HomeNew postsತೋಟಗಾರಿಕೆ ಇಲಾಖೆ ಪ್ರಕಟಣೆ: ಅಡಿಕೆ ಎಲೆ ಚುಕ್ಕೆ ರೋಗದ ಹತೋಟಿಗೆ ಮುಂಜಾಗ್ರತೆ ಕ್ರಮಗಳು.

ತೋಟಗಾರಿಕೆ ಇಲಾಖೆ ಪ್ರಕಟಣೆ: ಅಡಿಕೆ ಎಲೆ ಚುಕ್ಕೆ ರೋಗದ ಹತೋಟಿಗೆ ಮುಂಜಾಗ್ರತೆ ಕ್ರಮಗಳು.

ಹೊಸನಗರ: ತಾಲೂಕಿನಾದ್ಯಂತ, ಅದರಲೂ, ನಗರ, ಹುಂಚಾ ಮತ್ತು ಕಸಬಾ ಹೋಬಳಿಯ ಬಹುತೇಕ ಗ್ರಾಮಗಳ ಸುತ್ತ ಮುತ್ತ ಇರುವ ಘಟ್ಟ ಕಣಿವೆ ಪ್ರದೇಶಗಳು ಮತ್ತು ಶರಾವತಿ ಹಿನ್ನೀರಿನ ಅಡಿಕೆ ತೋಟಗಳಲ್ಲಿ, ಕಳೆದ ವರ್ಷ ಎಲೆಚುಕ್ಕೆ ರೋಗ ಗರಿಗಳು, ಹಿಂಗಾರ ಮತ್ತು ಅಡಿಕೆ ಕಾಯಿ ಬೆಳವಣಿಗೆಗೆ ತೊಂದರೆ ಉಂಟಾಗಿ ಇಳುವರಿ ಕುಂಠಿತಕ್ಕೆ ಕಾರಣವಾಗಿರುತ್ತದೆ. 

ಈ ಎಲೆಚುಕ್ಕೆ ರೋಗಕ್ಕೆ ಕಾರಣವಾದ ಶಿಲೀಂದ್ರ ರೋಗಾಣುಗಳಾದ ಕೊಲೆಟೊಟ್ರಿಕಮ್, ಪೆಸ್ಮಲೋಸಿಯಾ ಮತ್ತು ಫಿಲೋಸಿ ರೋಗಾಣುಗಳು ಕಳೆದ ಬಾರಿ ಬಿದ್ದು ಅತಿ ಹೆಚ್ಚು ಮಳೆಯಿಂದ ಮಣ್ಣಿನಲ್ಲಿ, ಗರಿಗಳು ಮತ್ತು ಅಡಿಕೆ ಕಾಯಿಗಳ ಮೇಲೆ ಕಂದು ಮಿಶ್ರಿತ ಕಪ್ಪು, ಬಣದ ಶಿಲೀಂದ್ರಗಳು ಹಾನಿ ಮಾಡಿ ಇಳುವರಿ ಮೇಲೆ ಪರಿಣಾಮ ಉಂಟುಮಾಡಿರುತ್ತದೆ. ಹೀಗಾಗಿ ಈ ಮುಂಗಾರು ಋತುವಿನಲ್ಲಿ, ಈ ರೋಗದ ಹತೋಟಿಗೆ ಸಾಮೂಹಿಕವಾಗಿ ಸಮಗ್ರ ಹತೋಟಿ ಕ್ರಮ ನಿರ್ವಹಿಸಿ ರೋಗದ ಹತೋಟಿಗೆ ಸಹಕರಿಸಲು ಕೋರಿ ತೋಟಗಾರಿಕೆ ಇಲಾಖೆಯಿಂದ ಮುಂಜಾಗ್ರತೆ ಕ್ರಮಗಳ ಪ್ರಕಟಣೆ ಹೊರಡಿಸಲಾಗಿದೆ.

ನಿರ್ವಹಣಾ ಮುನ್ನೆಚ್ಚರಿಕೆ ಕ್ರಮಗಳು:-

1) ಜಮೀನಿನಲ್ಲಿರುವ ಕಳೆದ ಬಾರಿಯ ರೋಗಪೀಡಿತ, ಒಣಗಿರುವ ಮತ್ತು ಹಳದಿಯಾಗಿರುವ ಗರಿಗಳನ್ನು ತೆಗೆದು ರಾಶಿ ಹಾಕಿ ಸುಡಬೇಕು,

2) ತಾಲೂಕಿನ ನಗರ, ಕಸಬಾ ಮತ್ತು ಹುಂಚಾ ಹೋಬಳಿಯ ನಗರ ಹೋಬಳಿಗೆ ಹತ್ತಿರವಿರುವ ಭೂಭಾಗದಲ್ಲಿ, ಹೆಚ್ಚು ಮಳೆ ಬೀಳುವುದರಿಂದ ಲವಣಾಂಶಗಳು ಮತ್ತು ಫಲವತ್ತತೆ ನೀರಿನೊಂದಿಗೆ ಕೊಚ್ಚಿಹೋಗುವುದರಿಂದ ಮಣಿನಲೆ, ಪೋಷಕಾಂಶಗಳ ಕೊರತೆ ಹೆಚ್ಚು ಉಂಟಾಗುತ್ತದೆ. ಹೀಗಾಗಿ ಮಣ ಪರೀಕ್ಷೆ ಆಧಾರದ ಮೇಲೆ ಅಡಿಕೆ ಮರಗಳಿಗೆ ಪೋಷಕಾಂಶಗಳನ್ನು ನೀಡುವುದು,

3) ಫಸಲು ಬಿಡುತ್ತಿರುವ ಮರಗಳಿಗೆ (7 ವರ್ಷಕ್ಕೂ ಹೆಚ್ಚು ವಯಸ್ಸಿನ) ಪೊಟಾಶ್ 250 ಗ್ರಾಂ, 15:15:15 ಅಥವಾ 10:26:26 ಅಥವಾ DAP ಅಥವಾ 20:20 150 ಗ್ರಾಂ ಮತ್ತು ಜಿಂಕ್ ಸೆಟ್ ಮತ್ತು ಬೋರಾನ್ ಲಘು ಪೋಷಕಾಂಶಗಳು 20 ಗ್ರಾಂ ಗಿಡಕ್ಕೆ ಬುಡದಿಂದ 2 ಅಡಿ ದೂರದಲ್ಲಿ, ನೀಡಿ ಮಣ್ಣು ಮುಚ್ಚಬೇಕು,

ಇದನ್ನೂ ಓದಿ: ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆ ಮತ್ತು ಹಾವು ಕಡಿತಗಳಿಂದ ತಪ್ಪಿಸಿಕೊಳ್ಳುವುದೇಗೆ?

4) ಮಣಿಗೆ ಕೊಟ್ಟಿಗೆ ಗೊಬ್ಬರ/ಬೇವಿನಹಿಂಡಿ/ಕುರಿ ಗೊಬ್ಬರ/ಎರೆ ಹುಳು ಗೊಬ್ಬರ/ಸಾವಯವ ಗೊಬ್ಬರಗಳನ್ನು ಹಾಕಿ ಪಾತಿ ಮಾಡಿ ಮಣು ಮುಚ್ಚುವುದು,

5) ಮುಂಗಾರು ಋತು ಪ್ರಾರಂಭದಲ್ಲಿ ಎಲೆಚುಕ್ಕೆ ರೋಗಕ್ಕೆ ಬೋರ್ಡೋ ದ್ರಾವಣ ರಾಮಬಾಣವಾಗಿದ್ದು, ಪ್ರಾರಂಭದಲ್ಲಿಯೇ ಸಿಂಪರಿಸಬೇಕು.

6) ರೋಗದ ತೀವ್ರತೆ ಆಧಾರದ ಮೇಲೆ Tebuconazole 1 ml ಅಥವಾ Tebuconazole+ Trifloxystrobin 2 ml ಅಥವಾ Flupyram+Tebuconazole 1 ml Azoxystrobin+Tebuconazole 1ml Fluslozole +Corbondezim 2 ml ಅಥವಾ Pyrixostrobin+Metiram 1.59 ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು.

7) ಮಳೆಯ ತೀವ್ರತೆ ಮತ್ತು ರೋಗದ ತೀವ್ರತೆ ನೋಡಿಕೊಂಡು ಪ್ರತಿ 40-45 ದಿನಕೊಮ್ಮೆ ಸಿಂಪಡಿಸಬೇಕು,

Most Popular

Latest Articles

Related Articles