Digital e-Stamp -ಛಾಪಾ ಕಾಗದ ವಹಿವಾಟಿಗೆ ಸ್ಟ್ಯಾಂಪ್ ಪೇಪರ್ ಬದಲಿಗೆ ಇ-ಸ್ಟ್ಯಾಂಪ್: ಸಚಿವ ಕೃಷ್ಣಬೈರೇಗೌಡ!

December 21, 2025 | Siddesh
Digital e-Stamp -ಛಾಪಾ ಕಾಗದ ವಹಿವಾಟಿಗೆ ಸ್ಟ್ಯಾಂಪ್ ಪೇಪರ್ ಬದಲಿಗೆ ಇ-ಸ್ಟ್ಯಾಂಪ್: ಸಚಿವ ಕೃಷ್ಣಬೈರೇಗೌಡ!
Share Now:

ಪ್ರಸ್ತುತ ನಮ್ಮ ರಾಜ್ಯದಲ್ಲಿ ನೋ೦ದಣಿ ಮತ್ತು ನೋ೦ದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಇ- ಸ್ಟ್ಯಾ೦ಪ್ ಪೇಪರ್(e-Stamp) ಅನ್ನು ನಿಗದಿತ ಶುಲ್ಕವನ್ನು ಪಾವತಿಸಿ ಪಡೆದುಕೊಂಡು ಪೂರಕ ವ್ಯವಹಾರ ಒಪ್ಪಂದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದ್ದು ಈ ಕ್ರಮದಲ್ಲಿ ಅಗುವ ಸ್ಟ್ಯಾಂಪ್ ವಂಚನೆ ಮತ್ತು ಭದ್ರತಾ ಲೋಪವನ್ನು ಸಂಪೂರ್ಣ ತಡೆಗಟ್ಟಲು ಡಿಜಿಟಲ್ ಇ-ಸ್ಟ್ಯಾಂಪ್ ಅನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ.

ಡಿಜಿಟಲ್ ಇ-ಸ್ಟ್ಯಾಂಪ್(Digital e-Stamp Application) ಅನ್ನು ಯಾವುದಕ್ಕೆಲ್ಲ ಬಳಕೆ ಮಾಡಬಹುದು? ಇದನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಡಿಜಿಟಲ್ ಇ-ಸ್ಟ್ಯಾಂಪ್ ಅನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಇನ್ನಿತರೆ ಅವಶ್ಯಕ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಪ್ರಕಟಿಸಲಾಗಿದ್ದು, ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಇತರರಿಗೂ ಈ ಮಾಹಿತಿಯನ್ನು ತಿಳಿಸಲು ಸಹಕರಿಸಿ.

ಇದನ್ನೂ ಓದಿ: Ganga Kalyana Yojana-ಬೋರ್ವೆಲ್ ಕೊರೆಸಲು ₹4.0 ಲಕ್ಷ ಸಹಾಯಧನ! ಇಲ್ಲಿದೆ ಸಂಪೂರ್ಣ ವಿವರ!

Digital e-Stamp In Karnataka-ಸ್ಟ್ಯಾಂಪ್ ವಂಚನೆ, ಭದ್ರತಾ ಲೋಪ ತಡೆಗೆ ಡಿಜಿಟಲ್ ಇ - ಸ್ಟ್ಯಾಂಪ್ ವ್ಯವಸ್ಥೆ ಜಾರಿ: ಸಚಿವ ಕೃಷ್ಣಬೈರೇಗೌಡ:

ನೋ೦ದಣಿ ಮತ್ತು ನೋ೦ದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಬಳಸುವ 'ಇ- ಸ್ಟ್ಯಾ೦ಪ್' ಬದಲಿಗೆ 'ಡಿಜಿಟಲ್ ಇ- ಸ್ಟ್ಯಾಂಪ್' ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸ್ಟ್ಯಾಂಪ್ ವಂಚನೆ ಮತ್ತು ಭದ್ರತಾ ಲೋಪವನ್ನು ಸಂಪೂರ್ಣ ತೊಡೆದು ಹಾಕಲು ಈ ಹೊಸ ವ್ಯವಸ್ಥೆ ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ 'ಡಿಜಿಟಲ್ ಇ-ಸ್ಟ್ಯಾಂಪ್' ಕಡ್ಡಾಯಗೊಳಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.

Digital e-Stamp Usage-ಡಿಜಿಟಲ್ ಸ್ಟ್ಯಾಂಪ್ ಯಾವುದಕ್ಕೆಲ್ಲ ಬಳಸಲಾಗುತ್ತದೆ?

ಸಾರ್ವಜನಿಕರು ಡಿಜಿಟಲ್ ಸ್ಟ್ಯಾಂಪ್ ಅನ್ನು ಈ ಕೆಳಗಿನ ಸನ್ನಿವೇಶದಲ್ಲಿ ಕಡ್ಡಾಯವಾಗಿ ಅವಶ್ಯಕವಾಗಿದೆ.

  • ಬಾಡಿಗೆ ಒಪ್ಪಂದ ಮಾಡಿಕೊಳ್ಳಲು.
  • ಅಫಿಡವಿಟ್ ಸಂಬಂಧ ಡಿಜಿಟಲ್ ಸ್ಟ್ಯಾಂಪ್ ಅವಶ್ಯಕವಾಗಿದೆ.
  • ಮಾರಾಟ ಒಪ್ಪಂದ ಸಮಯದಲ್ಲಿ ಈ ಛಾಪಾ ಕಾಗದ ರೀತಿಯಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ.

ಇದನ್ನೂ ಓದಿ: Online E-Khata-ಇನ್ಮುಂದೆ ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಬಹುದು!

Digital e-Stamp

ಇದನ್ನೂ ಓದಿ: Tata Capital Scholarship-ಟಾಟಾ ಕ್ಯಾಪಿಟಲ್ ವತಿಯಿಂದ 18,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ವಿವರ!

How To Get Digital e-Stamp-ಡಿಜಿಟಲ್ ಸ್ಟ್ಯಾಂಪ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

ಸಾರ್ವಜನಿಕರು ಡಿಜಿಟಲ್ ಸ್ಟ್ಯಾಂಪ್ ಅನ್ನು ಪಡೆಯಲು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ್ ಒನ್/ತಾಲ್ಲೂಕು ಮಟ್ಟದ ರಿಜಿಸ್ಟರ್ ಅಪೀಸ್ ನಲ್ಲಿರುವ ವೆಂಡರ್ ಅವರನ್ನು ಭೇಟಿ ಮಾಡಿ ಪಡೆಯಬಹುದು ಅಥವಾ ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ಸ್ವಂತ ನೀವೆ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ ಡಿಜಿಟಲ್ ಸ್ಟ್ಯಾಂಪ್ ಅನ್ನು ಪಡೆಯಬಹುದು.

Digital e-Stamp-ಡಿಜಿಟಲ್ ಸ್ಟ್ಯಾಂಪ್ ಪಡೆಯುವುದು ಹೇಗೆ?

ಸಾರ್ವಜನಿಕರು ಡಿಜಿಟಲ್ ಸ್ಟ್ಯಾಂಪ್ ಅನ್ನು ಪಡೆಯಲು ಯಾವುದೇ ಸರಕಾರಿ ಕಚೇರಿಯನ್ನು ಭೇಟಿ ಮಾಡದೇ ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಅಧಿಕೃತ ಕಾವೇರಿ ತಂತ್ರಾಂಶವನ್ನು ಭೇಟಿ ಮಾಡಿ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಡಿಜಿಟಲ್ ಸ್ಟ್ಯಾಂಪ್ ಅನ್ನು ಪಡೆದು ವಹಿವಾಟನ್ನು ನಡೆಸಬಹುದು.

Step-1: ಪ್ರಥಮ ಹಂತದಲ್ಲಿ ಈ Digital e-Stamp Online Application ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಾವೇರಿ ತಂತ್ರಾಂಶವನ್ನು ಪ್ರವೇಶ ಮಾಡಿ.

ಇದನ್ನೂ ಓದಿ: BPL Card News-ಬಿ.ಪಿ.ಎಲ್ ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ : ಸಚಿವ ಕೆ.ಎಚ್.ಮುನಿಯಪ್ಪ

e-Stamp

ಇದನ್ನೂ ಓದಿ: Free Drone Training-ಕ್ರಿಶ್ಚಿಯನ್ ನಿಗಮದಿಂದ ಉಚಿತ 15 ದಿನಗಳ ಡ್ರೋನ್ ತರಬೇತಿ!ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

Step-1: ನಂತರ ಈ ಪೇಜ್ ನಲ್ಲಿ "Register" ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.

Step-2: ಲಾಗಿನ್ ಆದ ಬಳಿಕ ಬೇಕಾದ ದಸ್ತಾವೇಜಿನ ಪ್ರಕಾರವನ್ನು (ಉದಾ: ಬಾಡಿಗೆ ಒಪ್ಪಂದ, ಅಫಿಡವಿಟ್, ಮಾರಾಟ ಒಪ್ಪಂದ) ಆಯ್ಕೆ ಮಾಡಿ ವಿವರಗಳನ್ನು ಭರ್ತಿ ಮಾಡಿ.

Step-3: ಅರ್ಜಿದಾರರು ಹಾಗೂ ಸಹಿ ಮಾಡುವ ಎಲ್ಲರೂ Aadhaar ಆಧಾರಿತ ಪರಿಶೀಲನೆ ಮೂಲಕ ಗುರುತು ದೃಢೀಕರಿಸಿ. ಆಸ್ತಿ ಸಂಬಂಧಿತ ದಸ್ತಾವೇಜುಗಳಿದ್ದರೆ, ಸಿಸ್ಟಂ ಸರ್ಕಾರಿ ಡೇಟಾ ಬೇಸ್‌ಗಳಿಂದ ಆಸ್ತಿ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲಿದೆ.

ಇದನ್ನೂ ಓದಿ: Udyam Certificate-ಬ್ಯಾಂಕ್ ಸಾಲ ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ಈ ದಾಖಲೆ ಕಡ್ಡಾಯ! ಈ ದಾಖಲೆ ಪಡೆಯುವುದು ಹೇಗೆ!

Step-4: ನಿಮ್ಮ ಸ್ವಂತ ವಿಷಯವನ್ನು ಸೇರಿಸಿ ದಸ್ತಾವೇಜನ್ನು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಪಡೆಯಬಹುದು, ಸ್ಟ್ಯಾಂಪ್ ಶುಲ್ಕ ಲೆಕ್ಕ ಹಾಕಿದ ನಂತರ, ಖಜಾನೆ ಪಾವತಿ ಗೇಟ್‌ವೇ ಮೂಲಕ ಪಾವತಿಸಿ, ಪಾವತಿ ದೃಢಪಟ್ಟ ನಂತರ ಸಿಸ್ಟಂ ಡಿಜಿಟಲ್ ಇ-ಸ್ಟ್ಯಾಂಪ್ ಸೃಷ್ಟಿಯಾಗುತ್ತದೆ.

Step-5: ಎಲ್ಲರ ಸಹಿ ಪಡೆಯಲು ಅವರ ಮೊಬೈಲ್‌ಗೆ ಲಿಂಕ್ ಬರುತ್ತದೆ. ಅದರಲ್ಲಿ Aadhaar e-Sign ಅಥವಾ DSC ಮೂಲಕ ಸಹಿ ಮಾಡಬಹುದು. ಎಲ್ಲರೂ ಸಹಿ ಮಾಡಿದ ನಂತರ ನಿಮ್ಮ ಅಂತಿಮ ಸ್ಟ್ಯಾಂಪ್ ಮಾಡಲ್ಪಟ್ಟ ಹಾಗೂ ಸಹಿ ಮಾಡಲ್ಪಟ್ಟ ದಸ್ತಾವೇಜು ಕಾನೂನಿನಂತೆ ಮಾನ್ಯವಾಗುತ್ತದೆ, ಇದನ್ನು ಡೌನ್ಹೋಡ್ ಮಾಡಬಹುದು ಹಾಗೂ ನೋಂದಣಿಗೆ ಬಳಸಬಹುದು.

ಇದನ್ನೂ ಓದಿ: PM-Kisan ID-ಕೇಂದ್ರ ಸರಕಾರದಿಂದ ಪಿಎಂ ಕಿಸಾನ್ ಯೋಜನೆ ಸೌಲಭ್ಯ ಪಡೆಯಲು ರೈತರಿಗೆ ಐಡಿ!

ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲ್ಲೂಕಿನ ನೋಂದಣಿ ಮತ್ತು ಮುಂದ್ರಾಣ ಇಲಾಖೆಯ(Register Office) ಕಚೇರಿಯನ್ನು ಭೇಟಿ ಮಾಡಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: