Scholarship Application-2025: ಎಸ್ ಎಸ್ ಟ್ರಸ್ಟ್ ನಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

June 29, 2025 | Siddesh
Scholarship Application-2025: ಎಸ್ ಎಸ್ ಟ್ರಸ್ಟ್ ನಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Share Now:

ಡಾ. ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ನಿಂದ(SS Janakalyan Trust) ರಾಜ್ಯದ ಎಲ್ಲಾ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ನೆರವು ನೀಡಲು ವಿದ್ಯಾರ್ಥಿವೇತನವನ್ನು ಒದಗಿಸಲು ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಎಸ್ ಎಸ್ ಜನಕಲ್ಯಾಣ ಟ್ರಸ್ಟ್ ನಿಂದ ವಿದ್ಯಾರ್ಥಿವೇತನವನ್ನು(SS Janakalyan Trust Scholarship)ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳೇನು? ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನದ ಕುರಿತು ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Diploma agriculture admission-2025: ರಾಯಚೂರು ಕೃಷಿ ವಿವಿಯಿಂದ ಕೃಷಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

SS Janakalyan Trust-ಡಾ. ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ವಿವರ ಹೀಗಿದೆ:

ಡಾ. ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ (SSJKT) 2012ರಲ್ಲಿ ಸ್ಥಾಪನೆಯಾದ ಒಂದು ಸಾರ್ವಜನಿಕ ದತ್ತಿ ಸಂಸ್ಥೆಯಾಗಿದ್ದು, ಇದರ ಪ್ರಮುಖ ಗುರಿಯು ಶೈಕ್ಷಣಿಕವಾಗಿ ಪ್ರತಿಭಾವಂತರಾದರೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಜೀವನವನ್ನು ಶಿಕ್ಷಣದ ಮೂಲಕ ಉನ್ನತಿಗೊಳಿಸುವುದಾಗಿದೆ. ಕರ್ನಾಟಕದ ದಾವಣಗೆರೆಯನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಈ ಟ್ರಸ್ಟ್, ಶಿಕ್ಷಣ, ಆರೋಗ್ಯ, ಮತ್ತು ಗ್ರಾಮೀಣ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಜಾತಿ, ಕುಲ, ಧರ್ಮದ ಭೇದವಿಲ್ಲದೆ ಸೇವೆ ಸಲ್ಲಿಸುತ್ತಿದೆ.

ಇದನ್ನೂ ಓದಿ: Home Construction-ಕಟ್ಟಡ ನಕ್ಷೆ ಮಂಜೂರಾತಿಯಿಲ್ಲದೆ ಮನೆ ಕಟ್ಟವಂತಿಲ್ಲ: ಸುಪ್ರೀಂ ಕೋರ್ಟ್

Scholarship Eligibility Criteria-ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

1) ಈ ವಿದ್ಯಾರ್ಥಿ ವೇತನವು ಕರ್ನಾಟಕದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ

2) ವಿದ್ಯಾರ್ಥಿಯ ಪೋಷಕರ ಕುಟುಂಬದ ಒಟ್ಟು ವಾರ್ಷಿಕ ಆದಾಯ ಒಂದು ಲಕ್ಷ (100000) ರೂಪಾಯಿಯ ಒಳಗೆ ಇರಬೇಕು.

3) ವಿದ್ಯಾರ್ಥಿಯು ಕರ್ನಾಟಕದ ಪ್ರತಿಷ್ಠಿತ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಅಥವಾ ಬೋರ್ಡ್ ನಿಂದ ಮಾನ್ಯತೆ ಪಡೆದ ಕೋರ್ಸಗಳಲ್ಲಿ ಪೂರ್ಣ ಪ್ರಮಾಣದ (Regular course) ಅವಧಿಯಲ್ಲಿ ಅಭ್ಯಾಸ ಮಾಡುತ್ತಿರಬೇಕು.

4) ಅರೆಕಾಲಿಕ (Correspondence) ಕೋರ್ಸ ಒದುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುವುದಿಲ್ಲ

5) ವಿದ್ಯಾರ್ಥಿಯು ಕೋರ್ ಬ್ಯಾಂಕಿಂಗ್ ಸೌಲಭ್ಯವಿರುವ ಯಾವುದಾದರೂ ಬ್ಯಾಂಕಿನಲ್ಲಿ ತಮ್ಮ ಬ್ಯಾಂಕ್ ಅಕೌಂಟ್ ಹೊಂದಿರಬೇಕು

6) ಶೇಕಡಾವುರು ಅಂಕಗಳಿಗೆ ಸಂಬಂದಿಸಿದಂತೆ ವಿವಿಧ ಕೋರ್ಸಗಳ ಮಾಹಿತಿಯು ಈ ಕೆಳಗಿನಂತಿದೆ

7) ವಿದ್ಯಾರ್ಥಿಯು ಸಲ್ಲಿಸಿದ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾನ್ವಿತ ಆಯ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: NLM Scheme-ಜಾನುವಾರು ಮಿಷನ್ ಯೋಜನೆಯಡಿ ಕುರಿ ಮೇಕೆ ಕೋಳಿ ಸಾಕಾಣಿಕೆಗೆ ₹ 25.00 ಲಕ್ಷ ಸಬ್ಸಿಡಿ!

Scholarship

Who Can Apply For this Scholarship-ಯಾವೆಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು?

PUC, MBBS, DIPLOMA, BSC, BCOM, BE, BVSC, BCA, BBM/BBA, BA, B-PHARMA, MA, MSC, M.COM, B.Ed. ಈ ತರಗತಿಗಳಿಗೆ ಪ್ರವೇಶ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.

Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

ಎಸ್ ಎಸ್ ಜನಕಲ್ಯಾಣ ಟ್ರಸ್ಟ್ ನಿಂದ ವಿದ್ಯಾರ್ಥಿವೇತನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಥಿಗಳು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.

  • ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಮುದ್ರಿಸಿದ ಪ್ರತಿಯ ಸಹಿ ಮಾಡಿಸಿ ಸ್ಕ್ಯಾನ್ ಮಾಡಿದ ಪ್ರತಿ.
  • ವಿದ್ಯಾರ್ಥಿಯ ಅಧಾರ ಕಾರ್ಡ್ ಪ್ರತಿ.
  • ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯದ ಪ್ರತಿ. (Income Certificate)
  • ವಿದ್ಯಾರ್ಥಿಯ ಎಸ್. ಎಸ್.ಎಲ್.ಸಿ /10ನೇ ತರಗತಿಯ ಅಂಕ ಪಟ್ಟಿಯ ನಕಲು ಪ್ರತಿ.
  • ದ್ವಿತೀಯ ಪಿಯುಸಿ/12ರ ಅಂಕ ಪಟ್ಟಿಯ ನಕಲು ಪ್ರತಿ.
  • ವಿದ್ಯಾಸಂಸ್ಥೆ ಅಥವಾ ಕಾಲೇಜಿನಲ್ಲಿ ದಾಖಲಾತಿ ಅಥವಾ ಪ್ರವೇಶ ಪಡೆದು ಹಣ ಕಟ್ಟಿದ ರಸೀದಿಯ ನಕಲು ಪ್ರತಿ.
  • ವಿದ್ಯಾರ್ಥಿಯ ಫೋಟೋ ಇರುವ, ಬ್ಯಾಂಕ ಖಾತೆ ಸಂಖ್ಯೆ ಮತ್ತು IFSC ಕೋಡ್ ತೋರಿಸುವ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ.

ಇದನ್ನೂ ಓದಿ: Kharif Crop Survey-2025: ಮುಂಗಾರು ಬೆಳೆ ಸಮೀಕ್ಷೆ ರೈತರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

Online Apply Method-ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಗಳು ಈ ಕೆಳಗಿನ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಕುಳಿತು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ತಮ್ಮ ಮೊಬೈಲ್ ಮೂಲಕ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

Step-1: ವಿದ್ಯಾರ್ಥಿಗಳು ಮೊದಲಿಗೆ "Apply Now" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಎಸ್ ಎಸ್ ಜನಕಲ್ಯಾಣ ಟ್ರಸ್ಟ್ ನ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Nigama Yojanegalu-ರಾಜ್ಯದ 11 ನಿಗಮಗಳಲ್ಲಿ ವಿವಿಧ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ!

Step-2: ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ Apply Online ಆಯ್ಕೆಯ ಮೇಲೆ ಕ್ಲಿಕ್ ಮಾಡಿ Click Here To Apply ಬಟನ್ ಮೇಲೆ ಕ್ಲಿಕ್ ಮಾಡಿ ಮೊದಲ ಬಾರಿಗೆ ಈ ವೆಬ್ಸೈಟ್ ಪ್ರವೇಶ ಮಾಡುತ್ತಿರುವ ವಿದ್ಯಾರ್ಥಿಗಳು "New User" ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.

Step-3: ನಂತರ ಇಲ್ಲಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Puc Scholarship-ಪಿಯುಸಿಯಲ್ಲಿ ಉತ್ತಮ ಅಂಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ!

Scholarship Application Last Date-ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ- 31 ಜುಲೈ 2025

For More Information-ಹೆಚ್ಚಿನ ಮಾಹಿತಿಗಾಗಿ:

ಅಧಿಕೃತ ವೆಬ್ಸೈಟ್ ಲಿಂಕ್- Click Here
ಅಧಿಕೃತ ಪ್ರಕಟಣೆ ಕೈಪಿಡಿ ಡೌನ್ಲೋಡ್ ಮಾಡಲು ಲಿಂಕ್- Download Now
ಕಚೇರಿ ವಿಳಾಸ: Dr. Shamanur Shivashankarappa Janakalyan Trust
C/o. R L Law College, AVK College Road, Behind Bapuji Educational Association (BEA) office
Davangere-577002, Karnataka. Mail-drssjkt@gmail.com

WhatsApp Group Join Now
Telegram Group Join Now
Share Now: