HomeEducationKrishi pumpset Adhar link- ಕೃಷಿ ಪಂಪ್ ಸೆಟ್ ಗೆ ಆಧಾರ್ ಲಿಂಕ್ ಮಹತ್ವದ ಪ್ರಕಟಣೆ!

Krishi pumpset Adhar link- ಕೃಷಿ ಪಂಪ್ ಸೆಟ್ ಗೆ ಆಧಾರ್ ಲಿಂಕ್ ಮಹತ್ವದ ಪ್ರಕಟಣೆ!

ರಾಜ್ಯದ ಎಲ್ಲಾ ಎಸ್ಕಾಂಗಳಿಂದ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದ್ದು, ಪಂಪ್ ಸೆಟ್ ಗಳಿಗೆ ಆಧಾರ್ ಕಾರ್ಡ ಲಿಂಕ್(Krishi pumpset Adhar link) ಮಾಡುವುದರ ಕುರಿತು ಇಂದನ ಸಚಿವರು ಹಂಚಿಕೊಂಡಿರುವ ಮಹತ್ವದ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಮತ್ತು ರೈತಾಪಿ ಜನರಲ್ಲಿ ಪಂಪ್ ಸೆಟ್ ಗೆ ಆಧಾರ್ ಲಿಂಕ್(Pumpset Adhar link) ಮಾಡುವುದರ ಕುರಿತು ಅನೇಕ ಗೊಂದಗಳಿದ್ದು ರಾಜ್ಯದ ಹಲವು ಕಡೆ ಆಧಾರ್ ಲಿಂಕ್ ವಿರೋದಿಸಿ ಪ್ರತಿಭಟನೆಗಳು ಸಹ ನಡೆಯುತ್ತಿದ್ದು, ಈ ಸಂಬಂಧ ಇಂದನ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಹಲವು ರೈತರು ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡಿಸಿಲ್ಲ. ಹೀಗಾಗಿ ಆಧಾ‌ರ್ ಲಿಂಕ್ ಮಾಡದವರಿಗೆ ಸಹಾಯಧನ ಕಡಿತಗೊಳ್ಳಲಿದೆ ಎಂಬ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್ ಕೃಷಿ ಪಂಪ್‌ಸೆಟ್ ಗೆ ಆಧಾರ್ ಲಿಂಕ್ ಮಾಡದವರಿಗೆ ಸಹಾಯಧನ ಕಡಿತ ಆಗಲ್ಲ ಎಂದಿದ್ದಾರೆ.

ಇದನ್ನೂ ಓದಿ:  ksou admission- ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ!

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಇಂದನ ಸಚಿವ ಕೆ.ಜೆ ಜಾರ್ಜ್  ರಾಜ್ಯದಲ್ಲಿ ಒಟ್ಟು 34 ಲಕ್ಷ ಕೃಷಿ ಪಂಪ್ ಸೆಟ್‌ಗಳಿದ್ದು ಅವುಗಳಲ್ಲಿ 32 ಲಕ್ಷ ಪಂಪ್‌ಸೆಟ್‌ಗೆ ಆಧಾರ್ ಲಿಂಕ್ ಆಗಿರುತ್ತದೆ. ಇದರಿಂದ ಎಷ್ಟು ಸಬ್ಸಿಡಿ ಕೊಡಲಾಗುತ್ತಿದೆ ಎಂಬ ಲೆಕ್ಕ ಹಾಗು ನಿಜವಾದವರಿಗೇ ಸಹಾಯಧನ ಹೋಗುತ್ತಿದೆಯೇ ಎಂಬ ಮಾಹಿತಿ ದೊರೆಯುತ್ತದೆ. ಆಧಾರ್ ಲಿಂಕ್ ಮಾಡದೇ ಇರುವವರಿಗೆ ಏನು ಮಾಡಬೇಕು ಎಂಬುದರ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಈಗಾಗಲೇ ಶೇ 95.4ರಷ್ಟು ಪಂಪ್‌ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡಲಾಗಿದೆ. ಸುಮಾರು ಶೇ 6ರಷ್ಟು ಮಾತ್ರ ಮಾಡಿಲ್ಲ. ಲಿಂಕ್ ಮಾಡದೇ ಇರುವವರಿಗೆ ಏನು ಮಾಡಬೇಕು ಎಂಬುದನ್ನು ಪರಿಶೀಲಿಸುತ್ತೇವೆ. ಅವರಿಗೆ ಸಹಾಯಧನ ಕಡಿತ ಮಾಡುವ ಬಗ್ಗೆ ಸದ್ಯ ಯಾವುದೇ ಚಿಂತನೆ ಇಲ್ಲ. ಆಧಾರ್ ಲಿಂಕ್ ಮಾಡುವ ಮೂಲಕ ದುರ್ಬಳಕೆ ಆಗುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಆಧಾರ್ ಜೋಡಣೆ ಬಗ್ಗೆ ರೈತರು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: AO and AAO Notification-2024: ಕೃಷಿ ಇಲಾಖೆಯಲ್ಲಿ ಭರ್ಜರಿ ನೇಮಕಾತಿ!

ಆಧಾರ್ ಲಿಂಕ್ ಮಾಡುವುದರಿಂದ ವಿದ್ಯುತ್ ಬಿಲ್ ಪಾವತಿ ಮಾಡಬೇಕಾಗುತ್ತದೆ ಎಂದು ಸಹ ಹಲವು ರೈತರು ತಿಳಿದುಕೊಂಡಿದ್ದು ಈ ರೀತಿಯ ಯಾವುದೇ ಯೋಜನೆಗಳು ಸರಕಾರದಿಂದ ಇರುವುದಿಲ್ಲ ಎಂದು ಸಹ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ನೈಜ ಅರ್ಹ ಫಲಾನುಭವಿಗಳಿಗೆಯೇ ಕೃಷಿಗೆ ನೀಡುವ ವಿದ್ಯುತ್ ಸಹಾಯಧನ ಬಳಕೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಆಧಾರ್ ಲಿಂಕ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

agriculture pumpset adhar card link-ಆಧಾರ್ ಲಿಂಕ್ ಎಲ್ಲಿ ಮಾಡಿಸಬೇಕು?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಮಾಡುವ ಎಸ್ಕಾಂ ಅಡಿಯಲ್ಲಿ ಕಾರ್ಯನಿರ್ವಹಿಸುವ ಆಯಾ ಭಾಗದ ಲೈನ್ ಮ್ಯಾನ್ ಗಳು ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್ ಮಾಡುತ್ತಿದ್ದಾರೆ. ರೈತರು ತಮ್ಮ ಹಳ್ಳಿಯ ಲೈನ್ ಮ್ಯಾನ್ ಅನ್ನು ಸಂಪರ್ಕಿಸಿ ಅಗತ್ಯ ವಿವರವನ್ನು ನೀಡಿ ನಿಮ್ಮ ಕೃಷಿ ಪಂಪ್ ಆಧಾರ್ ಲಿಂಕ್ ಮಾಡಿಸಬೇಕು.

ಇದನ್ನೂ ಓದಿ: Diploma agriculture-ಕೃಷಿ ಡಿಪ್ಲೋಮಾ ಕೋರ್ಸ್‍ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

Documents-ಅಗತ್ಯ ದಾಖಲೆಗಳು:

1) ಆಧಾರ್ ಕಾರ್ಡ ಪ್ರತಿ.
2) ಪಂಪ್ ಸೆಟ್ ಆರ್ ಆರ್ ನಂಬರ್.
3) ಮೊಬೈಲ್ ನಂಬರ್.

Helpline number-ಸಹಾಯವಾಣಿ: 1902

Most Popular

Latest Articles

- Advertisment -

Related Articles