NLM Scheme-ಜಾನುವಾರು ಮಿಷನ್ ಯೋಜನೆಯಡಿ ಕುರಿ ಮೇಕೆ ಕೋಳಿ ಸಾಕಾಣಿಕೆಗೆ ₹ 25.00 ಲಕ್ಷ ಸಬ್ಸಿಡಿ!

June 28, 2025 | Siddesh
NLM Scheme-ಜಾನುವಾರು ಮಿಷನ್ ಯೋಜನೆಯಡಿ ಕುರಿ ಮೇಕೆ ಕೋಳಿ ಸಾಕಾಣಿಕೆಗೆ ₹ 25.00 ಲಕ್ಷ ಸಬ್ಸಿಡಿ!
Share Now:

ರಾಷ್ಟ್ರೀಯ ಜಾನುವಾರು ಮಿಷನ್(NLM Scheme) ಯೋಜನೆಯಡಿ ಕುರಿ(Sheep farming)ಮೇಕೆ,ಕೋಳಿ(Poultry farming),ಹಂದಿ ಸಾಕಾಣಿಕೆ ಹಾಗೂ ರಸಮೇವು ಉತ್ಪಾದನಾ(Silage making machine)ಘಟಕ ಸ್ಥಾಪನೆ ಮಾಡಲು ಶೇ 50% ರಷ್ಟು ಸಬ್ಸಿಡಿಯನ್ನು ಪಡೆಯಲು ಅವಕಾಶವಿದ್ದು ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯುವುದು ಹೇಗೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಸ್ವಂತ ಉದ್ದಿಮೆಯನ್ನು ಆರಂಭಿಸಲು ಬಹುತೇಕ ಜನರಿಗೆ ಸಹಾಯಧನವನ್ನು ಪಡೆಯುವುದು(Sheep farming ) ಹೇಗೆ ಹಾಗೂ ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಯಾವ ಇಲಾಖೆಯನ್ನು ಸಂಪರ್ಕ ಮಾಡಬೇಕು ಎನ್ನುವ ಮಾಹಿತಿ ಹಾಗೂ ಇದರ ಕುರಿತು ಮಾರ್ಗದರ್ಶನದ ಕೊರತೆ ಇರುತ್ತದೆ ಈ ನಿಟ್ಟಿನಲ್ಲಿ ಕುರಿ,ಮೇಕೆ,ಕೋಳಿ(Poultry farm subsidy Schemes)ಹಂದಿ ಸಾಕಾಣಿಕೆ ಹಾಗೂ ರಸಮೇವು ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಪ್ರಸ್ತುತ ಲಭ್ಯವಿರುವ ಸಬ್ಸಿಡಿ ಯೋಜನೆಯ ಕುರಿತು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Kharif Crop Survey-2025: ಮುಂಗಾರು ಬೆಳೆ ಸಮೀಕ್ಷೆ ರೈತರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

ರಾಷ್ಟ್ರೀಯ ಜಾನುವಾರು ಮಿಷನ್(NLM) ಯೋಜನೆಯು ಗ್ರಾಮೀಣ ಕೋಳಿ ಉದ್ಯಮಶೀಲತೆ, ಕುರಿ, ಮೇಕೆ, ಹಂದಿ ಸಾಕಾಣಿಕೆ ಮತ್ತು ರಸಮೇವು ಉತ್ಪಾದನೆ ಘಟಕಗಳನ್ನು ಆರಂಭಿಸಲು ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ಗ್ರಾಮೀಣ ಆದಾಯವನ್ನು ಹೆಚ್ಚಿಸಲು ಮತ್ತು ಜೀವನೋಪಾಯವನ್ನು ಶಾಶ್ವತಗೊಳಿಸಲು ನೆರವಾಗುತ್ತದೆ.ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಲಾಗಿದೆ.ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಂಬಂಧಪಟ್ಟ ಇಲಾಖೆಯಿಂದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.

NLM Yojana-2025: ಯಾವುದಕ್ಕೆ ಎಷ್ಟು ಸಬ್ಸಿಡಿ ನಿಗದಿಪಡಿಸಲಾಗಿದೆ?

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಅರ್ಹ ಅಭ್ಯರ್ಥಿಗಳು ಕುರಿ,ಮೇಕೆ,ಕೋಳಿ,ಹಂದಿ ಸಾಕಾಣಿಕೆ ಹಾಗೂ ರಸಮೇವು ಉತ್ಪಾದನಾ ಘಟಕವನ್ನು ಆರಂಭಿಸಲು ಈ ಕೆಳಗೆ ತಿಳಿಸಲಾದ ಸಹಾಯಧನವನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Nigama Yojanegalu-ರಾಜ್ಯದ 11 ನಿಗಮಗಳಲ್ಲಿ ವಿವಿಧ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ!

1) ಗ್ರಾಮೀಣ ಕೋಳಿ ಉದ್ದಿಮೆ(1000 ದೇಶಿ ಮಾತೃಕೋಳಿ ಘಟಕ+ ಹ್ಯಾಚರಿ ಘಟಕ+ ಮರಿಗಳ ಸಾಕಾಣಿಕೆ ಘಟಕ)Rural Poultry Entrepreneurship programme):

ಕೋಳಿ ಮರಿ ಉತ್ಪಾದನಾ ಘಟಕವನ್ನು ಆರಂಭಿಸಲು ಈ ಯೋಜನೆಯಡಿ ಗರಿಷ್ಥ ಯೋಜನಾ ವೆಚ್ಚ:- 50 ಲಕ್ಷಕ್ಕೆ ಶೇ 50 ರಷ್ಟು ಸಹಾಯಧನವನ್ನು ಒದಗಿಸಲಾಗುತ್ತದೆ ಅಥವಾ ಒಂದು ಘಟಕಕ್ಕೆ ಗರಿಷ್ಟ ರೂ 25 ಲಕ್ಷದ ವರೆಗೆ ಸಬ್ಸಿಡಿಯನ್ನು ಪಡೆಯಲು ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ.

2) ಕುರಿ-ಮೇಕೆ ತಳಿ ಸಂವರ್ಧನಾ ಘಟಕ(Sheep and Goat farming):

A) 500+25- ಗರಿಷ್ಥ ಯೋಜನಾ ವೆಚ್ಚ:- 1 ಕೋಟಿ, ಸಹಾಯಧನ:- ಶೇ 50 ಗರಿಷ್ಟ ರೂ 50 ಲಕ್ಷ ಸಹಾಯಧನ ಪಡೆಯಲು ಅವಕಾಶವಿರುತ್ತದೆ.
B) 400+20- ಗರಿಷ್ಥ ಯೋಜನಾ ವೆಚ್ಚ:-  80 ಲಕ್ಷ, ಸಹಾಯಧನ:- ಶೇ  50 ಗರಿಷ್ಟ ರೂ 40 ಲಕ್ಷ ಸಹಾಯಧನ
C) 300+15- ಗರಿಷ್ಥ ಯೋಜನಾ ವೆಚ್ಚ:-  60 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 30 ಲಕ್ಷ ಸಹಾಯಧನ
D) 200+10- ಗರಿಷ್ಥ ಯೋಜನಾ ವೆಚ್ಚ:-  40 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 20 ಲಕ್ಷ ಸಹಾಯಧನ
E) 100+5-  ಗರಿಷ್ಥ ಯೋಜನಾ ವೆಚ್ಚ:-   20 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 10 ಲಕ್ಷ ಸಹಾಯಧನ

ಇದನ್ನೂ ಓದಿ: Puc Scholarship-ಪಿಯುಸಿಯಲ್ಲಿ ಉತ್ತಮ ಅಂಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ!

3) ಹಂದಿ ತಳಿ ಸಂವರ್ಧನಾ ಘಟಕ(,Pig farming subsidy):

ಹಂದಿ ತಳಿ ಸಂವರ್ಧನಾ ಘಟಕ ಆರಂಭಿಸಲು ನಿಗದಿಪಡಿಸಿದ ಸಬ್ಸಿಡಿ ವಿವರ ಈ ಕೆಳಗಿನಂತಿದೆ.

100+10 ಗರಿಷ್ಥ ಯೋಜನಾ ವೆಚ್ಚ:-   60 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 30 ಲಕ್ಷ ಸಹಾಯಧನ ನೀಡಲಾಗುತ್ತದೆ.
50+5   ಗರಿಷ್ಥ ಯೋಜನಾ ವೆಚ್ಚ:-   30 ಲಕ್ಷ, ಸಹಾಯಧನ:-  ಶೇ 50 ಗರಿಷ್ಟ ರೂ 15 ಲಕ್ಷ ಸಹಾಯಧನ.

4) ರಸಮೇವು ಉತ್ಪಾದನಾ ಘಟಕ, ಮೇವು ಬ್ಲಾಕ್ ತಯಾರಿಕಾ ಘಟಕ/ ಟಿಎಂಆರ್ ಪ್ಲಾಂಟ್ ಸ್ಥಾಪನೆ ಘಟಕ(ವಾರ್ಷಿಕ 2000-2500 ಮೆಟ್ರಿಕ್ ಟನ್ ಉತ್ಪಾದನೆ)-
Silage making unit for entrepreneurs(producation capacity 2000-2500 MT per annum)

ಗರಿಷ್ಥ ಯೋಜನಾ ವೆಚ್ಚ:- 1 ಕೋಟಿ,   ಸಹಾಯಧನ:- ಶೇ 50 ಗರಿಷ್ಟ ರೂ 50 ಲಕ್ಷ ಸಹಾಯಧನ ಒದಗಿಸಲಾಗುತ್ತದೆ.

ಇದನ್ನೂ ಓದಿ: Crop Advisory-ಅತೀಯಾದ ಮಳೆಯಿಂದ ಬೆಳೆ ಚೇತರಿಸಿಕೊಳ್ಳಲು ರೈತರು ಈ ಕ್ರಮ ಅನುಸರಿಸಿ!

Required Documents For NLM Scheme Application- ಒದಗಿಸಬೇಕಾದ ದಾಖಲೆಗಳು:

  • ಯೋಜನಾ ವರದಿ (Detailed Project Report)
  • ಅರ್ಜಿದಾರರ ಪಹಣಿ/RTC/ಊತಾರ್
  • ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
  • ಪಾನ್ ಕಾರ್ಡ
  • ಪೋಟೋ
  • ಭೂಮಿ ಇಲ್ಲದವರು ಬಾಡಿಗೆ ಅಥವಾ ಗುತ್ತಿಗೆಗೆ ಭೂಮಿ ಪಡೆದು, ನೋಂದಾಯಿತ ಕರಾರು ಪತ್ರ ಸಲ್ಲಿಸುವುದು್
  • ಜಾಗದ ಜಿಪಿಎಸ್ ಪೋಟೋ/Project site GPS Photo
  • ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್
  • ತರಬೇತಿ ಪ್ರಮಾಣ ಪತ್ರ / ಅನುಭವ ಹೊಂದಿರುವ ಬಗ್ಗೆ ಪ್ರಮಾಣ ಪತ್ರ

ಇದನ್ನೂ ಓದಿ: E-Attendance In Schools-ಇನ್ನುಂದೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇ-ಹಾಜರಾತಿ ಕಡ್ಡಾಯ!

How To Apply-ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಸಹಾಯಧನದಲ್ಲಿ ಈ ಮೇಲಿನ ಉದ್ದಿಮೆಯನ್ನು ಆರಂಭಿಸಲು ಆಸಕ್ತಯನ್ನು ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತರದ ಕಂಪ್ಯೂಟರ್ ಸೆಂಟರ್/ಗ್ರಾಮ ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Free Chaff Cutter Scheme-ಉಚಿತ ಮೇವು ಕತ್ತರಿಸುವ ಯಂತ್ರ ಪಡೆಯಲು ಅರ್ಜಿ ಆಹ್ವಾನ!

Step-1: ಅರ್ಹ ಅಭ್ಯರ್ಥಿಗಳು Apply Now ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಜಾನುವಾರು ಮಿಷನ್ ಯೋಜನೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

kuri sakanike loan

Step-2 ಬಳಿಕ ಈ ಪೇಜ್ ನಲ್ಲಿ "Login As Entrepreneur" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ನಂಬರ್ ಅನ್ನು ನಮೂದಿಸಿ Request OTP ಬಟನ್ ಮೇಲೆ ಕ್ಲಿಕ್ ಮಾಡಬೇಕು

Step-3 ನಂತರ ನಮೂದಿಸಿದ ಮೊಬೈಲ್ ನಂಬರ್ ಗೆ ಬರುವ ಆರು ಅಂಕಿಯ ಒಟಿಪಿಯನ್ನು ಹಾಕಿ "VERIFY OTP" ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Best Savings Plan- ತಿಂಗಳಿಗೆ ಕೇವಲ ₹1,000 ಉಳಿತಾಯ ಮಾಡಿ ₹6.5 ಲಕ್ಷ ಹಣ ಗಳಿಸಿ!

For More Information-ಇನ್ನು ಹೆಚ್ಚಿನ ಮಾಹಿತಿಗಾಗಿ ಉಪಯುಕ್ತ ಲಿಂಕ್ ಗಳು:

Online Application Link-ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್: Apply Now
NLM Scheme Website-ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಅಧಿಕೃತ ವೆಬ್ಸೈಟ್: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: