Kera suraksha insurance-ತೆಂಗಿನ ಮರ ಏರುವವರಿಗೆ ₹7 ಲಕ್ಷ ವಿಮಾ ಸೌಲಭ್ಯವನ್ನು ಪಡೆಯಲು ಅರ್ಜಿ!

January 20, 2025 | Siddesh
Kera suraksha insurance-ತೆಂಗಿನ ಮರ ಏರುವವರಿಗೆ ₹7 ಲಕ್ಷ ವಿಮಾ ಸೌಲಭ್ಯವನ್ನು ಪಡೆಯಲು ಅರ್ಜಿ!
Share Now:

ಕೇಂದ್ರ ಸರಕಾರದಿಂದ ತೆಂಗಿನ ಮರ ಏರುವವರಿಗೆ ವಿಮೆ ಸೌಲಭ್ಯ ಒದಗಿಸಲು "ಕೇರಾ ಸುರಕ್ಷಾ"(Kera suraksha insurance) ವಿಮಾ ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತಿದ್ದು, ಈ ಯೋಜನೆಯ ಕುರಿತು ಅನೇಕ ಜನರಿಗೆ ಮಾಹಿತಿ ಇಲ್ಲದೇ ಇರುವ ಕಾರಣ ಇದರ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಕೇಂದ್ರದ ತೆಂಗು ಅಭಿವೃದ್ದಿ ಮಂಡಳಿ ಮತ್ತು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಸಹಯೋಗದಲ್ಲಿ ಈ ವಿಮಾ ಯೋಜನೆಯನ್ನು(Kera Suraksha Insurance Application) ಅನುಷ್ಠಾನ ಮಾಡಲಾಗುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಯಾವ ಕ್ರಮ ಅನುಸರಿಸಬೇಕು? ಇತ್ಯಾದಿ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಅಪಾಯಕಾರಿ ಕೆಲಸದಲ್ಲಿ ತೊಡಗಿಕೊಂಡಿರುವವರಿಗೆ ಅರ್ಥಿಕವಾಗಿ ಸುರಕ್ಷತೆಯನ್ನು ಒದಗಿಸಲು ಅನೇಕ ವಿಮಾ ಯೋಜನೆಗಳು(Kera suraksha insurance yojana) ನಮ್ಮ ದೇಶದಲ್ಲಿ ಜಾರಿಯಲ್ಲಿವೆ ಇದೆ ಮಾದರಿಯಲ್ಲಿ ತೆಂಗಿನ ಮರ ಹತ್ತಿ ಕಾಯಿ ಕೆಡುವುದು, ನೀರಾ ಇಳಿಸುವುದು ಇತ್ಯಾದಿ ತೆಂಗಿನ ಮರ ಹತ್ತುವವುದರ ಪೂರಕ ವೃತ್ತಿಯಲ್ಲಿರುವವರಿಗೆ "ಕೇರಾ ಸುರಕ್ಷಾ" ವಿಮಾ ಯೋಜನೆಯಡಿ ₹7 ಲಕ್ಷ ದವರೆಗೆ ವಿಮೆಯನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Property rights-ಸುಪ್ರೀಂ ಕೋರ್ಟನಿಂದ ಮಹತ್ವದ ತೀರ್ಪು ಪ್ರಕಟ! ತಂದೆ-ತಾಯಿಯನ್ನು ನೋಡಿಕೊಳ್ಳದವರಿಗಿಲ್ಲ ಆಸ್ತಿ!

Who can apply for Kera suraksha insurance-ಈ ಯೋಜನೆಯಡಿ ಪ್ರಯೋಜನ ಪಡೆಯಲು ಅರ್ಹರು:

1) ತೆಂಗಿನ ಮರ ಹತ್ತುವವರು
2) ತೆಂಗಿನ ಕಾಯಿ ಕೀಳುವವರು
3) ನೀರಾ ತಂತ್ರಜ್ಞರು
4) ಕೃಷಿ ಕಾರ್ಮಿಕರು
5) ಅರ್ಜಿದಾರರ ವಯಸ್ಸು 18- 65 ರ ನಡುವೆ ಇರಬೇಕು.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು?

Kera suraksha insurance (3)

Kera suraksha insurance amount-ಕೇರಾ ಸುರಕ್ಷಾ ವಿಮಾ ಮೊತ್ತದ ವಿವರ:

ಅರ್ಜಿದಾರರ ಸಾವು/ಶಾಶ್ವತ ಅಂಗವೈಕಲ್ಯ ತುತ್ತಾದರೆ- ₹7 ಲಕ್ಷ

ಭಾಗಶಃ ಅಂಗವೈಕಲ್ಯಕ್ಕೆ ಒಳಗಾದಲ್ಲಿ- ₹3.5 ಲಕ್ಷ

ಅಸ್ಪತ್ರೆಯಿಂದ ಬಿಡುಗಡೆಯಾದ ನಂತರ 2 ತಿಂಗಳ ವರೆಗೆ ಔಷಧ ಒಳಗೊಂಡಂತೆ ಇನ್ನಿತರೆ ಅಸ್ಪತ್ರೆ ವೆಚ್ಚದ ಮರು ಪಾವತಿಗೆ- ₹2 ಲಕ್ಷ

ತಾತ್ಕಾಲಿಕ ಅಂಗವೈಲಕಲ್ಯದ ಸಮಯದಲ್ಲಿ ಗರಿಷ್ಟ 6 ವಾರದವರೆಗೆ ಪರಿಹಾರ ನೀಡಲು- ₹21,000

ಅಪಘಾತ ಅಥವಾ ಸಾವಿನ ಸಂದರ್ಭದಲ್ಲಿ ಅಂಬುಲೆನ್ಸ್ ಶುಲ್ಕ ಪಾವತಿಸಲು- ₹3,500

ಅಂತ್ಯಕ್ರಿಯೆ ವೆಚ್ಚ ಭರಿಸಲು ಸಹಾಯಧನ- ₹5,500

How to apply For kera suraksha insurance-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು:

ಆಸ್ತಕ ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗೆ ನೀಡಿರುವ ವೆಬ್ಸೈಟ್ ಲಿಂಕ್ ಅನ್ನು ಬಳಕೆ ಮಾಡಿಕೊಂಡು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲಾ ವಿವರವನ್ನು ಭರ್ತಿ ಮಾಡಿ "ನಿರ್ದೇಶಕರು, ತೆಂಗು ಅಭೀವೃದ್ದಿ ಮಂಡಳಿ, ಹುಳಿಮಾವು, ಬನ್ನೇರು ಘಟ್ಟ ರಸ್ತೆ, ಬೆಂಗಳೂರು-560076 ದೂರವಾಣಿ ಸಂಖ್ಯೆ: 080-26593750, 808-26593743" ಈ ವಿಳಾಸಕ್ಕೆ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Bus Pass-ವಿಕಲಚೇತನರಿಗೆ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ!

Application Form-ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ- Download Now

Kera suraksha insurance (3)

Documents-ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಆಧಾರ ಕಾರ್ಡ್ ಪ್ರತಿ
2) ಬ್ಯಾಂಕ್ ಪಾಸ್ ಬುಕ್
3) ಅರ್ಜಿದಾರರ ವಯಸ್ಸಿನ ಪುರಾವೆ ಪತ್ರ
4) ಪೋಟೋ
5) ಮೊಬೈಲ್ ನಂಬರ್

ರೈತರ ವಾರ್ಷಿಕ ವಂತಿಗೆ ಪಾವತಿಸಿದ ರಶೀದಿ (ವಾರ್ಷಿಕ ವಂತಿಗೆ ಅನ್ನು ಪಾವತಿಸಲು ಡಿಡಿ ಮೂಲಕ Coconut Development Board, payble at Cochin ಪಾವತಿಸಬಹುದು. ಅಥವಾ NEFT/BHIM/Phone pay/ Google Pay/ PayTM/ ಮೂಲಕ State Bank of India, Iyyatti In, Ernakulam Branch (Acc No. 41794101124, IFSC code: SBIN0070142 ಗೆ ಪಾವತಿಸಬೇಕು)

ಇದನ್ನೂ ಓದಿ: Cancelled ration card list-ಆಹಾರ ಇಲಾಖೆಯಿಂದ ರದ್ದಾದ ರೇಶನ್ ಕಾರ್ಡ ಪಟ್ಟಿ ಪ್ರಕಟ!

For More Information-ಇನ್ನು ಹೆಚ್ಚಿನ ಮಾಹಿತಿಗಾಗಿ-

Coconut board-ತೆಂಗು ಅಭಿವೃದ್ದಿ ಮಂಡಳಿ ಅಧಿಕೃತ ವೆಬ್ಸೈಟ್- CLICK HERE
Kera Suraksha Insurance Application-ಅರ್ಜಿ ನಮೂನೆ- DOWNLOAD NOW
Kera Suraksha Guidelines-ಯೋಜನೆಯ ಮಾರ್ಗಸೂಚಿ- DOWNLOAD NOW

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: