Online Land Documents-‘ಇ-ಚಾವಡಿ’ ಮೂಲಕ ನಿಮ್ಮ ಗ್ರಾಮದ ಕಂದಾಯ ದಾಖಲೆಗಳು ನಿಮ್ಮ ಬೆರಳ ತುದಿಯಲ್ಲಿ!

February 27, 2026 | Siddesh
Online Land Documents-‘ಇ-ಚಾವಡಿ’ ಮೂಲಕ ನಿಮ್ಮ ಗ್ರಾಮದ ಕಂದಾಯ ದಾಖಲೆಗಳು ನಿಮ್ಮ ಬೆರಳ ತುದಿಯಲ್ಲಿ!
Share Now:

ಕರ್ನಾಟಕದ ಗ್ರಾಮೀಣ ಭಾಗದ ಜನರಿಗೆ ಕಂದಾಯ ಇಲಾಖೆಯ(Revenue Department) ಕೆಲಸಗಳೆಂದರೆ ಒಂದು ಕಾಲದಲ್ಲಿ ಕಚೇರಿಯಿಂದ ಕಚೇರಿಗೆ ಅಲೆಯುವ, ಗ್ರಾಮ ಲೆಕ್ಕಾಧಿಕಾರಿಗಳ (VA) ಬೆನ್ನತ್ತಿ ಹೋಗುವ ಒಂದು ದೊಡ್ಡ ಸವಾಲಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ತಂತ್ರಜ್ಞಾನದ ಅಳವಡಿಕೆಯಿಂದಾಗಿ ಹಳ್ಳಿಗಳ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸರ್ಕಾರವು 'ಇ-ಚಾವಡಿ' (e-Chawadi) ಎಂಬ ಅದ್ಭುತ ತಂತ್ರಾಂಶವನ್ನು ಜಾರಿಗೆ ತಂದಿದೆ. ಇದು ಗ್ರಾಮೀಣ ಜನರ ಪಾಲಿಗೆ ಕಂದಾಯ ಇಲಾಖೆಯ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಒಂದು ಡಿಜಿಟಲ್ ಸಂಜೀವಿನಿಯಾಗಿದೆ.

ಈ ಮೊದಲು ಮ್ಯುಟೇಷನ್ (ಆಸ್ತಿ ವರ್ಗಾವಣೆ), ಭೂ ಪರಿವರ್ತನೆ ಅಥವಾ ಪೌತಿ ಖಾತೆಯಂತಹ ಪ್ರಮುಖ ಕೆಲಸಗಳಿಗಾಗಿ ರೈತರು ಪದೇ ಪದೇ ತಾಲ್ಲೂಕು(Online Land Documents Download) ಕಚೇರಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಅಲೆದಾಡಿ ಸುಸ್ತಾಗುತ್ತಿದ್ದರು. ಅರ್ಜಿ ಸಲ್ಲಿಸಿದ ಮೇಲೆ ಅದರ ಸ್ಥಿತಿಗತಿ ಏನಾಯಿತು? ಎಂಬ ಮಾಹಿತಿ ಪಡೆಯುವುದೇ ದೊಡ್ಡ ಸಾಹಸವಾಗಿತ್ತು. ಆದರೆ 'ಇ-ಚಾವಡಿ' ಬಂದ ಮೇಲೆ, ಸಾರ್ವಜನಿಕರು ಕೇವಲ ಒಂದು ಕ್ಲಿಕ್ ಮೂಲಕ ತಮ್ಮ ಅರ್ಜಿಯ ಇಂಚಿಂಚು ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿದೆ. ಇದು ವ್ಯವಸ್ಥೆಯಲ್ಲಿನ ವಿಳಂಬವನ್ನು ತಪ್ಪಿಸುವುದಲ್ಲದೆ, ಮಧ್ಯವರ್ತಿಗಳ ಕಾಟಕ್ಕೂ ಬ್ರೇಕ್ ಹಾಕಿದೆ.

ಇದನ್ನೂ ಓದಿ: Passport Verification-ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ನೂತನ ನಿಯಮ ಜಾರಿ!

ಈ ತಂತ್ರಾಂಶವು, ಗ್ರಾಮ ಮಟ್ಟದ ಕಂದಾಯ ಇಲಾಖೆಯ(Online Land Documents) ಭೂ ದಾಖಲೆಗಳವರೆಗೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ. ರೈತರು ತಮ್ಮ ಜಮೀನಿನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಮತ್ತು ಸರ್ಕಾರದ ಸೌಲಭ್ಯಗಳನ್ನು ತ್ವರಿತವಾಗಿ ಪಡೆಯಲು ಈ ತಂತ್ರಾಂಶವು ಅತ್ಯಗತ್ಯವಾಗಿದ್ದು. ಇಂದಿನ ಲೇಖನದಲ್ಲಿ ಇ-ಚಾವಡಿ ವೆಬ್‌ಸೈಟ್‌ನಲ್ಲಿ ರೈತರು ಯಾವೆಲ್ಲ ಸೇವೆ/ಸೌಲಭ್ಯಗಳನ್ನು ಪಡೆಯಬಹುದು. ಈ ತಂತ್ರಾಂಶವನ್ನು ಬಳಕೆ ಮಾಡುವ ವಿಧಾನ ಹೇಗೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

e-Chawadi Website Services-ಇ-ಚಾವಡಿ ವೆಬ್‌ಸೈಟ್‌ನಲ್ಲಿ ಯಾವೆಲ್ಲ ಸೇವೆಗಳು ಲಭ್ಯ?

ಮ್ಯುಟೇಷನ್ ಮಾಹಿತಿ (Mutation Status): ಜಮೀನಿನ ಹಕ್ಕು ಬದಲಾವಣೆ ಅಥವಾ ಆಸ್ತಿ ಪರಭಾರೆಯಾದಾಗ ನಡೆಯುವ ಮ್ಯುಟೇಷನ್ ಪ್ರಕ್ರಿಯೆಯು ಯಾವ ಹಂತದಲ್ಲಿದೆ ಎಂಬುದನ್ನು ಇಲ್ಲಿ ನೋಡಬಹುದು.

ಭೂ ಪರಿವರ್ತನೆ (Land Conversion): ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ (NA) ಬಳಸಲು ಸಲ್ಲಿಸಿದ ಅರ್ಜಿಗಳ ವಿವರಗಳು ಇಲ್ಲಿ ಲಭ್ಯವಿರುತ್ತವೆ.

ಪೌತಿ ಖಾತೆ ಅರ್ಜಿ ವಿವರ: ಮನೆಯ ಹಿರಿಯರು ಮರಣ ಹೊಂದಿದ ನಂತರ ಅವರ ಹೆಸರಿನಲ್ಲಿದ್ದ ಜಮೀನನ್ನು ವಾರಸುದಾರರ ಹೆಸರಿಗೆ ವರ್ಗಾಯಿಸುವ (ಪೌತಿ ಖಾತೆ) ಅರ್ಜಿಯ ಪ್ರಗತಿಯನ್ನು ಪರಿಶೀಲಿಸಬಹುದು.

ಇದನ್ನೂ ಓದಿ: Mutation-ಕಂದಾಯ ಇಲಾಖೆ ಇನ್ಮುಂದೆ ಮ್ಯುಟೇಶನ್ ಪ್ರಕ್ರಿಯೆ ಸರಳ ಮತ್ತು ಸುಲಭ!

Online Mutation Status Check Method-ಇ-ಚಾವಡಿ ಬಳಕೆ ಮಾಡುವ ವಿಧಾನ ಹೇಗೆ?

ಸಾಮಾನ್ಯ ರೈತರೂ ಸಹ ಸುಲಭವಾಗಿ ಬಳಸುವಂತೆ ಈ ತಂತ್ರಾಂಶವನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಬಳಸಲು ಕೆಳಗಿನ ಹಂತಗಳನ್ನು ಅನುಸರಿಸಿ:

Step-1: ಸಾರ್ವಜನಿಕರು ಮೊದಲಿಗೆ ಈ ಲಿಂಕ್ Online Mutation Status ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಕೆಯ ಅಧಿಕೃತ ಇ-ಚಾವಡಿ ತಂತ್ರಾಂಶವನ್ನು ಭೇಟಿ ಮಾಡಿ.

ಇದನ್ನೂ ಓದಿ: Free Sewing Training-ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೊಲಿಗೆ ತರಬೇತಿಗೆ ಅರ್ಜಿ!

Online Pouthi Khata Status

ಇದನ್ನೂ ಓದಿ: Property Registration-ಕಾವೇರಿ 2.0 ತಂತ್ರಾಂಶ ಬಿಡುಗಡೆ! ಇನ್ಮುಂದೆ ಆಸ್ತಿ ನೋಂದಣಿ ಸಂಪೂರ್ಣ ಕಾಗದ ರಹಿತ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಪ್ರಥಮ ಹಂತದಲ್ಲಿ "ಸುಧಾರಿತ ಹುಡುಕಾಟ/ Advanced Search" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ/ತಾಲ್ಲೂಕು/ಹೋಬಳಿ ಮತ್ತು ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಂಡು ಕೆಳಗೆ ಕಾಣಿಸುವ "Fetch Details" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Step-3: ಈ ಪೇಜ್ ನಲ್ಲಿ ನಿಮ್ಮ ಹಳ್ಳಿಯಲ್ಲಿ ಮ್ಯುಟೇಷನ್/ಭೂ ಪರಿವರ್ತನೆ/ಪೌತಿ ಖಾತೆಗಾಗಿ ಎಷ್ಟು ಅರ್ಜಿ ಸಲ್ಲಿಕೆಯಾಗಿದೆ ಅರ್ಜಿದಾರರ ವಿವರ ಮತ್ತು ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ಸಂಪೂರ್ಣ ಮಾಹಿತಿ ತೋರಿಸುತ್ತದೆ. ಮೇಲೆ ಕಾಣಿಸುವ ಮ್ಯುಟೇಷನ್/ಭೂ ಪರಿವರ್ತನೆ/ಪೌತಿ ಖಾತೆ ಒಂದೊಂದರ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿಯನ್ನು ಇಲ್ಲಿ ತಿಳಿಯಬಹುದು ನೀವು ಅರ್ಜಿ ಸಲ್ಲಿಸಿದರೆ ನಿಮ್ಮ ಅರ್ಜಿಯು ಯಾವ ಹಂತದಲ್ಲಿ ಎನ್ನುವ ಮಾಹಿತಿಯನ್ನು ಸಹ ಇಲ್ಲಿ ನೋಡಬಹುದು.

Step-4: Form-12/Form-21 ದಾಖಲೆಗಳನ್ನು ನೋಡಲು ಆ ಆಯ್ಕೆಯ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಹಾಕಿ ದಾಖಲೆಯನ್ನು ಸಹ ಇಲ್ಲಿ ಪಡೆಯಬಹುದಾಗಿದೆ.

ಇದನ್ನೂ ಓದಿ: Agniveer Recruitment-2026ರ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ!ಇಂದೇ ನೋಂದಣಿ ಮಾಡಿ!

e-Chawadi Website Benefits-ಇ-ಚಾವಡಿಯಿಂದ ರೈತರಿಗೆ ಆಗುವ ಪ್ರಯೋಜನಗಳೇನು?

ಕಂದಾಯ ಇಲಾಖೆಯ ಈ ಡಿಜಿಟಲ್ ವ್ಯವಸ್ಥೆಯಿಂದ ರೈತರಿಗೆ ಹತ್ತು ಹಲವು ಲಾಭಗಳಿವೆ ಇವುಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:

ಕಚೇರಿ ಅಲೆದಾಟಕ್ಕೆ ಮುಕ್ತಿ: ಮ್ಯುಟೇಷನ್ ಅಥವಾ ಪೌತಿ ಖಾತೆ ಏನಾಯಿತು ಎಂದು ಕೇಳಲು ಇನ್ನು ಮುಂದೆ ಗ್ರಾಮ ಲೆಕ್ಕಾಧಿಕಾರಿಗಳ (VA) ಕಚೇರಿಯ ಮುಂದೆ ಸಾಲು ನಿಲ್ಲಬೇಕಿಲ್ಲ. ಕೆಲಸದ ಪ್ರಗತಿಯನ್ನು ಮನೆಯಿಂದಲೇ ತಿಳಿಯಬಹುದು.

ಮಧ್ಯವರ್ತಿಗಳ ಹಾವಳಿ ತಡೆ: ನೇರವಾಗಿ ಆನ್‌ಲೈನ್ ಮೂಲಕ ಮಾಹಿತಿ ಸಿಗುವುದರಿಂದ "ನಿಮ್ಮ ಕೆಲಸ ಮಾಡಿಸಿಕೊಡುತ್ತೇನೆ" ಎಂದು ಹಣ ಕೇಳುವ ಮಧ್ಯವರ್ತಿಗಳಿಗೆ ಇನ್ನು ಜಾಗವಿಲ್ಲ.

ಇದನ್ನೂ ಓದಿ: Tata Scholarship-ಟಾಟಾ ಕ್ಯಾಪಿಟಲ್ ಲಿಮಿಟೆಡ್‌ ವತಿಯಿಂದ 1.0 ಲಕ್ಷ ವಿದ್ಯಾರ್ಥಿವೇತನ! ಕೇವಲ 5 ದಿನ ಬಾಕಿ!

ಪಾರದರ್ಶಕ ಆಡಳಿತ: ನಿಮ್ಮ ಅರ್ಜಿ ಯಾವ ಅಧಿಕಾರಿಯ ಬಳಿ ಇದೆ ಮತ್ತು ಎಷ್ಟು ದಿನಗಳಿಂದ ಬಾಕಿ ಇದೆ ಎಂಬುದು ತಿಳಿಯುವುದರಿಂದ ಅಧಿಕಾರಿಗಳೂ ಸಹ ಜವಾಬ್ದಾರಿಯಿಂದ ಕೆಲಸ ಮಾಡಲು ಇದು ಸಹಕಾರಿ.

ದೋಷಮುಕ್ತ ದಾಖಲೆಗಳು: ನಿಮ್ಮ ದಾಖಲೆಗಳಲ್ಲಿನ ತಪ್ಪುಗಳನ್ನು ನೀವು ಆನ್‌ಲೈನ್‌ನಲ್ಲೇ ಗಮನಿಸಿ, ತಕ್ಷಣ ತಿದ್ದುಪಡಿಗಾಗಿ ಮನವಿ ಸಲ್ಲಿಸಲು ಇದು ಅನುವು ಮಾಡಿಕೊಡುತ್ತದೆ.

ಭೂ ದಾಖಲೆಗಳ ಸುರಕ್ಷತೆ: ನಿಮ್ಮ ಆಸ್ತಿಗೆ ಸಂಬಂಧಿಸಿದ ಇತಿಹಾಸವನ್ನು ನೀವು ಕಾಲಕಾಲಕ್ಕೆ ಪರಿಶೀಲಿಸುತ್ತಿರಬಹುದು, ಇದರಿಂದ ಅಕ್ರಮವಾಗಿ ದಾಖಲೆಗಳನ್ನು ಬದಲಾಯಿಸುವುದನ್ನು ತಡೆಯಬಹುದು.

'ಇ-ಚಾವಡಿ' ಕೇವಲ ಒಂದು ಸಾಫ್ಟ್‌ವೇರ್ ಅಲ್ಲ, ಅದು ಹಳ್ಳಿಗಳ ಆಡಳಿತದಲ್ಲಿ ತಂದಿರುವ ಒಂದು ಡಿಜಿಟಲ್ ಬದಲಾವಣೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಕೈಯಲ್ಲಿದೆ, ರೈತ ಬಾಂಧವರು ಈ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: