Free self employment training-2024: ಸ್ವ-ಉದ್ಯೋಗ ಮಾಡುವವರಿಗೆ ಭರ್ಜರಿ ಸಿಹಿ ಸುದ್ದಿ! ಇಲ್ಲಿದೆ ಉತ್ತಮ ಅವಕಾಶ!

ತಮ್ಮದೇ ಅದ ಸ್ವಂತ ಉದ್ಯೋಗ ಪ್ರಾರಂಭಿಸುವ ಕನಸು ಕಂಡಿರುವ ಆಸಕ್ತ ಅಭ್ಯರ್ಥಿಗಳಿಗೆ ಇಲ್ಲೊಂದು ಉತ್ತಮ ಅವಕಾಶವಿದೆ ತಮಗೆ ಯಾವ ಕ್ಷೇತ್ರದಲ್ಲಿ ಸ್ವ-ಉದ್ಯೋಗ ಆರಂಭಿಸಬೇಕು ಎಂದು ಕೊಂಡಿರುವಿರೋ ಆ ವಿಭಾಗದಲ್ಲಿ ನೈಪುಣ್ಯತೆ ಪಡೆಯಲು ಉಚಿತ ಕೌಶಲ್ಯ ತರಬೇತಿಗೆ(self employment training) ಅರ್ಜಿ ಆಹ್ವಾನಿಸಲಾಗಿದೆ.

Free self employment training-2024: ಸ್ವ-ಉದ್ಯೋಗ ಮಾಡುವವರಿಗೆ ಭರ್ಜರಿ ಸಿಹಿ ಸುದ್ದಿ! ಇಲ್ಲಿದೆ ಉತ್ತಮ ಅವಕಾಶ!
self employment training-2024

ತಮ್ಮದೇ ಅದ ಸ್ವಂತ ಉದ್ಯೋಗ ಪ್ರಾರಂಭಿಸುವ ಕನಸು ಕಂಡಿರುವ ಆಸಕ್ತ ಅಭ್ಯರ್ಥಿಗಳಿಗೆ ಇಲ್ಲೊಂದು ಉತ್ತಮ ಅವಕಾಶವಿದೆ ತಮಗೆ ಯಾವ ಕ್ಷೇತ್ರದಲ್ಲಿ ಸ್ವ-ಉದ್ಯೋಗ ಆರಂಭಿಸಬೇಕು ಎಂದು ಕೊಂಡಿರುವಿರೋ ಆ ವಿಭಾಗದಲ್ಲಿ ನೈಪುಣ್ಯತೆ ಪಡೆಯಲು ಉಚಿತ ಕೌಶಲ್ಯ ತರಬೇತಿಗೆ(self employment training) ಅರ್ಜಿ ಆಹ್ವಾನಿಸಲಾಗಿದೆ.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ಕೇಂದ್ರದಿಂದ ಒಟ್ಟು ಉಚಿತ ನಾಲ್ಕು(4)ತರಬೇತಿಗೆ(Free self employment training-2024) ಅರ್ಜಿ ಆಹ್ವಾನಿಸಲಾಗಿದೆ.

ಈ ತರಬೇತಿಗಳನ್ನು ಆಸಕ್ತಿಯಿರುವ ಅಭ್ಯರ್ಥಿಗಳು ತರಬೇತಿ ಆರಂಭವಾಗುವ ಪೂರ್ವದಲ್ಲಿ ಈ ಲೇಖನದಲ್ಲಿ ತಿಳಿಸಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ ಈ ತರಬೇತಿಯ ಲಾಭ ಪಡೆದುಕೊಂಡು ಸ್ವ-ಉದ್ಯೋಗ ಆರಂಭಿಸಬಹುದು.

ಇದನ್ನೂ ಓದಿ: Agriculture land info-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇದನ್ನು ಹೇಗೆ ಸರಿಪಡಿಸಿಕೊಳ್ಳುವುದು?

Training details-2024: ಯಾವೆಲ್ಲ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ?

1) ಎಲೆಕ್ಟ್ರಿಕಲ್ ಮೋಟಾರ್ ರೀವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ.
2) ಮೊಬೈಲ್ ಫೋನ್ ರಿಪೇರಿ ತರಬೇತಿ.
3) ಸಿಸಿಟಿವಿ ಕ್ಯಾಮರಾ ಇನ್ಟಾಲೇಷನ್ ಮತ್ತು ಸರ್ವಿಸ್, ಸೆಕ್ಯುರಿಟಿ ಅಲಾರ್ಮ್ ಮತ್ತು ಸ್ಮೋಕ್ ಡಿಟೆಕ್ಟರ್ ತರಬೇತಿ.
4) ಉಚಿತ ಅಣಬೆ ಬೇಸಾಯ ತರಬೇತಿ.

Training Dates- ತರಭೇತಿವಾರು ಪ್ರಾರಂಭವಾಗುವ ದಿನಾಂಕಗಳು:

1) ಎಲೆಕ್ಟ್ರಿಕಲ್ ಮೋಟಾರ್ ರೀವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ: 10-06-2024 ರಿಂದ 09-07-2024 ರವರೆಗೆ
2) ಮೊಬೈಲ್ ಫೋನ್ ರಿಪೇರಿ ತರಬೇತಿ: 05-06-2024 ರಿಂದ 04-07-2024 ರವರೆಗೆ
3) ಸಿಸಿಟಿವಿ ಕ್ಯಾಮರಾ ಇನ್ಟಾಲೇಷನ್ ಮತ್ತು ಸರ್ವಿಸ್, ಸೆಕ್ಯುರಿಟಿ ಅಲಾರ್ಮ್ ಮತ್ತು ಸ್ಮೋಕ್ ಡಿಟೆಕ್ಟರ್ ತರಬೇತಿ: 27-05-2024 ರಿಂದ 08-06-2024 ರವರೆಗೆ
4) ಉಚಿತ ಅಣಬೆ ಬೇಸಾಯ ತರಬೇತಿ: 27-05-2024 ರಿಂದ 05-06-2024 ರವರೆಗೆ

ಇದನ್ನೂ ಓದಿ: Crop insurance-2024: ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು ಎನ್ನುವ ವಿವರ ಬಿಡುಗಡೆ!

How can Apply- ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ಮಧ್ಯೆ ಇರಬೇಕು.
ಅಭ್ಯರ್ಥಿಗೆ ಕನ್ನಡ ಮತ್ತು ಇಂಗ್ಲಿಷ್ ಓದು-ಬರಹ ಬಲ್ಲವರಾಗಿರಬೇಕು.
ತರಬೇತಿ ಪಡೆದ ನಂತರ ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಹೊಂದಿರಬೇಕು.
ಅಭ್ಯರ್ಥಿಯು ಗ್ರಾಮೀಣ ಭಾಗದರಾಗಿದ್ದು ಬಿಪಿಎಲ್ ಕಾರ್ಡ ಹೊಂದಿರುವವರಿಗೆ ತರಬೇತಿಯಲ್ಲಿ ಭಾಗವಹಿಸಲು ಮೊದಲ ಅದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Training Center address- ತರಬೇತಿ ನಡೆಯುವ ಕೇಂದ್ರದ ವಿಳಾಸ ಹೀಗಿದೆ:

ಈ ಉಚಿತ 45 ದಿನದ ಕಂಪ್ಯೂಟರ್ ಡಿ.ಟಿ.ಪಿ ತರಬೇತಿಯು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಇಂಡಿಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ ಆಸಕ್ತ ಅಭ್ಯರ್ಥಿಗಳು ತರಬೇತಿ ಪಡೆಯಲು ಈ ಕೇಂದ್ರ ಭೇಟಿ ಮಾಡಬೇಕು.

ಇದನ್ನೂ ಓದಿ: Gruhalakshmi status-2024: ಇನ್ನು ಮುಂದೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಜಮಾ ಆಗಿರುವುದನ್ನು ತಿಳಿಯುವುದು ಭಾರೀ ಸುಲಭ!

Required Documents For Application- ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

1) ಅರ್ಜಿದಾರ  ಅಭ್ಯರ್ಥಿಯ ನಾಲ್ಕು(4) ಪಾಸ್ ಪೋರ್ಟ್ ಸೈಜ್ ಫೋಟೋ
2) ಬ್ಯಾಂಕ್ ಪಾಸ್ ಬುಕ್ ಪ್ರತಿ
3) ರೇಶನ್ ಕಾರ್ಡ
4) ಆಧಾರ್ ಕಾರ್ಡ
5) ಪಾನ್ ಕಾರ್ಡ 

ತರಬೇತಿಯು ಸಂಪೂರ್ಣ ಉಚಿತ:

ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ಊಟ ಸಹಿತ ಉಳಿದುಕೊಳ್ಳಲು ವಸತಿ ವ್ಯವಸ್ಥೆಯು ಸಹ ಸಂಪೂರ್ಣ ಉಚಿತವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಹೆಚ್ಚಿನ ಮಾಹಿತಿ ಪಡೆಯಲು ಈ 9449860007, 9538281989, 9916783825, 8880444612 ಮೊಬೈಲ್ ಸಂಖ್ಯೆಗೆ ಅಸಕ್ತ ಅಭ್ಯರ್ಥಿಗಳು ಸಂಪರ್ಕಿಸಬಹುದು.

ಅರ್ಜಿ ಸಲ್ಲಿಸಲು ಲಿಂಕ್: Apply Now

ಇದನ್ನೂ ಓದಿ: Bara parihara Status check-2024: ಬರ ಪರಿಹಾರ ಎಷ್ಟು ಜಮಾ ಅಗಿದೆ? ಯಾವ ಬ್ಯಾಂಕ್ ಖಾತೆಗೆ? ಸಂಪೂರ್ಣ ಮಾಹಿತಿ ಪಡೆಯಲು ಅಪ್ಲಿಕೇಶನ್ ಬಿಡುಗಡೆ!