Tomato bili nona: ಟಮೋಟೋ ಬೆಳೆಯಲ್ಲಿ ಬಿಳಿನೊಣದ ನಿರ್ವಹಣೆಗೆ ಈ ಕ್ರಮ ಅನುಸರಿಸಿ.

July 4, 2023 | Siddesh

ಇತ್ತೀಚಿನ ದಿನಗಳಲ್ಲಿ, ಅತಿಯಾದ ಉಷಾಂಶದಿಂದ ಟಮೋಟೋ(Tomato bele) ಬೆಳೆಯಲ್ಲಿ ಬಿಳಿನೊಣದ ಹಾವಳಿ ಹೆಚ್ಚಾಗಿರುತ್ತದೆ. ಇದನ್ನು ತಡೆಗಟ್ಟಲು ಪ್ರತಿ ಎಕರೆಗೆ 10 ರಿಂದ 12 ಹಳದಿ ಅಂಟು ಬಲೆಳನ್ನು ಗಿಡದ ಎತ್ತರಕ್ಕಿಂತ 1 ಅಡಿ ಎತ್ತರದಲ್ಲಿ, ತೂಗು ಹಾಕುವುದು ಹಾಗೂ ಅವುಗಳನ್ನು 15 ದಿನಗಳಿಗೊಮ್ಮೆ ಬದಲಾಯಿಸುವುದು, ಆರಂಭಿಕ ಹಂತದಲ್ಲಿಯೇ ರೋಗಕ್ಕೆ ತುತ್ತಾದ ಸಸಿಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ನಂಜಾಣು ರೋಗ ಹರಡುವಿಕೆಯನ್ನು ನಿಯಂತ್ರಿಸಬಹುದು.

Diafenthuran 1.2g / 1 ಲೀಟರ್ ನೀರಿಗೆ ಅಥವಾ Flupyridifuran 1ml / 1 1 ಲೀಟರ್ ನೀರಿಗೆ ಅಥವಾ Afidopyropen Inscalis 1ml / 1 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು, ಈ ಮೇಲಿನ ಕೀಟನಾಶಗಳನ್ನು 8 ರಿಂದ 10 ದಿನಗಳ ಅಂತರದಲ್ಲಿ ಸಿಂಪಡಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,(ಜಿಲ್ಲಾ ಪಂಚಾಯತ್), ಕೋಲಾರ ರವರು ಕೋರಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ, ಕೋಲಾರ(Kolar) ಜಿಲ್ಲೆಯ ಟೊಮಾಟೋ ಬೆಳೆಯಲ್ಲಿ ಬಿಳಿ ನೊಣ ಹಾಗೂ ಎಲೆ ಮುಟುರು ರೋಗದ ತೀವ್ರತೆಯು ಹೆಚ್ಚಾಗಿರುವುದರಿಂದ ಟೊಮಾಟೋ ಬೆಳೆಯಲ್ಲಿ ಬಿಳಿ ನೊಣ ಹಾಗೂ ಎಲೆ ಮುಟುರು ರೋಗದ ಸಮಗ್ರ ನಿರ್ವಹಣೆಗಾಗಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ಹಾಗೂ ಕೃಷಿ ವಿಜ್ಞಾನ ಕೇಂದ್ರ ಕೋಲಾರ ರವರು ತಿಳಿಸಿರುವ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವುದು,

1. ರೋಗಮುಕ್ತ, ಆರೋಗ್ಯವಂತ ಸಸಿಗಳನ್ನು ನಾಟಿಗೆ ಬಳಸುವುದು, 

2. ಸಸಿಮಡಿಗಳಲ್ಲಿ 40 ಮೇಷ್ ನೈಲಾನ್ ಪರದೆಯನ್ನು ಹಾಕುವುದು,

3. ಇಮಿಡಾಕೊಪ್ರಿಡ್ 70 WS (10 ಗ್ರಾಂ, ಪ್ರತಿ ಕೆ.ಜಿ, ಬೀಜಕೆ) ಕೀಟನಾಶಕದಿಂದ ಬೀಜೋಪಚಾರ ಮಾಡುವುದು.

4. ಮುಖ್ಯ ಬೆಳೆ ಕ್ಷೇತ್ರದಲ್ಲಿ, ಸಿಲ್ಮರ್ ಬಣ್ಣದ ಪ್ಲಾಸ್ಮಿಕ್ ಹೊದಿಕೆಯನ್ನು ಬಳಸಿ ಬಿಳಿ ನೊಣಗಳನ್ನು ಹಿಮ್ಮೆಟ್ಟಿಸುವುದು,

5. ಟೊಮಾಟೋ(Tomato sasi) ಸಸಿಗಳನ್ನು ನಾಟಿ ಮಾಡುವ 30 ದಿನಗಳ ಮುಂಚಿತವಾಗಿ ಹೊಲದ ಸುತ್ತಲೂ ಮಕ ಜೋಳ ಅಥವಾ ಸಜೆ ಅಥವಾ ಮೇವಿನ ಜೋಳವನ್ನು ತಡೆ ಬೆಳೆಯಾಗಿ 2 ರಿಂದ 3 ಸಾಲು ದಟ್ಟವಾಗಿ ಬೆಳೆಯುವುದು, ಇದರಿಂದ ಬಿಳಿ ನೊಣಗಳ ಹರಡುವಿಕೆ ಕುಂಠಿತವಾಗುವುದರಿಂದ ಎಲೆ ಮುಟುರು ರೋಗದ ಪ್ರಮಾಣ ಕಡಿಮೆಯಾಗುತ್ತದೆ.

6. ಪಾರ್ಥೇನಿಯಮ್, ಕಡೆ, ಮುಳ್ಳು, ಅಲ್ಪ ಭೇದಿ ಸೊಪ್ಪು, ಗಬ್ಬು ಸೊಪ್ಪು, ಸೀಮೆ ಎಣ್ಣೆ ಗಿಡ ಮುಂತಾದ ಕಳೆ ಗಿಡಗಳನ್ನು ಟೊಮಾಟೋ ಬೆಳೆಯಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಿತ್ತು ತೆಗೆಯುವುದು.

7. ಒಂದು ಬಾರಿ ಟೊಮಾಟೋ ಬೆಳೆದ ನಂತರ ಬಿಳಿ ನೊಣಗಳ ತೀವ್ರತೆ ಕಡಿಮೆಯಿರುವ ಪರ್ಯಾಯ ಬೆಳೆಗಳಾದ ಮೆಕ್ಕೆ ಜೋಳ, ಸಜ್ಜೆ, ರಾಗಿ, ಮುಂತಾದವುಗಳನ್ನು ಬೆಳೆಯುವುದು, 

8. ಪ್ರತಿ ಎಕರೆಗೆ 10 ರಿಂದ 12 ಹಳದಿ ಅಂಟು ಬಲೆಗಳನ್ನು(yellow sticky traps) ತೂಗುಹಾಕುವುದು ಹಾಗೂ ಅವುಗಳನ್ನು 15 ದಿನಗಳಿಗೊಮ್ಮೆ ಬದಲಾಯಿಸುವುದು.

ಇದನ್ನೂ ಓದಿ: ಪ್ರಮುಖ ಸುದ್ದಿ: ಗೃಹಜ್ಯೋತಿ ಜುಲೈ 25 ರೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಆಗಸ್ಟ್ ತಿಂಗಳ ವಿದ್ಯುತ್ ಉಚಿತ.

9. ಆರಂಭಿಕ ಹಂತದಲ್ಲಿಯೇ ರೋಗಕ್ಕೆ ತುತ್ತಾದ ಸಸಿಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ನಂಜಾಣು ರೋಗ ಹರಡುವಿಕೆಯನ್ನು ನಿಯಂತ್ರಣದಲ್ಲಿಡಬಹುದು,

10. Vegetable Special @5 ಗ್ರಾಂ/ ಲೀಟರ್ ಸಿಂಪಡಿಸುವುದರಿಂದ ಇಳುವರಿ ಕಡಿಮೆಯಾಗುವುದನ್ನು ತಡೆಯಬಹುದು.

11. ಬಿಳಿ ನೊಣಗಳನ್ನು ನಿಯಂತ್ರಣದಲ್ಲಿಡಲು ನಾಟಿ ಮಾಡಿದ 15 ದಿನಗಳ ನಂತರ ಇಮಿಡಾಕೊಪ್ರಿಡ್ 17.8 SL@ 0.4 ಮಿ.ಲೀ, ಅಥವಾ ಥೈಯೋಮಿತೋಗ್ರಾಮ್ 25 WG @ 0.3 ಗ್ರಾಂ ಅಥವಾ ಫಿಫೋನಿಲ್ 5% [email protected] ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು, Azadirachtin 1% @25 ಮಿಲಿ/ಲೀಟರ್ ಅನ್ನು ಇದರೊಂದಿಗೆ ಸಿಂಪಡಿಸುವುದು.

12. ನಾಟಿ ಮಾಡಿದ 40 ದಿನಗಳ ನಂತರ ಇಮಿಡಾಕ್ ಪ್ರಿಡ್ (imidacloprid)70% WG @ 2.0 ಗ್ರಾಂ/ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು.

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: