SSP Scholarship Aadhar Link-ವಿದ್ಯಾರ್ಥಿವೇತನ ಪಡೆಯಲು ಆಧಾರ್ ಸೀಡಿಂಗ್ ಕಡ್ಡಾಯ! ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ!

August 30, 2025 | Siddesh
SSP Scholarship Aadhar Link-ವಿದ್ಯಾರ್ಥಿವೇತನ ಪಡೆಯಲು ಆಧಾರ್ ಸೀಡಿಂಗ್ ಕಡ್ಡಾಯ! ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ!
Share Now:

ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಯಡಿ ಎಲ್ಲಾ ತರಗತಿಯ ವಿದ್ಯಾರ್ಥಿಗಳು ಸ್ಕಾಲರ್ಶಿಪ್(Scholarship) ಅನ್ನು ಪಡೆಯಲು ಸರಕಾರದ ನೂತನ ಮಾರ್ಗಸೂಚಿಯನ್ವಯ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಅಗಿರುವುದು ಕಡ್ಡಾಯವಾಗಿದೆ, ಅದ್ದರಿಂದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಕೂಡಲೇ ಆಧಾರ್ ಸೀಡಿಂಗ್ ಅನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

ಇಂದಿನ ಲೇಖನದಲ್ಲಿ ಆಧಾರ್ ಸೀಡಿಂಗ್(Aadhar Seeding) ಮಾಡುವುದರ ಕುರಿತು ವಿದ್ಯಾರ್ಥಿಗಳು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಎನ್ನುವುದರ ಕುರಿತು ಸಂಪೂರ್ಣ ವಿವರವನ್ನು ತಿಳಿಸಲಾಗಿದ್ದು ಈ ಕುರಿತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ತಲುಪಿಸಲು ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: NextGen Edu Scholarship-ಪಿಯುಸಿ ವಿದ್ಯಾರ್ಥಿಗಳಿಗೆ ನೆಕ್ಸ್ಟ್‌ಜೆನ್ 15,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ಆಧಾರ್ ಸೀಡಿಂಗ್ ಎಂದರೇನು? ಆಧಾರ್ ಸೀಡಿಂಗ್ ಅನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು? ಆಧಾರ್ ಸೀಡಿಂಗ್(Bank Account Aadhar Seeding) ಮಾಡಲು ಅವಶ್ಯಕ ದಾಖಲೆಗಳೇನು? ಈ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

What Is Aadhar Seeding-ಆಧಾರ್ ಸೀಡಿಂಗ್ ಎಂದರೇನು?

ರಾಜ್ಯ ಮತ್ತು ಕೇಂದ್ರ ಸರಕಾರದ ಯಾವುದೇ ಯೋಜನೆಯಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಹಣವನ್ನು ಪಾವತಿ ಮಾಡಲು ನೇರ ನಗದು ವರ್ಗಾವಣೆ(DBT) ತಂತ್ರಾಂಶದ ವ್ಯವಸ್ಥೆಯನ್ನು ಬಳಕೆ ಮಾಡಲಾಗುತ್ತದೆ, ಇದರ ಅನ್ವಯ ಫಲಾನುಭವಿಗಳು ಅಥವಾ ವಿದ್ಯಾರ್ಥಿಗಲು ವಿದ್ಯಾರ್ಥಿವೇತನವನ್ನು ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿರುವುದು ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: Bele Parihara-2025-ಮಳೆಯಿಂದ ಹಾನಿಯಾದ ಬೆಳೆ ಹಾನಿಗೆ ಪರಿಹಾರ ಬಿಡುಗಡೆ! ಕಂದಾಯ ಇಲಾಖೆಯಿಂದ ಅಪ್ಡೇಟ್!

SSP Scholarship Portal-ರಾಜ್ಯದಲ್ಲಿ ಎಲ್ಲಾ ಇಲಾಖೆಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಒಂದೇ ವೇದಿಕೆ:

ನಮ್ಮ ರಾಜ್ಯದಲ್ಲಿ ಎಲ್ಲಾ ಇಲಾಖೆಗಳಿಂದ ಜಾರಿಗೆ ತಂದಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಯೋಜನೆಗಳನ್ನು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ (SSP Portal) ಮೂಲಕವೇ ಅನುಷ್ಠಾನಗೊಳಿಸಲಾಗುತ್ತಿದ್ದು, ಎಲ್ಲಾ ತರಗತಿಯ ವಿದ್ಯಾರ್ಥಿಗಳು ಈ ತಂತ್ರಾಂಶದ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Pending Aadhar Link-ಹಲವು ವಿದ್ಯಾರ್ಥಿಗಳ ಆಧಾರ್ ಸೀಡಿಂಗ್ ಇನ್ನು ಬಾಕಿ:

ರಾಜ್ಯದ ವಿವಿಧ ಇಲಾಖೆಯ ಅಂಕಿ-ಅಂಶ ಮಾಹಿತಿಯ ಪ್ರಕಾರ ಇನ್ನು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಬಾಕಿ ಉಳಿದಿರುವ ಕಾರಣ ವಿವಿಧ ಇಲಾಖೆಗಳಿಂದ ತಾಲ್ಲೂಕು ಮಟ್ಟದಲ್ಲಿ ಆಧಾರ್ ಸೀಡಿಂಗ್ ಅಭಿಯಾನವನ್ನು ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ: Caste And Income Certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಈ ದಾಖಲೆ ಕಡ್ಡಾಯ!

Aadhar Link Abhiyana-ತಾಲ್ಲೂಕು ಮಟ್ಟದಲ್ಲಿ ಆಧಾರ್ ಸೀಡಿಂಗ್ ಅಭಿಯಾನ:

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ತಾಂತ್ರಿಕ ನೆರವು ನೀಡುವ ನಿಟ್ಟಿನಲ್ಲಿ ರಾಜ್ಯದ್ಯಂತ ತಾಲ್ಲೂಕು ಮಟ್ಟದಲ್ಲಿ ಆಧಾರ್ ಸೀಡಿಂಗ್ ಅಭಿಯಾನವನ್ನು ಆಯೋಜನೆ ಮಾಡಲಾಗಿದ್ದು ನಿಗದಿಪಡಿಸಿದ ದಿನಾಂಕದಂದು ನೇರವಾಗಿ ವಿದ್ಯಾರ್ಥಿಗಳು ಅಭಿಯಾನಕ್ಕಾಗಿ ಆಯ್ಕೆ ಮಾಡಿದ ಸ್ಥಳಕ್ಕೆ ಭೇಟಿ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕುರಿತು ಮಾಹಿತಿಯನ್ನು ಪಡೆಯಬಹುದು.

Bank Account Aadhar Link Status-ನಿಮ್ಮ ಮೊಬೈಲ್ ನಲ್ಲೇ ಮಾಡಿ ಆಧಾರ್ ಸೀಡಿಂಗ್:

ವಿದ್ಯಾರ್ಥಿಗಳು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡಲು ಅಥವಾ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್/ಆಧಾರ್ ಸೀಡಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

Step-1: ಮೊದಲಿಗೆ ಈ "Bank Account Aadhar Link Status" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ UIDAI ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Drone Pilot Training-ಉಚಿತ ಡ್ರೋನ್ ಪೈಲೆಟ್ ತರಬೇತಿಗೆ ಅರ್ಜಿ ಆಹ್ವಾನ!

Step-2: ಬಳಿಕ ಈ ಪೇಜ್ ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿದರೆ "Bank Seeding Status" ಆಯ್ಕೆ ಕಾಣಿಸುತ್ತದೆ ಇದರ ಮೇಲೆ ಕ್ಲಿಕ್ ಮಾಡಿ.

Step-3: ಇದಾದ ನಂತರ "Login to Aadhaar via OTP" ವಿಭಾಗ ತೆರೆದುಕೊಳ್ಳುತ್ತದೆ ಇಲ್ಲಿ ನಿಮ್ಮ ಆಧಾರ್ ಕಾರ್ಡ ನಂಬರ್ ಮತ್ತು ಕ್ಯಾಪ್ಚ್ ಕೋಡ್ ನಮೂದಿಸಿ "Login With OTP" ಬಟನ್ ಮೇಲೆ ಕ್ಲಿಕ್ಕ್ ಮಾಡಿ ಒಟಿಪಿ ಅನ್ನು ನಮೂದಿಸಿದರೆ ನಿಮ್ಮ ಆಧಾರ್ ಕಾರ್ಡ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಅಗಿದೆ ಎನ್ನುವ ವಿವರ ತೋರಿಸುತ್ತದೆ. ಒಂದೊಮ್ಮೆ ಲಿಂಕ್ ಅಗದೆ ಇದ್ದರೆ ಇಲ್ಲಿ ಯಾವುದೇ ವಿವರ ತೋರಿಸುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಕಛೇರಿಯನ್ನು ಭೇಟಿ ಮಾಡುವಂತೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: