KPSC ಯಿಂದ ವಿವಿಧ ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ!

March 28, 2025 | Siddesh
KPSC ಯಿಂದ ವಿವಿಧ ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ!
Share Now:

ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ(KPSC )ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಕರ್ನಾಟಕ ಲೋಕಸೇವಾ ಅಧಿಸೂಚಿಸಿರುವ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ-1122 ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು 2023 ಜನವರಿ 09 ರಂದು ಹಾಗೂ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು(KPSC latest selection news)2023 ಮಾರ್ಚ್ 14 ರಂದು ಮತ್ತು ಹೆಚ್ಚುವರಿ ಪಟ್ಟಿಯನ್ನು 2023 ಮೇ 5 ರಂದು ಹಾಗೂ 2024 ಜೂನ್ 11 ರಂದು ಮೊದಲ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ.

ಇದನ್ನೂ ಓದಿ: Holige tarabeti- ಟೈಲರಿಂಗ್ ಕಲಿಯಲು ಆಸಕ್ತಿಯಿರುವವರಿಗೆ ಭರ್ಜರಿ ಸಿಹಿ ಸುದ್ದಿ!

ಪ್ರಸ್ತುತ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಗಾಗಿ 11 ಇಲಾಖೆಗಳಿಂದ ಸ್ವೀಕೃತವಾದ ಪ್ರಸ್ತಾವನೆಯ ಕಾಲಾನುಕ್ರಮದನುಸಾರ 134 ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿಯನ್ನು(KPSC job selection list) ಹಾಗೂ ಕಟ್‍ಆಫ್ ಅಂಕಗಳ ಪಟ್ಟಿಯನ್ನು ಸಿದ್ಧಪಡಿಸಿ ಮಾರ್ಚ್ 25 ರಂದು ಆಯೋಗದ ವೆಬ್ ಸೈಟ್ http://kpsc.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KPSC Selection List-ಯಾವೆಲ್ಲ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಗೊಳಿಸಲಾಗಿದೆ?

ಕರ್ನಾಟಕ ಲೋಕಸೇವಾ ಆಯೋಗದಿಂದ ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ- 134 ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿ ಅನ್ನು ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಇದಲ್ಲದೇ ಇನ್ನು ಅನೇಕ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಈ ಜಾಲತಾಣದಲ್ಲಿ ಪ್ರಕಟಿಸಲಾಗಿರುತ್ತದೆ ಅಭ್ಯರ್ಥಿಗಳು ಈ ಮಾಹಿತಿಯನ್ನು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Anganwadi Recruitment-ಅಂಗನವಾಡಿ ಕೇಂದ್ರದಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!

KPSC job Selection List

Selection List Link-ಹೆಚ್ಚುವರಿ ಆಯ್ಕೆಪಟ್ಟಿಯನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನ:

ಅಭ್ಯರ್ಥಿಗಳು KPSC ಯಿಂದ ಪ್ರಸ್ತುತ ಪ್ರಕಟಗೊಳಿಸಿರುವ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿ ಅನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ Selection List ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಕರ್ನಾಟಕ ಲೋಕಸೇವಾ ಆಯೋಗದ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: E-Swathu-ಗ್ರಾಮ ಪಂಚಾಯತಿಯಲ್ಲಿ ಇ-ಸ್ವತ್ತು ವಿತರಣೆಗೆ ಕುರಿತು ನೂತನ ಕ್ರಮ!

KPSC Selection List

Step-2: ಇದಾದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣುವ "ಪಟ್ಟಿಗಳು" ಬಟನ್ ಮೇಲೆ ಕ್ಲಿಕ್ ಮಾಡಿ "ಆಯ್ಕೆ ಪಟ್ಟಿ" ಬಟನ್ ಮೇಲೆ ಒತ್ತಿ ಕೊನೆಯಲ್ಲಿ ಕಾಣುವ "ಹೆಚ್ಚುವರಿ ಪಟ್ಟಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ಈ ಪೇಜ್ ನಲ್ಲಿ "SECOND ADDITIONAL SELECT LIST FOR THE POST OF SECOND division assistant RPC - 2019" ಈ ರೀತಿ ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಧಿಕೃತ ಆಯ್ಕೆಪಟ್ಟಿಯ PDF ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: