SSC Job Notification-ಕೇಂದ್ರದ SSC ನೇಮಕಾತಿ ಆಯೋಗದಿಂದ 2423 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ!

June 7, 2025 | Siddesh
SSC Job Notification-ಕೇಂದ್ರದ SSC ನೇಮಕಾತಿ ಆಯೋಗದಿಂದ 2423 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ!
Share Now:

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (SSC Job Application) ಭಾರತ ಸರ್ಕಾರದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಸ್ಥೆಗಳು ಹಾಗೂ ಇಲಾಖೆಗಳಲ್ಲಿ ಕೆಲಸ ನಿರ್ವಹಿಸಲು 365 ವಿಭಾಗಗಳಲ್ಲಿ ಒಟ್ಟು 2423 ಖಾಲಿ ಹುದ್ದೆಗಳಿಗೆ ನೇರ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBE) ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಪ್ರಕಟಿಸಿದೆ.

ಈ ಸಂಬಂಧಿಸಿದ ಅಧಿಸೂಚನೆಯನ್ನು 2025ರ ಜೂನ್ 2ರಂದು ಹೊರಡಿಸಲಾಗಿದ್ದು, ಎಲ್ಲಾ ವಿವರಗಳು SSC ಯ ಅಧಿಕೃತ ವೆಬ್ಸೈಟ್ ನಲ್ಲಿ(SSC Job Notification) ಅರ್ಹ ಅಭ್ಯರ್ಥಿಗಳಿಗೆ ಮಾಹಿತಿಯು ಲಭ್ಯವಿರುತ್ತದೆ. ಅರ್ಜಿಯನ್ನು ಸಲ್ಲಿಸಲು ನೇಮಕಾತಿ ಆಯೋಗದಿಂದ ಯಾವೆಲ್ಲ ನಿಯಮಗಳನ್ನು ಮಾಡಲಾಗಿದೆ ಇನ್ನಿತರೆ ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: South India Tour-ದಕ್ಷಿಣ ಭಾರತ ಯಾತ್ರೆ ಕೈಗೊಳ್ಳಲು ಸರ್ಕಾರದಿಂದ ₹5,000 ಸಹಾಯಧನ!

SSC Vacancy Details-ಹುದ್ದೆಗಳ ವಿವರ:

ಈ ನೇಮಕಾತಿ ಪ್ರಕ್ರಿಯೆಯು ವಿವಿಧ ಇಲಾಖೆಗಳಲ್ಲಿ ಕಿರಿಯ ಸಹಾಯಕ, ಡೇಟಾ ಎಂಟ್ರಿ ಆಪರೇಟರ್, ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS), ಕ್ಲರ್ಕ್, ಮತ್ತು ಇತರೆ ಗ್ರೂಪ್ 'C' ಹಾಗೂ ಗ್ರೂಪ್ 'B' ಹುದ್ದೆಗಳನ್ನು ಒಳಗೊಂಡಿದೆ. ಈ ಹುದ್ದೆಗಳು ಕೇಂದ್ರ ಸರ್ಕಾರದ ವಿವಿಧ ಮಂತ್ರಾಲಯಗಳು, ಇಲಾಖೆಗಳು ಹಾಗೂ ಸಂಸ್ಥೆಗಳಲ್ಲಿ ಭಾರತದಾದ್ಯಂತ ಲಭ್ಯವಿದೆ. ಈ ಹುದ್ದೆಗಳು ಸ್ಥಿರ ಉದ್ಯೋಗ, ಉತ್ತಮ ವೇತನ ಶ್ರೇಣಿ, ಪಿಂಚಣಿ, ಆರೋಗ್ಯ ವಿಮೆ, ಮತ್ತು ಇತರೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುತ್ತವೆ.

SSC Recruitment Eligibility-ಅರ್ಹತೆ ಮಾನದಂಡ

ವಯಸ್ಸಿನ ಮಿತಿ(Age limit): ಅಭ್ಯರ್ಥಿಗಳು 2025ರ ಆಗಸ್ಟ್ 01ರ ವೇಳೆಗೆ 18 ರಿಂದ 40 ವರ್ಷದೊಳಗಿನವರಾಗಿರಬೇಕು. SC/ST, OBC, ಮತ್ತು PWD ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಾನುಸಾರ ವಯಸ್ಸಿನ ಸಡಿಲಿಕೆ ಲಭ್ಯವಿದೆ.

ಶೈಕ್ಷಣಿಕ ಅರ್ಹತೆ(Education Qualification): ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ SSLC (10ನೇ ತರಗತಿ) ಪಾಸ್ನಿಂದ ಹಿಡಿದು ಪದವಿ (ಗ್ರಾಜುಯೇಷನ್) ವರೆಗಿನ ಶಿಕ್ಷಣ ಅಗತ್ಯವಿದೆ. ಕೆಲವು ಹುದ್ದೆಗಳಿಗೆ ವಿಶೇಷ ಕೌಶಲ್ಯಗಳು ಅಥವಾ ಕಂಪ್ಯೂಟರ್ ಜ್ಞಾನ ಅಗತ್ಯವಾಗಿರುತ್ತದೆ.

ಇದನ್ನೂ ಓದಿ: Education Loan-ಅರಿವು ಯೋಜನೆಯಡಿ ಕೇವಲ ಶೇ 2% ಬಡ್ಡಿದರದಲ್ಲಿ ₹5.0 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ!

ಪರೀಕ್ಷೆಯ ಮಾದರಿ: ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBE) ನಡೆಸಲಾಗುವುದು, ಇದು ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯಲ್ಲಿ ಸಾಮಾನ್ಯ ಬುದ್ಧಿಮತ್ತೆ, ತಾರ್ಕಿಕ ಸಾಮರ್ಥ್ಯ, ಸಂಖ್ಯಾಶಾಸ್ತ್ರ, ಇಂಗ್ಲಿಷ್ ಭಾಷೆ, ಮತ್ತು ಸಾಮಾನ್ಯ ಜ್ಞಾನದ ವಿಷಯಗಳು ಸೇರಿರುತ್ತವೆ.

SSL Job Application Last Dtae-ಪರೀಕ್ಷೆ ಮತ್ತು ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳ ವಿವರ:

ಅರ್ಜಿ ಸಲ್ಲಿಕೆ: ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025ರ ಜೂನ್ 23, ರಾತ್ರಿ 11:00 ಗಂಟೆ.

ಪರೀಕ್ಷೆಯ ದಿನಾಂಕ: 2025ರ ಜುಲೈ 23 ರಿಂದ ಆಗಸ್ಟ್ 04 ರವರೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದೆ.

ತಿದ್ದುಪಡಿ ಅವಕಾಶ: ಸಲ್ಲಿಸಲಾದ ಅರ್ಜಿಯಲ್ಲಿ ಯಾವುದೇ ತಪ್ಪಿದ್ದಲ್ಲಿ, ಅದನ್ನು ತಿದ್ದುಪಡಿ ಮಾಡಲು 2025ರ ಜೂನ್ 28ರಿಂದ 30ರ ವರೆಗೆ ಅವಕಾಶವಿದೆ.

ಇದನ್ನೂ ಓದಿ: PM Kisan 20th installment-ಪಿಎಂ ಕಿಸಾನ್ 20ನೇ ಕಂತು ಈ ಅವಧಿಯಲ್ಲಿ ಬಿಡುಗಡೆ ಸಾಧ್ಯತೆ!

SSC Recruitment Application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ SSC ವೆಬ್ಸೈಟ್ https://ssc.gov.in ನಲ್ಲಿ ಅನುಬಂಧ 4 ರಿಂದ 4A ಮತ್ತು ಅನುಬಂಧ 5 ರಿಂದ 5A ರ ಸೂಚನೆಗಳ ಪ್ರಕಾರ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

Required Documents For SSC Job-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

  • ಅರ್ಜಿದಾರ ಅಭ್ಯರ್ಥಿಯ ಆಧಾರ್ ಕಾರ್ಡ/Aadhar
  • ಪಾನ್ ಕಾರ್/Pan
  • ಪೋಟೋ/Photo
  • ಅಂಕಪಟ್ಟಿ/Marks Card
  • ಶಾಲಾ ವ್ಯಾಸಂಗ ಪ್ರಮಾಣ ಪತ್ರ/Study Certificate
  • ನಿವಾಸ ದೃಡೀಕರಣ.
  • ಮೊಬೈಲ್ ನಂಬರ್/Mobile Number

ಇದನ್ನೂ ಓದಿ: Navodaya school admission-ನವೋದಯ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ!

SSC Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ವಿದ್ಯಾರ್ಥಿಗಳು/ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಅಧಿಕೃತ SSP ತಂತ್ರಾಂಶವನ್ನು ಪ್ರವೇಶ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಪ್ರಥಮದಲ್ಲಿ ನೋಂದಣಿಯನ್ನು ಮಾಡಿಕೊಳ್ಳಬೇಕು ನಂತರ ಲಾಗಿನ್ ಅಗಿ ಅರ್ಜಿಯನ್ನು ಸಲ್ಲಿಸಬೇಕು ಇದಕ್ಕಾಗಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ.

Step-1: ಮೊದಲಿಗೆ ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಅಧಿಕೃತ SSC ತಂತ್ರಾಂಶವನ್ನು ಭೇಟಿ ಮಾಡಬೇಕು.

SSC Job Notification

ಇದನ್ನೂ ಓದಿ: Car Subsidy-ಸ್ವಾವಲಂಬಿ ಸಾರಥಿ ಯೋಜನೆ ಟ್ಯಾಕ್ಸಿ,ಗೂಡ್ಸ್ ವಾಹನ ಖರೀದಿಗೆ ₹3.00 ಲಕ್ಷ ಸಬ್ಸಿಡಿ!

Step-2: ಇದಾದ ಬಳಿಕ "Login Or Register" ಎಂದು ಮುಖಪುಟದಲ್ಲಿ ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಬೇಕು.

Step-3: ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ಹಾಕಿ "Login" ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಿ ಈ ಪೇಜ್ ನಲ್ಲಿ ಎಲ್ಲಾ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯಲ್ಲಿ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

SSC Application Fee-ಅರ್ಜಿ ಶುಲ್ಕ:

ಅರ್ಜಿ ಶುಲ್ಕ: ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 100 ಇರಬಹುದು, ಆದರೆ SC/ST, ಮಹಿಳೆಯರು, ಮತ್ತು PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರಬಹುದು (ನಿಖರ ಮಾಹಿತಿಗೆ ವೆಬ್ಸೈಟ್ ಪರಿಶೀಲಿಸಿ).

ಪರೀಕ್ಷಾ ಕೇಂದ್ರಗಳು: ಪರೀಕ್ಷೆಯು ಭಾರತದಾದ್ಯಂತ ವಿವಿಧ ನಗರಗಳಲ್ಲಿ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಹತ್ತಿರದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

ತಯಾರಿ ಸಲಹೆ: ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು SSCಯ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು, ಮಾದರಿ ಪ್ರಶ್ನೆಪತ್ರಿಕೆಗಳು, ಮತ್ತು ಆನ್ಲೈನ್ ಮಾಕ್ ಟೆಸ್ಟ್ಗಳನ್ನು ಅಭ್ಯಾಸ ಮಾಡಬಹುದು. ಸಾಮಾನ್ಯ ಜ್ಞಾನಕ್ಕಾಗಿ ದೈನಂದಿನ ಪತ್ರಿಕೆಗಳು, ಸುದ್ದಿ ವೆಬ್ಸೈಟ್ಗಳು, ಮತ್ತು ಸರ್ಕಾರಿ ವರದಿಗಳನ್ನು ಓದುವುದು ಉಪಯುಕ್ತವಾಗಿದೆ.

ಇದನ್ನೂ ಓದಿ: Ganga Kalyana 2025-ಗಂಗಾ ಕಲ್ಯಾಣ ಯೋಜನೆ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!

SSC Helpline-ಸಹಾಯವಾಣಿ ಮತ್ತು ಹೆಚ್ಚಿನ ಮಾಹಿತಿ ಪಡೆಯಲು:

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮತ್ತು ಇನ್ನಿತರೆ ಯಾವುದೇ ಸಂದೇಹಗಳಿದ್ದಲ್ಲಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 080-25502520 ಗೆ ಸೋಮವಾರದಿಂದ ಶುಕ್ರವಾರದವರೆಗೆ ಕಚೇರಿ ವೇಳೆಯಲ್ಲಿ (ಬೆಳಿಗ್ಗೆ 11:00 ರಿಂದ ಸಂಜೆ 5:00 ಗಂಟೆಯವರೆಗೆ) ಸಂಪರ್ಕಿಸಬಹುದು.

ಹೆಚ್ಚಿನ ವಿವರಗಳಿಗಾಗಿ SSCಯ ನವದೆಹಲಿ ಹೆಡ್ ಕ್ವಾರ್ಟರ್ಸ್ ವೆಬ್ಸೈಟ್ https://ssc.gov.in ಮತ್ತು ಬೆಂಗಳೂರು ಪ್ರಾದೇಶಿಕ ಕಚೇರಿಯ ವೆಬ್ಸೈಟ್ www.ssckkr.kar.nic.in ನ್ನು ಆಗಾಗ ಸಂಪರ್ಕಿಸಲು ಬೆಂಗಳೂರಿನ SSC ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share Now: