Dam Water Level-ರಾಜ್ಯದ ಜಲಾಶಯಗಳಿಗೆ ಒಂದೇ ದಿನದಲ್ಲಿ 34 TMC ನೀರು ಸಂಗ್ರಹ! ಇಲ್ಲಿದೆ ಡ್ಯಾಂವಾರು ಇಂದಿನ ನೀರಿನ ಮಟ್ಟ!

August 4, 2026 | Siddesh
Dam Water Level-ರಾಜ್ಯದ ಜಲಾಶಯಗಳಿಗೆ ಒಂದೇ ದಿನದಲ್ಲಿ 34 TMC ನೀರು ಸಂಗ್ರಹ! ಇಲ್ಲಿದೆ ಡ್ಯಾಂವಾರು ಇಂದಿನ ನೀರಿನ ಮಟ್ಟ!
Share Now:

ಬೆಂಗಳೂರು: ರಾಜ್ಯದಾದ್ಯಂತ ಕಾವೇರಿ, ಕೃಷ್ಣಾ ಹಾಗೂ ಮಲೆನಾಡು ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳಿಗೆ(Karnataka Dam Water Level) ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬಿಡುಗಡೆ ಮಾಡಿರುವ ಆಗಸ್ಟ್ 04, 2026ರ ವರದಿಯಂತೆ, ರಾಜ್ಯದ ಪ್ರಮುಖ 14 ಜಲಾಶಯಗಳಿಗೆ ಒಂದೇ ದಿನದಲ್ಲಿ ಬರೋಬ್ಬರಿ 34.8 TMC ನೀರು ಸಂಗ್ರಹವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರಾವರಿ ಆಸರೆ ದೊರೆತಂತಾಗಿದ್ದು, ನದಿ ಪಾತ್ರದ ಜನರಲ್ಲಿ ಹಾಗೂ ರೈತ ಸಮುದಾಯದಲ್ಲಿ ಸಂತಸ ಅಲೆ ಮನೆಮಾಡಿದೆ.

ವಿವಿಧ ಜಲಾನಯನ ಪ್ರದೇಶಗಳ ಪೈಕಿ ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳಿಗೆ ಅತ್ಯಂತ ಗರಿಷ್ಠ ಅಂದರೆ 22.7 TMC ನೀರು ಒಂದೇ ದಿನದಲ್ಲಿ ಹರಿದುಬಂದಿದೆ. ಹಾಗೆಯೇ ಜಲವಿದ್ಯುತ್ (Hydel) ಯೋಜನೆಗಳ ಜಲಾಶಯಗಳಿಗೆ 6.6 TMC ಮತ್ತು ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಿಗೆ 5.6 TMC ನೀರು ಹರಿವು ದಾಖಲಾಗಿದೆ. ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳ(Karnataka Dam List) ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ 895.65 TMC ಆಗಿದ್ದು, ಪ್ರಸ್ತುತ 546.11 TMC ನೀರು ದಾಸ್ತಾನಿದೆ. ಅಂದರೆ ಜಲಾಶಯಗಳಲ್ಲಿ ಒಟ್ಟು ಶೇಕಡಾ 61 ರಷ್ಟು ನೀರು ಭರ್ತಿಯಾಗಿದೆ.

ಇದನ್ನೂ ಓದಿ: VAO Last Date-ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

ಕಾವೇರಿ(Kaveri) ಜಲಾನಯನ ಪ್ರದೇಶದ ಹಾರಂಗಿ(Harangi) (93%) ಮತ್ತು ಕಬಿನಿ(Kabini) (96%) ಜಲಾಶಯಗಳು ಹಾಗೂ ಕೃಷ್ಣಾ ಜಲಾನಯನ ಪ್ರದೇಶದ ಆಲಮಟ್ಟಿ(Almatti) (90%) ಮತ್ತು ನಾರಾಯಣಪುರ(Narayanapura) (88%) ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ತುಂಗಭದ್ರಾ ಹಾಗೂ ಘಟಪ್ರಭಾ ಜಲಾಶಯಗಳಿಗೂ ಸಹ ಒಳಹರಿವು ಹೆಚ್ಚಾಗಿದ್ದು, ನದಿಗಳಿಗೆ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿ ಪಾತ್ರದ ಹಾಗೂ ತಗ್ಗು ಪ್ರದೇಶಗಳ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಒಂದೇ ದಿನದ ದಾಖಲೆ ಒಳಹರಿವು:

ಆಗಸ್ಟ್ 04 ರಂದು ರಾಜ್ಯದ ಪ್ರಮುಖ ಅಣೆಕಟ್ಟುಗಳಿಗೆ ಒಟ್ಟು 4,03,022 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ದಿನದ ಒಟ್ಟು ಸಂಗ್ರಹ 34.8 TMC ತಲುಪಿದೆ.

ಇದನ್ನೂ ಓದಿ: Ration Distribution-ಪಡಿತರದಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ನ್ಯಾಯಬೆಲೆ ಅಂಗಡಿಗಳು ಓಪನ್!

Karnataka Dams Water Level

ಕೃಷ್ಣಾ ಜಲಾನಯನ ಪ್ರದೇಶ ಪ್ರಥಮ:

ಕೃಷ್ಣಾ(Krishna) ನದಿ ಪಾತ್ರದ ಜಲಾಶಯಗಳಿಗೆ ಅತ್ಯಧಿಕ ಅಂದರೆ 2,62,401 ಕ್ಯೂಸೆಕ್ ಒಳಹರಿವು ಹರಿದುಬರುತ್ತಿದ್ದು, ಆಲಮಟ್ಟಿಗೆ 1.40 ಲಕ್ಷ ಕ್ಯೂಸೆಕ್ ಹಾಗೂ ನಾರಾಯಣಪುರಕ್ಕೆ 1.46 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದೆ.

ಕಾವೇರಿ ಜಲಾನಯನದ ಸ್ಥಿತಿ:

ಕಾವೇರಿ ಪಾತ್ರಕ್ಕೆ 64,507 ಕ್ಯೂಸೆಕ್ ಒಳಹರಿವು ಬಂದಿದ್ದು, ಕೆ.ಆರ್.ಎಸ್ (KRS) ಜಲಾಶಯದಲ್ಲಿ 25.59 TMC (52%) ಹಾಗೂ ಕಬಿನಿಯಲ್ಲಿ 18.69 TMC (96%) ನೀರು ಸಂಗ್ರಹವಾಗಿದೆ.

ಶೇ. 90ಕ್ಕೂ ಹೆಚ್ಚು ಭರ್ತಿಯಾದ ಜಲಾಶಯಗಳು:

ಕಬಿನಿ (96%), ಹಾರಂಗಿ (93%), ಹಾಗೂ ಆಲಮಟ್ಟಿ (90%) ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ಜಲಾಶಯಗಳಿಂದ ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರನ್ನು ಹೊರಬಿಡಲಾಗುತ್ತಿದೆ.

ಇದನ್ನೂ ಓದಿ: Scholarship Application-ಕಾರ್ಮಿಕರ ಮಕ್ಕಳಿಗೆ 25,000/- ವಿದ್ಯಾರ್ಥಿವೇತನ! ಆನ್‍ಲೈನ್ ಅರ್ಜಿ ಆಹ್ವಾನ!

ಒಟ್ಟು ದಾಸ್ತಾನು ವಿವರ:

ಗರಿಷ್ಠ 895.65 TMC ಸಾಮರ್ಥ್ಯದ ಪೈಕಿ ಪ್ರಸ್ತುತ 546.11 TMC ನೀರು ಸಂಗ್ರಹವಿದ್ದು, ಕಳೆದ ವರ್ಷದ ಇದೇ ದಿನದ ಸಂಗ್ರಹಕ್ಕೆ (750.52 TMC) ಹೋಲಿಸಿದರೆ ಈ ಬಾರಿ ಮಳೆ ತಡವಾಗಿ ಆರಂಭವಾದರೂ ಜಲಾಶಯಗಳು ವೇಗವಾಗಿ ಭರ್ತಿಯಾಗುತ್ತಿವೆ.

Today All Karnataka Dam Water Level-ಜಲಾಶಯವಾರು ಇಂದಿನ ನೀರಿನ ಮಟ್ಟದ ವಿವರ ಹೀಗಿದೆ(04-ಆಗಸ್ಟ್-2026):

ಜಲಾಶಯದ ಹೆಸರು (Name of Reservoir)ಒಟ್ಟು ಸಂಗ್ರಹಣಾ ಸಾಮರ್ಥ್ಯ (Gross Capacity in TMC)ಇಂದಿನವರೆಗಿನ ನೀರು ಸಂಗ್ರಹ (Present Storage in TMC)ಇಂದಿನ ಒಳಹರಿವು (Inflow in Cusecs)
ಜಲವಿದ್ಯುತ್ (HYDEL) ಜಲಾಶಯಗಳು
ಲಿಂಗನಮಕ್ಕಿ (Linganamakki)151.7565.1727,952
ಸುಪಾ (Supa)145.3366.5041,041
ವರಾಹಿ (Varahi)31.1313.577,121
ಕಾವೇರಿ ಜಲಾನಯನ (CAUVERY BASIN)
ಹಾರಂಗಿ (Harangi)8.507.907,147
ಹೇಮಾವತಿ (Hemavathi)37.1028.415,041
ಕೆ.ಆರ್.ಎಸ್. (K.R.S.)49.4525.5931,122
ಕಬಿನಿ (Kabini)19.5218.6927,988
ಕೃಷ್ಣಾ ಜಲಾನಯನ (KRISHNA BASIN)
ಭದ್ರಾ (Bhadra)71.5447.4814,451
ತುಂಗಭದ್ರಾ (Tungabhadra)105.7951.1582,087
ಘಟಪ್ರಭಾ (Ghataprabha)51.0040.1621,825
ಮಲಪ್ರಭಾ (Malaprabha)37.7317.556,668
ಆಲಮಟ್ಟಿ (Alamatti)123.08111.161,40,257
ನಾರಾಯಣಪುರ (Narayanapura)33.3129.401,46,799
ಇತರ ಜಲಾಶಯ
ವಾಣಿವಿಲಾಸ ಸಾಗರ (Vani Vilas Sagar)30.4223.380
ರಾಜ್ಯದ ಒಟ್ಟು (TOTAL)895.65 TMC546.11 TMC4,03,022 Cusecs

ಇದನ್ನೂ ಓದಿ: Coconut Farm-ತೆಂಗು ಬೆಳೆಗಾರರ ಗಮನಕ್ಕೆ: ಹೊಸ ತೋಟ ಸ್ಥಾಪನೆಗೆ ₹56,000 ವರೆಗೆ ಸಹಾಯಧನ!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: