Subsidy Scheme-ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಡಿ 1.00 ಲಕ್ಷ ಸಹಾಯಧನ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

December 14, 2025 | Siddesh
Subsidy Scheme-ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಡಿ 1.00 ಲಕ್ಷ ಸಹಾಯಧನ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!
Share Now:

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ(Vocational Promotion Loan Scheme subsidy) ವತಿಯಿಂದ ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯ ಅಡಿಯಲ್ಲಿ ಕ್ರೈಸ್ತ ಫಲಾನುಭವಿಗಳು ಸಣ್ಣ ಪ್ರಮಾಣದ ವ್ಯಾಪಾರ, ಚಿಲ್ಲರೆ ಮಾರಾಟ ಮತ್ತು ರಿಪೇರಿ ಸೇವೆಗಳಿಗಾಗಿ 1.00 ಲಕ್ಷ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸ್ವಂತ ಉದ್ದಿಮೆಯನ್ನು ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿರುವವರು ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ಸಹಾಯಧನದ ಪ್ರಯೋಜನವನ್ನು ಪಡೆದುಕೊಳ್ಳಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Bank OTS Scheme-ರಿಯಾಯಿತಿಯಲ್ಲಿ ಬ್ಯಾಂಕಿನ ಸಾಲ ಇತ್ಯರ್ಥ ಮಾಡಲು ನೂತನ ಯೋಜನೆ ಜಾರಿ!

ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಅರ್ಜಿಯನ್ನು ಸಲ್ಲಿಸುವ ಹಂತಗಳು? ಅರ್ಜಿಗೆ ಸಂಭದಿಸಿದ ದಾಖಲಾತಿಗಳಾವುವು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Last date to apply-ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 20 ಡಿಸೆಂಬರ್ 2025

ಇದನ್ನೂ ಓದಿ: Agriculture Subsidy Schemes-ಕೃಷಿ ಇಲಾಖೆಯಿಂದ ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

Eligible for apply-ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರ‍ೆ?

ಅರ್ಜಿದಾರ ಫಲಾನುಭವಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರು ಕರ್ನಾಟಕದ ಕ್ರಿಶ್ಚಿಯನ್ ಸಮುದಾಯಕ್ಕೆ (ಅಲ್ಪಸಂಖ್ಯಾತ) ಸೇರಿರಬೇಕು.

ಅರ್ಜಿದಾರ ಅಭ್ಯರ್ಥಿಯ ವಯಸ್ಸು ಕನಿಷ್ಟ 18 ವರ್ಷ ರಿಂದ 55 ವರ್ಷ ಮೀರಿರಬಾರದು.

ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 6 ಲಕ್ಷದ ಒಳಗಿರಬೇಕು.

ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ/ರಾಜ್ಯ ಸರ್ಕಾರಿ ನೌಕರರಾಗಿದ್ದರೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಈ ಯೋಜನೆಗೆ ಅರ್ಜಿಸಲ್ಲಿಸುವ ಯಾವುದೇ ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ಈ ಹಿಂದೆ KMDC/KCCDC ಯಿಂದ ಯಾವುದೇ ಸಾಲ ಸೌಲಭ್ಯ ಪಡೆದಿರಬಾರದು (ಅರಿವು ಮತ್ತು ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆಗಳನ್ನು ಹೊರತುಪಡಿಸಿ).

ಇದನ್ನೂ ಓದಿ: PM Vikas Yojana-ಪಿಎಂ ವಿಕಾಸ ಯೋಜನೆಯಡಿ ಕೈಗಾರಿಕಾ ಕೌಶಲ್ಯ ತರಬೇತಿ ಹಾಗೂ ₹3000 ಸ್ಟೈಪೆಂಡ್!

What are the documents required-ಅರ್ಜಿಗೆ ಸಂಭದಿಸಿದ ಅಗತ್ಯ ದಾಖಲಾತಿಗಳಾವುವು?

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ಅಡಿಯಲ್ಲಿ ಅರ್ಜಿ ಸಲ್ಲಿಸಲು ಕೆಳಗೆ ತಿಳಿಸಿರುವ ದಾಖಲಾತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು:

  • ಯೋಜನಾ ವರದಿ
  • ಜಾಮೀನುದಾರರ ಆಧಾರ್ ಕಾರ್ಡ
  • ಜಾಮೀನು ನೀಡುವವರ ಸ್ವಯಂ ಘೋಷಣೆ ಪತ್ರ
  • ಅರ್ಜಿದಾರರ ಸ್ವಯಂ ಘೋಷಣೆ ಪತ್ರ
  • ಫಲಾನುಭವಿಯ ಫೋಟೋ
  • ಜಾಮೀನುದಾರರ ಫೋಟೋ

ಇದನ್ನೂ ಓದಿ: Bele Parihara-2025: ರಾಜ್ಯದ 14.21 ಲಕ್ಷ ರೈತರಿಗೆ 2249 ಕೋಟಿ ಬೆಳೆ ಪರಿಹಾರ ಬಿಡುಗಡೆ: ಸಚಿವ ಕೃಷ್ಣ ಬೈರೇಗೌಡ!

ಇದನ್ನೂ ಓದಿ: Swaavlambi Saarathi Scheme-ಸ್ವಾವಲಂಬಿ ಸಾರಥಿ ಯೋಜನೆಯ ಅಡಿಯಲ್ಲಿ 3.00 ಲಕ್ಷ ಸಹಾಯಧನ ಪಡೆಯಲು ಅರ್ಜಿ!

How To APply this Scheme-ಅರ್ಜಿ ಸಲ್ಲಿಸುವ ವಿಧಾನ:

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ಅಡಿಯಲ್ಲಿ ಆಯ್ಕೆಯಾದ ಆಸಕ್ತ ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಈ ಕೆಳಗೆ ತಿಳಿಸಿರುವ ವಿಧಾನಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.

Step-1: ಫಲಾನುಭವಿಯು ಮೊದಲಿಗೆ "Online Application Link" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ "ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ"ದ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ತದನಂತರ ಅದೇ ಪುಟದಲ್ಲಿ ಕಾಣುವ "ವೃತ್ತಿ ಪ್ರೋತ್ಸಾಹ ಸಾಲ ಯೋಜನೆ" ಮುಂದೆ ಕಾಣಿಸುವ "ಅರ್ಜಿ ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ನಿವೇನಾದರು ಮೊದಲ ಬಾರಿಗೆ ಈ ವೆಬ್ಸೈಟ್ ಅನ್ನು ಭೇಟಿ ಮಾಡುತ್ತಿದ್ದರೆ? ಇಲ್ಲಿ ನೋಂದಾಯಿಸಿ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ OTP ಅನ್ನು ಪಡೆದು ಬಳಕೆದಾರ ಐಡಿಯನ್ನು ನೋಂದಣಿ ಮಾಡಿಕೊಂಡು Pssword ಅನ್ನು ಸಿದ್ದ ಮಾಡಿಕೊಂಡು Log In ಆಗಬೇಕು.

Step-4: ಲಾಗಿನ್ ಆದ ನಂತರ ಅಧಿಕೃತ ಅರ್ಜಿ ಪ್ರತಿ ತೆರೆದುಕೊಳ್ಳುತ್ತದೆ. ನಂತರ ಅಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Insurance Scholarship-TATA AIA ಲೈಫ್ ಇನ್ಶುರೆನ್ಸ್ ವತಿಯಿಂದ 15,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ಮಾಹಿತಿ!

More Information-ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: