Ration Card Cancellation-ರೇಶನ್ ಕಾರ್ಡ ರದ್ದಾಗಳು ಪ್ರಮುಖ ಕಾರಣಗಳ ಪಟ್ಟಿ ಬಿಡುಗಡೆ!

September 25, 2025 | Siddesh
Ration Card Cancellation-ರೇಶನ್ ಕಾರ್ಡ ರದ್ದಾಗಳು ಪ್ರಮುಖ ಕಾರಣಗಳ ಪಟ್ಟಿ ಬಿಡುಗಡೆ!
Share Now:

ರಾಜ್ಯಾದ್ಯಂತ ಈಗಾಗಲೇ ಅನರ್ಹ ಪಡಿತರ ಚೀಟಿದಾರನ್ನು ಪಟ್ಟಿ ಮಾಡಿ ಇಂತಹ ಕಾರ್ಡದಾರರಿಗೆ ನೋಟಿಸ್ ಅನ್ನು ನೀಡಲಾಗುತ್ತಿದ್ದು ಇದಕ್ಕಾಗಿ ಆಹಾರ ಇಲಾಖೆಯಿಂದ ಯಾವೆಲ್ಲ ನಿಯಮ/ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ ಎನ್ನುವ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಲು ಅನರ್ಹರಿರುವ ಗ್ರಾಹಕರನ್ನು ಯಾವೆಲ್ಲ ನಿಯಮಗಳ ಮೇಲೆ ನಿರ್ಧಾರ ಮಾಡಲಾಗುತ್ತದೆ. ಆಹಾರ ಮತ್ತು ನಾಗರಿಕರ ವ್ಯವಹಾರಗಳ ಇಲಾಖೆಯಿಂದ ಪ್ರಸ್ತುತ ಅನುಸರಿಸುತ್ತಿರುವ ಮಾರ್ಗಸೂಚಿಗಳು ಯಾವುವು ಎನ್ನುವ ಸಂಪೂರ್ಣ ವಿವರದ ಪಟ್ಟಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Horticulture Mela 2025-ತೋಟಗಾರಿಕೆ ಮೇಳ ಬಾಗಲಕೋಟ 2025ಕ್ಕೆ ದಿನಾಂಕ ನಿಗದಿ! ಇಲ್ಲಿದೆ ಸಂಪೂರ್ಣ ಮಾಹಿತಿ!

Ration Card Cancellation List-ಬಿಪಿಎಲ್ ಕಾರ್ಡ ರದ್ದು ಮಾಡಲು ಆಹಾರ ಇಲಾಖೆಯಿಂದ ಅನುಸರಿಸುತ್ತಿರುವ ಮಾರ್ಗಸೂಚಿಗಳು:

ಈ ಕೆಳಗಿನ ಪಡಿತರ ಚೀಟಿದಾರರು ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅನರ್ಹರಾಗಿರುತ್ತಾರೆ:

ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರು ಹೊಂದಿರುವ ಜಮೀನು ಸೇರಿಸಿದಾಗ, 7 ಎಕರೆಗೂ ಹೆಚ್ಚು. ಜಮೀನು ಇದ್ದಲ್ಲಿ ಅಂತಹವರು ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಪಡಿತರ ಚೀಟಿಯ ಯಾವುದೇ ಸದಸ್ಯ 4 ಚಕ್ರ ವಾಹನ (only white board) ಹೊಂದಿದ್ದಲ್ಲಿ ಅಂತಹವರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು(ತಂದೆ/ ತಾಯಿ/ಹೆಂಡತಿ / ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಜಿ.ಎಸ್.ಟಿ ಅಥವಾ ಆದಾಯ ತೆರಿಗೆ ಪಾವತಿಸುತ್ತಿರುವ ಯಾವುದೇ ವ್ಯಕ್ತಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಸರ್ಕಾರಿ ನೌಕರಿ ಮಾಡುತ್ತಿರುವ ಯಾವುದೇ ವ್ಯಕ್ತಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಇದನ್ನೂ ಓದಿ: Business Loan-ಶ್ರಮಶಕ್ತಿ ಸಾಲ ಯೋಜನೆ ಸಣ್ಣ ವ್ಯಾಪಾರವನ್ನು ಆರಂಭಿಸಲು ರೂ 50,000/- ಸಹಾಯಧನ!

ಸಹಕಾರಿ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಸಿಬ್ಬಂಧಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ವೃತ್ತಿಪರ ನೌಕರರು (ವೈದ್ಯರು, ಇಂಜಿನೀಯರ್ಗಳು ವಕೀಲರು, ಇತರರು) ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ನೋಂದಾಯಿತ ಗುತ್ತಿಗೆದಾರರು, ಎ.ಪಿ.ಎಂ.ಸಿ ಟ್ರೇಡರ್ಗಳು, ಕಮಿಷನ್ ಏಜಂಟರು, ಬೀಜ ಮತ್ತು ಗೊಬ್ಬರ ಡೀಲರ್‌ಗಳು ಇತ್ಯಾದಿ ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಅನುದಾನಿತ ಶಾಲಾ ಕಾಲೇಜುಗಳ ನೌಕರರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಸರ್ಕಾರಿ ಸ್ವಾಮ್ಯದ ಉದ್ಯಮಗಳು/ ಮಂಡಳಿಗಳು /ನಿಗಮಗಳ ಖಾಯಂ ನೌಕರರು, ಸ್ವಾಯತ ಸಂಸ್ಥೆ / ಮಂಡಳಿಯ ನೌಕರರು ಅಥವಾ ಅಂತಹ ವ್ಯಕ್ತಿಯ ಅವಲಂಬಿತ ಕುಟುಂಬ ಸದಸ್ಯರು (ತಂದೆ/ ತಾಯಿ/ ಹೆಂಡತಿ/ ಅವಿವಾಹಿತ ಮಕ್ಕಳು) ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಲು ಅನರ್ಹರು.

ಇದನ್ನೂ ಓದಿ: Swavalambi Sarathi Application-ಸ್ವಾವಲಂಬಿ ಸಾರಥಿ ವಾಹನ ಖರೀದಿ ಮಾಡಲು ₹ 3.0 ಲಕ್ಷ ಸಬ್ಸಿಡಿಗೆ ಅರ್ಜಿ ಆಹ್ವಾನ!

ration card list

Ration Card Ineligible-ಅರ್ಹರಿದ್ದರು ಕಾರ್ಡ ರದ್ದಾದರೆ ಹೀಗೆ ಮಾಡಿ:

ಒಂದೊಮ್ಮೆ ಮಾರ್ಗಸೂಚಿ ಪ್ರಕಾರ ಅರ್ಹರಿದ್ದರು ಕಾರ್ಡ ರದ್ದಾದರೆ ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿ.

Food Department Website-ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಹಾರ ಇಲಾಖೆಯ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: