Free Computer Training-ಉಚಿತ ವಸತಿಸಹಿತ 45 ದಿನಗಳ ಕಂಪ್ಯೂಟರ್ ಡಿ.ಟಿ.ಪಿ ತರಬೇತಿಗೆ ಅರ್ಜಿ ಆಹ್ವಾನ!

May 7, 2025 | Siddesh
Free Computer Training-ಉಚಿತ ವಸತಿಸಹಿತ 45 ದಿನಗಳ ಕಂಪ್ಯೂಟರ್ ಡಿ.ಟಿ.ಪಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರದಿಂದ ಕಂಪ್ಯೂಟರ್ ಡಿಟಿಪಿ(Computer Training) ಕ್ಷೇತ್ರದಲ್ಲಿ ಕೌಶಲ್ಯವನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಉಚಿತವಾಗಿ ವಸತಿಸಹಿತ ಒಟ್ಟು 45 ದಿನಗಳ ಕಂಪ್ಯೂಟರ್ ಡಿ.ಟಿ.ಪಿ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಬಳಕೆ ಮಾಡುವ ಕ್ಷೇತ್ರವು ದಿನೇ ದಿನೇ ಹೆಚ್ಚುತ್ತಿದ್ದು ಈ ಕ್ಷೇತ್ರದಲ್ಲಿ ಕೌಶಲ್ಯವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚು ಬೇಡಿಕೆಯು ಸಹ ಇರುತ್ತದೆ ಇದಕ್ಕಾಗಿ ತರಬೇತಿಯನ್ನು(Computer DTP Training) ಪಡೆಯಲು ಆಸಕ್ತರಿಗೆ ಇದು ಸುವರ್ಣಾವಕಾಶವಾಗಿದೆ.

ಇದನ್ನೂ ಓದಿ: Gruhalakshmi Pending Amount-ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ವರ್ಗಾವಣೆಗೆ ಡೇಟ್ ಫಿಕ್ಸ್!

ಈ ತರಬೇತಿಯನ್ನು(Computer Training Application ಎಲ್ಲಿ ನಡೆಸಲಾಗುತ್ತದೆ? ತರಬೇತಿ ಆರಂಭ ದಿನಾಂಕ, ಅರ್ಜಿಯನ್ನು ಸಲ್ಲಿಸುವ ವಿಧಾನ ಮತ್ತು ಯಾರೆಲ್ಲ ಅರ್ಜಿ ಸಲ್ಲಿಸಿ ಈ ತರಬೇತಿಯನ್ನು ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Free Computer Training- ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

(1) ತರಬೇತಿಯಲ್ಲಿ ಭಾಗವಹಿಸಲು ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು. 

(2) ಅರ್ಜಿದಾರರಿಗೆ ಕನ್ನಡ ಬಾಷೆಯನ್ನು ಓದಲು ಮತ್ತು ಬರೆಯಲು ಬರುವುದು ಕಡ್ಡಾಯವಾಗಿರುತ್ತದೆ. 

(3) ಅರ್ಜಿದಾರ ಅಭ್ಯರ್ಥಿಯು ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಬಿ.ಪಿ.ಎಲ್ ಕಾರ್ಡ ಹೊಂದಿರುವ ಅರ್ಜಿದಾರರಿಗೆ ತರಬೇತಿಯಲ್ಲಿ ಪಾಲ್ಗೊಳಲು ಪ್ರಥಮ ಅದ್ಯತೆಯನ್ನು ನೀಡಲಾಗುತ್ತದೆ ಎಂದು ತರಬೇತಿ ನೀಡುವ ಸಂಸ್ಥೆಯು ಪ್ರಕಟಣೆಯಲ್ಲಿ ಸೂಚಿಸಲಾಗಿದೆ..

(4) ತರಬೇತಿ ಪೂರ್ಣಗೊಳಿಸಿದ ನಂತರ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.

(5) ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಇದನ್ನೂ ಓದಿ: Horticulture Training-ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ! ರೂ 1,750/- ಮಾಸಿಕ ಶಿಷ್ಯವೇತನ!

Free Computer Training

Computer Training-ಸಂಪೂರ್ಣ ಉಚಿತ ತರಬೇತಿ:

ದಿನದ ಕಂಪ್ಯೂಟರ್ ಡಿಟಿಪಿ ತರಬೇತಿಯು ಸಂಪೂರ್ಣವಾಗಿ ಉಚಿತವಾಗಿದ್ದು ಯಾವುದೇ ರೀತಿಯ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ, ಅರ್ಜಿದಾರರು ತರಬೇತಿ ವಾಸ್ತವ್ಯ ಮಾಡಲು ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ತರಬೇತಿ ಕೇಂದ್ರದಿಂದಲೇ ನೀಡಲಾಗುತ್ತದೆ.

Free Computer Training Application-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿದಾರರು ತರಬೇತಿಯ ಪಡೆಯಲು ಅರ್ಜಿ ಸಲ್ಲಿಸಲು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು ಒಂದು ಆನ್ಲೈನ್ ಮೂಲಕ ಈ ಲೇಖನದ ಕೊನೆಯಲ್ಲಿ ಹಾಕಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ವಿವರ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು ಎರಡನೇ ವಿಧಾನ ಅರ್ಜಿದಾರರು ನೇರವಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ತರಬೇತಿ ಪ್ರಾರಂಭವಾಗುವ ದಿನ ಹಾಜರಾಗಬಹುದು ಅಥವಾ ಮುಂಚಿತವಾಗಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಈ ಮೊಬೈಲ್ 9449860007, 9538281989, 9916783825, 888044612 ಸಂಖ್ಯೆಗಳಿಗೆ ಸಂಪರ್ಕಿಸಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.

ಇದನ್ನೂ ಓದಿ: Morarji College Admission-ಉಚಿತ ಮೊರಾರ್ಜಿ ಪಿಯು ವಸತಿ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ!

Free Computer Training Duration-ತರಬೇತಿ ಅವಧಿ:

ಉಚಿತ ಕಂಪ್ಯೂಟರ್ ಡಿ.ಟಿ.ಪಿ ತರಬೇತಿಯು ದಿನಾಂಕ 08 ಮೇ 2025 ರಿಂದ ಆರಂಭವಾಗಿ ದಿನಾಂಕ 18 ಜೂನ್ 2025ಕ್ಕೆ ಮುಕ್ತಾಯವಾಗಲಿದ್ದು, ಒಟ್ಟು 45 ದಿನಗಳ ತರಬೇತಿಯು ಇದಾಗಿರುತ್ತದೆ.

Required documents for Training - ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಅಭ್ಯರ್ಥಿಯ ಅಧಾರ್ ಕಾರ್ಡ ಪ್ರತಿ.
  • ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ರೇಶನ್ ಕಾರ್ಡ ಪ್ರತಿ.
  • ಮೊಬೈಲ್ ಸಂಖ್ಯೆ.

ಇದನ್ನೂ ಓದಿ: Free Residential School-ಉಚಿತ ವಸತಿ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ!

Free Computer Training Details-ಈ ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ತಿಳಿಸಲಾಗುತ್ತದೆ?

ಉಚಿತ ಕಂಪ್ಯೂಟರ್ ತರಬೇತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೋರೆಲ್ ಡ್ರಾ, ಫೋಟೋಶಾಪ್, ಪೇಜ್ ಮೇಕರ್ ಮತ್ತು ಬೇಸಿಕ್ ಕಂಪ್ಯೂಟರ್ ಕುರಿತು ಸಂಪೂರ್ಣ ಮಾಹಿತಿಯನ್ನು ಕಲಿಸಲಾಗುತ್ತದೆ.

Computer Training Center Address-ತರಬೇತಿ ನಡೆಯುವ ಸ್ಥಳ:

ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343, ಹೆಚ್ಚಿನ ಮಾಹಿತಿಗಾಗಿ: 9449860007, 9538281989, 9916783825, 888044612

ಇದನ್ನೂ ಓದಿ: Raagi Kharidi-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಯಲ್ಲಿ ಮಹತ್ವದ ಬದಲಾವಣೆ!

Online Application Link For Computer Training-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಪ್ರಥಮದಲ್ಲಿ ಈ Apply Now ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇದರಲ್ಲಿ ನಿಮ್ಮ ಹೆಸರು, ಇಮೇಲ್, ತಂದೆಯ ಹೆಸರು, ಮೊಬೈಲ್ ಸಂಖ್ಯೆ,  ಇತರೆ ವಿವರವನ್ನು ಭರ್ತಿ ಮಾಡಿ ಕೊನೆಯ ಕಾಲಂ ನಲ್ಲಿ ತರಬೇತಿಯನ್ನು ಆಯ್ಕೆ ಮಾಡಿಕೊಂಡು ಕೊನೆಯಲ್ಲಿ ಕೆಳಗೆ ಕಾಣುವ "Submit" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: