Urea Usage-ಯೂರಿಯಾ ಬಳಕೆ ಮಾಡುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!

July 28, 2025 | Siddesh
Urea Usage-ಯೂರಿಯಾ ಬಳಕೆ ಮಾಡುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!
Share Now:

ಇತ್ತೀಚಿಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರದ ಅಭಾವ ಉಂಟಾಗಿದ್ದು ಇಂದಿನ ಈ ಅಂಕಣದಲ್ಲಿ ರೈತರು ಯೂರಿಯಾ ಗೊಬ್ಬರವನ್ನು(Urea Fertilizer)ಬಳಕೆ ಮಾಡುವ ಮುನ್ನ ತಪ್ಪದೇ ತಿಳಿದಿರಲೇ ಬೇಕಾದ ಅವಶ್ಯಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ವ್ಯವಸಾಯ ರಂಗವು ಭಾರತದ ಆರ್ಥಿಕತೆಯ ಮೂಲಸ್ತಂಭವಾಗಿದ್ದು, ಯೂರಿಯಾ (Urea) ಇಂದು ರೈತರಿಗೆ ಅತ್ಯಂತ ಜನಪ್ರಿಯ ರಸಗೊಬ್ಬರವಾಗಿ ಗುರುತಿಸಿಕೊಂಡಿದೆ. ಇದು ಬೆಳೆಗಳಿಗೆ ಸಾರಜನಕ (Nitrogen) ಪೂರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇಳುವರಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: PUC Admission-ಪ್ರಥಮ ಪಿಯುಸಿ ಪ್ರವೇಶಕ್ಕೆ ಜುಲೈ 31ರ ವರೆಗೆ ಅವಕಾಶ!

ಆದರೆ, ಯೂರಿಯಾದ ಅತಿರೇಕವಾದ ಮತ್ತು ನಿರಂತರ ಬಳಕೆಯು ಮಾನವ ಆರೋಗ್ಯ, ಮಣ್ಣಿನ ಆರೋಗ್ಯ(Soil Health), ಬೆಳೆಗಳ ಉತ್ಪಾದನೆ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಲೇಖನದಲ್ಲಿ, ಯೂರಿಯಾದ ದುಷ್ಪರಿಣಾಮಗಳ ಬಗ್ಗೆ ತಿಳಿಯಲು ಮತ್ತು ರೈತರು ಸಮತೋಲನದ ಬಳಕೆಯತ್ತ ಗಮನಹರಿಸುವಂತೆ ತಿಳಿಯಿಸಲಾಗಿದೆ. ಅಲ್ಲದೆ, ನ್ಯಾನೋ ಯೂರಿಯಾದಂತಹ ಪರ್ಯಾಯ ಆಯ್ಕೆಗಳ ಬಗ್ಗೆಯೂ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

What nutrients are present in a bag of urea-ಒಂದು ಚೀಲಾ ಯೂರಿಯಾ ದಲ್ಲಿ ಯಾವೆಲ್ಲಾ ಪೋಷಕಾಂಶಗಳು ಇರುತ್ತವೆ?

ಯೂರಿಯಾ ಒಂದು ಏಕ-ಪೋಷಕ ರಸಗೊಬ್ಬರವಾಗಿದ್ದು, ಇದರಲ್ಲಿ ಮುಖ್ಯವಾಗಿ ಸಾರಜನಕ (Nitrogen) ಮಾತ್ರ ಇರುತ್ತದೆ. ಸಾಮಾನ್ಯವಾಗಿ, ಉತ್ತಮ ಗುಣಮಟ್ಟದ ಯೂರಿಯಾದಲ್ಲಿ ಸಾರಜನಕದ ಪ್ರಮಾಣ 46% ಇರುತ್ತದೆ. ಇದರ ಅಂಕಿ-ಅಂಶ ವಿವರ ಈ ಕೆಳಗಿನಂತಿದೆ:

  • ಒಂದು ಚೀಲಾ ಯೂರಿಯಾದಲ್ಲಿ ಸಾರಜನಕದ ಪ್ರಮಾಣಒಂದು ಸಾಮಾನ್ಯ ಚೀಲಾ ಯೂರಿಯಾ = 50 ಕೆ.ಜಿ.
  • ಸಾರಜನಕ ಪ್ರಮಾಣ = 46% ಎಂದರೆ, 50 × 0.46 = 23 ಕೆ.ಜಿ. ಸಾರಜನಕ. ಇದರಂತೆ 50 ಕೆ.ಜಿ. ಚೀಲದಲ್ಲಿ ಸುಮಾರು 23 ಕೆ.ಜಿ. ಸಾರಜನಕ ಇರುತ್ತದೆ.

ಇದನ್ನೂ ಓದಿ: Nurse Assistant Training-10th ಪಾಸಾದವರಿಗೆ ಉದ್ಯೋಗ ಪಡೆಯಲು 6 ತಿಂಗಳ ಉಚಿತ ತರಬೇತಿಗೆ ಅರ್ಜಿ!

Harmful Effects Of Urea-ಯೂರಿಯಾದ ಅತಿರೇಕ ಬಳಕೆಯ ಪರಿಣಾಮ:

ಯೂರಿಯಾ ವ್ಯವಸಾಯದಲ್ಲಿ ಸಾರಜನಕದ ಮೂಲವಾಗಿ ಉಪಯುಕ್ತವಾದರೂ, ಅದರ ಅತಿಯಾದ ಬಳಕೆಯು ಮಣ್ಣಿನ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ನಿರಂತರವಾಗಿ ಯೂರಿಯಾ ಸೇರಿಸಿದಾಗ, ಮಣ್ಣಿನ pH ಮಟ್ಟ ಕಡಿಮೆಯಾಗಿ (ಆಮ್ಲೀಯವಾಗಿ) ಬದಲಾಗುತ್ತದೆ. ಇದರಿಂದ ಮಣ್ಣಿನಲ್ಲಿ ಉಪಯುಕ್ತ ಸೂಕ್ಷ್ಮಜೀವಿಗಳ ಚಟುವಟಿಕೆ ಕಡಿಮೆಯಾಗುತ್ತದೆ ಮತ್ತು ಪೋಷಕಾಂಶಗಳ ಅಸಮತೋಲನ ಉಂಟಾಗುತ್ತದೆ. ಉದಾಹರಣೆಗೆ, ಫಾಸ್ಫರಸ್ ಮತ್ತು ಪೊಟ್ಯಾಸಿಯಂ ಲಭ್ಯತೆ ಕಡಿಮೆಯಾಗುವುದರಿಂದ ಬೆಳೆಗಳ ಬೆಳವಣಿಗೆಯಲ್ಲಿ ತೊಡಕು ಉಂಟಾಗಬಹುದು.

ಇದಲ್ಲದೆ, ಅತಿಯಾದ ಸಾರಜನಕವು ಸಸ್ಯಗಳಿಗೆ ವಿಷಕಾರಿಯಾಗಿ ಪರಿಣಾಮ ಬೀರಬಹುದು, ಇದರಿಂದ ಇಳುವರಿ ಕಡಿಮೆಯಾಗಿ ಕೀಟ-ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತದೆ.ಪರಿಸರದ ಮೇಲೂ ಯೂರಿಯಾದ ಅತಿರೇಕ ಬಳಕೆಯ ಪರಿಣಾಮ ತೀವ್ರವಾಗಿದೆ. ಯೂರಿಯಾದಿಂದ ಬಿಡುಗಡೆಯಾಗುವ ನೈಟ್ರಸ್ ಆಕ್ಸೈಡ್ (N₂O) ಒಂದು ಶಕ್ತಿಶಾಲಿ ಹಸಿರುಮನೆ ಅನಿಲವಾಗಿದ್ದು, ಇದು ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ. ಅಲ್ಲದೆ, ಯೂರಿಯಾ ಮಣ್ಣಿನಿಂದ ಅಂತರ್ಜಲಕ್ಕೆ ಸೇರಿ ಕುಡಿಯುವ ನೀರನ್ನು ಮಾಲಿನ್ಯಗೊಳಿಸಬಹುದು. ನದಿ-ಕೆರೆಗಳಲ್ಲಿ ಯೂಟ್ರಫಿಕೇಶನ್ (ಸಮೃದ್ಧ ಪೋಷಣೆ) ಸಮಸ್ಯೆಯೂ ಉಂಟಾಗುತ್ತದೆ, ಇದರಿಂದ ನೀರಿನಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗಿ ಜಲಚರ ಜೀವಿಗಳ ಸಾವು ಸಂಭವಿಸುತ್ತದೆ.

ಇದನ್ನೂ ಓದಿ: Mobile Repair Training-ಉಚಿತ ಸೇಲ್ ಪೋನ್ ರಿಪೇರಿ ತರಬೇತಿ! ಈಗಲೇ ಅರ್ಜಿ ಸಲ್ಲಿಸಿ!

Urea usage

ಇದನ್ನೂ ಓದಿ: Ration Card-ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಯೂರಿಯಾ (Urea) ಬಳಕೆಯಿಂದ ಮಾನವನ ಆರೋಗ್ಯ, ಮಣ್ಣು, ಬೆಳೆಯ ಆರೋಗ್ಯ ಮತ್ತು ಪರಿಸರದ ಮೇಲೆ ಬೀರುವ ಹಾನಿಕಾರಕ ಪರಿಣಾಮಗಳು:

ವ್ಯವಸಾಯದಲ್ಲಿ ಯೂರಿಯಾದ ಅತಿರೇಕವಾದ ಬಳಕೆಯಿಂದ ಮಣ್ಣಿನ ಆರೋಗ್ಯ, ಬೆಳೆ ಇಳುವರಿ ಮತ್ತು ಪರಿಸರದ ಮೇಲೆ ವಿವಿಧ ಹಾನಿಕಾರಕ ಪರಿಣಾಮ ಉಂಟಾಗುವದು. ಯೂರಿಯಾ ಬೆಳೆಗಳಿಗೆ ಸಾರಜನಕ ರೂಪದಲ್ಲಿ ಅತ್ಯಂತ ಉಪಯುಕ್ತ ಮೂಲವಾದರೂ, ಅದನ್ನು ಹೆಚ್ಚು ಪ್ರಮಾಣದಲ್ಲಿ ಬಳಸಿದರೆ ಮಣ್ಣಿನ ಆಮ್ಮಿಯತೆ, ನೀರಿನ ಮಾಲಿನ್ಯ ಮತ್ತು ಹಸಿರು ಮನೆಗಳ ಅನಿಲ ಪ್ರಮಾಣ ಹೆಚ್ಚಳವಾಗಬಹುದು.

ಶಿಪಾರಸ್ಸಿಗಿಂತ ಹೆಚ್ಚಾಗಿ ಬಳಕೆ ಮಾಡಿದರೆ, ಇಳುವರಿ ಕಡಿಮೆಯಾಗಬಹುದು, ಪೋಷಕಾಂಶಗಳ ಅಸಮತೋಲನ ಉಂಟಾಗಬಹುದು, ಹಾಗೂ ಹೆಚ್ಚಿನ ಸಾರಜನಕ ಪ್ರಮಾಣದಿಂದ ಸಸ್ಯಗಳಿಗೆ ವಿಷಕಾರಿಯಾದ ಪರಿಣಾಮವಾಗಬಹುದು. ಬೆಳೆಗಳು ಹೆಚ್ಚು ಕೀಟ/ರೋಗಕ್ಕೆ ತುತ್ತಾಗುತ್ತವೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ.

ಇದನ್ನೂ ಓದಿ: Sainik Welfare Scholarship-ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ!

Effects On Human Health-ಮಾನವನ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು :

ಯೂರಿಯಾ ಹೆಚ್ಚಾಗಿ ಬಳಸಿದಾಗ, ಬೆಳೆದ ತರಕಾರಿ, ಹಣ್ಣುಗಳು, ಧಾನ್ಯಗಳಲ್ಲಿ ನೈಟ್ರೇಟ್ ಹಾಗೂ ನೈಟ್ರೇಟ್ ಪದಾರ್ಥಗಳ ಅಂಶ ಹೆಚ್ಚಾಗುತ್ತದೆ. ಇವು ದೀರ್ಘಾವಧಿಯಲ್ಲಿ ಸೇವಿಸಿದರೆ ಮಾನವನಿಗೆ ವಿಷಕಾರಿಯಾಗಿ ಹೊಟ್ಟೆ ನೋವು, ವಾಂತಿ ಮುಂತಾದವು ಸಂಭವಿಸಬಹುದು.

ಆಹಾರದಲ್ಲಿ ನೈಟ್ರೇಟ್ ಗಳು ಹೆಚ್ಚಾಗಿದ್ದರೆ, ಅವು ನೈಟ್ರೋಸಾಮೈನ್ಗಳಾಗಿ ಪರಿವರ್ತಿತನೆಯಾಗಿ ಕ್ಯಾನ್ಸರಗೆ ಕಾರಣವಾಗಬಹುದು. ಶಿಶುಗಳಲ್ಲಿ "ಬ್ಲೂ ಬೇಬಿ ಸಿಂಡೋಮ್" ಎಂಬ ಸಮಸ್ಯೆ ಆಗಬಹುದು. ಇದು ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ಯೂರಿಯಾ ಭೂಮಿಯಿಂದ ನೆಲದ ನೀರಿಗೆ ಅಥವಾ ನದಿ-ಕೆರೆಗಳಿಗೆ ಸೇರಿದರೆ, ಕುಡಿಯುವ ನೀರಿನಲ್ಲಿ ನೈಟ್ರೇಟ್ ಮಟ್ಟ ಹೆಚ್ಚಾಗಬಹುದು. ಇದು ಮಾನವ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.

ಇದನ್ನೂ ಓದಿ: Bele Vime Amount-1449 ಕೋಟಿ ಬೆಳೆ ವಿಮೆ ರೈತರ ಖಾತೆಗೆ!ನಿಮಗೆ ಬಂತಾ ಚೆಕ್ ಮಾಡಿ!

ನಿರಂತರ ಹಾಗೂ ಅತಿಯಾದ ಯೂರಿಯಾ ಬಳಕೆ ಮಣ್ಣಿನ ರಸಸಾರವನ್ನು (ಪಿ.ಎಚ್) ಕಡಿಮೆಮಾಡಿ ಅದನ್ನು ಆಮ್ಲಯವಾಗಿಸುತ್ತದೆ. ಆಮ್ಮಿಯ ಮಣ್ಣುಗಳಲ್ಲಿ ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳ ಲಭ್ಯತೆ ಕಡಿಮೆಯಾಗುತ್ತದೆ ಮತ್ತು ಉಪಯುಕ್ತ ಸೂಕ್ಷ್ಮಜೀವಿಗಳ ಚಟುವಟಿಕೆಗಳು ತೊಂದರೆಗೆ ಒಳಗಾಗುತ್ತದೆ, ಇದರಿಂದ ಒಟ್ಟು ಮಣ್ಣಿನ ಆರೋಗ್ಯ, ಪೋಷಕಾಂಶಗಳ ಅಸಮತೋಲನ ಮತ್ತು ಸಸ್ಯದ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

Environmental Pollution-ಪರಿಸರದ ಮೇಲೆ ಪರಿಣಾಮ:

ಯೂರಿಯಾ ಭೂಮಿಯ ಅಂತರ್ಜಲಕ್ಕೆ ಹೋಗಿ ಕುಡಿಯುವ ನೀರಿನ ಮೂಲಗಳನ್ನು ಮಾಲಿನ್ಯಗೊಳಿಸಬಹುದು ಹಾಗೂ ನದಿ ಕೆರೆಗಳಿಗೆ ಹೋಗಿ ಯೂಟ್ರಫಿಕೇಶನ್ (ಸಮೃದ್ಧ ಪೋಷಣೆ) ಉಂಟುಮಾಡಬಹುದು. ನೈಟ್ರಸ್ ಆಕ್ಷೆಯಂತೆ ಶಕ್ತಿಶಾಲಿ ಹಸಿರುಮನೆ ಅನಿಲಕ್ಕೆ ಪರಿವರ್ತನೆಯಾಗಿ ಹವಾಮಾನ ಬದಲಾವಣೆಗೆ ಕಾರಣವಾಗಬಹುದು. ಅತಿಯಾದ ಸಾರಜನಕ ಬಳಕೆಯು ವಿವಿಧ ಬೆಳೆಗಳಲ್ಲಿ ಎಲೆಗಳು ಮೃದುವಾಗಿ ರಸಹೀರುವ ಕೀಟಗಳ ಪ್ರಮಾಣ ಹೆಚ್ಚಾಗಿ ಇಳುವರಿ ನಷ್ಟವಾಗುವದು.

ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಕಡಿಮೆಯಾಗುವದರಿಂದ ಮಣ್ಣಿನ ಪಲವತ್ತತೆ ಕಡಿಮೆಯಾಗುವುದು.

ರೈತರು ಯೂರಿಯಾ ಬಳಕೆಯಲ್ಲಿ ಎಚ್ಚರಿಕೆಯಿಂದ ನಡೆದು, ಶಿಫಾರಸು ಮಾಡಲಾದ ಪ್ರಮಾಣವನ್ನು ಅನುಸರಿಸಬೇಕು ಮತ್ತು ಮಣ್ಣಿನ ಪರೀಕ್ಷೆ ಮೂಲಕ ನಿರ್ದಿಷ್ಟ ಪೋಷಕಾಂಶ ಆಗತ್ಯಗಳನ್ನು ತಿಳಿದುಕೊಳ್ಳಬೇಕು.

ಇದನ್ನೂ ಓದಿ: Ginger Crop-ಶುಂಠಿಗೆ ಎಲೆಚುಕ್ಕೆ ಕಾಟ ರೈತರ ನೆರವಿಗೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯ!

Balanced Fertilizer Use-ಸಮತೋಲನದ ರಸಗೊಬ್ಬರ ಬಳಕೆ :

ರಸಗೊಬ್ಬರ ಬಳಕೆಯಲ್ಲಿ ಸಮತೋಲನ ತಾಳುವುದು ಅತ್ಯಂತ ಅಗತ್ಯ. ಸಾರಜನಕದ ಜೊತೆಗೆ ಫಾಸ್ಪರಸ್ ಮತ್ತು ಪೊಟ್ಯಾಸಿಯಂ ಮುಂತಾದ ಮುಖ್ಯ ಪೋಷಕಾಂಶಗಳನ್ನು ಸಹ ಒಳಗೊಂಡಿರಬೇಕು. ಹೆಚ್ಚು ಹಸಿರೆಲೆ ಗೊಬ್ಬರ/ಎರೆಹುಳು ಗೊಬ್ಬರ/ಸಾವಯವ ಗೊಬ್ಬರ/ಸಾವಯವ ದ್ರವ್ಯಗಳು ಮತ್ತು ಜೈವಿಕ ಗೊಬ್ಬರಗಳಂತಹ ಪರ್ಯಾಯ ಸಾರಜನಕ ಮೂಲಗಳನ್ನು ಬಳಸುವುದರಿಂದ ಯೂರಿಯಾ ಮೇಲೆ ಅವಲಂಬನೆಯು ಕಡಿಮೆಯಾಗುತ್ತದೆ ಮತ್ತು ಮಣ್ಣಿನ ಆರೋಗ್ಯವು ಸುಧಾರಿಸುತ್ತದೆ ಹಾಗೂ ಈ ರೀತಿ ಕ್ರಮವಹಿಸಿ ಪಲವತ್ತತೆ ಕಾಪಾಡುವದು ಅವಶ್ಯಕವಾಗಿದೆ.

Nano Urea-ನ್ಯಾನೋ ಯೂರಿಯಾ ಬಳಕೆ:

ನ್ಯಾನೋ ಯೂರಿಯಾ ಒಂದು ದ್ರವ ರೂಪದ ರಸಗೊಬ್ಬರವಾಗಿದೆ. ಇದನ್ನು ಇಷ್ಟೋ (IFFCO) ಕಂಪನಿಯು ಅಭಿವೃದ್ಧಿಪಡಿಸಿದೆ. ಇದು ಸಾಂಪ್ರದಾಯಿಕ ಯೂರಿಯಾ ಗೊಬ್ಬರಕ್ಕಿಂತ ಎಂಟರಿಂದ ಹತ್ತು ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತ ಪೋಷಕಾಂಶ ನೀಡುತ್ತದೆ. ನ್ಯಾನೋ ಯೂರಿಯಾ ಬಳಸಿದರೆ, ಸಾಂಪ್ರದಾಯಿಕ ಗ್ರಾನುಲರ್ ಯೂರಿಯಾ ಬಳಕೆ ಶೇಕಡಾ 50 ರಷ್ಟು ಕಡಿಮೆ ಮಾಡಬಹುದು.

ಇದರ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿರುವ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: