RRB JE Recruitment 2024: ರೈಲ್ವೆ ಇಲಾಖೆಯಲ್ಲಿ 7500+ ಹುದ್ದೆಗಳ ಬೃಹತ್ ನೇಮಕಾತಿ | ವೇತನ ₹44,900

August 12, 2024 | Siddesh

ಭಾರತೀಯ ರೈಲ್ವೆ ಇಲಾಖೆಯಲ್ಲಿ ಪ್ರತಿ ವರ್ಷ ನೇಮಕಾತಿ ಮಾಡಿಕೊಳ್ಳುತ್ತಿರುವಂತೆ ಈ ವರ್ಷವೂ ಕೂಡ ಖಾಲಿ ಇರುವ 7,951 ಜೂನಿಯರ್ ಇಂಜಿನಿಯರ್(RRB Junior Engineer  notification) ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

RRB Junior Engineer Recruitment - ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವ ಜೂನಿಯರ್ ಇಂಜಿನಿಯರ್ ಹುದ್ದೆಗಳಗೆ ಅರ್ಜಿ ಸಲ್ಲಿಸಲು ಇರಬೇಕಾದ ಸಂಪೂರ್ಣ ಅರ್ಹತೆಗಳು, ಆಯ್ಕೆ ಆದವರಿಗೆ ಸಿಗುವ ವೇತನ, ಅರ್ಜಿ ಸಲ್ಲಿಕೆ ಲಿಂಕ್ ಹಾಗೂ ಪ್ರಮುಖ ದಿನಾಂಕಗಳ ಮಾಹಿತಿಯನ್ನು ನೀಡಲಾಗಿದೆ.

ಅರ್ಜಿ ಸಲ್ಲಿಸಲು ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ಅಡಿ ನೇಮಕಾತಿ ಮಾಡಿಕೊಳ್ಳತ್ತಿರುವ ರೈಲ್ವೆ ನೇಮಕಾತಿ ಮಂಡಳಿಯ ನಿಯಮಗಳಿಗೆ ಅನುಗುಣವಾಗಿ ಅರ್ಹತೆ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿಯೇ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Mane hani parihara-ಅತೀಯಾದ ಮಳೆಯಿಂದ ಉಂಟಾದ ನಷ್ಟಕ್ಕೆ ಪರಿಹಾರ! ಅಧಿಕೃತ ಮಾರ್ಗಸೂಚಿ ಬಿಡುಗಡೆ!

RRB job details- ಖಾಲಿ ಇರುವ ಹುದ್ದೆಗಳ ವಿವರ : 

• ಜೂನಿಯರ್ ಇಂಜಿನಿಯರ್ 
• ಕೆಮಿಕಲ್ ಸೂಪರ್ವೈಸರ್ 
• ಕೆಮಿಕಲ್ ಮತ್ತು ಮೆಟಲೇರ್ಜಿಕಲ್ ಸಹಾಯಕ 
• ಡಿಪೋ ಮೆಟೀರಿಯಲ್ ಸೂಪರಿಟೆಂಡೆಂಟ್ 
• ಮೆಟಲರ್ಜಿಕಲ್ ಸೂಪರ್ವೈಸರ್ 

Education Qualification-ಶೈಕ್ಷಣಿಕ ವಿದ್ಯಾರ್ಹತೆ :  

ರೈಲ್ವೆ ಇಲಾಖೆ ನೇಮಕಾತಿ ಮಂಡಳಿಯ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಂಬಂಧಪಟ್ಟ ವಿಭಾಗದಲ್ಲಿ ಡಿಪ್ಲೋಮಾ ಪದವಿ ಮುಗಿಸಿರಬೇಕು ಹಾಗೂ ಇನ್ನುಳಿದ ಹುದ್ದೆಗಳಿಗೆ ಸಂಬಂಧಪಟ್ಟ ವಿಷಯದಲ್ಲಿ ಪದವಿ ಮುಗಿಸಿರಬೇಕು.

ಇದನ್ನೂ ಓದಿ: aadhar card address change-ಆಧಾರ್ ಕಾರ್ಡನಲ್ಲಿ ವಿಳಾಸ ತಿದ್ದುಪಡಿಗೆ ನೂತನ ವ್ಯವಸ್ಥೆ!

ವಯೋಮಿತಿ ಹಾಗೂ ವಯೋಮಿತಿ ಸಡಿಲಿಕೆ : RRB Junior Engineer Recruitment

ಅರ್ಜಿ ಸಲ್ಲಿಸುವವರು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 38 ವರ್ಷದೊಳಗಿರಬೇಕು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವವರಿಗೆ ಈ ಕೆಳಗಿನಂತೆ ಗರಿಷ್ಠ ವಯೋಮಿತಿಯಲ್ಲಿ  ಸಡಿಲಿಕೆ ನೀಡಲಾಗುತ್ತದೆ.
• ಪರಿಶಿಷ್ಟ ವರ್ಗದ ಅಡಿಯಲ್ಲಿ ಬರುವವರಿಗೆ - 05 ವರ್ಷ 
• ಇತರೆ ಹಿಂದುಳಿದ ವರ್ಗದವರಿಗೆ - 3 ವರ್ಷ 
• ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ - 10 ವರ್ಷ 

RRB Junior Engineer  Salary-ಆಯ್ಕೆ ಆಗುವವರಿಗೆ ಸಿಗುವ ವೇತನ - ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ₹35,400 ರಿಂದ ₹44,900 ರವರೆಗೆ ವೇತನ ಸಿಗಲಿದೆ.

Application fee-ಅರ್ಜಿ ಸಲ್ಲಿಕೆಗೆ ಶುಲ್ಕ : 

• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ - ₹500/-
• SC, ST, PwBD, Womens, OBC ವರ್ಗದವರಿಗೆ - ₹250/-

ಇದನ್ನೂ ಓದಿ: RTC ಅಲ್ಲಿ ಹೆಸರು ತಿದ್ದುಪಡಿ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಅನ್ಲೈನ್ ನಲ್ಲಿ RTC ವಿವರ ತಿಳಿಯಲು ವೆಬ್ಸೈಟ್ ಲಿಂಕ್!

Important dates-ನೇಮಕಾತಿಯ ಪ್ರಮುಖ ದಿನಾಂಕಗಳು : 

• ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ - 30 ಜುಲೈ 2024
• ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ - 29 ಆಗಸ್ಟ್ 2024

usefull website links-ಪ್ರಮುಖ ಲಿಂಕುಗಳು :

• ಅರ್ಜಿ ಸಲ್ಲಿಸುವ ಲಿಂಕ್ - Click here
• ಅಧಿಸೂಚನೆ - Download now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: