SSLC Exam Registration-ಎಸ್​ಎಸ್​ಎಲ್​​ಸಿ ಪರೀಕ್ಷೆ-1 ನೋಂದಣಿಗೆ ಕೊನೆಯ ದಿನಾಂಕ ವಿಸ್ತರಣೆ!

November 5, 2025 | Siddesh
SSLC Exam Registration-ಎಸ್​ಎಸ್​ಎಲ್​​ಸಿ ಪರೀಕ್ಷೆ-1 ನೋಂದಣಿಗೆ ಕೊನೆಯ ದಿನಾಂಕ ವಿಸ್ತರಣೆ!
Share Now:

ಕರ್ನಾಟಕ ಶಾಲಾ ಪರೀಕ್ಷ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ 2025-26 ನೇ ಶೈಕ್ಷಣಿಕ ಸಾಲಿನ ಎಸ್​ಎಸ್​ಎಲ್​​ಸಿ ಪರೀಕ್ಷೆ-1 ಅನ್ನು ಬರೆಯಲು ಅರ್ಹ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ನೋಂದಣಿಯನ್ನು(sslc exam registration 2026) ಮಾಡಿಕೊಳ್ಳಲು ಈ ಹಿಂದೆ ನಿಗದಿಪಡಿಸಿದ ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡಿ ಮಂಡಳಿಯಿಂದ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಮಂಡಳಿಯಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿಯನ್ನು ಮಾಡಿಕೊಳ್ಳಲು ಈ ಹಿಂದೆ ಅಕ್ಟೋಬರ್ 31 ಕೊನೆಯ ದಿನಾಂಕ ಎಂದು ಆದೇಶ ಹೊರಡಿಸಲಾಗಿತ್ತು, ಅದರೆ ರಾಜ್ಯದಲ್ಲಿ ಅಕ್ಟೋಬರ್ 18 ರ ವರೆಗೆ ಶಾಲೆಗಳು ರಜೆ ಇದ್ದ ಕಾರಣ ಎಸ್​ಎಸ್​ಎಲ್​​ಸಿ ಪರೀಕ್ಷೆ-1 ಅಂತಿಮ ಪರೀಕ್ಷೆಯನ್ನು ಬರೆಯಲು ವಿದ್ಯಾರ್ಥಿಗಳು ನೋಂದಣಿಯನ್ನು ಮಾಡಿಕೊಳ್ಳಲು ಅಂತಿಮ ದಿನಾಂಕವನ್ನು ವಿಸ್ತರಣೆ ಮಾಡುವಂತೆ ವಿದ್ಯಾರ್ಥಿಯ ಪೋಷಕರು ಮಂಡಳಿಗೆ ಮನವಿಯನ್ನು ಸಲ್ಲಿಸಿದ ಪರಿಣಾಮ ಮಂಡಳಿಯಿಂದ ಪ್ರಸ್ತುತ ಆದೇಶವನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: Chaff Cutter Subsidy-ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ಖರೀದಿಗೆ ಅರ್ಜಿ ಆಹ್ವಾನ!

ಈ ಲೇಖನದಲ್ಲಿ ಎಸ್​ಎಸ್​ಎಲ್​​ಸಿ ಪರೀಕ್ಷೆ-1 ಕ್ಕೆ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ನೋಂದಣಿಯನ್ನು ಮಾಡಿಕೊಳ್ಳುವುದು ಹೇಗೆ? ಇದಕ್ಕಾಗಿ ವಿದ್ಯಾರ್ಥಿಗಳು ಒದಗಿಸಬೇಕಾದ ದಾಖಲಾತಿಗಳು ಯಾವುವು? ಹೊಸ ಆದೇಶದ ಅನ್ವಯ ವಿದ್ಯಾರ್ಥಿಗಳು ಎಸ್​ಎಸ್​ಎಲ್​​ಸಿ ಪರೀಕ್ಷೆ-1 ಬರೆಯಲು ಆನ್ಲೈನ್ ಮೂಲಕ ನೋಂದಣಿಯನ್ನು ಮಾಡಿಕೊಳ್ಳಲು ಅಂತಿಮ ದಿನಾಂಕ ಯಾವುದು? ಈ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

SSLC Exam Registration-ನವೆಂಬರ್ 15 ರ ವರೆಗೆ ವಿಸ್ತರಣೆ:

ಕರ್ನಾಟಕ ಶಾಲಾ ಪರೀಕ್ಷ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ 2025-26 ನೇ ಶೈಕ್ಷಣಿಕ ಸಾಲಿನ ಎಸ್​ಎಸ್​ಎಲ್​​ಸಿ ಪರೀಕ್ಷೆ-1 ಅನ್ನು ಬರೆಯಲು ಅರ್ಹ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ನೋಂದಣಿಯನ್ನು ಮಾಡಿಕೊಳ್ಳಲು 15 ನವೆಂಬರ್ 2025 ರ ವರೆಗೆ ನೋಂದಣಿಯನ್ನು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

SSLC Final Exam-ಮಾರ್ಚ್ ನಲ್ಲಿ ಅಂತಿಮ ಪರೀಕ್ಷೆ:

ಕರ್ನಾಟಕ ಶಾಲಾ ಪರೀಕ್ಷ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ 2026 ಮಾರ್ಚ್‌ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ನಡೆಯಲಿದ್ದು, ಪರೀಕ್ಷೆ ಬರೆಯಲು ಇಚ್ಛಿಸುವ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೇರವಾಗಿ ನೋಂದಣಿಯನ್ನು ಮಾಡಿಕೊಂಡು ಖಾಸಗಿ ಅಭ್ಯರ್ಥಿಗಳು ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಅವಕಾಶ ಸದುಪಯೋಗ ಪಡಿಸಿಕೊಳ್ಳಬಹುದು.

ಇದನ್ನೂ ಓದಿ: Bele Samikshe-2025-ರೈತರ ಜಮೀನಿನ ಬೆಳೆ ಸಮೀಕ್ಷೆಗೂ AI ತಂತ್ರಜ್ಞಾನ! ಇಲ್ಲಿದೆ ಸಂಪೂರ್ಣ ಮಾಹಿತಿ!

SSLC Exam Online Registration-ಎಸ್​ಎಸ್​ಎಲ್​​ಸಿ ಪರೀಕ್ಷೆ-1 ಗೆ ಆನ್ಲೈನ್ ನಲ್ಲಿ ನೋಂದಣಿ ಮಾಡುವುದು ಹೇಗೆ?

2025-26 ನೇ ಸಾಲಿನಲ್ಲಿ ಎಸ್​ಎಸ್​ಎಲ್​​ಸಿ ಅಂತಿಮ ಪರೀಕ್ಷೆ-1 ಅನ್ನು ಬರೆಯಲು ಇಲ್ಲಿಯವರೆಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನೊಂದಣಿಯನ್ನು ಮಾಡಿಕೊಳ್ಳದೇ ಇರುವ PRIVATE FRESH /REGULAR REPEATER /PRIVATE REPEATER CANDIDATE ವಿದ್ಯಾರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ನೋಂದಣಿಯನ್ನು ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ ಲಿಂಕ್ "SSLC Exam Online Registration" ಮೇಲೆ ಕ್ಲಿಕ್ ಮಾಡಿ ಅಧಿಕೃತ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ - ಎಸ್​ಎಸ್​ಎಲ್​​ಸಿ ಪರೀಕ್ಷೆ-1ರ ನೋಂದಣಿ ವೆಬ್ ಪೇಜ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Krishi Mela Bengaluru-2025: ಜಿಕೆವಿಕೆ ಕೃಷಿ ಮೇಳ-2025ಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ಸಂಪೂರ್ಣ ವಿವರ!

SSLC Exam

ಇದನ್ನೂ ಓದಿ: Ration Card-ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಪುನಃ ಅವಕಾಶ!

Step-2: ಇಲ್ಲಿ ಮೊದಲಿಗೆ ಮುಖಪುಟದಲ್ಲಿ ಕಾಣುವ "User Manual" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಒಮ್ಮೆ ಓದಿಕೊಂಡು ಬಳಿಕ ಇಲ್ಲಿ "Register" ಬಟನ್ ಮೇಲೆ ಕ್ಲಿಕ್ ಮಾಡಿ "I Accept" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ನಂತರ ಈ ಪೇಜ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು Candidate Type ಹಾಗೂ ಲಾಗಿನ್ ಅಗಲು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಂಡು Get OTP ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ಅನ್ನು ನಮೂದಿಸಿ ಮುಂದಿನ ಪೇಜ್ ಗೆ ಭೇಟಿ ಮಾಡಿ.

Step-4: ಬಳಿಕ ಈ ಪೇಜ್ ನಲ್ಲಿ ಲಾಗಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಲಾಗಿನ್ ಅಗಬೇಕು.

Step-5: ಲಾಗಿನ್ ಅದ ಬಳಿಕ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ವಿವರ ಭರ್ತಿ ಮಾಡಿ ಪೋಟೋ,ಸಹಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ನಿಗದಿತ್ತ ಶುಲವನ್ನು ಪಾವತಿ ಮಾಡಿದರೆ ನೋಂದಣಿ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: High School Scholarship: 9-12 ತರಗತಿ ವಿದ್ಯಾರ್ಥಿಗಳಿಗೆ ರೂ 15,000/ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಅಹ್ವಾನ!

ನೋಂದಣಿ ಮಾಡಿಕೊಳ್ಳಲು ಅಗತ್ಯ ದಾಖಲೆಗಳು:

ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಪರೀಕ್ಷೆಯನ್ನು ಬರೆಯಲು ನೋಂದಣಿಯನ್ನು ಮಾಡಿಕೊಳ್ಳಬಹುದು.

  • ಜನ್ಮ ದಿನಾಂಕದ ಪುರಾವೆ
  • ಅಭ್ಯರ್ಥಿಯ ಪೋಟೋ
  • ವರ್ಗಾವಣೆ ಪ್ರಮಾಣ ಪತ್ರ
  • ಆಧಾರ್ ಕಾರ್ಡ/ಪಡಿತರ ಚೀಟಿ
  • ಅಭ್ಯರ್ಥಿ ಸಹಿ ಪ್ರತಿ

ನೋಂದಣಿ ಮಾಡುವುದರ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ ಜಿಲ್ಲಾವಾರು ಸಹಾಯವಾಣಿ ಸಂಖ್ಯೆ ವಿವರ- Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: