Sukanya Samriddhi Yojana-ಹೆಣ್ಣು ಮಕ್ಕಳ ಭವಿಷ್ಯಕ್ಕೆ 5.3 ಲಕ್ಷ ಭದ್ರತೆ! ಇಲ್ಲಿದೆ ಸಂಪೂರ್ಣ ವಿವರ!

August 7, 2025 | Siddesh
Sukanya Samriddhi Yojana-ಹೆಣ್ಣು ಮಕ್ಕಳ ಭವಿಷ್ಯಕ್ಕೆ 5.3 ಲಕ್ಷ ಭದ್ರತೆ! ಇಲ್ಲಿದೆ ಸಂಪೂರ್ಣ ವಿವರ!
Share Now:

ಸ್ನೇಹಿತರೆ ನಿಮ್ಮ ಕುಟುಂಬದಲ್ಲಿ ಹೆಣ್ಣು ಮಗುವಿದೆಯಾ? ಹಾಗಾದರೆ ಈ ಕೂಡಲೇ ಸುಖನ್ಯ ಸಮೃದ್ಧಿ ಯೋಜನೆ(Sukanya Samriddhi Yojana) ಅಡಿಯಲ್ಲಿ ಖಾತೆ ತೆರೆಯಿರಿ. ನಿಮ್ಮ ಹೆಣ್ಣು ಮಗುವಿಗೆ ಉನ್ನತ ಶಿಕ್ಷಣಕ್ಕಾಗಿ ಮತ್ತು ನಿಮ್ಮ ಮಕ್ಕಳ ಮದುವೆ ವೆಚ್ಚವನ್ನು ಕಡಿಮೆ ಮಾಡಲು ಈ ಸುಕನ್ಯಾ ಸಮೃದ್ಧಿ ಯೋಜನೆ ಉಪಯುಕ್ತವಾಗಿದೆ.

ನೀವು ಕೇವಲ ಸಾವಿರ ರೂಪಾಯಿ ಉಳಿಸಿದರೆ ಸಾಕು ನಿಮ್ಮ ಮಕ್ಕಳಿಗೆ ಮೆಚುರಿಟಿ ಬಂದ ವೇಳೆ ಐದು ಲಕ್ಷಕ್ಕೂ ಹೆಚ್ಚು ಹಣ ದೊರೆಯುತ್ತದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಹೆಣ್ಣು ಮಕ್ಕಳು ಹೊಂದಿರುವ ಕುಟುಂಬಕ್ಕೆ ಈ ಯೋಜನೆ ಬಹಳ ಉಪಕಾರಿಯಾಗುತ್ತದೆ.

ಇದನ್ನೂ ಓದಿ: Lalbagh Flower Show-ನಾಳೆಯಿಂದ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ! ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿ!

What Is Sukanya Samriddhi Yojana-ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು?

ಭಾರತ ಕೇಂದ್ರ ಸರ್ಕಾರ 2015ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸುತ್ತಾರೆ. ಈ ಯೋಜನೆಯ ಉದ್ದೇಶವೇನೆಂದರೆ ನಿಮ್ಮ ಹೆಣ್ಣು ಮಗುವಿಗೆ ಉನ್ನತ ಶಿಕ್ಷಣ ನೀಡಲು ಮತ್ತು ಮದುವೆ ಸಂದರ್ಭದಲ್ಲಿ ಹಣಕಾಸಿನ ವೆಚ್ಚ ಕಡಿಮೆ ಮಾಡಲು ಈ ಯೋಜನೆ ಸಹಾಯ ಮಾಡುತ್ತದೆ. ಹೆಣ್ಣು ಮಕ್ಕಳ ಪೋಷಕರು ತಿಂಗಳ ಕೇವಲ 1000 ಹೂಡಿದರೆ ಸಾಕು ನಿಮ್ಮ ಮಗುವು ಮೆಚುರಿಟಿ ಬಂದ ವೇಳೆ ಸುಮಾರು 5.3 ಲಕ್ಷದವರೆಗೆ ನಗದು ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ. ಈ ಸುಕನ್ಯ ಸಮೃದ್ಧಿ ಯೋಜನೆಯ ಹೆಚ್ಚಿನ ವಿವರಕ್ಕಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Sukanya Samriddhi Yojana Eligibility-ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ?

ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಹೆಣ್ಣು ಮಗುವಿಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿರಬೇಕು. ಮತ್ತು ಸುಕನ್ಯ ಸಮೃದ್ಧಿ ಖಾತೆಯನ್ನು ನಿಮ್ಮ ಹೆಣ್ಣು ಮಗುವಿನ ಹೆಸರಿನಲ್ಲೇ ತೆರೆದಿರಬೇಕು. ಮಕ್ಕಳ ಪೋಷಕರು ಅಥವಾ ಗಾರ್ಡಿಯನ್ ಯಾರು ಬೇಕಾದರೂ ಈ ಯೋಜನೆಗೆ ಹೂಡಿಕೆ ಮಾಡಬಹುದಾಗಿದೆ.

ಇದನ್ನೂ ಓದಿ: Fertilizer Price List-2025: ಪರಿಷ್ಕೃತ ರಸಗೊಬ್ಬರ ದರ ಪಟ್ಟಿ ಬಿಡುಗಡೆ!

Sukanya Samriddhi Yojane

ಇದನ್ನೂ ಓದಿ: SSLC ಮತ್ತು PUC ಅಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ!

Documents For Sukanya Samriddhi Scheme-ಖಾತೆ ತೆರೆಯಲು ಬೇಕಾಗುವಂತ ಅಗತ್ಯ ದಾಖಲೆಗಳು?

ಸುಕನ್ಯಾ ಸಮೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಎಲ್ಲಾ ದಾಖಲೆಗಳು ಅಗತ್ಯವಾಗಿರುತ್ತದೆ. ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳನ್ನು ಇಡಲಾಗುವುದು. ನಿಮ್ಮ ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ, ಮಕ್ಕಳ ಆಧಾರ್ ಕಾರ್ಡ್ ಮತ್ತು ಪೋಷಕರ ಆಧಾರ್ ಕಾರ್ಡ್, ವಿಳಾಸದ ಪ್ರಮಾಣ ಪತ್ರ, ಮಕ್ಕಳ ಮತ್ತು ಪೋಷಕರ 3 ಪಾಸ್ಪೋರ್ಟ್ ಸೈಜ್ ಫೋಟೋ, ಬ್ಯಾಂಕ್ ಪಾಸ್ ಬುಕ್, ಇತ್ಯಾದಿ. ಅರ್ಜಿ ಸಲ್ಲಿಸುವಾಗ ಈ ದಾಖಲೆಗಳು ಕೇಳಲಾಗುವುದು.

How To Apply Sukanya Samriddhi Yojana-ಸುಕನ್ಯ ಸಮೃದ್ಧಿ ಯೋಜನೆಗೆ ಖಾತೆ ಎಲ್ಲಿ ತೆರೆಯಬೇಕು?

ನೀವೇನಾದ್ರೂ ನಿಮ್ಮ ಹೆಣ್ಣು ಮಗುವಿಗೆ ಸುಕನ್ಯಾ ಸಮೃದ್ಧಿ ಯೋಜನೆಗೆ ಖಾತೆ ತೆರೆಯಬೇಕಾದರೆ ಮೊದಲು ನೀವು ನಿಮ್ಮ ಹತ್ತಿರದ ( ಪೋಸ್ಟ್ ಆಫೀಸ್) ಅಂಚೆ ಕಚೇರಿ ಅಥವಾ ಬ್ಯಾಂಕ್ ಗೆ ಭೇಟಿ ನೀಡಬೇಕು. ಪ್ರಸಿದ್ಧ ಬ್ಯಾಂಕ್ ಆಯ್ಕೆಮಾಡಿಕೊಳ್ಳಿ ಉದಾಹರಣೆ ಎಸ್ಬಿಐ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಇತ್ಯಾದಿ ನಿಮಗೆ ಹತ್ತಿರವಾಗುವ ಬ್ಯಾಂಕ್ ಆಯ್ಕೆಮಾಡಿಕೊಳ್ಳಿ.

ನೀವು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಸುಖನೆ ಸಮೃದ್ಧಿ ಯೋಜನೆಗೆ ಖಾತೆಯನ್ನು ಬಹಳ ಸುಲಭವಾಗಿ ತೆರೆಯಬಹುದು.

ಇದನ್ನೂ ಓದಿ: Bhu Suraksha Yojana-ರೈತರಿಗೆ ಡಿಜಿಟಲ್ ಸೌಲಭ್ಯ: ಜಮೀನಿನ ದಾಖಲೆ ಈಗ ಒಂದೇ ಕ್ಲಿಕ್ಕಿನಲ್ಲಿ ಲಭ್ಯ!

Sukanya Samriddhi Yojana

Sukanya Samriddhi Yojana Information-ಸುಕನ್ಯಾ ಸಮೃದ್ಧಿ ಯೋಜನೆಯ ಇನ್ನಷ್ಟು ವಿವರಗಳು:

ನೀವು ಸುಕನ್ಯಾ ಸಮೃದ್ಧಿ ಯೋಜನೆಗೆ ಖಾತೆ ತೆರೆಯುವಾಗ 250 ಕನಿಷ್ಠ ಠೇವಣಿ ಇಡಬೇಕಾಗುತ್ತದೆ. ನಿಮ್ಮ ಹೂಡಿಕೆ ತಿಂಗಳ ತಿಂಗಳಕ್ಕೆ ಅಥವಾ ವರ್ಷಕ್ಕೆ ಕಟ್ಟಬಹುದಾಗಿದೆ. 15 ವರ್ಷಗಳ ಕಾಲ ನಿರಂತರವಾಗಿ ಠೇವಣಿ ಕಟ್ಬೇಕು. ನಿಮ್ಮ ಹೆಣ್ಣು ಮಗುವಿಗೆ ಮೆಚುರಿಟಿ ಬಂದ ವೇಳೆ ಅಂದರೆ ಖಾತೆ ತೆರೆದು 21 ವರ್ಷಗಳ ಪೂರ್ಣಗೊಂಡ ನಂತರ ಪೂರ್ತಿ ಹಣ ನಿಮ್ಮ ಹೆಣ್ಣು ಮಗುವ ಖಾತೆಗೆ ಬರುವುದು. ಒಂದು ವೇಳೆ ಹೆಣ್ಣು ಮಕ್ಕಳು ಅಕಾಲಿಕ ಮರಣ ಹೊಂದಿದರೆ ನೀವು ಹೂಡಿಕೆ ಮಾಡಿದ್ದ ಹಣವು ಬಡ್ಡಿ ಸಮೇತ ನಿಮ್ಮ ಖಾತೆಗೆ ಸಿಗುವುದು.

Sukanya Samriddhi Yojana Amount-ತಿಂಗಳಿಗೆ ಒಂದು ಸಾವಿರ ಉಳಿತಾಯ ಮಾಡಿದರೆ ಎಷ್ಟು ಸಿಗುತ್ತದೆ ?

ನೀವು ತಿಂಗಳಿಗೆ 1000 ರೂಪಾಯಿ ಇಂದ ಶುರು ಮಾಡಿದರೆ ವರ್ಷಕ್ಕೆ 12000 ಆಗುತ್ತದೆ. 15 ವರ್ಷಗಳಲ್ಲಿ ಸುಮಾರು 1,80,000 ಠೇವಣಿ ಬರುತ್ತದೆ. ನಿಮಗೆ ಶೇಕಡ 8.2ರಷ್ಟು ಬಡ್ಡಿ ಸೇರಿ ನಿಮ್ಮ ಹೆಣ್ಣು ಮಗು ಮೆಚುರಿಟಿ ಬಂದ ವೇಳೆ ಸುಮಾರು 5.3 ಲಕ್ಷದವರೆಗೆ ಮೊತ್ತ ದೊರೆಯುತ್ತದೆ. ಈ ಹಣವು ನಿಮ್ಮ ಹೆಣ್ಣು ಮಗುವ ಉಜ್ವಲ ಭವಿಷ್ಯಕ್ಕಾಗಿ ಉಪಯೋಗವಾಗುತ್ತದೆ.

ಸುಕನ್ಯ ಸಮೃದ್ಧಿ ಯೋಜನೆ ಯಿಂದ ಬಹಳಷ್ಟು ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಹಾಗೂ ಅವರ ಮದುವೆ ವೆಚ್ಚವನ್ನು ಕಡಿಮೆ ಮಾಡುವುದರಲ್ಲಿ ಬಹಳಷ್ಟು ಉಪಯುಕ್ತವಾಗಿದೆ. ಈ ಯೋಜನೆಯ ಭಾರತದ ಕೇಂದ್ರ ಸರ್ಕಾರದಾಗಿದ್ದು ಇದರಲ್ಲಿ ಯಾವುದೇ ರೀತಿಯ ಮೋಸ ಅಥವಾ ವಂಚನೆ ನಡೆಯುವುದಿಲ್ಲ. ಹೆಣ್ಣು ಮಕ್ಕಳ ಪೋಷಕರು ಅಥವಾ ಪಾಲಕರು ಈ ಯೋಜನೆಗೆ ಈಗಲೇ ಹೂಡಿಕೆ ಮಾಡಲು ಪ್ರಾರಂಭಿಸಿ.

Sukanya Samriddhi Yojana Website-ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ- Sukanya Samriddhi Yojana Details

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: