ನಕ್ಷತ್ರವಾರು ಈ ವರ್ಷದ ಮಳೆ ಅವಧಿ ಮತ್ತು ಪ್ರಮಾಣ, ಸೂಕ್ತ ಬೆಳೆ, ಹಿರಿಯರ ಗಾದೆಗಳ ಲೆಕ್ಕಾಚಾರ.

June 7, 2023 | Siddesh

ಈ ವರ್ಷದ(2023) ನಕ್ಷತ್ರವಾರು ಮಳೆ ಅವಧಿ ಹಾಗೂ ಪ್ರಮಾಣ, ಸೂಕ್ತ ಬೆಳೆ, ಹಿಂದಿನ ಕಾಲದ ಹಿರಿಯರ ಗಾದೆಗಳ ಲೆಕ್ಕಾಚಾರ ಮಾಹಿತಿಯನ್ನು ಈ ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ.

ಹಿಂದೆ ಪೂರ್ವಜರು ಮಳೆಯ ನಕ್ಷತ್ರಗಳ ಮೇಲೆ ಹಲವಾರು ಗಾದೆಗಳನ್ನು ಕಟ್ಟಿದ್ದಾರೆ. ಅವು ಅಕ್ಷರಶಃ ಸತ್ಯವಾಗಿದೆ. ವಿಜ್ಞಾನಿಗಳನ್ನು ಮೀರಿ ತಮ್ಮ ಅನುಭವದ ಮೇಲೆ ಹಲವಾರು ಗಾದೆ ಮಾತುಗಳನ್ನು ಹೇಳಿದ್ದಾರೆ. ಮೆಲಕು ಹಾಕುವುದಕ್ಕಾಗಿ ಇಲ್ಲಿ ಕೆಲವನ್ನು ತಿಳಿಸಲಾಗಿದೆ.

1. ಅಶ್ವಿನಿ

ದಿನಾಂಕ: 14-4-2023ರಿಂದ 27-4-2023ರವರೆಗೆ (ಸಾಮಾನ್ಯ ಮಳೆ)

ಗಾದೆ: ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು,  ಅಶ್ವಿನಿ ಸಸ್ಯ ನಾಶಿನೀ, ಅಶ್ವಿನಿ ಸನ್ಯಾಸಿಸಿ ಅಶ್ವಿನಿ ಆದ್ರೆ ಶಿಶುವಿಗೆ ಹಾಲಿಲ್ಲ.

2. ಭರಣಿ

ದಿನಾಂಕ: 28-4-2023ರಿಂದ 10-5-2023ರವರೆಗೆ (ಸಾಮಾನ್ಯ ಮಳೆ)

ಗಾದೆ: ಭರಣಿ ಮಳೆ ಧರಣಿ ಬೆಳೆ  ಬರಿಣಿ ಬಂದ್ರ ದರಿಣಿ ಬೆಳೀತದ,   ಭರಣಿ ಸುರಿದರೆ ಧರಣಿ ಬದುಕೀತು,   ಭರಣೀ ಬಂದರೆ ಧರಣಿ ತಣಿಯುತ್ತೆ.  ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,  ಭರಣಿ ಬಂದ್ರೆ ಧರಣಿ ಎಲ್ಲಾ ಹಸಿರು. ಭರಣಿ ಮಳೆ ಧರಣಿ ತಂಪು ಭರಣಿ ಮಳೆ ಧರಣಿ ಎಲ್ಲಾ ಆಳ್ತು

3. ಕೃತಿಕ

ದಿನಾಂಕ: 11-5-2023ರಿಂದ 24-5-2023ರವರೆಗೆ (ಸಾಮಾನ್ಯ ಮಳೆ)

ಗಾದೆ: ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

4. ರೋಹಿಣಿ

ದಿನಾಂಕ: 25-5-2023ರಿಂದ 7-6-2023ರವರೆಗೆ (ಉತ್ತಮ ಮಳೆ)

ಸೂಕ್ತ ಬೆಳೆಗಳು : ಹೆಸರು, ಉದ್ದು, ಕೂರಿಗೆ ಭತ್ತ, ಹತ್ತಿ, ತೊಗರಿ, ಮುಸುಕಿನ ಜೋಳ ಮತ್ತು ಹಸಿರೆಲೆ ಗೊಬ್ಬರ

ಗಾದೆ: ರೋಹಿಣಿ ಮಳೆ ಓಣಿಯೆಲ್ಲಾ ಕೆಸರು  ರೋಹಿಣಿ ಮಳೆಗೆ ಓಣ್ಯೆಲ್ಲಾ ಜೋಳ

5. ಮೃಗಶಿರ

ದಿನಾಂಕ: 8-6-2023ರಿಂದ 21-6-2023ರವರೆಗೆ (ಉತ್ತಮ ಮಳೆ)

ಸೂಕ್ತ ಬೆಳೆಗಳು : ನಾಟಿ ಭತ್ತ, ಕೂರಿಗೆ ಭತ್ತ, ಹತ್ತಿ, ಶೇಂಗಾ, ತೊಗರಿ ಮುಸುಕಿನ ಜೋಳ ಮತ್ತು ಹಸಿರೆಲೆ ಗೊಬ್ಬರ

ಗಾದೆ: ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು.  ಮೃಗಶಿರಾ ಮಳೆಯಲಿ ಗಿಡ ಮುರಿದು ನೆಟ್ಟರೂ ಬದುಕುವುದು. ಮ್ರಗಶಿರ ಮಿಂಚಿದರೆ ಮೂರು ಮಳೆ ಇಲ್ಲ.

6. ಆರಿದ್ರ

ದಿನಾಂಕ: 22-6-2023 ರಿಂದ 5-7-2023ರವರೆಗೆ(ಉತ್ತಮ ಮಳೆ )

ಸೂಕ್ತ ಬೆಳೆಗಳು : ಕೂರಿಗೆ ಭತ್ತ, ಔಡಲ, ಎಳ್ಳು, ಹತ್ತಿ, ಶೇಂಗಾ, ತೊಗರಿ ಮತ್ತು ಮುಸುಕಿನ ಜೋಳ.

ಗಾದೆ: ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ,  ಆದರೆ ಆರಿದ್ರಾ, ಇಲ್ವಾದ್ರೆ ದರಿದ್ರ!  ಆರಿದ್ರಾ ಮಳೆ ಆರದೆ ಹುಯ್ಯುತ್ತೇ,   ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ,   ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.  ಆರಿದ್ರೆಯಲಿ ಗಿಡ ಆದರೆ ಆದಿತು.

7. ಪುನರ್ವಸು

ದಿನಾಂಕ: 6-7-2023ರಿಂದ 19-7-2023ರವರೆಗೆ (ಉತ್ತಮ ಮಳೆ)

ಸೂಕ್ತ ಬೆಳೆಗಳು : ಸಿರಿ ಧಾನ್ಯ, ನಾಟಿ ಭತ್ತ, ಹತ್ತಿ, ಶೇಂಗಾ ತೊಗರಿ, ಸಜ್ಜೆ, ಮುಸುಕಿನ ಜೋಳ, ಮುಂಗಾರಿ ಜೋಳ ಮತ್ತು ಮೆಣಸಿನ ಕಾಯಿ

ಗಾದೆ: ಪುನವ೯ಸು ಮಳೆ ಬಂದು ಪಂಚಾಂಗ ಓದಾಯ್ತು, ಎಳೆ ಕರು ರಾಸಾಯ್ತು. 

8. ಪುಷ್ಯ

ದಿನಾಂಕ: 20-7-2023ರಿಂದ 2-8-2023ರವರೆಗೆ

ಗಾದೆ: ಪುಷ್ಯ ಮಳೆ ಭಾಷೆ ಕೂಟ್ಟ ಮಳೆ (ತಪ್ಪಿಸುವುದಿಲ್ಲ)  ಪುಷ್ಯದಲಿ ನೆಟ್ಟ ಗಿಡ ಪುಟುಗೋಸಿ ಆದೀತು.

ಇದನ್ನೂ ಓದಿ: ಇಂದಿನ ಅಡಿಕೆ, ತರಕಾರಿ, ಮೆಕ್ಕೆಜೋಳ, ರಾಗಿ, ಹತ್ತಿ, ಸೋಯಾಬಿನ್ ಮಾರುಕಟ್ಟೆ ಧಾರಣೆ ವಿವರ ಹೀಗಿದೆ.

9. ಆಶ್ಲೇಷ

ದಿನಾಂಕ: 3-8-2023ರಿಂದ 16-8-2023ರವರೆಗೆ (ಉತ್ತಮ ಮಳೆ)

ಸೂಕ್ತ ಬೆಳೆಗಳು : ಸಿರಿ ಧಾನ್ಯ, ನಾಟಿ ಭತ್ತ, ತೊಗರಿ, ಮುಸುಕಿನ ಜೋಳ ಮತ್ತು ಸೂರ್ಯಕಾಂತಿ.

ಗಾದೆ: ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ,   ಅಸಲೆ ಮಳೆ ಕೈತುಂಬಾ ಬೆಳೆ,   ಆಶ್ಲೇಷ ಮಳೆ ಈಸಲಾರದ ಹೊಳೆ. ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು.  ಅಸ್ಲೆ ಮಳೆಗೆ ಸಸ್ಲೆ ಬೆಟ್ಟಕ್ಕೆ ನೆಗೀತು  ಆಶ್ಲೇಷಾ ಮಳೆಗೆ ಅಂಗಾಲೂ ನೆನೆಯೊಲ್ಲವಂತೆ.  ಆಶ್ಲೇಷಾ ಗಿಡಗಳಿಗೆ ಕೊಳೆಬರಿಸುವ  ನಂಜಿನ ಮಳೆ.  ಅಶ್ಲೆ ಮಳೆ ಹುಯ್ಶಾಲಿ, ಸೋಸಲು ಗಟ್ಟ ಹತ್ತಾಲಿ

10. ಮಘ

ದಿನಾಂಕ: 17-8-2023 ರಿಂದ 30-8-2023ರವರೆಗೆ (ಉತ್ತಮ ಮಳೆ)

ಸೂಕ್ತ ಬೆಳೆಗಳು : ಸಿರಿ ಧಾನ್ಯ, ಸೂರ್ಯಕಾಂತಿ, ಮುಸುಕಿನ ಜೋಳ ಮತ್ತು ತರಕಾರಿ ಬೆಳೆಗಳು.

ಗಾದೆ: ಬಂದರೆ ಮಗೆ ಹೋದರೆ ಹೊಗೆ,  ಬಂದರೆ ಮಘೆ ಇಲ್ಲದಿದ್ದರೆ ಧಗೆ,  ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.  ಮಗೆ ಮಳೆ ಮಗೆ ಗಾತ್ರ ಬೀಳ್ತದೆ.  ಮಘೇ ಮೊಗೆಬೆಳೆಯುವ ಮಳೆ..  ಮಘಮಳೆ ಮೊಗೆದು ಹೊಯ್ಯುವುದು.

11. ಹುಬ್ಬ

ದಿನಾಂಕ: 31-8-2023 ರಿಂದ 12-9-2023ರವರೆಗೆ (ಉತ್ತಮ ಮಳೆ)

ಗಾದೆ: ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.  ಹುಬ್ಬೆ ಮಳೆ ಅಬ್ಬೇ ಹಾಲು ಉಂಡಂತೆ.  ಹುಬ್ಬೆ ಮಳೆ ಅಬ್ಬೆ ಹಾಲು ಕುಡದ್ಹಾಂಗೆ.  ಹುಬ್ಬೆ ಮಳೆ ಉಬ್ಬುಬ್ಕೊಂಡು ಹೊಡೆ.  ಹುಬ್ಬೇ ಮಳೆ ಉಬ್ಬುಬ್ಬುಕೊಂಡು ಬಂದ್ರು ಗುಬ್ಬಚ್ಚಿ ಪುಕ್ಕ ನೆನಿಲಿಲ್ಲ.

12. ಉತ್ತರ

ದಿನಾಂಕ: 13-9-2023 ರಿಂದ 26-9-2023 ರವರೆಗೆ(ಉತ್ತಮ ಮಳೆ)

ಉತ್ತಮ ಮಳೆ ಸೂಕ್ತ ಬೆಳೆಗಳು : ಮುಸುಕಿನ ಜೋಳ, ಹಿಂಗಾರಿ ಜೋಳ, ಕುಸುಬೆ ಮತ್ತು ಕಡಲೆ

ಗಾದೆ: ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ. ಉತ್ತರ ಎದುರುತ್ತರದ ಮಳೆ. ಉತ್ತರೆ ಮಳೆಗೆ ಹುತ್ತದಲ್ಲಿರುವ ಹಾವೆಲ್ಲಾ ಹೊರಗೆ. ಉತ್ತರಿ ಬಿತ್ತಿರಿ ಅದು ಬರದಿದ್ದರೆ ನೀವು ಸತ್ತಿರಿ

13. ಹಸ್ತ

ದಿನಾಂಕ: 27-9-2023 ರಿಂದ 10-10-2023ರವರೆಗೆ(ಉತ್ತಮ ಮಳೆ)

ಸೂಕ್ತ ಬೆಳೆಗಳು : ಸೂರ್ಯಕಾಂತಿ, ಹಿಂಗಾರಿ ಜೋಳ, ಕಡಲೆ ಮತ್ತು ಕುಸುಬೆ

14. ಚಿತ್ತ

ದಿನಾಂಕ: 11-10-2023 ರಿಂದ 23-10-2023ರವರೆಗೆ(ಉತ್ತಮ ಮಳೆ)

ಉತ್ತಮ ಮಳೆ ಸೂಕ್ತ ಬೆಳೆಗಳು : ಅಗಸೆ, ಶೇಂಗಾ, ಸೂರ್ಯಕಾಂತಿ, ಮುಸುಕಿನ ಜೋಳ, ಕಡಲೆ ಮತ್ತು ಕುಸುಬೆ.

ಗಾದೆ: ಕುರುಡು ಚಿತ್ತೆ ಎರಚಿದತ್ತ ಬೆಳೆ. ಚಿತ್ತಾ ಮಳೆ ವಿಚಿತ್ರ ಬೆಳೆ!  ಚಿತ್ತಾ ಚಿತ್ರವಿಚಿತ್ರ ಮಳೆ.. ಕುರ್ಡು ಚಿತ್ತೆ ಎತ್ಲಾಗ ಬಿದ್ದರೂ ಬರುತ್ತೆ.

15. ಸ್ವಾತಿ

ದಿನಾಂಕ: 24-10-2023 ರಿಂದ 5-11-2023ರವರೆಗೆ (ಉತ್ತಮ ಮಳೆ)

ಸೂಕ್ತ ಬೆಳೆಗಳು : ಅಗಸೆ, ಶೇಂಗಾ, ಮುಸುಕಿನ ಜೋಳ, ಕಡಲೆ ಮತ್ತು ಕುಸುಬೆ.

ಗಾದೆ: ಸ್ವಾತಿ ಮಳೆ ಮುತ್ತಿನ ಬೆಳೆ. ಸ್ವಾತಿ ಮಳೆ ಹೇತೆನೆಂದ್ರೂ ಬಿಡದು. ಸ್ವಾತಿ ಮುತ್ತಿನ ಹನಿಯ ಮಳೆ.. ಸ್ವಾತಿ ಮಳೆ ಹೋದ್ರಾ ಇನ್ಯಾತರ ಮಳೆ

16. ವಿಶಾಖ

ದಿನಾಂಕ: 6-11-2023 ರಿಂದ(ಉತ್ತಮ ಮಳೆ)

ಗಾದೆ: ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ. ವಿಶಾಖ ಹೊಯ್ದರೆ ವಿಷಜಂತುವಿನ ಉಪಟಳ. ವಿಶಾಖೆ ಮಳೆಗೆ ಹುಳವೆಲ್ಲಾ ಸಾಯುತ್ತೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: