PM-Kisan 2026: ಪಿಎಂ ಕಿಸಾನ್ ಯೋಜನೆ 6 ಲಕ್ಷ ರೈತರಿಗೆ ₹6,000 ನೆರವು ಮಿಸ್!

November 29, 2026 | Siddesh
PM-Kisan 2026: ಪಿಎಂ ಕಿಸಾನ್ ಯೋಜನೆ 6 ಲಕ್ಷ ರೈತರಿಗೆ ₹6,000 ನೆರವು ಮಿಸ್!
Share Now:

ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ(PM-Kisan Latest News) ರೈತರಿಗೆ ನೀಡಲಾಗುವ ಆರ್ಥಿಕ ನೆರವಿನಿಂದ ರಾಜ್ಯದ ಸುಮಾರು 6 ಲಕ್ಷ ರೈತರು ವಂಚಿತರಾಗುವ ಸಾಧ್ಯತೆ ಎದುರಾಗಿದೆ. ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕೃಷಿ ಇಲಾಕೆಯ ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.

ನಮ್ಮ ದೇಶದಲ್ಲಿ ಕೃಷಿಕರಿಗೆ ಬಿತ್ತನೆ ಬೀಜ,ಗೊಬ್ಬರ ಖರೀದಿಗೆ ಕೊಂಚ ಮಟ್ಟಿಗೆ ಆರ್ಥಿಕ ನೆರವನ್ನು ಒದಗಿಸಲು ಕೇಂದ್ರ ಸರ್ಕಾರದಿಂದ 2019ರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು(PM-Kisan Yojana) ಜಾರಿಗೆ ತರಲಾಗಿತ್ತು ಈ ನಿಟ್ಟಿನಲ್ಲಿ ಪ್ರಸ್ತುತ ಈ ಯೋಜನೆಯಡಿ ಆರ್ಥಿಕ ನೆರವು ಪಡೆಯುತ್ತಿರುವ ಎಲ್ಲಾ ರೈತರು ತಮ್ಮ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಇ-ಕೆವೈಸಿ ಮಾಡಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದ್ದು ಇಲ್ಲಿಯವರೆಗೆ 43 ಲಕ್ಷ ರೈತರು ಕೆವೈಸಿಯನ್ನು ಪೂರ್ಣಗೊಳಿಸಿದ್ದು ಇನ್ನು 6 ಲಕ್ಷ ರೈತರು ಕೆವೈಸಿಯನ್ನು ಮಾಡಿಕೊಂಡಿರುವುದಿಲ್ಲ.

ಇದನ್ನೂ ಓದಿ: Pumpset Repair Training-ಉಚಿತ ಮೋಟಾರ್ ರಿವೈಂಡಿಂಗ್ ಮತ್ತು ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

ಇ-ಕೆವೈಸಿ ಮಾಡಿಕೊಳ್ಳದ ರೈತರಿಗೆ ಇನ್ನು ಮುಂದೆ ಪಿಎಂ ಕಿಸಾನ್ ಯೋಜನೆಯ ಹಣ ಸ್ಥಗಿತಗೊಳ್ಳಲಿದೆ(PM-Kisan Scheme In Karnataka) ಎಂದು ಇಲಾಕೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದು ಅದ್ದರಿಂದ ಈ ಲೇಖನದಲ್ಲಿ ತಿಳಿಸಿರುವ ಸಂಪೂರ್ಣ ಮಾಹಿತಿಯನ್ನು ತಿಳಿದು ಇಲ್ಲಿಯವರೆಗೆ ಅನಗತ್ಯ ಕಾರಣಗಳಿಂದ ಕೆವೈಸಿಯನ್ನು ಮಾಡಿಕೊಳ್ಳದ ರೈತರು ಕೂಡಲೇ ಇ-ಕೈವಸಿಯನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

PM-Kisan Amount-ಒಟ್ಟು ಮೂರು ಕಂತುಗಳಲ್ಲಿ ರೈತರ ಖಾತೆಗೆ ಪಿಎಂ ಕಿಸಾನ್ ಹಣ:

ಕೇಂದ್ರ ಸರಕಾರದಿಂದ ದೇಶದ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯ ಮೂಲಕ ಪ್ರತಿ ಕಂತಿಗೆ ರೂ 2,000/- ದಂತೆ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ಒಂದು ವರ್ಷದಲ್ಲಿ ರೂ 6,000/- ಆರ್ಥಿಕ ನೆರವನ್ನು ನೀಡಲಾಗುತ್ತದೆ. ಆದರೆ ಯೋಜನೆಯ ಹಣ ಪಡೆಯಲು ರೈತರು ಅಗತ್ಯ ದಾಖಲೆಗಳು ಹಾಗೂ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಮುಖ್ಯವಾಗಿದೆ. ಇ-ಕೆವೈಸಿ ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿರುವ ರೈತರಿಗೆ ಯೋಜನೆಯ ಹಣ ಸಿಗುವಲ್ಲಿ ಸಮಸ್ಯೆಯಾಗಲಿದೆ.

ಇದನ್ನೂ ಓದಿ: Bara Parihara List-ಬರ ಪರಿಹಾರ ರೈತರ ಪಟ್ಟಿ ಬಿಡುಗಡೆ! ನಿಮ್ಮ ಹೆಸರಿದೆಯೇ ಎಂದು ಮೊಬೈಲ್‌ನಲ್ಲೇ ಪರಿಶೀಲಿಸಿ!

PM-Kisan e-KYC Details-43 ಲಕ್ಷ ರೈತರ ಕೆವೈಸಿ ಮಾತ್ರ ಪೂರ್ಣ:

ಪ್ರಸ್ತುತ ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಈವರೆಗೆ ಸುಮಾರು 43 ಲಕ್ಷ ರೈತರು ಇ-ಕೆವೈಸಿಯನ್ನು ಪೂರ್ಣಗೊಳಿಸಲಾಗಿದೆ ಎಂದು ವರದಿಯಲ್ಲಿ ಮಾಹಿತಿ ಲಭ್ಯವಿದ್ದು, ಇನ್ನೂ ಹಲವು ರೈತರು ಯೋಜನೆಯ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ.

ಹೀಗಾಗಿ ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಅರ್ಹರಾಗಿರುವ ರೈತರು ತಮ್ಮ ಇ-ಕೆವೈಸಿ, ಬ್ಯಾಂಕ್ ಖಾತೆ ಹಾಗೂ ಇತರ ಅಗತ್ಯ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ.

PM-Kisan e-KYC: ಪಿಎಂ ಕಿಸಾನ್ ಇ-ಕೆವೈಸಿ ಅಂಕ-ಅಂಶ ಹೀಗಿದೆ:

ರಾಜ್ಯದಲ್ಲಿ ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರ ಅಂಕಿ-ಅಂಶ ವಿವರ:

  • ಒಟ್ಟು ಪಿಎಂ ಕಿಸಾನ್ ಯೋಜನೆಗೆ ಅರ್ಜಿದಾರರು- 48,97,000
  • ಇ-ಕೆವೈಸಿ ಪೂರ್ಣಗೊಳಿಸಿದ ರೈತರು- 3,71,394
  • ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದ ರೈತರ ಸಂಖ್ಯೆ- 2,25,691
  • ಒಟ್ಟು ಬಾಕಿ ರೈತರ ಸಂಖ್ಯೆ- 5,97,085

ಇದನ್ನೂ ಓದಿ: Agriculture Machinery Subsidy-ಪವರ್ ಸ್ಪ್ರ‍ೇಯರ್, ಪಂಪ್ ಸೆಟ್ ಸೇರಿದಂತೆ ವಿವಿಧ ಉಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಅರ್ಜಿ ಆಹ್ವಾನ!

What should farmers do-ರೈತರು ಏನು ಮಾಡಬೇಕು?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿರುವ ರೈತರು ತಮ್ಮ ನೋಂದಣಿ ಸ್ಥಿತಿ ಹಾಗೂ ಇ-ಕೆವೈಸಿ ಪೂರ್ಣಗೊಂಡಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ವಿವರಗಳಲ್ಲಿ ಯಾವುದೇ ತಪ್ಪು ಅಥವಾ ಬಾಕಿ ಪ್ರಕ್ರಿಯೆ ಇದ್ದರೆ, ಸಂಬಂಧಪಟ್ಟ ಕೃಷಿ ಇಲಾಖೆ ಅಧಿಕಾರಿಗಳು ಅಥವಾ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಕೂಡಲೇ ನೇರವಾಗಿ ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಿ.

₹6,000 ನೆರವು ಕೈತಪ್ಪದಂತೆ ಅರ್ಹ ರೈತರು ತಮ್ಮ ದಾಖಲೆಗಳು ಮತ್ತು ಇ-ಕೆವೈಸಿ ಪ್ರಕ್ರಿಯೆಯನ್ನು ಪರಿಶೀಲಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.

ಇದನ್ನೂ ಓದಿ: Free Sewing Machine-ವಿಶ್ವಕರ್ಮ ನಿಗಮದಿಂದ ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ! ಮಹಿಳೆಯರಿಗೆ ಸುವರ್ಣಾವಕಾಶ!

How To Check PM-Kisan e-KYC Status-ಇ-ಕೆವೈಸಿ ಅಗಿರುವುದುನ್ನು ಖಚಿತಪಡಿಸಿಕೊಳ್ಳುವುದು ಹೇಗೆ?

ರೈತರು ತಮ್ಮ ಮೊಬೈಲ್ ಮೂಲಕ ಕೆಳಗಿನ ವಿಧಾನವನ್ನು ಅನುಸರಿಸಿ ಪಿಎಂ ಕಿಸಾಸ್ ಯೋಜನೆ ಅರ್ಜಿಯ ಇ-ಕೆವೈಸಿ ಅಗಿದಿಯೋ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಬಹುದು. ಒಟ್ಟು ಎರಡು ವಿಧಾನವನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು:

ವಿಧಾನ-1(PM-Kisan Website):

ಮೊದಲಿಗೆ ಈ PM-Kisan Website Link ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಪಿಎಂ ಕಿಸಾನ್ ಜಾಲತಾಣವನ್ನು ಪ್ರವೇಶ ಮಾಡಿ ಮುಖಪುಟದಲ್ಲಿ ಕಾಣಿಸುವ Know Your Status ಬಟನ್ ಮೇಲೆ ಕ್ಲಿಕ್ ಮಾಡಿ ನೋಂದಣಿ ಸಂಖ್ಯೆ ಮತ್ತು ಮೊಬೈಲ್ ನಂಬರ್ ಗೆ ಬರುವ OTP ಅನ್ನು ಹಾಕಿ ಸ್ಟೇಟಸ್ ಚೆಕ್ ಮಾಡಿದಾಗ e-kyc ಕಾಲಂ ನಲ್ಲಿ Yes ಎಂದು ಬಂದರೆ ಕೆವೈಸಿ ಅಗಿದೆ ಎಂದು No ಎಂದು ತೋರಿಸಿದರೆ ಕೆವೈಸಿ ಅಗಿಲ್ಲ ಎಂದು ಅರ್ಥ.

ನಿಮ್ಮ ಪಿಎಂ ಕಿಸಾನ್ ಅರ್ಜಿಯ ನೋಂದಣಿ ಸಂಖ್ಯೆಯನ್ನು ತಿಳಿಯಲು ಇದೆ ಜಾಲತಾಣದಲ್ಲಿರುವ Know Your Registration Number ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.

ಇದನ್ನೂ ಓದಿ: Salon Subsidy Scheme: ಸವಿತಾ ಸಮಾಜ ನಿಗಮದಿಂದ ಸಲೂನ್ ಆರಂಭಿಲು ₹10 ಲಕ್ಷ ಆರ್ಥಿಕ ನೆರವು!

ವಿಧಾನ-2(PM-kisan Mobile App):

ರೈತರು ಈ PM-kisan Mobile App Download Link ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ PM-kisan ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಆಧಾರ್ ಸಂಖ್ಯೆ ಮತ್ತು ಒಟಿಪಿ ಅನ್ನು ನಮೂದಿಸಿ ಇ-ಕೆವೈಸಿ ಅಗಿರುವುದನ್ನು ಖಚಿತಪಡಿಸಿಕೊಂಡು ಒಂದು ವೇಳೆ ಇ-ಕೆವೈಸಿ ಅಗಿದಲೇ ಇದ್ದಲ್ಲಿ Face Authentication ಮೂಲಕ ಫಲಾನುಭವಿ ಪೋಟೋ ತೆಗೆದು ಇ-ಕೆವೈಸಿಯನ್ನು ಪೂರ್ಣಗೊಳಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: