Mobile Canteen-ಒಕ್ಕಲಿಗ ನಿಗಮದಿಂದ 3.0 ಲಕ್ಷ ಸಬ್ಸಿಡಿಯಲ್ಲಿ ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಗೆ ಅರ್ಜಿ!

March 9, 2026 | Siddesh
Mobile Canteen-ಒಕ್ಕಲಿಗ ನಿಗಮದಿಂದ 3.0 ಲಕ್ಷ ಸಬ್ಸಿಡಿಯಲ್ಲಿ ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಗೆ ಅರ್ಜಿ!
Share Now:

ರಾಜ್ಯದ ಒಕ್ಕಲಿಗ ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮವು(Mobile Canteen Subsidy) ಸುವರ್ಣಾವಕಾಶವೊಂದನ್ನು ಕಲ್ಪಿಸಿದೆ. 2025-26ನೇ ಸಾಲಿನ ಅಭಿವೃದ್ಧಿ ಯೋಜನೆಯಡಿ 'ಆಹಾರ ವಾಹಿನಿ' (ಆಹಾರ ಕಿಯೋಸ್ಕ್) ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಸಂಚಾರಿ ತಿಂಡಿ ಮಳಿಗೆಗಳನ್ನು ನಡೆಸಲು ಇಚ್ಛಿಸುವ ಅರ್ಹ ಫಲಾನುಭವಿಗಳಿಂದ ಇದೀಗ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಯುವಜನತೆಗೆ ಸ್ವಂತ ಕಾಲಿನ ಮೇಲೆ ನಿಲ್ಲಲು ನೆರವಾಗುವುದು. ಆಧುನಿಕ ಜೀವನಶೈಲಿಗೆ ತಕ್ಕಂತೆ ಜನಪ್ರಿಯವಾಗುತ್ತಿರುವ 'ಮೊಬೈಲ್ ಕ್ಯಾಂಟೀನ್' ಅಥವಾ ಸಂಚಾರಿ ಆಹಾರ ಮಳಿಗೆಗಳನ್ನು(Mobile Canteen Subsidy Application) ಸ್ಥಾಪಿಸಲು ನಿಗಮವು ಭಾರಿ ಮೊತ್ತದ ಸಹಾಯಧನವನ್ನು ಘೋಷಿಸಿದೆ. ನಾಲ್ಕು ಚಕ್ರದ ಇ-ಗೂಡ್ಸ್ ವಾಹನಗಳನ್ನು ಸುಸಜ್ಜಿತ ಆಹಾರ ಕಿಯೋಸ್ಕ್‌ಗಳನ್ನಾಗಿ ಮಾರ್ಪಡಿಸಿ ವಿತರಿಸುವ ಈ ಪ್ರಕ್ರಿಯೆ ಇದಾಗಿದೆ.

ಇದನ್ನೂ ಓದಿ: Education Assistance-ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ!

ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್(Seva Sindhu Portal) ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ನಿಗಮವು ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸುವ ಫಲಾನುಭವಿಗಳಿಗೆ ವಾಹನ ಖರೀದಿಯಲ್ಲಿ ಗರಿಷ್ಠ ರಿಯಾಯಿತಿ ಸಿಗಲಿದೆ. ಪ್ರಸ್ತುತ ಲೇಖನದಲ್ಲಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಎಷ್ಟು ಸಹಾಯಧನ ನೀಡಲಾಗುತ್ತದೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳಾವುವು? ಎನ್ನುವ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

Mobile Canteen Subsidy Eligibility-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಮೊಬೈಲ್ ಕ್ಯಾಂಟೀನ್ ಗೆ ಸಹಾಯಧನ ಪಡೆಯಲು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ-3ಎ ನಲ್ಲಿ ಬರುವ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್, ಕುಂಚಿಟಿಗ, ಗೌಡ, ಕಾಪು, ರೆಡ್ಡಿ, ಕಮ್ಮ ಸೇರಿದಂತೆ ನಮೂದಿತ ಎಲ್ಲಾ ಸಮುದಾಯದವರು.

ಅರ್ಜಿದಾರರ ವಯಸ್ಸು 21 ರಿಂದ 45 ವರ್ಷಗಳ ಒಳಗಿರಬೇಕು.

ಕುಟುಂಬದ ವಾರ್ಷಿಕ ವರಮಾನ ₹3 ಲಕ್ಷಗಳ ಮಿತಿಯಲ್ಲಿರಬೇಕು.

ಈ ಹಿಂದೆ ನಿಗಮದ ಯಾವುದೇ ಯೋಜನೆಯಡಿ ಸೌಲಭ್ಯ ಪಡೆದವರು ಮತ್ತು ಅವರ ಕುಟುಂಬದವರು ಅರ್ಹರಲ್ಲ.

ಇದನ್ನೂ ಓದಿ: Free Beauty Parlour Training-35 ದಿನದ ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

Mobile Canteen Subsidy Amount-ಎಷ್ಟು ಸಹಾಯಧನ ನೀಡಲಾಗುತ್ತದೆ?

ಆಹಾರ ವಾಹಿನಿ ಯೋಜನೆಯಡಿ ವಾಹನ ಖರೀದಿಗೆ ನಿಗಮದಿಂದ ₹3,00,000 ನೇರ ಸಹಾಯಧನ (Subsidy) ನೀಡಲಾಗುತ್ತದೆ.

ಉಳಿದ ಮೊತ್ತವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಮೂಲಕ ಸಾಲದ ರೂಪದಲ್ಲಿ ಪಡೆಯಲು ಅವಕಾಶವಿದೆ.

How To Apply For Mobile Canteen Subsidy Scheme-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿಗಳನ್ನು ಸೇವಾ ಸಿಂಧು (Seva Sindhu) ಪೋರ್ಟಲ್ ಮೂಲಕ ಸಲ್ಲಿಸಬಹುದು ಅಥವಾ ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳ ಮೂಲಕವು ಸಹ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Diploma Scholarship-ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹50,000 ವಿದ್ಯಾರ್ಥಿ ವೇತನ!

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಜಿ ಸಲ್ಲಿಸಲು ಮಾರ್ಚ್ 20, 2026 ಕೊನೆಯ ದಿನವಾಗಿದೆ.

Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅರ್ಜಿದಾರರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನೇರವಾಗಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.

Step-1: ಮೊದಲು ನಿಮ್ಮ ಮೊಬೈಲ್ ಬ್ರೌಸರ್‌ನಲ್ಲಿ (Chrome ಅಥವಾ Safari) ಅಧಿಕೃತ ಸೇವಾ ಸಿಂಧು ಪೋರ್ಟಲ್ sevasindhu.karnataka.gov.in ಗೆ ಭೇಟಿ ನೀಡಿ.

ಇದನ್ನೂ ಓದಿ: Ganga Kalyana-2026: ಗಂಗಾ ಕಲ್ಯಾಣ ಯೋಜನೆ ಬಜೆಟ್‌ನಲ್ಲಿ ಸಬ್ಸಿಡಿ ಹೆಚ್ಚಳ!

Mobile Canteen Subsidy

ಇದನ್ನೂ ಓದಿ: Yashaswini Card-2026: ಯಶಸ್ವಿನಿ ಕಾರ್ಡ ನೊಂದಣಿ ಆರಂಭ! ಕೂಡಲೇ ಅರ್ಜಿ ಸಲ್ಲಿಸಿ!

Step-2: ನೀವು ಈಗಾಗಲೇ ನೋಂದಾಯಿತ ಬಳಕೆದಾರರಾಗಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆ/ಇಮೇಲ್ ಐಡಿ ಬಳಸಿ ಲಾಗಿನ್ ಆಗಿ. ಹೊಸ ಬಳಕೆದಾರರಾಗಿದ್ದರೆ, 'New User? Register Here' ಮೇಲೆ ಕ್ಲಿಕ್ ಮಾಡಿ ಆಧಾರ್ ಸಂಖ್ಯೆ ಬಳಸಿ ನೋಂದಾಯಿಸಿಕೊಳ್ಳಿ.

Step-3: ಲಾಗಿನ್ ಆದ ನಂತರ ಸರ್ಚ್ ಬಾಕ್ಸ್‌ನಲ್ಲಿ "Ahaara Vaahini" ಅಥವಾ "Vokkaliga Corporation" ಎಂದು ಟೈಪ್ ಮಾಡಿ ಹುಡುಕಿ. ಆಗ 'ಆಹಾರ ವಾಹಿನಿ ಯೋಜನೆಗೆ ಅರ್ಜಿ' ಎಂಬ ಆಯ್ಕೆ ಕಾಣಿಸುತ್ತದೆ.

Step-4: ನಿಮ್ಮ ವೈಯಕ್ತಿಕ ವಿವರಗಳು, ವಿಳಾಸ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಸಂಖ್ಯೆಯನ್ನು ನಿಖರವಾಗಿ ನಮೂದಿಸಿ. ಆಧಾರ್ ಕಾರ್ಡ್‌ನಲ್ಲಿರುವಂತೆಯೇ ನಿಮ್ಮ ಹೆಸರು ಮತ್ತು ವಿವರಗಳಿರಲಿ.

Step-5: ಕೇಳಲಾದ ಅಗತ್ಯ ದಾಖಲೆಗಳನ್ನು (ಜಾತಿ/ಆದಾಯ ಪತ್ರ, ಬ್ಯಾಂಕ್ ಪಾಸ್ ಬುಕ್, ಫೋಟೋ) ಸ್ಕ್ಯಾನ್ ಮಾಡಿ ಅಥವಾ ಸ್ಪಷ್ಟವಾದ ಫೋಟೋ ತೆಗೆದು ಅಪ್‌ಲೋಡ್ ಮಾಡಿ. ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಒಮ್ಮೆ ಪರಿಶೀಲಿಸಿ (Preview), ನಂತರ 'Submit' ಬಟನ್ ಒತ್ತಿ.

Step-6: ಅರ್ಜಿ ಸಲ್ಲಿಕೆಯಾದ ನಂತರ ಸಿಗುವ 'Acknowledgement Number' ಅನ್ನು ಸೇವ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ತೆಗೆದುಕೊಳ್ಳಿ. ಇದು ಮುಂದೆ ಅರ್ಜಿಯ ಸ್ಥಿತಿ (Status) ತಿಳಿಯಲು ಸಹಕಾರಿಯಾಗುತ್ತದೆ.

ಇದನ್ನೂ ಓದಿ: Karnataka Budget 2026-ರಾಜ್ಯ ಬಜೆಟ್ 2026-27: ಕೃಷಿ ಮತ್ತು ಮೂಲಸೌಕರ್ಯಕ್ಕೆ ಬಂಪರ್ ಕೊಡುಗೆ; ಜಿಲ್ಲಾವಾರು ಹಂಚಿಕೆಯ ಸಮಗ್ರ ವಿವರ!

Required Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳಾವುವು?

  • ಆಧಾರ್ ಕಾರ್ಡ್/Adhar Card.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste And Income Certificate.
  • ಯೋಜನಾ ವರದಿ/DPR.
  • ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Pass Book.
  • ಇತ್ತೀಚಿನ ಭಾವಚಿತ್ರ/Photo.
  • ಚಾಲನಾ ಪರವಾನಗಿ/Driving License.

For More Information-ಇನ್ನು ಹೆಚ್ಚಿನ ಮಾಹಿತಿಗಾಗಿ:

ನಿಗಮದ ವೆಬ್ಸೈಟ್- Click Here
ನಿಗಮದ ಸಹಾಯವಾಣಿ- 1902

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: