Scholarship application- ವಿದ್ಯಾಧನ ರೂ 55,000 ಸಾವಿರ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

November 22, 2024 | Siddesh
Scholarship application- ವಿದ್ಯಾಧನ ರೂ 55,000 ಸಾವಿರ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Share Now:

ವಿದ್ಯಾಧನ ಸ್ಕಾಲರ್ಶಿಪ್ ಕಾರ್ಯಕ್ರಮದಡಿಯಲ್ಲಿ ರೂ 55,000 ಸಾವಿರದ ವರೆಗೆ ವಿದ್ಯಾರ್ಥಿವೇತನ ಪಡೆಯಲು(Scholarship application) ಅರ್ಹ ಫಲಾನುಭವಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸರೋಜಿನಿ ದಾಮೋಧರ್ ಪೌಂಡೇಶನ್ ವತಿಯಿಂದ ಅರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅರ್ಥಿಕವಾಗಿ ಧನ ಸಹಾಯ ಮಾಡಲು ವಿದ್ಯಾಧನ ಸ್ಕಾಲರ್ಶಿಪ್ ಕಾರ್ಯಕ್ರಮದಡಿಯಲ್ಲಿ ಧನ ಸಹಾಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: BPL Card guidelines- ರಾಜ್ಯ ಸರಕಾರದಿಂದ ಈ ವರ್ಗಕ್ಕೆ ಸೇರಿದವರ ಬಿಪಿಎಲ್ ಕಾರ್ಡ ರದ್ದುಗೊಳಿಸಲು ಸೂಚನೆ!

ವಿದ್ಯಾಧನ ಸ್ಕಾಲರ್ಶಿಪ್ ಕಾರ್ಯಕ್ರಮದಡಿಯಲ್ಲಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅರ್ಹರು ಯಾರು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

How can apply for vidhyadhana Scholarship- ಅರ್ಜಿ ಸಲ್ಲಿಸಲು ಅರ್ಹರು:

ವಿದ್ಯಾಧನ ಸ್ಕಾಲರ್ಶಿಪ್ ಕಾರ್ಯಕ್ರಮದಡಿಯಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಅರ್ಥಿಕ ನೆರವು ಪಡೆಯಲು ಈ ಕೆಳಗೆ ತಿಳಿಸಿರುವ ಅರ್ಹತೆಗಳನ್ನು ಹೊಂದಿರಬೇಕು

1) ಕುಟುಂಬದ ವಾರ್ಷಿಕ ಆದಾಯವು 3.00 ಲಕ್ಷಕ್ಕಿಂತ ಕಡಿಮೆ ಇರಬೇಕು.

2) ವಿದ್ಯಾರ್ಥಿಯು ದ್ವಿತೀಯ ಪಿಯುಸಿಯನ್ನು 2024 ಶೈಕ್ಷಣಿಕ ವರ್ಷದಲ್ಲಿ 70% ಕ್ಕಿಂತ ಅಧಿಕ ಅಂಕಗಳಿಂದ ಪಾಸ್ ಅಗಿರಬೇಕು.

3) ವಿದ್ಯಾರ್ಥಿಯು 4 ರಿಂದ 5 ವರ್ಷದ ಪದವಿ ಶಿಕ್ಷಣ ಕೋರ್ಸ್ ಅಥವಾ ಮೆಡಿಕಲ್ ಶಿಕ್ಷಣಕ್ಕೆ ಸಂಬಂಧಪಟ್ಟ ನರ್ಸಿಂಗ್, ಪ್ಯಾರಮೆಡಿಕಲ್,ಪಾರ್ಮಸಿ, ಪಿಸಿಯೋತೆರಿಥಿಯಂತ ಕೋರ್ಸ್ ಗಳಲ್ಲಿ/ಪದವಿಯನ್ನು ವ್ಯಾಸಂಗ ಮಾಡುತ್ತಿರಬೇಕು.

ಇದನ್ನೂ ಓದಿ: Health Department- ಆರೋಗ್ಯ ಇಲಾಖೆಯಿಂದ ಮತ್ತೊಂದು ಜನಸ್ನೇಹಿ ಯೋಜನೆ ಜಾರಿ!

Documents- ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಪೋಟೋ

ದ್ವಿತೀಯ ಪಿಯುಸಿ ಅಂಕಪಟ್ಟಿ

ಆದಾಯ ಪ್ರಮಾಣ ಪತ್ರ

ಕಾಲೇಜು ದಾಖಲಾತಿಯಾಗಿ ಶುಲ್ಕ ಪಾವತಿ ಮಾಡಿರುವ ರಶೀದಿ.

Scholarship application

ಇದನ್ನೂ ಓದಿ: RTC Crop Details-ಬೆಳೆ ವಿಮೆ,ಬೆಂಬಲ ಬೆಲೆ ಪ್ರಯೋಜನ ಪಡೆಯಲು ಬೆಳೆ ಮಾಹಿತಿ ಪಟ್ಟಿ ಬಿಡುಗಡೆ! ಆಕ್ಷೇಪಣೆ ಸಲ್ಲಿಸಲು ಅವಕಾಶ!

Last Date for application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯ ಅಗುವುದರ ಒಳಗಾಗಿ ಆನ್ಲೈನ್ ಮೂಲಕ್ ಅರ್ಜಿ ಸಲ್ಲಿಸಿ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ನವೆಂಬರ್ 2024

Online application method-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ವಿದ್ಯಾರ್ಥಿಗಳು ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಅನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: Click here ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಇಲ್ಲಿ Apply Now ಬಟನ್ ಮೇಲೆ ಕ್ಲಿಕ್ ಮಾಡಿ Register ಬಟನ್ ಮೇಲೆ ಕ್ಲಿಕ್ ಮಾಡಿ ನೊಂದಣಿಯನ್ನು ಮಾಡಿಕೊಂಡು Login ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Bele vime amount- 17.61 ಲಕ್ಷ ರೈತರಿಗೆ 2,021 ಕೋಟಿ ಬೆಳೆ ವಿಮೆ ಕೃಷಿ ಸಚಿವ ಚಲುವರಾಯಸ್ವಾಮಿ!

Selection Method-ಆಯ್ಕೆ ವಿಧಾನ:

ಒಮ್ಮೆ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳನ್ನು ಒದಗಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ Screening Test ಮಾಡಲಾಗುತ್ತದೆ ನಂತರ ಇಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸಂದರ್ಶನ ಮಾಡಿ ಅಂತಿಮವಾಗಿ ಸ್ಕಾಲರ್ಶಿಪ್ ನೀಡಲು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ/Last date: 25th November 2024
ಪರೀಕ್ಷೆ ನಡೆಯುವ ದಿನಾಂಕ/Screening Test: 5th November 2024
ಸಂದರ್ಶನ ನಡೆಯುವ ದಿನಾಂಕ/Interview/Tests: 1st December 2024

ಹೆಚ್ಚಿನ ಮಾಹಿತಿ ಪಡೆಯಲು ಮೊಬೈಲ್ ನಂಬರ್- 9663517131

ಇದನ್ನೂ ಓದಿ: BPL Card news-ಬಿಪಿಎಲ್ ಕಾರ್ಡ ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: