Crop Insurance Status-ಬೆಳೆ ವಿಮೆ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!

June 26, 2026 | Siddesh
Crop Insurance Status-ಬೆಳೆ ವಿಮೆ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!
Share Now:

ರಾಜ್ಯದ ರೈತ ಬಾಂಧವರೇ, ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ, ಅಕಾಲಿಕ ಮಳೆ ಹಾಗೂ ಬರಗಾಲದಂತಹ ನೈಸರ್ಗಿಕ ವಿಕೋಪಗಳಿಂದಾಗಿ ಬೆಳೆ ನಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ಇಂತಹ ಕಷ್ಟದ ಸಮಯದಲ್ಲಿ ರೈತರ ಕೈಹಿಡಿಯುವುದೇ ಬೆಳೆ ವಿಮೆ (Crop Insurance). ತಾವು ಕಷ್ಟಪಟ್ಟು ಬೆಳೆದ ಬೆಳೆಗೆ ಹಾನಿಯಾದಾಗ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ ಲಕ್ಷಾಂತರ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ್ದು, ತಮ್ಮ ಬೆಳೆ ವಿಮೆ ಅರ್ಜಿಯ ಸ್ಥಿತಿ ಅನ್ನು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಬಹುದು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಅನೇಕ ಬಾರಿ ರೈತರು ಬೆಳೆ ವಿಮೆ ಅರ್ಜಿ(Bele Vime Status) ಸಲ್ಲಿಸಿದ ನಂತರ ಅದರ ಮುಂದಿನ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಇಲ್ಲದೆ ಬ್ಯಾಂಕುಗಳಿಗೆ ಅಥವಾ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ನಿಮ್ಮ ಮೊಬೈಲ್ ಮೂಲಕವೇ ಕೇವಲ ಎರಡೇ ನಿಮಿಷದಲ್ಲಿ ಬೆಳೆ ವಿಮೆಯ ಸ್ಥಿತಿಯನ್ನು (Crop Insurance Status) ಸುಲಭವಾಗಿ ತಿಳಿದುಕೊಳ್ಳಬಹುದು. ಇದರಿಂದ ನಿಮ್ಮ ಸಮಯ ಉಳಿತಾಯವಾಗುವುದಲ್ಲದೆ, ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾದ ಮಾಹಿತಿಯನ್ನು ನೀವೇ ಪಡೆದುಕೊಳ್ಳಬಹುದು.

ಇದನ್ನೂ ಓದಿ: EPF Passbook -ಪಿಎಫ್ ಖಾತೆದಾರರಿಗೆ ಸಿಹಿ ಸುದ್ದಿ ಮೊಬೈಲ್ ನಲ್ಲೇ ಬ್ಯಾಲೆನ್ಸ್ ಚೆಕ್ ಮಾಡಲು ಅವಕಾಶ!

ನಿಮ್ಮ ಬೆಳೆ ವಿಮೆ ಅರ್ಜಿ ಮಂಜೂರಾಗಿದೆಯೇ, ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿದೆಯೇ ಅಥವಾ ನಿಮ್ಮ ಖಾತೆಗೆ ಹಣ ಜಮೆ ಆಗಿದೆಯೇ ಎಂಬುದನ್ನು ಪರಿಶೀಲಿಸಲು ಸರ್ಕಾರವು 'ಸಂರಕ್ಷಣೆ' (Samrakshane) ಪೋರ್ಟಲ್ ಅನ್ನು ಪರಿಚಯಿಸಿದೆ. ಈ ಪೋರ್ಟಲ್ ಮೂಲಕ ರೈತರು ತಮ್ಮ ಅರ್ಜಿಯ ಸಂಪೂರ್ಣ ವಿವರವನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಹಂತ-ಹಂತದ ಮಾಹಿತಿ ಇಲ್ಲಿದೆ.

Crop Insurance Application Status-ಬೆಳೆ ವಿಮೆ ಸ್ಥಿತಿ ಪರಿಶೀಲಿಸುವ ಸುಲಭ ವಿಧಾನ ಹೀಗಿದೆ:

ಕೃಷಿಕರು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ರಾಜ್ಯ ಸರ್ಕಾರ Samrakshne ಜಾಲತಾಣವನ್ನು ಪ್ರವೇಶ ಮಾಡಿ ಕೇವಲ ಒಂದೆರಡು ಕ್ಲಿಕ್ ನಲ್ಲಿ ನಿಮ್ಮ ಬೆಳೆ ವಿಮೆ ಅರ್ಜಿಯ ಸಂಪೂರ್ಣ ಸ್ಥಿತಿಯ ವಿವರವನ್ನು ಪಡೆಯಬಹುದಾಗಿದೆ.

Step-1: ಮೊದಲಿಗೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ "Bele Vime Status Check" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರದ ಅಧಿಕೃತ ಬೆಳೆ ವಿಮೆ ಪೋರ್ಟಲ್ ಆದ 'Samrakshane' (samrakshane.karnataka.gov.in) ವೆಬ್‌ಸೈಟ್‌ಗೆ ಭೇಟಿ ಮಾಡಿ. ಇಲ್ಲಿ ನಿಮಗೆ ಮುಖಪುಟದಲ್ಲಿ ವರ್ಷ ಮತ್ತು ಋತುವನ್ನು ಆಯ್ಕೆ ಮಾಡುವ ಆಯ್ಕೆ ಕಾಣಿಸುತ್ತದೆ.

ಇದನ್ನೂ ಓದಿ: KEB-ಒಸಿ ಇಲ್ಲದೇ ವಿದ್ಯುತ್ ಸಂಪರ್ಕ ಪಡೆಯಲು ಅಧಿಕೃತ ಮಾರ್ಗಸೂಚಿ ಪ್ರಕಟ!

Step-2: ವೆಬ್‌ಸೈಟ್ ಓಪನ್ ಆದ ನಂತರ, ನೀವು ಯಾವ ವರ್ಷದ ಬೆಳೆ ವಿಮೆ ಸ್ಥಿತಿಯನ್ನು ನೋಡಬೇಕಾಗಿದೆಯೋ ಆ ವರ್ಷವನ್ನು (ಉದಾಹರಣೆಗೆ: 2025-26 ಅಥವಾ 2026-27) ಆಯ್ಕೆ ಮಾಡಿಕೊಳ್ಳಿ. ಬಳಿಕ ನೀವು ವಿಮೆ ಪಾವತಿಸಿದ ಹಂಗಾಮು ಅಂದರೆ 'ಮುಂಗಾರು' (Kharif) ಅಥವಾ 'ಹಿಂಗಾರು' (Rabi) ಎಂಬುದನ್ನು ಸರಿಯಾಗಿ ಆಯ್ಕೆ ಮಾಡಿ 'Go' ಬಟನ್ ಕ್ಲಿಕ್ ಮಾಡಿ.

Step-3: ಇದಾದ ನಂತರ ಈ ಪುಟದಲ್ಲಿ ಕೆಳಗೆ Farmer ವಿಭಾಗದಲ್ಲಿ ಕಾಣಿಸುವ "Status Check" ಬಟನ್ ಮೇಲೆ ಕ್ಲಿಕ್ ಮಾಡಿ.

Step-4: ಈ ಹಂತದಲ್ಲಿ ನಿಮ್ಮ ಅರ್ಜಿಯನ್ನು ಹುಡುಕಲು ಕೆಲವು ವಿವರಗಳನ್ನು ಕೇಳಲಾಗುತ್ತದೆ. ನೀವು ವಿಮೆ ಕಟ್ಟಿದಾಗ ನೀಡಿರುವ 'Application Number' (ಅರ್ಜಿ ಸಂಖ್ಯೆ), 'Mobile Number' ಅಥವಾ ನಿಮ್ಮ 'Aadhaar Number' ಅನ್ನು ನಿಗದಿತ ಜಾಗದಲ್ಲಿ ನಮೂದಿಸಬೇಕು. ಬಳಿಕ ಸ್ಕ್ರೀನ್ ಮೇಲೆ ಕಾಣಿಸುವ ಕ್ಯಾಪ್ಚಾ (Captcha) ಕೋಡ್ ಅನ್ನು ಸರಿಯಾಗಿ ಟೈಪ್ ಮಾಡಿ.

ಇದನ್ನೂ ಓದಿ: Traffic Fines-ವಾಹನ ಸವಾರರಿಗೆ ಸುವರ್ಣಾವಕಾಶ: ಸಂಚಾರ ನಿಯಮ ಉಲ್ಲಂಘನೆ ಬಾಕಿ ದಂಡಕ್ಕೆ ಶೇ. 50 ರಿಯಾಯಿತಿ ಘೋಷಣೆ!

Step-5: ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿದ ನಂತರ 'Search' ಅಥವಾ 'Submit' ಬಟನ್ ಒತ್ತುವುದರ ಮೂಲಕ ನಿಮ್ಮ ಬೆಳೆ ವಿಮೆಯ ಸಂಪೂರ್ಣ ಸ್ಟೇಟಸ್ ಪರದೆಯ ಮೇಲೆ ಮೂಡುತ್ತದೆ. ನಿಮ್ಮ ಅರ್ಜಿ ಯಾವ ಹಂತದಲ್ಲಿದೆ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಮತ್ತು ವಿಮೆ ಹಣ ಜಮೆಯಾಗಿದ್ದರೆ ಎಷ್ಟು ಹಣ ಬಂದಿದೆ ಎಂಬ ಸಂಪೂರ್ಣ ವಿವರವನ್ನು ಇಲ್ಲಿ ನೋಡಬಹುದು.

ವಿಶೇಷ ಸೂಚನೆ: ರಾಜ್ಯ ಸರ್ಕಾರದ ಎಲ್ಲಾ ನಾಗರಿಕ ವೆಬ್ಸೈಟ್ ನ ಡೇಟಾ ಸೆಂಟರ್ ನಲ್ಲಿನ ತಾಂತ್ರಿಕ ನಿರ್ವಹನೆಗಾಗಿ 2 ದಿನ ಎಲ್ಲಾ ಜಾಲತಾಣಗಳು ಸ್ಥಗಿತವಾಗಿದ್ದು ಸೋಮವಾರದಿಂದ (29-06-2026) ಮೇಲಿನ ವಿಧಾನವನ್ನು ಅನುಸರಿಸಿ ಬೆಳೆ ವಿಮೆ ಅರ್ಜಿಯನ್ನು ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: KEB-ಒ.ಸಿ ಇಲ್ಲದೆ ವಿದ್ಯುತ್ ಸಂಪರ್ಕ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ, ಸಾರ್ವಜನಿಕರಿಗೆ ನಿರಾಳ!

Crop Survey Details-ಬೆಳೆ ವಿಮೆ ಪಡೆಯಲು ಬೆಳೆ ಮಾಹಿತಿ ತಾಳೆಯಾಗುವುದು ಕಡ್ಡಾಯ:

ಅನೇಕ ರೈತರಿಗೆ ಈ ಮಾಹಿತಿ ತಿಳಿದಿಲ್ಲ ಏನೆಂದರೆ ಬೆಳೆ ವಿಮೆ ಮಾಡಿಸುವಾಗ ನೀವು ಯಾವ ಬೆಳೆಗೆ ಬೆಳೆ ವಿಮೆ ಕಟ್ಟಿರುತ್ತಿರೋ ಆ ಬೆಳೆಯ ಮಾಹಿತಿಯನ್ನು ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಮೂಲಕ ದಾಖಲಾಗಿರಬೇಕಾಗುತ್ತದೆ ಉದಾಹರಣೆ ಸಹಿತ ಹೇಳುವುದಾದರೆ ಕೃಷಿ ಇಲಾಖೆಯಿಂದ ಪ್ರತಿ ವರ್ಷ PR ಮೂಲಕ ರೈತರ ಜಮೀನನ್ನು ನೇರವಾಗಿ ಭೇಟಿ ಮಾಡಿ GPS ಆಧಾರಿತ ಪೋಟೋ ಅನ್ನು ತೆಗೆಯುವ ಮೂಲಕ ಬೆಳೆ ಮಾಹಿತಿಯನ್ನು ಬೆಳೆ ಸಮೀಕ್ಷೆ ಅಪ್ಲಿಕೇಶನ್ ನಲ್ಲಿ ದಾಖಲಿಸಲಾಗುತ್ತದೆ ನೀವು ಮೆಕ್ಕೆಜೋಳಕ್ಕೆ ಬೆಳೆ ವಿಮೆ ಮಾಡಿಸಿದ್ದರೆ ಬೆಳೆ ಸಮೀಕ್ಷೆ ಅಪ್ಲಿಕೇಶನ್ ಮೂಲಕ ದಾಖಲಿಸುವಾಗಲು ಸಹ ಮೆಕ್ಕೆಜೋಳದ ಬೆಳೆ ಮಾಹಿತಿ ದಾಖಲಾಗಿದ್ದರೆ ಮಾತ್ರ ಬೆಳೆ ವಿಮೆ ಅರ್ಜಿ ಅನುಮೋದನೆ ಅಗುತ್ತದೆ ಬೆಳೆ ಮಾಹಿತಿ ತಾಳೆ ಅಗದಿದ್ದರೆ ಅರ್ಜಿ ವಜಾಗೊಳಿಸಲಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: