Gas cylinder subsidy-ಗ್ಯಾಸ್ ಸಿಲಿಂಡರ್ ಸಬ್ಸಿಡಿ ಅರ್ಹ ಫಲಾನುಭವಿ ಪಟ್ಟಿ ಬಿಡುಗಡೆ!

January 15, 2024 | Siddesh

ಉಜ್ವಲ ಯೋಜನೆಯಡಿ ಪ್ರತಿ ತಿಂಗಳು ಮನೆ ಬಳಕೆಗೆ ಪಡೆಯುವ 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಗೆ ಸಹಾಯಧನ ಪಡೆಯಲು(Gas cylinder subsidy) ಅರ್ಹ ಫಲಾನುಭವಿಗಳ ಪಟ್ಟಿಯನ್ನು Mylpg.in ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಉಜ್ವಲ ಯೋಜನೆಯಡಿ ಕೇಂದ್ರ ಸರಕಾರದಿಂದ ಈ ಮೊದಲು ಪ್ರತಿ  ಸಿಲಿಂಡರ್ ಗೆ ರೂ 200/- ಸಹಾಯಧನವನ್ನು ನೀಡಲಾಗುತ್ತಿತ್ತು ಬಳಿಕ ಕಳೆದ ಅಕ್ಟೋಬರ್ ತಿಂಗಳಿನಿಂದ ಇದನ್ನು 300/- ರೂ ಗೆ ಹೆಚ್ಚಿಸಲಾಗಿತ್ತು. ಮನೆ ಬಳಕೆಗೆ ಉಪಯೋಗಿಸುವ ಸಿಲಿಂಡರ್ ಬೆಲೆಯು ಪ್ರಸ್ತುತ 903 ರೂ ಗೆ ಗ್ರಾಹಕರಿಗೆ ಸಿಗುತ್ತಿದೆ.

ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಗ್ರಾಹಕರು Mylpg.in ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಉಜ್ವಲ ಯೋಜನೆಯಡಿ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ? ಎಂದು ಚೆಕ್ ಮಾಡಿಕೊಳ್ಳಬವುದು. ಈ  ಕೆಳಗೆ ಹಂತವಾರು ಯಾವೆಲ್ಲ ಹಂತಗಳನ್ನು ಅನುಸರಿಸಿ ಸಿಲಿಂಡರ್ ಸಬ್ಸಿಡಿ ಪಟ್ಟಿಯನ್ನು ನೋಡಬವುದು ಎಂದು ತಿಳಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ.

ಇದನ್ನೂ ಓದಿ: Rama mandira-ರಾಮಮಂದಿರ ಕುರಿತು ಈ ರೀತಿಯ ಮೆಸೇಜ್ ನಿಮ್ಮ ಮೊಬೈಲ್ ಗೂ ಬರಬಹುದು! ತಪ್ಪದೇ ಈ ಮಾಹಿತಿ ತಿಳಿಯಿರಿ.

Gas cylinder subsidy list-2024: ಗ್ಯಾಸ್ ಸಿಲಿಂಡರ್ ಸಬ್ಸಿಡಿ ಅರ್ಹ ಫಲಾನುಭವಿ ಪಟ್ಟಿ ತಿಳಿಯುವ ವಿಧಾನ:

ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುವ ಗ್ರಾಹಕರು Mylpg.in ವೆಬ್ಸೈಟ್ ಭೇಟಿ ಮಾಡಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಅರ್ಹ ಫಲಾನುಭವಿ ಪಟ್ಟಿಯನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ನೋಡಬವುದಾಗಿದೆ.

Step-1: ಪ್ರಥಮದಲ್ಲಿ ಈ ಲಿಂಕ್ Ujjwala yojana subsidy amount ಮೇಲೆ ಕ್ಲಿಕ್ ಮಾಡಿ Mylpg.in ವೆಬ್ಸೈಟ್ ಭೇಟಿ ಮಾಡಬೇಕು. ಬಳಿಕ ಮುಖಪುಟದಲ್ಲಿ ನಿಮ್ಮ ಮನೆಯಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವ ಗ್ಯಾಸ್ ಸಿಲಿಂಡರ್ ಅಂದರೆ bharath/HP/Indian ಈ ಮೂರು ಚಿತ್ರದಲ್ಲಿ ನೀವು ಬಳಸುತ್ತಿರುವ ಸಿಲಿಂಡರ್ ಚಿತ್ರದ  ಮೇಲೆ ಕ್ಲಿಕ್ ಮಾಡಬೇಕು. ಬಹುತೇಕ ಉಜ್ವಲ ಯೋಜನೆಯಡಿ ಭಾರತ್ ಗ್ಯಾಸ್ ಸಿಲಿಂಡರ್ ಅನ್ನು ನೀಡಲಾಗುತ್ತದೆ.

Step-2: ಇದಾದ ನಂತರ ಈ ಪೇಜ್ ನ ಮೇಲೆ ಬಲ ಬದಿಯಲ್ಲಿ ಕಾಣುವ ಅರೋ ಮಾರ್ಕ್ ಮೇಲೆ ಕ್ಲಿಕ್ ಮಾಡಿ ಕೊನೆಯಲ್ಲಿ ತೋರಿಸುವ "Ujjwala  Beneficaries" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Free education-ವಿದ್ಯಾರ್ಥಿವೇತನ, ವಿದ್ಯಾಸಿರಿಗೆ ಅರ್ಜಿ ಸಲ್ಲಿಸಲು ಇನ್ನು ಒಂದು ದಿನ ಮಾತ್ರ ಅವಕಾಶ!

Step-3: "Ujjwala  Beneficaries" ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ರಾಜ್ಯ/State: ಕರ್ನಾಟಕ/Karnataka ಎಂದು ಮತ್ತು ಪಕ್ಕದಲ್ಲಿ ಜಿಲ್ಲೆ/District ಆಯ್ಕೆ ಮಾಡಿಕೊಂಡು ಕೆಳಗೆ ಕಾಣುವ ಕ್ಯಾಪ್ಚ ಕೋಡ್ ಅನ್ನು ಹಾಕಿ "Submit" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಿಲ್ಲೆಯ ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯಲು ಅರ್ಹ ಗ್ರಾಹಕರ ಪಟ್ಟಿ ತೋರಿಸುತ್ತದೆ.

ಗ್ಯಾಸ್ ಸಿಲಿಂಡರ್  ಕುರಿತು ನಮ್ಮ ಪುಟದ ಇತರೆ ಉಪಯುಕ್ತ ಅಂಕಣಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: click here

Step-4: ಸಂಪೂರ್ಣ ಪಟ್ಟಿಯನ್ನು ನೋಡಲು ಈ ಪೇಜ್ ನಲ್ಲಿ ಕೆಳಗೆ ಕಾಣುವ 1.2.3.4.5 ಪೇಜ್ ನಂಬರ್ ಮೇಲೆ ಕ್ಲಿಕ್ ಮಾಡಿ ನೋಡಬವುದು ಈ ಪಟ್ಟಿಯಲ್ಲಿ ಗ್ರಾಹಕರ ಹೆಸರು ಮತ್ತು ತಾಲ್ಲೂಕಿನ ಹೆಸರು ತೋರಿಸುತ್ತದೆ.

ಇದನ್ನೂ ಓದಿ: Anganawadi Worker-ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ!

Ujjwala yojana application-ಯಾರಿಗೂ ದಾಖಲೆಗಳನ್ನು ಕೊಡಬೇಡಿ:

ಕೆಲವು ಗ್ಯಾಸ್ ಎಜೆನ್ಸಿಯ ಪ್ರತಿನಿಧಿಗಳು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಉಜ್ವಲ ಯೋಜನೆಯಡಿ ನಿಮಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟಾವ್ ಕೋಡುತ್ತೆವೆ ಎಂದು ಗ್ರಾಹಕರಿಂದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಬಳಿಕ ಈ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟಾವ್ ಬಂದ ಬಳಿಕ ಗ್ರಾಹಕರಿಗೆ ನೀಡದೇ ಇರುವ ಪ್ರಕರಣಗಳು ಹೊರ ಬಿದ್ದಿವೆ ಅದ್ದರಿಂದ ನಿಮ್ಮ ಮನೆ ಹತ್ತಿರ ಈ ರೀತಿಯ ವ್ಯಕ್ತಿಗಳು ಬಂದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಪ್ರತಿ ದಾಖಲೆಗಳನ್ನು ಕೊಡಬೇಡಿ.

ಉಜ್ವಲ ಯೋಜನೆಯಡಿ ಸಿಲಿಂಡರ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಅಧಿಕೃತ ಗ್ಯಾಸ್ ಎಜೆನ್ಸಿ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Bank loan scheme-2024: ಈ ಯೋಜನೆಯಡಿ ಬ್ಯಾಂಕ್ ಗೆ ಯಾವುದೇ ಗ್ಯಾರಂಟಿ ನೀಡದೆ ಶೇ 5 ಬಡ್ಡಿದರದಲ್ಲಿ 2 ಲಕ್ಷ ಸಾಲ ಪಡೆಯಬವುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: