ration card- ಇಂದು ಮತ್ತು ನಾಳೆ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

ಆಹಾರ ಇಲಾಖೆಯಿಂದ ಇಂದು(06-02-2024) ಮತ್ತು ನಾಳೆ(07-01-2024) ರಂದು ಎರಡು ದಿನ ವೈದ್ಯಕೀಯ ಎಮರ್ಜೆನ್ಸಿ ಕಾರಣದಿಂದಾಗಿ ಪಡಿತರ ಚೀಟಿ(ration card) ತಿದ್ದುಪಡಿ ಮಾಡಿಕೊಳ್ಳಲು ಅವಶ್ಯಕತೆ ಇದ್ದವರಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ration card- ಇಂದು ಮತ್ತು ನಾಳೆ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!
food department karnataka-2024

ಆಹಾರ ಇಲಾಖೆಯಿಂದ ಇಂದು(06-02-2024) ಮತ್ತು ನಾಳೆ(07-01-2024) ರಂದು ಎರಡು ದಿನ ವೈದ್ಯಕೀಯ ಎಮರ್ಜೆನ್ಸಿ ಕಾರಣದಿಂದಾಗಿ ಪಡಿತರ ಚೀಟಿ(ration card) ತಿದ್ದುಪಡಿ ಮಾಡಿಕೊಳ್ಳಲು ಅವಶ್ಯಕತೆ ಇದ್ದವರಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇಂದು ಅಂದರೆ 06-02-2024 ರಂದು ಮಧ್ಯಾಹ್ನ 1-00 ಗಂಟೆಯಿಂದ 4-00 ಗಂಟೆಯವರೆಗೆ ಕಲಬುರ್ಗಿ/ಬೆಂಗಳೂರು ವಿಭಾಗ(ಬೆಂಗಳೂರು ಜಿಲ್ಲೆ ಹೊರತುಪಡಿಸಿ) ವ್ಯಾಪ್ತಿಯ ಜಿಲ್ಲೆಯ ಗ್ರಾಹಕರಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ನಾಳೆ ಅಂದರೆ 07-02-2024 ರಂದು ಮಧ್ಯಾಹ್ನ 1-00 ಗಂಟೆಯಿಂದ 4-00 ಗಂಟೆಯವರೆಗೆ ಬೆಳಗಾವಿ/ಮೈಸೂರು ವಿಭಾಗದ ಜಿಲ್ಲೆಯ ಸಾರ್ವಜನಿಕರಿಗೆ ರ‍ೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Parihara grants- ಈ ಜಿಲ್ಲೆಗಳಲ್ಲಿ ಮೊದಲ ಕಂತಿನ ಬರ ಪರಿಹಾರ ರೈತರ ಖಾತೆಗೆ ಬಿಡುಗಡೆ!

ಇಂದು 06-02-2024 ರಂದು ಮಧ್ಯಾಹ್ನ 1-00 ಗಂಟೆಯಿಂದ 4-00 ಗಂಟೆಯವರೆಗೆ ಕಲಬುರ್ಗಿ/ಬೆಂಗಳೂರು ವಿಭಾಗದ ಈ ಕೆಳಗೆ ತಿಳಿಸಿದ ಜಿಲ್ಲೆಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ(ONLY FOR KALABURAGI/BENGALURU DIVISIONS EXCEPT BENGALURU(URBAN/RURAL/CITY)):

  • ಬಳ್ಳಾರಿ
  • ಬೀದರ್
  • ಚಿಕ್ಕಬಳ್ಳಾಪುರ
  • ಚಿತ್ರ ದುರ್ಗ
  • ದಾವಣಗೆರೆ
  • ಕಲಬುರ್ಗಿ
  • ಕೋಲಾರ
  • ಕೊಪ್ಪಳ
  • ರಾಯಚೂರು
  • ರಾಮನಗರ
  • ಶಿವಮೊಗ್ಗ
  • ತುಮಕೂರು
  • ಯಾದಗಿರಿ
  • ವಿಜಯನಗರ

ಇದನ್ನೂ ಓದಿ: Fastag kyc- ನಿಮ್ಮ ವಾಹನದ ಫಾಸ್ಟ್ ಟ್ಯಾಗ್ ಕೆವೈಸಿ ಮಾಡಲು ಫೆ,29 ಕೊನೆಯ ದಿನ! ಕೆವೈಸಿ ನಿಮ್ಮ ಮೊಬೈಲ್ ನಲ್ಲೇ ಮಾಡಬಹುದು!ಪರಿಹಾರ

ನಾಳೆ 07-02-2024 ರಂದು ಮಧ್ಯಾಹ್ನ 1-00 ಗಂಟೆಯಿಂದ 4-00 ಗಂಟೆಯವರೆಗೆ ಬೆಳಗಾವಿ/ಮೈಸೂರು ವಿಭಾಗದ ಈ ಕೆಳಗೆ ತಿಳಿಸಿದ ಜಿಲ್ಲೆಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ(ONLY FOR BELAGAVI/MYSURU DIVISIONS):

  • ಬಾಗಲಕೋಟೆ
  • ಬೆಳಗಾವಿ
  • ಚಾಮರಾಜನಗರ
  • ಚಿಕ್ಕಮಂಗಳೂರು
  • ದಕ್ಷಿಣಕನ್ನಡ
  • ಧಾರವಾಡ
  • ಗದಗ
  • ಹಾಸನ
  • ಹಾವೇರಿ
  • ಕೊಡಗು
  • ಮಂಡ್ಯ
  • ಮೈಸೂರು
  • ಉಡುಪಿ
  • ಉತ್ತರಕನ್ನಡ
  • ವಿಜಯಪುರ

ಇದನ್ನೂ ಓದಿ: Marriage registration- ವಿವಾಹ ನೋಂದಣಿ ಇನ್ನು ಭಾರೀ ಸುಲಭ!

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿದಾರ ಗ್ರ‍ಾಹಕರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಬೇರೆ ಯಾವ ಕಡೆಯಲ್ಲಿಯು/ಕೇಂದ್ರಗಳಲ್ಲಿಯು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಯಾವೆಲ್ಲ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು? ಅಗತ್ಯ ದಾಖಲಾತಿಗಳೇನು ಎನ್ನುವ ಸಂಪೂರ್ಣ ಮಾಹಿತಿಗಾಗಿ ನಮ್ಮ ಪುಟದ ಈ ಅಂಕಣವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: click here

ಸರ್ವರ್ ಸಮಸ್ಯೆಗೆ ಬೇಕು ಶಾಶ್ವತ ಪರಿಹಾರ:

ಸಾರ್ವಜನಿಕರಿಗೆ ಆಹಾರ ಇಲಾಖೆಯಿಂದ ಈ ರೀತಿ ಪಡಿತರ ಚೀಟಿ ತಿದ್ದುಪಡಿಗೆ ಕೇವಲ ಒಂದು ದಿನ ಮತ್ತು ನಿಗದಿತ ಸಮಯದಲ್ಲಿ ಮಾತ್ರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತಿರುವುದರಿಂದ ಸರ್ವರ್ ಸಮಸ್ಯೆ ಬರುತ್ತಿದ್ದು ಕೇವಲ ಬೆರಳೆಣಿಕೆಯಷ್ಟು ಅರ್ಜಿಗಳನ್ನು ಸಲ್ಲಿಸಲು ಮಾತ್ರ ಸಾಧ್ಯವಾಗುತ್ತಿದೆ ಈ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು ಈ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯತೆ ಇದೆ.

ಪ್ರಮುಖ ಉಪಯುಕ್ತ ಲಿಂಕ್ ಗಳು:

ಆಹಾರ ಮತ್ತು ನಾಗರಿಕ ವ್ಯವಹಾರ ಇಲಾಖೆಯ ಅಧಿಕೃತ ವೆಬ್ಸೈಟ್: click here