RTC Correction-ಕಂದಾಯ ಅದಾಲತ್: ಪಹಣಿ ತಿದ್ದುಪಡಿ ಅಧಿಕಾರ ತಹಶೀಲ್ದಾರರಿಗೆ ಅಧಿಕೃತ ಆದೇಶ ಪ್ರಕಟ!

March 25, 2026 | Siddesh
RTC Correction-ಕಂದಾಯ ಅದಾಲತ್: ಪಹಣಿ ತಿದ್ದುಪಡಿ ಅಧಿಕಾರ ತಹಶೀಲ್ದಾರರಿಗೆ ಅಧಿಕೃತ ಆದೇಶ ಪ್ರಕಟ!
Share Now:

ಬೆಂಗಳೂರು: ರೈತರ ದಶಕಗಳ ಸಮಸ್ಯೆಯಾದ ಪಹಣಿ (RTC) ತಿದ್ದುಪಡಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕಂದಾಯ ಇಲಾಖೆಯ(Revenue Department) 'ಕಂದಾಯ ಅದಾಲತ್' ಕಾರ್ಯಕ್ರಮದ ಅಡಿಯಲ್ಲಿ ಪಹಣಿಗಳಲ್ಲಿನ(Pahani) ದೋಷಗಳನ್ನು ಸರಿಪಡಿಸುವ ವಿಶೇಷ ಅಧಿಕಾರವನ್ನು ಸಹಾಯಕ ಆಯುಕ್ತರಿಂದ (AC) ತಹಶೀಲ್ದಾರರಿಗೆ ಪ್ರತ್ಯಾಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಇದ್ದ ಈ ಅಧಿಕಾರದ ಅವಧಿಯು ಜೂನ್ 2025ಕ್ಕೆ ಮುಕ್ತಾಯಗೊಳ್ಳಲಿದ್ದು, ಇದೀಗ ಸಾರ್ವಜನಿಕ ಹಿತದೃಷ್ಟಿಯಿಂದ ಅದನ್ನು ಡಿಸೆಂಬರ್ 31, 2026ರವರೆಗೆ ವಿಸ್ತರಿಸಲಾಗಿದೆ.

ಈ ಮಹತ್ವದ ಆದೇಶದ ಪ್ರಕಾರ, ಪಹಣಿಗಳಲ್ಲಿನ ಸಣ್ಣಪುಟ್ಟ(RTC Correction) ಲೋಪದೋಷಗಳಾದ ವಿಸ್ತೀರ್ಣ ವ್ಯತ್ಯಾಸ, ಕಾಲಂ ನಂ. 3 ಮತ್ತು 9ರ ನಡುವಿನ ತಾಳೆ ಇಲ್ಲದಿರುವುದು, ಹೆಸರು ಮತ್ತು ಇನಿಷಿಯಲ್ ತಪ್ಪುಗಳು ಹಾಗೂ ಬೆಳೆ ವಿವರಗಳ ಅಳವಡಿಕೆಯಲ್ಲಿನ ದೋಷಗಳನ್ನು ಇನ್ನು ಮುಂದೆ ತಹಶೀಲ್ದಾರರ ಮಟ್ಟದಲ್ಲೇ ಪರಿಹರಿಸಿಕೊಳ್ಳಬಹುದಾಗಿದೆ. ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಉಳಿದೆಲ್ಲಾ ಜಿಲ್ಲೆಗಳ ರೈತರಿಗೆ ಈ ಸೌಲಭ್ಯ ದೊರೆಯಲಿದೆ. ಇದರಿಂದ ರೈತರು ಸಣ್ಣಪುಟ್ಟ ತಿದ್ದುಪಡಿಗಳಿಗಾಗಿ ಜಿಲ್ಲಾ ಅಥವಾ ಉಪವಿಭಾಗೀಯ ಕೇಂದ್ರಗಳಿಗೆ ಅಲೆಯುವುದು ತಪ್ಪಲಿದ್ದು, ಸ್ಥಳೀಯವಾಗಿಯೇ ಶೀಘ್ರ ಪರಿಹಾರ ಸಿಗಲಿದೆ.

ಇದನ್ನೂ ಓದಿ: Ration Card Correction-ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಪ್ರಾರಂಭ!ಇಂದೇ ಅರ್ಜಿ ಸಲ್ಲಿಸಿ!

ಆದಾಗ್ಯೂ, ಈ ಅಧಿಕಾರವನ್ನು ಬಳಸುವಾಗ ತಹಶೀಲ್ದಾರರು(Kandaya Adalath Program)ಅತ್ಯಂತ ಎಚ್ಚರಿಕೆ ವಹಿಸಬೇಕೆಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸರ್ಕಾರಿ ಜಮೀನುಗಳ ಸಂರಕ್ಷಣೆ ತಹಶೀಲ್ದಾರರ ಹೊಣೆಯಾಗಿದ್ದು, ಯಾವುದೇ ಕಾರಣಕ್ಕೂ ಸರ್ಕಾರಿ ಭೂಮಿಯನ್ನು ಖಾಸಗಿಯವರ ಹೆಸರಿಗೆ ಅಕ್ರಮವಾಗಿ ವರ್ಗಾಯಿಸುವ ಅಥವಾ ಮ್ಯುಟೇಷನ್ ಇಲ್ಲದೆಯೇ ಹೊಸ ದಾಖಲೆ ಸೃಷ್ಟಿಸುವಂತಿಲ್ಲ. ಒಂದು ವೇಳೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮ ಎಸಗಿದಲ್ಲಿ, ಅಂತಹ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ (ಐಪಿಸಿ) ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಪ್ರತಿ 15 ದಿನಗಳಿಗೊಮ್ಮೆ ಈ ಪ್ರಗತಿಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಲಿದ್ದಾರೆ.

Kandaya Adalath-ಮುಖ್ಯಾಂಶಗಳು:

  • ಅವಧಿ ವಿಸ್ತರಣೆ: 20-03-2026 ರಿಂದ 31-12-2026 ರವರೆಗೆ.
  • ಯಾರಿಗೆ ಲಾಭ: ದಕ್ಷಿಣ ಕನ್ನಡ ಹಾಗೂ ಬೆಂಗಳೂರು ನಗರ/ಗ್ರಾಮಾಂತರ ಹೊರತುಪಡಿಸಿ ಉಳಿದ ಜಿಲ್ಲೆಗಳ ಜನತೆಗೆ.
  • ತಿದ್ದುಪಡಿ ಆಗುವ ಅಂಶಗಳು: ಹೆಸರು, ವಿಸ್ತೀರ್ಣ, ಆಕಾರಬಂದ್ ತಾಳೆ, ಮುಂತಾದ ತಾಂತ್ರಿಕ ದೋಷಗಳು.

What Is Kandaya Adalath-ಕಂದಾಯ ಅದಾಲತ್ ಎಂದರೇನು?

ಕಂದಾಯ ಅದಾಲತ್ ಎಂದರೆ ರೈತರ ಭೂ ದಾಖಲೆಗಳಲ್ಲಿರುವ (ಪಹಣಿ/RTC) ಸಣ್ಣಪುಟ್ಟ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಹಮ್ಮಿಕೊಳ್ಳುವ ಒಂದು ವಿಶೇಷ ಆಂದೋಲನ. ಸಾಮಾನ್ಯವಾಗಿ ಪಹಣಿಯಲ್ಲಿ ತಪ್ಪುಗಳಿದ್ದರೆ ರೈತರು ತಹಶೀಲ್ದಾರ್ ಕಚೇರಿ ಅಥವಾ ಉಪವಿಭಾಗಾಧಿಕಾರಿಗಳ (AC) ಕಚೇರಿಗೆ ಅಲೆಯಬೇಕಾಗುತ್ತದೆ. ಇದನ್ನು ತಪ್ಪಿಸಲು, ಅಧಿಕಾರಿಗಳೇ ಗ್ರಾಮ ಮಟ್ಟಕ್ಕೆ ಬಂದು ಅಥವಾ ನಿಗದಿತ ಸಮಯದಲ್ಲಿ ದಾಖಲೆಗಳನ್ನು ಪರಿಶೀಲಿಸಿ, ಸ್ಥಳದಲ್ಲೇ ಅಥವಾ ಶೀಘ್ರವಾಗಿ ತಿದ್ದುಪಡಿ ಮಾಡುವ ಪ್ರಕ್ರಿಯೆಯೇ ಈ 'ಅದಾಲತ್'.

ಇದನ್ನೂ ಓದಿ: Free CCTV Training-ಉಚಿತ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Kandaya Adalath Benefits-ಕಂದಾಯ ಅದಾಲತ್‌ನಿಂದ ರೈತರಿಗೆ ಆಗುವ ಪ್ರಯೋಜನಗಳು:

ಕಂದಾಯ ಇಲಾಖೆಯಿಂದ ನಡೆಸುವ ಕಂದಾಯ ಅದಾಲತ್ ಕಾರ್ಯಕ್ರಮದಿಂದ ರೈತರಿಗೆ ಯಾವೆಲ್ಲ ಪ್ರಯೋಜನಗಳಿವೆ ಎನ್ನುವ ಸಂಪೂರ್ಣ ವಿವರ ಈ ಕೆಳಗಿನಂತಿವೆ:

ಪಹಣಿ (RTC) ತಿದ್ದುಪಡಿ: ಪಹಣಿಯ ಕಾಲಂ ನಂ. 3 (ಒಟ್ಟು ವಿಸ್ತೀರ್ಣ) ಮತ್ತು ಕಾಲಂ ನಂ. 9 (ಖಾತೆದಾರರ ಹೆಸರು) ನಡುವೆ ಇರುವ ವಿಸ್ತೀರ್ಣದ ವ್ಯತ್ಯಾಸಗಳನ್ನು ಸರಿಪಡಿಸಬಹುದು.

ಹೆಸರು ಮತ್ತು ಇನಿಷಿಯಲ್ ತಪ್ಪುಗಳು: ಖಾತೆದಾರರ ಹೆಸರಿನಲ್ಲಿರುವ ಕಾಗುಣಿತ ತಪ್ಪುಗಳು ಅಥವಾ ತಂದೆಯ ಹೆಸರಿನಲ್ಲಿರುವ ಗೊಂದಲಗಳನ್ನು ಸರಿಪಡಿಸಿಕೊಳ್ಳಬಹುದು.

ಇದನ್ನೂ ಓದಿ: ATM Card-ಎಟಿಎಂ ಗ್ರಾಹಕರೇ ಗಮನಿಸಿ: ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ ಹೊಸ ನಿಯಮಗಳು!

ಆಕಾರಬಂದ್ ತಾಳೆ: ಮೋಜಣಿ ದಾಖಲೆ (ಆಕಾರಬಂದ್) ಮತ್ತು ಪಹಣಿಯಲ್ಲಿರುವ ಜಮೀನಿನ ವಿಸ್ತೀರ್ಣ ಒಂದಕ್ಕೊಂದು ತಾಳೆಯಾಗದಿದ್ದರೆ ಅದನ್ನು ಸರಿಪಡಿಸಲಾಗುತ್ತದೆ.

ವಂಚನೆ ತಡೆ: ಮ್ಯುಟೇಷನ್ (Mutation) ಆಗದೆಯೇ ಪಹಣಿಯಲ್ಲಿ ಅನಗತ್ಯವಾಗಿ ಸೇರ್ಪಡೆಯಾದ ಅಥವಾ ತೆಗೆದುಹಾಕಲಾದ ಹೆಸರುಗಳನ್ನು ಸರಿಪಡಿಸಿ ಅಧಿಕೃತ ದಾಖಲೆ ಉಳಿಸಿಕೊಳ್ಳಬಹುದು.

ಸಮಯ ಮತ್ತು ಹಣದ ಉಳಿತಾಯ: ಉಪವಿಭಾಗಾಧಿಕಾರಿಗಳ ಕಚೇರಿಗೆ ಹೋಗುವ ಬದಲು ತಹಶೀಲ್ದಾರರ ಮಟ್ಟದಲ್ಲೇ ಕೆಲಸ ಮುಗಿಯುವುದರಿಂದ ಅಲೆದಾಟ ತಪ್ಪುತ್ತದೆ.

ಇದನ್ನೂ ಓದಿ: Pan Card New Rules-ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ: ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿ; ಏನಿದು ಬದಲಾವಣೆ?

Kandaya Adalath order

ಇದನ್ನೂ ಓದಿ: Ration Card-2026: ರೇಶನ್ ಕಾರ್ಡದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ!

How To Get Kandaya Adalath Benefits-ಕಂದಾಯ ಅದಾಲತ್ ಪ್ರಯೋಜನ ಪಡೆಯುವುದು ಹೇಗೆ?

ಕಂದಾಯ ಅದಾಲತ್ ಮೂಲಕ ಪಹಣಿ ತಿದ್ದುಪಡಿಯನ್ನು ಮಾಡಿಸಲು ರೈತರು ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಈ ಕೆಳಗೆ ವಿವರಿಸಿದೆ:

ದಾಖಲೆಗಳ ಪರಿಶೀಲನೆ: ಮೊದಲು ನಿಮ್ಮ ಪಹಣಿಯನ್ನು (RTC) ಸರಿಯಾಗಿ ಗಮನಿಸಿ. ಅದರಲ್ಲಿ ವಿಸ್ತೀರ್ಣ, ಹೆಸರು ಅಥವಾ ಮ್ಯುಟೇಷನ್ ಸಂಖ್ಯೆಯಲ್ಲಿ ಏನಾದರೂ ವ್ಯತ್ಯಾಸವಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಅರ್ಜಿ ಸಲ್ಲಿಸುವುದು: ನಿಮ್ಮ ವ್ಯಾಪ್ತಿಯ ಗ್ರಾಮ ಆಡಳಿತಾಧಿಕಾರಿ (VA) ಅಥವಾ ಕಂದಾಯ ನಿರೀಕ್ಷಕರನ್ನು (RI) ಭೇಟಿ ಮಾಡಿ. ಕಂದಾಯ ಅದಾಲತ್ ಅಡಿಯಲ್ಲಿ ತಿದ್ದುಪಡಿ ಕೋರಿ ಅಗತ್ಯ ದಾಖಲೆಗಳೊಂದಿಗೆ (ಹಳೆಯ ಪಹಣಿ, ಆಕಾರಬಂದ್ ಪ್ರತಿ ಇತ್ಯಾದಿ) ಅರ್ಜಿ ನೀಡಿ.

ಅದಾಲತ್ ದಿನಾಂಕದ ಮಾಹಿತಿ: ಸರ್ಕಾರವು ಕಾಲಕಾಲಕ್ಕೆ ಆಯಾ ತಾಲೂಕುಗಳಲ್ಲಿ ಕಂದಾಯ ಅದಾಲತ್ ದಿನಾಂಕಗಳನ್ನು ಪ್ರಕಟಿಸುತ್ತದೆ. ನಿಮ್ಮ ಗ್ರಾಮ ಪಂಚಾಯಿತಿ ಅಥವಾ ನಾಡಕಚೇರಿಯಲ್ಲಿ ಇದರ ಮಾಹಿತಿ ಲಭ್ಯವಿರುತ್ತದೆ.

ತಂತ್ರಾಂಶದಲ್ಲಿ ಅಪ್‌ಡೇಟ್: ತಹಶೀಲ್ದಾರರು ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಅನುಮೋದಿಸಿದ ನಂತರ, ಸಂಬಂಧಿತ ತಂತ್ರಾಂಶದ ಮೂಲಕ ನಿಮ್ಮ ಪಹಣಿಯಲ್ಲಿ ತಿದ್ದುಪಡಿ ಮಾಡಲಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: