪ್ರೀಂ ಕೋರ್ಟ್ ತೀರ್ಪು:

9 ಸೆಪ್ಟೆಂಬರ್ 2005 ರಂದು ತೀರ್ಪು ನೀಡಿದಾಗ ಅನೇಕ ಜನರಿಗೆ ಗೊಂದಲಮಯವಾಗಿತ್ತು, "ಕಾಯ್ದೆ ಜಾರಿಗೆ ಬಂದಾಗ ತಂದೆ ಜೀವಂತವಿರಬೇಕೆ?" ಆದರೆ

2020 ರಲ್ಲಿ ಸುಪ್ರೀಂ ಕೋರ್ಟ್ 'ವಿನೀತಾ ಶರ್ಮಾ ವರ್ಸಸ್ ರಾಕೇಶ್ ಶರ್ಮಾ' ಅವರು ಈ ಕೆಳಗೆ ತಿಳಿಸಿರುವ ತೀರ್ಪನ್ನು ನೀಡಿರುತ್ತಾರೆ:

ಮಗಳು ಜನಿಸಿದ ಕ್ಷಣದಿಂದಲೇ ಆಕೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ನೀಡಲಾಗುತ್ತದೆ.

2005ರಲ್ಲಿ ಕಾನೂನು ಜಾರಿಗೆ ಬಂದಾಗ ತಂದೆ ಬದುಕಿರಲೇಬೇಕು ಎಂದೇನಿಲ್ಲ. ತಂದೆ 2005 ಕ್ಕಿಂತ ಮೊದಲು ನಿಧನರಾಗಿದ್ದರೂ ಸಹ, ಮಗಳಿಗೆ ಹಕ್ಕು ಸಿಗುತ್ತದೆ.

ಮಗಳು ವಿವಾಹಿತಳಾಗಿರಲಿ ಅಥವಾ ಅವಿವಾಹಿತಳಾಗಿರಲಿ, ಹಕ್ಕಿನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಇದನ್ನೂ ಓದಿ: Cabinet Meeting Highlights-ಸಚಿವ ಸಂಪುಟ ಸಭೆಯಲ್ಲಿ ಮಹ್ವತದ ನಿರ್ಣಯ! ಕೆರೆ ತುಂಬಿಸುವ ಯೋಜನೆಗೆ 32 ಕೋಟಿ ಅನುದಾನ!

When does a daughter not get rights-ಮಗಳಿಗೆ ಹಕ್ಕು ಯಾವಾಗ ಸಿಗುವುದಿಲ್ಲ?

20 ಡಿಸೆಂಬರ್ 2004 ಕ್ಕಿಂತ ಮೊದಲು ಕಾನೂನುಬದ್ಧವಾಗಿ ಆಸ್ತಿ ವಿಭಜನೆ (Partition) ಅಥವಾ ಮಾರಾಟವಾಗಿದ್ದರೆ, ಅಂತಹ ಆಸ್ತಿಯಲ್ಲಿ ಮಗಳು ಮರು ಹಕ್ಕು ಕೇಳಲು ಸಾಧ್ಯವಿರುವುದಿಲ್ಲ.

ಮಗಳು ಸ್ವತಃ ಆಕೆಯೇ 'ಹಕ್ಕು ತ್ಯಾಗ ಪತ್ರ' (Relinquishment Deed) ಬರೆದುಕೊಟ್ಟಿದ್ದರೆ ಅವಳಿಗೆ ಆಸ್ತಿಯಲ್ಲಿ ಯಾವುದೇ ಹಕ್ಕು ಇರುವುದಿಲ್ಲ.

ಇದನ್ನೂ ಓದಿ: Bele Parihara List-ಬೆಳೆ ಹಾನಿ ಪರಿಹಾರ ಪಡೆದ ಅರ್ಹ ರೈತರ ಪಟ್ಟಿ ಬಿಡುಗಡೆ!

women Property Rights

ಇದನ್ನೂ ಓದಿ: Diploma Scholarship-ಡಿಪ್ಲೊಮಾ ವಿದ್ಯಾರ್ಥಿನಿಯರಿಗೆ 10,000 ವಿದ್ಯಾರ್ಥಿವೇತನ! ಇನ್ನು 4 ದಿನ ಬಾಕಿ!

Will there be a share in property after marriage-ಮದುವೆಯ ನಂತರ ಆಸ್ತಿಯಲ್ಲಿ ಪಾಲಿರುತ್ತದೆಯೇ?

ಕಾನೂನಿನ ಪ್ರಕಾರ ಮಗಳು ಮದುವೆಯಾಗಿ ಬೇರೆ ಮನೆಗೆ ಹೋದರೂ ತನ್ನ ತಂದೆಯ ಮನೆಯ ಆಸ್ತಿಗೆ 'ಹೊರಗಿನವಳಾಗುವುದಿಲ್ಲ. ಆಕೆ ತನ್ನ ತಂದೆಯ ಮನೆಯ ಸದಸ್ಯೆಯಾಗಿಯೇ ಇರುತ್ತಾಳೆ ಮತ್ತು ಆಸ್ತಿ ಹಂಚಿಕೆಯಲ್ಲಿ ಆಕೆಯನ್ನು ಹೊರಗಿಡುವ ಅಧಿಕಾರ ಯಾರಿಗೂ ಇಲ್ಲ.

Share in father's self-acquired property-ತಂದೆಯ ಸ್ವಯಂ ಸಂಪಾದಿತ ಆಸ್ತಿಯಲ್ಲಿ ಪಾಲು:

ತಂದೆ ವಿಲ್ ಮಾಡದೆ ಮೃತಪಟ್ಟರೆ, ಹೆಣ್ಣು ಮಕ್ಕಳಿಗೂ ಸಮಾನ ಹಕ್ಕು ಇದೆ.

ತಂದೆ ವಿಲ್ ಮಾಡಿಕೊಂಡಿದ್ದರೆ, ಆಸ್ತಿ ವಿಲ್‌ನಲ್ಲಿ ಹೇಳಿಕೆಯಂತೆ ಆಸ್ತಿಯು ಹಂಚಿಕೆ ಆಗುತ್ತದೆ.

ಇದನ್ನೂ ಓದಿ: SBI Women Loan-ಮಹಿಳೆಯರ ಸ್ವಂತ ಉದ್ಯಮಕ್ಕೆ"ಸ್ತ್ರೀ ಶಕ್ತಿ ಪ್ಯಾಕೇಜ್"! ಇಲ್ಲಿದೆ ಸಂಪೂರ್ಣ ಮಾಹಿತಿ!

Documents Required-ಕಾನೂನುಬದ್ದವಾಗಿ ಮಗಳು ಆಸ್ತಿಯನ್ನು ಪಡೆಯಲು ಯಾವೆಲ್ಲ ದಾಖಲೆಗಳನ್ನು ನೀಡಬೇಕು?

ವಂಶವೃಕ್ಷ (Family Tree)
ಪಹಣಿ(RTC)
ಮ್ಯುಟೇಷನ್ ಪ್ರತಿಗಳು(Mutation Cetificates)
ನೋಂದಾಯಿತ ಪತ್ರಗಳು(Sale Deed)
ಮರಣ ಪ್ರಮಾಣಪತ್ರ(Death Certificate)

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: