- Advertisment -
HomeAgricultureProperty rights-ಸುಪ್ರೀಂ ಕೋರ್ಟನಿಂದ ಮಹತ್ವದ ತೀರ್ಪು ಪ್ರಕಟ! ತಂದೆ-ತಾಯಿಯನ್ನು ನೋಡಿಕೊಳ್ಳದವರಿಗಿಲ್ಲ ಆಸ್ತಿ!

Property rights-ಸುಪ್ರೀಂ ಕೋರ್ಟನಿಂದ ಮಹತ್ವದ ತೀರ್ಪು ಪ್ರಕಟ! ತಂದೆ-ತಾಯಿಯನ್ನು ನೋಡಿಕೊಳ್ಳದವರಿಗಿಲ್ಲ ಆಸ್ತಿ!

ಇತ್ತೀಚಿನ ದಿನಗಳಲ್ಲಿ ವಯಸ್ಸಾದ ತಂದೆ-ತಾಯಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸುವವರ(Property rights) ಸಂಖ್ಯೆ ದಿನೇ ದಿನೇ ಏರುಗತಿಯಲ್ಲೇ ಸಾಗುತ್ತಿದ್ದು ಇದಕ್ಕೆ ಕೊಂಚ ಕಡಿವಾಣ ಹಾಕಲು ಸುಪ್ರೀಂ ಕೋರ್ಟನಿಂದ ಮಹತ್ವದ ತೀರ್ಪು ಪ್ರಕಟವಾಗಿದೆ.

ಆಧುನಿಕ ಜೀವನದಲ್ಲಿ ಸಂಬಂಧಗಳ ಬೆಲೆ ಮತ್ತು ಒಬ್ಬರ ಮೇಲೆ ಒಬ್ಬರ ವಾತ್ಸಲ್ಯ, ಪ್ರೀತಿ, ಕಾಳಜಿ ಕುಗ್ಗುತ್ತಿದ್ದು ಇದರ ಪರಿಣಾಮವಾಗಿ ವಯಸ್ಸಾದ ತಂದೆ-ತಾಯಿಗಳ ಪೋಷಣೆ ವಿಚಾರಕ್ಕೆ ಅನೇಕ ಪ್ರಕರಣಗಳನ್ನು ಕೋರ್ಟ ನಲ್ಲಿ(Supreme court) ದಾಖಲಾಗುತ್ತಿರುವುದನ್ನು ನಾವು ದಿನನಿತ್ಯ ಕಾಣುತ್ತಿದ್ದೇವೆ.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಬಳಸಿ ಯಾವೆಲ್ಲ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದು?

ಇದೇ ಮಾದರಿಯಲ್ಲಿ ತಂದೆ-ತಾಯಿಗಳ ಪೋಷಣೆ ವಿಷಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟನಲ್ಲಿ(Property rights transfer) ದಾಖಲಾದ ಪ್ರಕರಣ ಒಂದರ ತೀರ್ಪಿನಲ್ಲಿ ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳದ ಮಕ್ಕಳು ತಂದೆ-ತಾಯಿಯ ಆಸ್ತಿಯಲ್ಲಿ ಪಾಲಾ ಕೇಳುವ ಹಕ್ಕನ್ನು ಹೊಂದಿಲ್ಲ ಎಂದು ಮಹತ್ವದ ತೀರ್ಪನ್ನು ಪ್ರಕಟಿಸಿದೆ.

Property rights case-ಪ್ರಕರಣದ ಹಿನ್ನೆಲೆ:

ಸುಪ್ರೀಂ ಕೋರ್ಟ ನಲ್ಲಿ ದಾಖಲಾದ ಪ್ರಕರಣ ಒಂದರಲ್ಲಿ ಮಕ್ಕಳ ಹೆಸರಿಗೆ ತಂದೆ ಮತ್ತು ತಾಯಿಯ ಹೆಸರಿನಲ್ಲಿರುವ ಎಲ್ಲಾ ಆಸ್ತಿಗಳ ಮಾಲೀಕತ್ವವನ್ನು ವರ್ಗಾವಣೆ ಮಾಡಿದ ಬಳಿಕ ಆ ಮಕ್ಕಳು ತಮ್ಮ ತಂದೆ-ತಾಯಿಯನ್ನು ನೋಡಿಕೊಳ್ಳಲು ಹಿಂದೇಟು ಹಾಕಲು ಆರಂಭಿಸಿದರು ಈ ಕುರಿತು ಪೋಷಕರು ಪ್ರಕರಣವನ್ನು ದಾಖಲಿಸಿದ್ದು ಈ ಪ್ರಕರಣ ತೀರ್ಪು ಅನ್ನು ಸುಪ್ರೀಂ ಕೋರ್ಟ ಈ ಕೆಳಗಿನಂತೆ ಪ್ರಕಟಿಸಿದೆ.

ಮಕ್ಕಳು ತಮ್ಮ ಹೆತ್ತವರನ್ನು ನೋಡಿಕೊಳ್ಳಲು ವಿಫಲವಾದರೆ, ಪೋಷಕರು ಮತ್ತು “ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯಡಿ” ಪೋಷಕರು ನೀಡಿದ ಆಸ್ತಿ ಮತ್ತು ಉಡುಗೊರೆಗಳನ್ನು “ಮರಳಿ ಪಡೆಯಬಹುದು” ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪು ಅನ್ನು ಪ್ರಕಟಿಸಿದ್ದು “ಆಸ್ತಿಯ ವರ್ಗಾವಣೆಯನ್ನು ಅನೂರ್ಜಿತವೆಂದು ಘೋಷಿಸಲಾಗುವುದು” ಎಂದು ನ್ಯಾಯಾಲಯವು ಈ ಪ್ರಕರಣದಲ್ಲಿ ತನ್ನ ಅಬಿಪ್ರಾಯವನ್ನು ತಿಳಿಸಿದೆ.

ಇದನ್ನೂ ಓದಿ: Bus Pass-ವಿಕಲಚೇತನರಿಗೆ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ!

Supreme court

ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರ ನ್ಯಾಯಪೀಠವು ಅವಿಭಕ್ತ ಕುಟುಂಬ ವ್ಯವಸ್ಥೆಯನ್ನು ರದ್ದುಪಡಿಸಿದ ನಂತರ ಒಂಟಿಯಾಗಿ ಉಳಿದಿರುವ ವೃದ್ಧರಿಗೆ ಸಹಾಯ ಮಾಡಲು ಈ ಕಾಯ್ದೆ ಪ್ರಯೋಜನಕಾರಿ ಶಾಸನವಾಗಿದೆ ಎಂದು ತಿಳಿಸಿದರು.

ವಯಸ್ಸಾದ ತಂದೆ-ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳದೇ ಪೋಷಣೆ ಮಾಡಲು ಹಿಂದೇಟು ಹಾಕುವ ಮಕ್ಕಳಿಗೆ ಆಸ್ತಿ ಮತ್ತು ಉಡುಗೊರೆಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಇದನ್ನೂ ಓದಿ: Cancelled ration card list-ಆಹಾರ ಇಲಾಖೆಯಿಂದ ರದ್ದಾದ ರೇಶನ್ ಕಾರ್ಡ ಪಟ್ಟಿ ಪ್ರಕಟ!

Supreme court Property rights case-ಕಾನೂನಿನಲ್ಲಿ ಏನು ಹೇಳಲಾಗುತ್ತದೆ:

ಕಾನೂನಿನ ಉದ್ದೇಶವನ್ನು ಸಾಧಿಸಲು ಉದಾರ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕಾದಾಗ, ಮಧ್ಯಪ್ರದೇಶ ಹೈಕೋರ್ಟ್ ಕಾನೂನಿನ ಬಗ್ಗೆ “ಕಠಿಣ ದೃಷ್ಟಿಕೋನ” ತೆಗೆದುಕೊಂಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಾಯ್ದೆಯ ಸೆಕ್ಷನ್ 23 ರ ಪ್ರಕಾರ, ಈ ಕಾಯ್ದೆ ಪ್ರಾರಂಭವಾದ ನಂತರ, ಯಾವುದೇ ಹಿರಿಯ ನಾಗರಿಕರು ತಮ್ಮ ಆಸ್ತಿ ಅಥವಾ ಉಡುಗೊರೆಗಳನ್ನು ತಮ್ಮ ಮಕ್ಕಳಿಗೆ ವರ್ಗಾಯಿಸಿದರೆ, ಅವರು ಅವರನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ, ಅವರ ಅಗತ್ಯಗಳನ್ನು ಪೂರೈಸುತ್ತಾರೆ ಮತ್ತು ಅವರು ಹಾಗೆ ಮಾಡಲು ವಿಫಲವಾದರೆ, ಅವರ ಆಸ್ತಿಯ ವರ್ಗಾವಣೆಯನ್ನು ಅನೂರ್ಜಿತವೆಂದು ಘೋಷಿಸಲಾಗುತ್ತದೆ. ಅಲ್ಲದೆ, ಅಂತಹ ಸಂದರ್ಭದಲ್ಲಿ, ಆಸ್ತಿ ವರ್ಗಾವಣೆಯನ್ನು ಮೋಸದಿಂದ ಅಥವಾ ಬಲವಂತದಿಂದ ಅಥವಾ ಅನಗತ್ಯ ಪ್ರಭಾವದಿಂದ ಮಾಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: MRI Scan-ಸರಕಾರದಿಂದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ! ಈ ಕಾರ್ಡ ಇದ್ದರೆ ಎಂಆರ್​ಐ ಸ್ಕ್ಯಾನ್ ಉಚಿತ!

Supreme court-ಮತ್ತೊಂದು ಪ್ರಕರಣ ವಿವರ ಹೀಗಿದೆ:

ಕಳೆದ ತಿಂಗಳಲ್ಲಿ ನ್ಯಾಯಾಲಯದಲ್ಲಿ ವೃದ್ಧ ಮಹಿಳೆಯೊಬ್ಬರು ನನ್ನ ಹೆಸರಿನಲ್ಲಿರುವ ಎಲ್ಲಾ ಆಸ್ತಿಯನ್ನು ನನ್ನ ಮಗನ ಹೆಸರಿಗೆ ವರ್ಗಾವಣೆ ಮಾಡಿದ ಬಳಿಕ ಮಗ ನನ್ನನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರನ್ನು ದಾಖಲಿಸಲು ಬಂದಿದ್ದರು ಈ ದೂರಿನ ಅರ್ಜಿಯನ್ನು ನ್ಯಾಯಾಲಯವು ಸ್ವೀಕರಿಸಿ ಅರ್ಜಿಯ ವಿಚಾರಣೆಯನ್ನು ಕೈಗೊಳ್ಳುತ್ತಿದೆ.

Property rights transfer-ಮಕ್ಕಳ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಲು ಅವಸರ ಮಾಡಿಕೊಳ್ಳಬೇಡಿ:

ಪ್ರಸ್ತುತ ಜೀವನ ಶೈಲಿಯಲ್ಲಿ ಎಲ್ಲಾ ಪೋಷಕರಿಗೆ ಒಂದು ಕಿವಿ ಮಾತು ಮಕ್ಕಳು ವಯಸ್ಸಿಗೆ ಬಂದ ಬಳಿಕ ಕೂಡಲೇ ಅವರ ಹೆಸರಿಗೆ ತಮ್ಮ ಎಲ್ಲಾ ಆಸ್ತಿಯ ಮಾಲೀಕತ್ವವನ್ನು ವರ್ಗಾವಣೆ ಮಾಡಬೇಡಿ ಮಾಡಲೇ ಬೇಕಾದ ಸನ್ನಿವೇಶ ಬಂದಲ್ಲಿ ಅಲ್ಪ ಸ್ವಲ್ಪ ಆಸ್ತಿಯನ್ನು ತಮ್ಮ ಹೆಸರಿನಲ್ಲಿ ಇರುವಂತೆ ನೋಡಿಕೊಂಡು ಬಳಿಕ ಮಾಲೀಕತ್ವ ವನ್ನು ವರ್ಗಾವಣೆ ಮಾಡುವುದು ಉತ್ತಮ ಆಯ್ಕೆಯಾಗಿದೆ.

- Advertisment -
LATEST ARTICLES

Related Articles

- Advertisment -

Most Popular

- Advertisment -