Bele Vime Amount-2025: ಈ ಜಿಲ್ಲೆಯ ರೈತರ ಖಾತೆಗೆ 30 ಕೋಟಿ ಬೆಳೆ ವಿಮೆ ಬಿಡುಗಡೆ!

July 3, 2025 | Siddesh
Bele Vime Amount-2025: ಈ ಜಿಲ್ಲೆಯ ರೈತರ ಖಾತೆಗೆ 30 ಕೋಟಿ ಬೆಳೆ ವಿಮೆ ಬಿಡುಗಡೆ!
Share Now:

ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ(Bele Vime Amount) ಕಳೆದ ವರ್ಷ ಅಂದರೆ 2024 ರ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಯನ್ನು ಮಾಡಿಸಿದ ಅರ್ಹ ರೈತರಿಗೆ ಬೆಳೆ ಕಟಾವು ಸಮೀಕ್ಷೆಯಲ್ಲಿ ತಾಂತ್ರಿಕ ಕಾರಣದಿಂದ ವಿಮೆ ಪರಿಹಾರ ಜಮಾ ಅಗಿಲ್ಲದ ರೈತರಿಗೆ 30 ಕೋಟಿ ಬೆಳೆ ವಿಮೆ ಈ ಜಿಲ್ಲೆಯ ರೈತರ ಖಾತೆಗೆ ಜಮಾ ಮಾಡಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ರೈತರ ಬೆಳೆಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಪ್ರಧಾನ ಮಂತ್ರಿ ಫಸಲ ಬೀಮಾ ಯೋಜನೆಯನ್ನು(Fasal Bhima Yojana) ಅನುಷ್ಠಾನ ಮಾಡಲಾಗುತ್ತಿದ್ದು ಈ ಯೋಜನೆಯಡಿ ಕಳೆದ ವರ್ಷ ಬೆಳೆ ವಿಮೆಯನ್ನು ಮಾಡಿಸಿದ ಆಯ್ದ ಜಿಲ್ಲೆಯಲ್ಲಿ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದ್ದು ಇದರ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: E-Khatha-ಮನೆಯಲ್ಲೇ ಕುಳಿತು ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ಪ್ರಸ್ತುತ ಈ ಅಂಕಣದಲ್ಲಿ ಯಾವ ಜಿಲ್ಲೆಯ ರೈತರಿಗೆ 2024 ಮುಂಗಾರು ಹಂಗಾಮಿನ ಬೆಳೆ ವಿಮೆ(Crop Insurance Amount-2024) ಪರಿಹಾರ ಜಮಾ ಅಗಿದೆ? ಇತರೆ ಜಿಲ್ಲೆಯ ರೈತರು ತಮ್ಮ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ? ಎಂದು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳಬಹುದು? ಎನ್ನುವ ಮಾಹಿತಿ ಸೇರಿದಂತೆ ಬೆಳೆ ವಿಮೆ ಬಿಡುಗಡೆ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ ಎಕ್ಸ್/ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Crop Insurance -ದಾರವಾಡ ಜಿಲ್ಲೆಯ ರೈತರ ಖಾತೆಗೆ 30 ಕೋಟಿ ಬೆಳೆ ವಿಮೆ:

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅಧಿಕೃತವಾಗಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಕಳೆದ ಮುಂಗಾರಿನಲ್ಲಿ ಬೆಳೆ ವಿಮೆಯನ್ನು ಪಡೆಯಲು ಅರ್ಹರಿದ್ದ ಕುಂದಗೋಳ ಹಾಗೂ ಶಿರಗುಪ್ಪಿ ಹೋಬಳಿಗಳ ರೈತರಿಗೆ ಪ್ರಸ್ತುತ 30 ಕೋಟಿ ಬೆಳೆ ವಿಮೆಯನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Free Beautician Training-ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

ರೈತರ ಖಾತೆಗೆ ಬೆಳೆ ವಿಮೆ ಬಿಡುಗಡೆ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹಂಚಿಕೊಂಡಿರುವ ಮಾಹಿತಿ ಹೀಗಿದೆ:

ಧಾರವಾಡ ಜಿಲ್ಲೆಯ 2024ರ ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆಗೆ ಬೆಳೆ ವಿಮಾ ಮಾಡಿಸಿದ ಕುಂದಗೋಳ ಹಾಗೂ ಶಿರಗುಪ್ಪಿ ಹೋಬಳಿಗಳ ರೈತರಿಗೆ ಅತಿಯಾದ ಮಳೆಯಿಂದ ಹಾನಿಗೊಳಗಾದ ಈ ಬೆಳೆಗೆ ಈಗ ಅಂದಾಜು 30 ಕೋಟಿ ಹಣವನ್ನು ವಿಮೆ ಬಿಡುಗಡೆಗೆ ಆದೇಶ ನೀಡಲಾಗಿದ್ದು ಈ ಮೊದಲು ಈ ಬೆಳೆಗಳಿಗೆ ವಿವಿಧ ಕಾರಣಗಳಿಂದ ವಿಮಾ ಬಿಡುಗಡೆಯಾಗಿರಲಿಲ್ಲ. ಮುಖ್ಯವಾಗಿ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿಯವರು ತಾಂತ್ರಿಕ ಕಾರಣಗಳೊಂದಿಗೆ ಬೆಳೆ ಕಟಾವು ಸಮೀಕ್ಷೆ ಪ್ರಕಾರ ವಿಮೆ ನೀಡಲು ಮಾನದಂಡಗಳು ಹೊಂದಾಣಿಕೆಯಾಗುತ್ತಿಲ್ಲವೆಂದು ನಿರಾಕರಿಸಿದ್ದರು.

ನಂತರ ನಾನು ಜಿಲ್ಲಾಧಿಕಾರಿಗಳಿಗೆ ಈ ವಿಷಯವನ್ನು ವಿಮಾ ಪರಿಹಾರದ ಜಿಲ್ಲಾ ಮಟ್ಟದ ಜಂಟಿ ಸಮಿತಿಯಲ್ಲಿ (DLJC) ತೆಗೆದುಕೊಂಡು ಇತ್ಯರ್ಥಗೊಳಿಸಲು ಸೂಚಿಸಿದ್ದೆನು. ಅದಕ್ಕೂ ವಿಮಾ ಕಂಪನಿ ವಿವಿಧ ಹಂತದಲ್ಲಿ ಅಪೀಲು ಮಾಡಿ ಅಡತಡೆಗಳೆನ್ನು ಉಂಟು ಮಾಡಿತ್ತು, ಕೊನೆಗೆ ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್‌ಸಿಂಗ್ ಚವ್ಹಾಣ ಅವರ ನೇತೃತ್ವ ಹಾಗೂ ಹಣಕಾಸು ಕಾರ್ಯದರ್ಶಿಗಳೊಂದಿಗೆ ನಾನು ಸಭೆ ನಡೆಸಿ ಅವರಿಗೆ ವಿವರವಾಗಿ ಮನದಟ್ಟು ಮಾಡಿ ಧಾರವಾಡ ಜಿಲ್ಲೆಯ ಎರಡು ಹೋಬಳಿಯ ಹೆಸರು ಬೆಳೆಗೆ ವಿಮೆ ಮಾಡಿದ ರೈತರಿಗೆ ವಿಮೆ ಬಿಡುಗಡೆಗೆ ಮಾಡುವಂತೆ ಕೋರಿದ್ದೆನು.

ಇದನ್ನೂ ಓದಿ: Maize Fall Armyworm-ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ! ನಿಯಂತ್ರಿಸಲು ಈ ಕ್ರಮ ಅನುಸರಿಸಿ!

ಈಗ ವಿಮೆ ಬಿಡುಗಡೆ ಆಗಿದ್ದು ಅತೀ ಶೀಘ್ರದಲ್ಲೇ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗಲಿದೆ. ಆದರೆ ಕೆಲ ಮಧ್ಯವರ್ತಿಗಳು ತಾವೇ ವಿಮೆ ಬಿಡುಗಡೆ ಮಾಡಿಸಿರುವುದಾಗಿ ಹೇಳಿ ರೈತರಿಂದ ಅಧಿಕ ಹಣ ಪಡೆಯುವ ದಾರಿ ತಪ್ಪಿಸುವ ವ್ಯವಸ್ಥಿತ ಜಾಲವೇ ಇದೆ ಎಂಬುದು ನನ್ನ ಗಮನಕ್ಕೆ ಬಂದಿದ್ದು, ರೈತರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಯಾರಿಗೂ ತಮ್ಮ ಖಾತೆಯಿಂದ ಹಣ ನೀಡುವ ಅವಶ್ಯಕತೆ ಇಲ್ಲ. ನಮ್ಮ ಸರ್ಕಾರದ ಆಡಳಿತದಲ್ಲಿ ರೈತ ಮತ್ತು ಸರ್ಕಾರದ ನಡುವೆ ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲ.

ಯಾರಾದರೂ ಹಣ ಕೇಳಿದರೆ ನಮ್ಮ ಕಛೇರಿಗೆ ಅಥವಾ ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳ ಗಮನಕ್ಕೆ ತನ್ನಿ ವಿಮೆ ಹಣ ದೊರಕಿ ರೈತರಿಗೆ ನೆರವಾಗುವಂತಹ ಯೋಜನೆ ರೂಪಿಸಿ ರೈತರ ಬೆನ್ನಿಗೆ ನಿಂತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಅದನ್ನು ಸಕಾರಾತ್ಮಕ ಬದಲಾವಣೆಗಳೊಂದಿಗೆ ಅನುಷ್ಠಾನಗೊಳಿಸುತ್ತಿರುವ ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್‌ಸಿಂಗ್ ಚವ್ಹಾಣ್ ಅವರಿಗೆ ಧನ್ಯವಾದಗಳು ಎಂದು ಪ್ರಲ್ಹಾದ ಜೋಶಿ ಕೇಂದ್ರ ಸಚಿವರು ತಮ್ಮ ಎಕ್ಸ್/ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Agri Diploma Admission-ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅಗ್ರಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಇದನ್ನೂ ಓದಿ: Best Saving Schemes-ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಸಿಗುತ್ತದೆ?

Crop Insurance Status-ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ? ಹಣ ಜಮಾ ವಿವರವನ್ನು ತಿಳಿಯುವ ವಿಧಾನ:

ರೈತರು ಒಮ್ಮೆ ನಿಗದಿತ ಪ್ರೀಮಿಯಂ ಅನ್ನು ಪಾವತಿ ಮಾಡಿ ಆನ್ಲೈನ್ ಮೂಲಕ ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಿದ ಬಳಿಕ ಅರ್ಜಿಯು ಯಾವ ಹಂತದಲ್ಲಿದೆ ಎಂದು ಹಾಗೂ ಬೆಳೆ ವಿಮೆ ಪರಿಹಾರದ ಹಣ ಜಮಾ ವಿವರದ ಕಳೆದ 5 ವರ್ಷದ ವಿವರವನ್ನು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಬೆಳೆ ವಿಮೆ ಅರ್ಜಿ ವಿಲೇವಾರಿಗೆ ಅಭಿವೃದ್ದಿಪಡಿಸಿರುವ ಸಂರಕ್ಷಣೆ ಪೋರ್ಟಲ್ ಅನ್ನು ಪ್ರವೇಶ ಮಾಡಿ ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ "Crop Insurance Status Check" ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಬೆಳೆ ವಿಮೆ ಯೋಜನೆಯ ಅರ್ಜಿ ವಿಲೇವಾರಿಗೆ ಸಂಬಂಧಪಟ್ಟ ಸಂರಕ್ಷಣೆ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: PM Kisan-7 ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಸ್ಥಗಿತ! ಇಲ್ಲಿದೆ ಅರ್ಹ ರೈತರ ಪಟ್ಟಿ!

Step-2: ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿದಾಗ ಮೊದಲಿಗೆ "ವರ್ಷ ಆಯ್ಕೆ/Select Insurance Year: "ಕಾಲಂ ನಲ್ಲಿ ನೀವು ಯಾವ ವರ್ಷದ ಬೆಳೆ ವಿಮೆ ಅರ್ಜಿಯನ್ನು ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಲು ಇಚ್ಚೆಯನ್ನು ಹೊಂದಿದಿರೋ ಆ ವರ್ಷವನ್ನು ಆಯ್ಕೆ ಮಾಡಿಕೊಂಡು "ಋತು ಆಯ್ಕೆ / Select Insurance Season :" ಅಲ್ಲಿ "Kharif" ಎಂದು ಸೆಲೆಕ್ಟ್ ಮಾಡಿ "ಮುಂದೆ/Go" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ನಂತರ ಈ ಪುಟದಲ್ಲಿ ಕೆಳಗೆ ಕಾಣುವ "Farmers" ಕಾಲಂ ನಲ್ಲಿ "Check Status" ಬಟನ್ ಮೇಲೆ ಕ್ಲಿಕ್ ಮಾಡಿ ರೈತರು ಅರ್ಜಿ ನಲ್ಲಿಸಿರುವಾಗ ನೀಡಿರುವ ಮೊಬೈಲ್ ನಂಬರ್ ಅಥವಾ ಅರ್ಜಿ ಸಂಖ್ಯೆ ಎರಡರಲ್ಲಿ ಒಂದನ್ನು ನಮೂದಿಸಿ ಬಳಿಕ ಕೆಳಗೆ ಕಾಣುವ ಕ್ಯಾಪ್ಚಾ ಕೋಡ್ ಅನ್ನು ಟೈಪ್ ಮಾಡಿ "Search" ಬಟನ್ ಮೇಲೆ ಒತ್ತಿದರೆ ಬೆಳೆ ವಿಮೆ ಅರ್ಜಿ ವಿವರ ತೋರಿಸುತ್ತದೆ.

ಇದನ್ನೂ ಓದಿ: Scholarship Application-2025: ಎಸ್ ಎಸ್ ಟ್ರಸ್ಟ್ ನಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Step-4: ತದನಂತರ ಇಲ್ಲಿ ತೋರಿಸುವ ಅರ್ಜಿ ಸಂಖ್ಯೆಯ ವಿವರದಲ್ಲಿ ಒಂದು ಅರ್ಜಿಯ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಾಗ ಕೆಳಗೆ "Proposal Status" ಆಯ್ಕೆಯಲ್ಲಿ ಬೆಳೆ ವಿಮೆ ಅರ್ಜಿಯ ಸ್ಥಿತಿ ಗೊಚರಿಸುತ್ತದೆ ಇದರ ಕೆಳಗೆ ಕಾಣುವ "UTR Details" ಆಯ್ಕೆಯಲ್ಲಿ ನಿಮಗೆ ಎಷ್ಟು ಬೆಳೆ ವಿಮೆ ಪರಿಹಾರದ ಹಣ ಜಮಾ ಅಗಿದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ಗೋಚರಿಸುತ್ತದೆ.

ನಿಮಗೆ ಬೆಳೆ ವಿಮೆ ಹಣ ಜಮಾ ಅಗಿಲ್ಲದೇ ಇದ್ದರೆ "UTR Details" ಆಯ್ಕೆಯಲ್ಲಿ "No data found" ಎಂದು ಕಾಣಿಸುತ್ತದೆ.

Crop Insurance Application-2025ರ ಮುಂಗಾರು ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಸಲ್ಲಿಸಲು ಅವಕಾಶ:

ಪ್ರಸ್ತುತ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ವಿವಿಧ ಬೆಳೆಗಳಿಗೆ ಬೆಳೆ ವಿಮೆಯನ್ನು ಮಾಡಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು ರೈತರು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ ಈ ವರ್ಷದ ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Diploma agriculture admission-2025: ರಾಯಚೂರು ಕೃಷಿ ವಿವಿಯಿಂದ ಕೃಷಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

ರೈತರು ಈ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: