Pumpset- ರೈತರಿಗೆ ಸಿಹಿ ಸುದ್ದಿ: ‘ನವೀಕೃತ ಶೀಘ್ರ ಸಂಪರ್ಕ ಯೋಜನೆ’ಯಡಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ!

May 3, 2025 | Siddesh
Pumpset- ರೈತರಿಗೆ ಸಿಹಿ ಸುದ್ದಿ: ‘ನವೀಕೃತ ಶೀಘ್ರ ಸಂಪರ್ಕ ಯೋಜನೆ’ಯಡಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ!
Share Now:

ರೈತರ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೂಲಸೌಕರ್ಯ ರಚಿಸಲು ಅನುಕೂಲ ಕಲ್ಪಿಸುವ ಸಲುವಾಗಿ, ಇಂಧನ ಇಲಾಖೆಯು(KEB) 'ನವೀಕೃತ ಶೀಘ್ರ ಸಂಪರ್ಕ ಯೋಜನೆ' (New SSY) ಜಾರಿಗೊಳಿಸಿ ಆದೇಶ ಹೊರಡಿಸಿದೆ. ಈ ಯೋಜನೆಯು ರೈತರ ಪಂಪ್‌ಸೆಟ್‌ಗಳ ವಿದ್ಯುದೀಕರಣವನ್ನು ಶೀಘ್ರವಾಗಿ ಮತ್ತು ಅಗತ್ಯ ಮೂಲಸೌಕರ್ಯದೊಂದಿಗೆ ಅನುಷ್ಠಾನಗೊಳಿಸುವ ಗುರಿಯನ್ನು ಹೊಂದಿದೆ. 

ನವೀಕೃತ ಶೀಘ್ರ ಸಂಪರ್ಕ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು ಈ ಮಾಹಿತಿಯು ಉಪಯುಕ್ತವಾಗಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

ಇದನ್ನೂ ಓದಿ: Car Subsidy-ಸಬ್ಸಿಡಿಯಲ್ಲಿ ಕಾರ್ ಮತ್ತು ಆಟೋ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ನವೀಕೃತ ಶೀಘ್ರ ಸಂಪರ್ಕ ಯೋಜನೆ (New SSY) ವಿವರ ಹೀಗಿದೆ:

ಈ ದಿನಾಂಕಕ್ಕೂ ಮುಂಚೆ ನೋಂದಾಯಿತವಾಗಿ, ಅಗತ್ಯ ಶುಲ್ಕ ಮತ್ತು ಠೇವಣಿ ಪಾವತಿಸಿದ ಆದರೆ ವಿದ್ಯುತ್ ಮೂಲಸೌಕರ್ಯ ರಚನೆ ಬಾಕಿಯಿರುವ ಪಂಪ್‌ಸೆಟ್‌ಗಳಿಗೆ, ರೈತರು ಒಪ್ಪಿದರೆ HT ಮತ್ತು LT ಜಾಲ ವಿಸ್ತರಣೆ ಕಾಮಗಾರಿಗಳನ್ನು ಸ್ವಯಂ ಕಾರ್ಯನಿರ್ವಹಣೆಯಡಿ (Self-Execution) ರಚಿಸಿಕೊಳ್ಳಬಹುದು.

ವಿದ್ಯುತ್ ವಿತರಣಾ ಕಂಪನಿಗಳ (ವಿಸಕಂ) ವೆಚ್ಚದಲ್ಲಿ ಸೂಕ್ತ ಸಾಮರ್ಥ್ಯದ ಪರಿವರ್ತಕವನ್ನು ಸ್ಥಾಪಿಸಿ, ಎರಡು ಅಥವಾ ಹೆಚ್ಚಿನ ರೈತರ ಪಂಪ್‌ಸೆಟ್‌ಗಳಿಗೆ ಒಟ್ಟಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.

ಇದನ್ನೂ ಓದಿ: New Ration Card-ಹೊಸ BPL ಮತ್ತು APL ರೇಷನ್ ಕಾರ್ಡ ಪಡೆಯಲು ಅರ್ಹ ಸಲ್ಲಿಸಲು ಅವಕಾಶ!

22.9.2023ರ ನಂತರದ ನೋಂದಣಿಗಳು:

ಈ ದಿನಾಂಕದ ನಂತರ ನೋಂದಾಯಿತ ಅಥವಾ ನೋಂದಣಿಗೊಳ್ಳುವ ಪಂಪ್‌ಸೆಟ್‌ಗಳಿಗೆ, ರೈತರು ಒಪ್ಪಿದರೆ HT ಮತ್ತು LT ಜಾಲ ವಿಸ್ತರಣೆ ಕಾಮಗಾರಿಗಳಿಗೆ 15,000 ರೂ. ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ನಿಯಮಾನುಸಾರ ಠೇವಣಿ ಹಣವನ್ನು ವಿಸಕಂಗಳಿಗೆ ಪಾವತಿಸಬೇಕು.

ಸ್ವಯಂ ಕಾರ್ಯನಿರ್ವಹಣೆಯಡಿ ಮೂಲಸೌಕರ್ಯ ರಚಿಸಿಕೊಂಡು, ವಿಸಕಂಗಳ ವೆಚ್ಚದಲ್ಲಿ ಸೂಕ್ತ ಪರಿವರ್ಥಕ ಸ್ಥಾಪಿಸಿ, ಎರಡು ಅಥವಾ ಹೆಚ್ಚಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದು.

ಇದನ್ನೂ ಓದಿ: SSLC Result-ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ! ಇಲ್ಲಿದೆ ವೆಬ್ಸೈಟ್ ಲಿಂಕ್!

ಸ್ವಯಂ ಕಾರ್ಯನಿರ್ವಹಣೆ ಅಥವಾ New SSY:

22.9.2023ರ ನಂತರದ ಪಂಪ್‌ಸೆಟ್‌ಗಳು ಸ್ವಯಂ ಕಾರ್ಯನಿರ್ವಹಣೆಯಡಿ ವಿದ್ಯುತ್ ಸಂಪರ್ಕ ಪಡೆಯದಿದ್ದರೆ, 'ನವೀಕೃತ ಶೀಘ್ರ ಸಂಪರ್ಕ ಯೋಜನೆ'ಯಡಿ ಕಾಮಗಾರಿ ಕೈಗೊಳ್ಳಲಾಗುವುದು.

ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಯಾವುದೇ ಪಂಪ್‌ಸೆಟ್‌ಗಳಿದ್ದರೆ, ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕೂಡಲೇ ಸಂಪರ್ಕ ಕಡಿತಗೊಳಿಸಿ, ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು.

ಇದನ್ನೂ ಓದಿ: Togari Bembala Bele-ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕುರಿತು ಮತ್ತೊಂದು ಆದೇಶ ಪ್ರಕಟ!

ತಾಂತ್ರಿಕ ನಿಯಮಗಳು:

HT ಮತ್ತು LT ಜಾಲ ವಿಸ್ತರಣೆ ಕಾಮಗಾರಿಯಲ್ಲಿ, ಪರಿವರ್ತಕದಿಂದ LT ಮಾರ್ಗವನ್ನು ಒಂದು ಅಥವಾ ಎರಡು ಸ್ಪ್ಯಾನ್‌ಗೆ ಸೀಮಿತಗೊಳಿಸಲಾಗುವುದು.

ಈ ಯೋಜನೆಯಡಿ ಸ್ಥಾಪಿತ ಪರಿವರ್ಥಕಗಳಲ್ಲಿ ತಾಂತ್ರಿಕ ಸಾಧ್ಯತೆ ಇದ್ದರೆ, ಇತರ ಅಥವಾ ಮುಂಬರುವ ರೈತರ ಪಂಪ್‌ಸೆಟ್‌ಗಳಿಗೆ ವಿಸಕಂಗಳು ವಿದ್ಯುತ್ ಸಂಪರ್ಕ ಕಲ್ಪಿಸಬಹುದು.

ಹಾಲಿ ಪರಿವರ್ತಕದ ಸಮೀಪದಲ್ಲಿ ನೋಂದಾಯಿತ ಪಂಪ್‌ಸೆಟ್‌ಗಳಿದ್ದು, ಪರಿವರ್ತಕದ ಸಾಮರ್ಥ್ಯ ಸಾಕಾಗಿದ್ದರೆ, ಆ ಪರಿವರ್ತಕದಿಂದಲೇ ಸಂಪರ್ಕ ಒದಗಿಸಲಾಗುವುದು.

ಇದನ್ನೂ ಓದಿ: Gruhalakshmi-ಗೃಹಲಕ್ಷ್ಮಿ ಫಲಾನುಭವಿಗಳಿಗೆ ಭರ್ಜರಿ ಸಿಹಿ ಸುದ್ದಿ! ಒಂದೇ ಬಾರಿಗೆ 3 ತಿಂಗಳ ಹಣ!

ಶುಲ್ಕ ಮನ್ನಾ:

ಸ್ವಯಂ ಕಾರ್ಯನಿರ್ವಹಣೆ ಅಥವಾ New SSY ಅಡಿ HT/LT ಜಾಲ ವಿಸ್ತರಣೆ ಕಾಮಗಾರಿಗೆ, ಅಂದಾಜು ಪಟ್ಟಿಯ ಒಟ್ಟು ವೆಚ್ಚದ ಮೇಲೆ ವಿಧಿಸಲಾಗುವ ಮೇಲ್ವಿಚಾರಣಾ ಶುಲ್ಕವನ್ನು (Supervision Charges) ಮನ್ನಾ ಮಾಡಲಾಗುವುದು.

ತಾಂತ್ರಿಕವಾಗಿ ಸಾಧ್ಯವಿದ್ದರೆ, ಹಾಲಿ LT ಜಾಲದಿಂದ ಸರ್ವೀಸ್ ಮೇನ್ ಮೂಲಕ ಅಥವಾ LT ಮಾರ್ಗ ವಿಸ್ತರಣೆಯೊಂದಿಗೆ ಸ್ವಯಂ ಕಾರ್ಯನಿರ್ವಹಣೆಯಡಿ ಸಂಪರ್ಕ ಪಡೆಯುವ ರೈತರು 15,000 ರೂ. ಮತ್ತು ಠೇವಣಿ ಹಣ ಪಾವತಿಸಬೇಕು. ಇಂತಹ ರೈತರು New SSY ವ್ಯಾಪ್ತಿಗೆ ಒಳಪಡುವುದಿಲ್ಲ.

ಇದನ್ನೂ ಓದಿ: Crop Insurance Status-ನಿಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಹಣ ಜಮಾ ವಿವರ ಚೆಕ್ ಮಾಡಿ!

ಅಂದಾಜು ಪಟ್ಟಿ ಮತ್ತು ಮೇಲ್ವಿಚಾರಣೆ:

ಕಾಮಗಾರಿಯ ಅಂದಾಜು ಪಟ್ಟಿಯನ್ನು ಶಾಖಾಧಿಕಾರಿಗಳು ತಾಂತ್ರಿಕ-ಆರ್ಥಿಕ ಸಾಧ್ಯತೆಯ (Techno-economic feasibility) ಆಧಾರದ ಮೇಲೆ ಸಿದ್ಧಪಡಿಸಿದ್ದಾರೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE(EI)) ಖಾತ್ರಿಪಡಿಸಿಕೊಳ್ಳಬೇಕು.

ಈ ಪ್ರಕ್ರಿಯೆಯನ್ನು ಕಂಪನಿ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುವುದು.

ಇದನ್ನೂ ಓದಿ: RTC And Mutation-ಪಹಣಿ ಮತ್ತು ಮ್ಯುಟೇಷನ್ ಮಾಡಲು ಆನ್‍ಲೈನ್ ಅರ್ಜಿ!

ನಿಯಮಾವಳಿಗಳು:

7.10.2023ರ ಸರ್ಕಾರಿ ಆದೇಶದ ಕಂಡಿಕೆ (3) ಪ್ರಕಾರ, ವಿದ್ಯುತ್ ಜಾಲದಿಂದ 500 ಮೀಟರ್ ಒಳಗಿರುವ ರೈತರ ಪಂಪ್‌ಸೆಟ್‌ಗಳಿಗೆ ಈ ಯೋಜನೆಯನ್ನು ಸೀಮಿತಗೊಳಿಸಲಾಗಿದೆ.

500 ಮೀಟರ್‌ಗಿಂತ ದೂರದಲ್ಲಿರುವ ಪಂಪ್‌ಸೆಟ್‌ಗಳಿಗೆ ಕಡ್ಡಾಯವಾಗಿ ಸ್ಟ್ಯಾಂಡ್-ಅಲೋನ್/ಆಫ್-ಗ್ರಿಡ್ ಸೌರ ಪಂಪ್‌ಗಳನ್ನು ಅಳವಡಿಸುವಂತೆ ಆದೇಶಿಸಲಾಗಿದೆ.

ಈ ಯೋಜನೆಯು ರೈತರಿಗೆ ವಿದ್ಯುತ್ ಸಂಪರ್ಕವನ್ನು ಶೀಘ್ರವಾಗಿ ಮತ್ತು ಕೈಗೆಟಕುವ ದರದಲ್ಲಿ ಒದಗಿಸುವ ಮೂಲಕ ಕೃಷಿ ಚಟುವಟಿಕೆಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.

ಇದರ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ತಾಲೂಕಿನ ಹೆಸ್ಕಾಂ/ಬೆಸ್ಕಾಂ/KEB ಕಚೇರಿಯನ್ನು ಭೇಟಿ ಮಾಡಿ.

krishipumpset TC

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: