free sewing machine-ಈ ಯೋಜನೆಯಡಿ ಉಚಿತ ಹೊಲಿಗೆ ಯಂತ್ರ ಮತ್ತುಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನ!

ಕೇಂದ್ರ ಸರಕಾರದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ(PM-Vishwakarma) ಉಚಿತ ಹೊಲಿಗೆ ಯಂತ್ರ(free sewing machine)ಮತ್ತುಅತೀ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

free sewing machine-ಈ ಯೋಜನೆಯಡಿ ಉಚಿತ ಹೊಲಿಗೆ ಯಂತ್ರ ಮತ್ತುಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನ!
free sewing machine application-2024

ಕೇಂದ್ರ ಸರಕಾರದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ(PM-Vishwakarma) ಉಚಿತ ಹೊಲಿಗೆ ಯಂತ್ರ(free sewing machine) ಮತ್ತುಅತೀ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ನಮ್ಮ ರಾಜ್ಯದಲ್ಲಿ ಬಹುತೇಕ ಗ್ರಾಮೀಣ-ನಗರ ಭಾಗದಲ್ಲಿ ವಾಸಿಸುವ ಗೃಹಿಣಿಯರು ಹೊಲಿಗೆ ತರಬೇತಿ ಪಡೆದು ಮನೆಯಲ್ಲಿ ಈ ವೃತ್ತಿಯನ್ನು ಮಾಡಿಕೊಂಡು ಬರುತ್ತಿರುವುದನ್ನು ಕಂಡುಬರುತ್ತದೆ ಇಂತಹ ಫಲಾನುಭವಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಂಡು ಈ ವೃತ್ತಿಯಲ್ಲಿ ಸ್ವ-ಉದ್ಯೋಗವನ್ನು ಪ್ರಾರಂಭಿಸಿ ಅರ್ಥಿಕವಾಗಿ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ.

ಈ ರೀತಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂದು ಈ ಅಂಕಣದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ(PM-Vishwakarma) ಉಚಿತ ಹೊಲಿಗೆ ಯಂತ್ರ(free sewing machine application) ಮತ್ತು ಸ್ವ-ಉದ್ಯೋಗ ಆರಂಭಿಸಲು ಅತೀ ಕಡಿಮೆ ಬಡ್ಡಿದರಲ್ಲಿ ಸಾಲವನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: Yuva nidhi yojana-2024: ಯುವನಿಧಿ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

PM Vishwakarma yojana-2024: ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ:

ವಿಶ್ವಕರ್ಮ ದಿನಾಚರಣೆ ರಂದು ದೇಶದಾದ್ಯಂತ ಈ ಹೊಸ ಯೋಜನೆಯನ್ನು ಕೇಂದ್ರ ಸರಕಾರದಿಂದ ಜಾರಿಗೆ ತರಲಾಗಿದ್ದು ಈ ಯೋಜನೆಯ ಮೂಲಕ 18 ಕ್ಕೂ ಹೆಚ್ಚಿನ ಕುಶಲಕರ್ಮಿ ವೃತ್ತಿಯಲ್ಲಿ ತೊಡಗಿಕೊಂಡಿರುವ ಅಸಂಘಟಿತ ವಲಯದ ನಾಗರಿಕರಿಗೆ ಸಂಬಂಧಪಟ್ಟ ವೃತ್ತಿಯಲ್ಲಿ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಆರಂಭಿಕ ಹಂತದಲ್ಲಿ ಕೌಶಲ್ಯ ಅಭಿವೃದ್ದಿಪಡಿಸಿಕೊಳ್ಳಲು ತರಬೇತಿ ಜೊತೆಗೆ ಈ ಯೋಜನೆಯಡಿ ಅರ್ಥಿಕವಾಗಿ ನೆರವು ನೀಡಲಾಗುತ್ತದೆ.

PM-Vishwakarma subsidy amount-ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಎಷ್ಟು ಸಹಾಯಧನ ಪಡೆಯಬಹುದು?

1) ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ರೂ 15,000 ಮೌಲ್ಯದ ಟೂಲ್ ಕಿಟ್ ನೀಡುವುದರ ಜೊತೆಗೆ ಸಂಬಂಧಪಟ್ಟ ಇಲಾಖೆಯಿಂದ 5 ರಿಂದ 15 ದಿನದವರೆಗೆ ಉಚಿತ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ.

2) ಬ್ಯಾಂಕ್‌ ನಿಂದ ಶೇ 5 ರ ಬಡ್ಡಿ ದರದಲ್ಲಿ 2 ಹಂತಗಳಲ್ಲಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ- ಮೊದಲ ಹಂತದಲ್ಲಿ ಗರಿಷ್ಠ ರೂ 1 ಲಕ್ಷ 18 ತಿಂಗಳ ಮರುಪಾವತಿ, ಎರಡನೇ ಹಂತದಲ್ಲಿ ಗರಿಷ್ಠ ರೂ 2 ಲಕ್ಷ. 30 ತಿಂಗಳ ಮರುಪಾವತಿಗೆ ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: Parihara payment-ಈ ಕೆಲಸ ಮಾಡಿದ ಬಳಿಕ ನನ್ನ ಖಾತೆಗೆ ಬಂತು ರೂ 2,000 ಬೆಳೆ ನಷ್ಟ ಪರಿಹಾರ!

PM-Vishwakarma yojana benefits- ಈ ಯೋಜನೆಯ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಬಡಗಿ, ಕಮ್ಮಾರಿಕೆ, ಚಮ್ಮಾರಿಕೆ, ಕುಂಬಾರಿಕೆ, ಅಕ್ಕಸಾಲಿಗ, ಶಿಲ್ಪಿ, ಟೈಲರ್, ಗಾರೆ,ಕ್ಷೌರಿಕ,ದೋಬಿ, ಗೊಂಬೆ ತಯಾರಿಕೆ, ಹೊರಕೆ ತಯಾರಿಕೆ/ತೆಂಗುನಾರಿನ ಚಾಪೆ ತಯಾರಿಕೆ, ಬುಟ್ಟಿ ತಯಾರಿಕೆ, ಮೀನು ಬಲೆ ಮಾಡುವವರು, ರಕ್ಷಾ ಕವಚ ತಯಾರಕರು, ದೋಣಿ ತಯಾರಕರು, ಬೀಗ ತಯಾರಕರು, ಹೂವಿನ ಹಾರ ತಯಾರಕರು.

PM-Vishwakarma online application- ಅರ್ಜಿ ಸಲ್ಲಿಸುವ ವಿಧಾನ: 

ಆಸಕ್ತ ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡಿ 2 ವಿಧಾನ ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು.

ವಿಧಾನ-1: ಗ್ರಾಮ ಒನ್ ಅಥವಾ ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ/ಗ್ರಾಮ ಪಂಚಾಯತಿನಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: RTC aadhar card link- ನಿಮ್ಮ ಜಮೀನಿನ ಪಹಣಿಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ! ಇಲ್ಲಿದೆ ಲಿಂಕ್ ಮಾಡಲು ಅಧಿಕೃತ ವೆಬ್ಸೈಟ್ ಲಿಂಕ್.

ವಿಧಾನ-2: ನಿಮ್ಮ ಮೊಬೈಲ್ ನಲ್ಲೇ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಲಿಂಕ್ click here ಮೇಲೆ ಕ್ಲಿಕ್ ಮಾಡಿ ನಮ್ಮ ಪುಟದ ಇನ್ನೊಂದು ಅಂಕಣದಲ್ಲಿ ಈ ಯೋಜನೆಗೆ ಮೊಬೈಲ್ ನಲ್ಲೇ ಹೇಗೆ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎನ್ನುವ ವಿಧಾನದ ಮಾಹಿತಿಯನ್ನು ತಿಳಿದುಕೊಂಡು ಅರ್ಜಿದಾರರು ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ.

Required Documents for PM-Vishwakarma scheme- ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
2) ರೇಷನ್ ಕಾರ್ಡ ಪ್ರತಿ.
3) ಬ್ಯಾಂಕ್ ಪಾಸ್ ಬುಕ್ ಪ್ರತಿ.
4) ಸ್ವ-ಉದ್ಯೋಗ ಪ್ರಮಾಣ ಪತ್ರ(ನಿಮ್ಮ ಗ್ರಾಮ ಪಂಚಾಯತಿಯಿಂದ ಪಡೆಯಬೇಕು).
5) ಅರ್ಜಿದಾರರ ಮೊಬೈಲ್ ಸಂಖ್ಯೆ.

ಇದನ್ನೂ ಓದಿ: village administrative officer recruitment 2024: ಸರಕಾರಿ ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್! 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ!

PM-Vishwakarma selection process- ಫಲಾನುಭವಿ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ:

ಒಮ್ಮೆ ನೀವು ಅಗತ್ಯ ಮಾಹಿತಿ ಮತ್ತು ದಾಖಲಾತಿಗಳನ್ನು ಸಲ್ಲಿಸಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿಯನ್ನು ಪರೀಶಿಲಿಸಿ ಸಾಲ ಮಂಜೂರಾತಿಗೆ ನೀವು ಅರ್ಜಿ ಸಲ್ಲಿಸುವಾಗ ಸಲ್ಲಿಸಿರುವ ಬ್ಯಾಂಕ್ ಅಕೌಂಟ್ ಇರುವ ಶಾಖೆಗೆ ಅರ್ಜಿ ಕಳುಹಿಸಲಾಗುತ್ತದೆ.

ಇದಾದ ಬಳಿಕ ಬ್ಯಾಂಕ್ ವತಿಯಿಂದ ಅರ್ಜಿದಾರರು ಸಾಲ ಪಡೆಯಲು ಅರ್ಹರು ಎಂದು ಗೊತ್ತುಪಡಿಸಿದ ಬಳಿಕ ಅಂತಿಮವಾಗಿ ಫಲಾನುಭವಿಯ ಮೊಬೈಲ್ ಸಂಖ್ಯೆಗೆ ನೀವು ಈ ಯೋಜನೆಯಡಿ ಸಾಲ ಮತ್ತು ರೂ 15,000 ಮೌಲ್ಯದ ಟೂಲ್ ಕಿಟ್ ಪಡೆಯಲು ಅರ್ಹರಿದ್ದಿರಿ ಎಂದು ಸಂದೇಶ ಬರುತ್ತದೆ. 

ಈ ರೀತಿ ನಿಮ್ಮ ಮೊಬೈಲ್ ಗೆ ಸಂದೇಶ ಬಂದ ಬಳಿಕ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಗೆ ಭೇಟಿ ಮಾಡಿ ಮುಂದಿನ ಅರ್ಜಿ ವಿಲೇವಾರಿ ಪ್ರಕ್ರಿಯೆಯನ್ನು ಮುಂದುವರೆಸಬೇಕು.

ಇದನ್ನೂ ಓದಿ: Gruhalakshmi february amount- ಈ ಪಟ್ಟಿಯಲ್ಲಿರುವವರಿಗೆ ಫೆಬ್ರವರಿ-2024 ತಿಂಗಳ ಗೃಹಲಕ್ಷ್ಮಿ ಹಣ ಜಮಾ! ನಿಮ್ಮ ಖಾತೆಗೆ ಬಂತಾ ಚೆಕ್ ಮಾಡಿ.

ಈ ಯೋಜನೆಗೆ ಸಂಬಂಧಿಸಿದ ಪ್ರಮುಖ ಉಪಯುಕ್ತ ಲಿಂಕ್ ಗಳು:

ಅರ್ಜಿ ಸಲ್ಲಿಸಲು ಲಿಂಕ್: Apply Now
ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ: click here
ಸಹಾಯವಾಣಿಗಳು: 8904754707
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಧಿಕೃತ ವೆಬ್ಸೈಟ್: click here
PM-Vishwakarma guidelines- ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಮಾರ್ಗಸೂಚಿ: Download Now