E-swathu Status-ನಿಮ್ಮ ಮನೆ ದಾಖಲೆಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ!

July 22, 2025 | Siddesh
E-swathu Status-ನಿಮ್ಮ ಮನೆ ದಾಖಲೆಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ!
Share Now:

ಗ್ರಾಮೀಣ ಮಟ್ಟದಲ್ಲಿ ನಿವೇಶನ/ಮನೆಯನ್ನು ಹೊಂದಿರುವ ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಪಟ್ಟ ಅಧಿಕೃತ ದಾಖಲೆಯ(Online Property Documents) ವಿವರವನ್ನು ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡುವುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಗ್ರಾಮ ಪಂಚಾಯತಿಯಲ್ಲಿ ಗ್ರಾಮೀಣ ಭಾಗದ ಎಲ್ಲಾ ಆಸ್ತಿಗಳನ್ನು ನೋಂದಣಿಯನ್ನು ಮಾಡಿ ಆಸ್ತಿಯ ಮಾಲೀಕರಿಗೆ ಅಧಿಕೃತ ದಾಖಲೆಗಳನ್ನು ಒದಗಿಸಲಾಗುತ್ತದೆ, ಆಸ್ತಿ ನೋಂದಣಿಗೆ ಸಾರ್ವಜನಿಕರ ಅರ್ಜಿ ವಿಲೇವಾರಿಗೆ ಇ-ಸ್ವತ್ತು(e swathu) ತಂತ್ರಾಂಶವನ್ನು ಗ್ರಾಮ ಪಂಚಾಯತಿಯಲ್ಲಿ ಬಳಕೆ ಮಾಡಲಾಗುತ್ತದೆ ಈ ತಂತ್ರಾಂಶದಲ್ಲಿ ಡಿಜಿಟಲ್ ರೂಪದಲ್ಲಿ ಹಳ್ಳಿ ಮಟ್ಟದ ಎಲ್ಲಾ ಆಸ್ತಿಯ ಮಾಲೀಕರ ವಿವರವನ್ನು ಸಂಗ್ರಹಿಸಲಾಗುತ್ತದೆ.

ಇದನ್ನೂ ಓದಿ: Property Registration-ಇ-ಸ್ವತ್ತು ಯೋಜನೆ: ಸರಕಾರದಿಂದ ಸಕ್ರಮ ಆಸ್ತಿಗೆ ಡಿಜಿಟಲ್ ದಾಖಲೆ! ಇಂದೇ ಅರ್ಜಿ ಸಲ್ಲಿಸಿ!

ಗ್ರಾಮೀಣ ಮಟ್ಟದ ನಿವೇಶನ/ಖಾಲಿ ಜಾಗ/ಮನೆಯ ಮಾಲೀಕರ ಅಧಿಕೃತ ಇ-ಸ್ವತ್ತು ದಾಖಲೆಯನ್ನು(Home Documents) ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡುವುದು ಮತ್ತು ಸರ್ವೆ ನಂಬರ್ ವಾರು ಆಸ್ತಿಯ ಮಾಲೀಕರ ವಿವರವನ್ನು ಉಚಿತವಾಗಿ ಇ-ಸ್ವತ್ತು ತಂತ್ರಾಂಶವನ್ನು ಭೇಟಿ ಮಾಡಿ ಪಡೆಯಲು ಅವಕಾಸವಿದ್ದು ಇದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

e-Swathu Document-ಆಸ್ತಿಯ ಮಾಲೀಕರ ದಾಖಲೆಗೆ ಇ-ಸ್ವತ್ತು:

ಗ್ರಾಮೀಣ ವ್ಯಾಪ್ತಿಯಲ್ಲಿನ ಆಸ್ತಿ/ಮನೆ/ನಿವೇಶನಗಳ ಮಾಲೀಕರ ವಿವರ ಮತ್ತು ಜಾಗದ ವಿಸ್ತೀರ್ಣ ಇನ್ನಿತರೆ ವಿವರವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಣೆ ಮಾಡಿ ಅಧಿಕೃತ ದಾಖಲೆಯನ್ನು ವಿತರಿಸಲು ಇ-ಸ್ವತ್ತು ತಂತ್ರಾಂಶವನ್ನು ಬಳಕೆ ಮಾಡಲಾಗುತ್ತದೆ. ಈ ಜಾಲತಾಣದಲ್ಲಿ ಆಸ್ತಿ ಮಾಲೀಕರ ವಿವರ ಮತ್ತು ಆಸ್ತಿಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ದಾಖಲಿಸಲಾಗುತ್ತದೆ.

ಇದನ್ನೂ ಓದಿ: Aadhaar Update-ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ! ಕೂಡಲೇ ಅರ್ಜಿ ಸಲ್ಲಿಸಿ!

Online Property Owner Status Check-ನಿಮ್ಮ ಮನೆ ದಾಖಲೆಯನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ:

ಹಳ್ಳಿ ವ್ಯಾಪ್ತಿಯಲ್ಲಿನ ಮನೆ/ನಿವೇಶನ/ಜಾಗದ ಮಾಲೀಕರ ವಿವರವನ್ನು ಗ್ರಾಮ ಪಂಚಾಯಿತಿಯಿಂದ ಇ-ಸ್ವತ್ತು ತಂತ್ರಾಶದಲ್ಲಿ ದಾಖಲಿಸಿ ಪ್ರತಿ ದಾಖಲೆಗೆ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಕೆಳಗಿನ ಹಂತವನ್ನು ಅನುಸರಿಸಿ ಆಸ್ತಿಯ ಮಾಲೀಕರು ತಮ್ಮ ಮೊಬೈಲ್ ನಲ್ಲೇ ಮನೆ ಗೆ ಸಂಬಂಧಪಟ್ಟ ದಾಖಲೆಯನ್ನು ನೋಡಲು ಅವಕಾಶವಿರುತ್ತದೆ.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ "Property Owner Status Check" ಮಾಡಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತು ತಂತ್ರಾಶವನ್ನು ಭೇಟಿ ಮಾಡಬೇಕು.

E-swathu Status check

Step-2: ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ಈ ಪೇಜ್ ನಲ್ಲಿ ಎಡಬದಿಯಲ್ಲಿ ಮೇಲೆ ಕಾಣುವ "ಆಸ್ತಿಗಳ ಶೋಧನೆ/Search Property" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ತದನಂತರ ಆಸ್ತಿಗಳ ಶೋಧನೆ ಪುಟ ತೆರೆದುಕೊಳ್ಳುತ್ತದೆ ಈ ವೆಬ್ ಪೇಜ್ ನಲ್ಲಿ Select Property Form ಕಾಲಂ ನಲ್ಲಿ Form-9/Form-11B/Survey No ಈ ಮೂರರಲ್ಲಿ ಒಂದನ್ನು ಕ್ಲಿಕ್ ಮಾಡಿ ಬಳಿಕ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ ಮತ್ತು ಹಳ್ಳಿಯನ್ನು ಆಯ್ಕೆ ಮಾಡಿ ಕೆಳಗೆ ತೋರಿಸುವ ಕ್ಯಾಪ್ಚ್ ಕೋಡ್ ನಮೂದಿಸಿ Serach ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿನ ಗ್ರಾಮಠಾಣ ವ್ಯಾಪ್ತಿಯ ಮಾಲೀಕರ ಸಂಪೂರ್ಣ ವಿವರ ಮತ್ತು ಸ್ವತ್ತಿನ ಗುರುತಿನ ಸಂಖ್ಯೆ ತೋರಿಸುತ್ತದೆ.

ಇದನ್ನೂ ಓದಿ: Free Coaching Center-ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ! ಈಗಲೇ ಅರ್ಜಿ ಸಲ್ಲಿಸಿ!

Online Property Owner Status

ಇದನ್ನೂ ಓದಿ: New Ration Card-ಹೊಸ ರೇಷನ್ ಕಾರ್ಡ ಪಡೆಯಲು ಅವಕಾಶ– ತಕ್ಷಣ ಅರ್ಜಿ ಸಲ್ಲಿಸಿ!

Online Property Owner Status-ಆಸ್ತಿಯ ಮಾಲೀಕರ ವಿವರ ಪಡೆಯುವ ವಿಧಾನ:

ಮೇಲಿನ ವಿಧಾನವನ್ನು ಅನುಸರಿಸಿ ಆಸ್ತಿಯ ಮಾಲೀಕರವಾರು ಗುರುತಿನ ಸಂಖ್ಯೆಯನ್ನು ಪಡೆದ ಬಳಿಕ ಇಲ್ಲಿ ಕ್ಲಿಕ್ "Property Status Check" ಮಾಡಿ ಈ ಪೇಜ್ ನಲ್ಲಿ "Select Property Form" ಕಾಲಂ ನಲ್ಲಿ Form-9/Form-11B ಒಂದನ್ನು ಆಯ್ಕೆ ಮಾಡಿಕೊಂಡು ನಂತರ Enter Property ID ಕಾಲಂ ನಲ್ಲಿ ನಿಮ್ಮ ಆಸ್ತಿಯ ಗುರುತಿನ ಸಂಖ್ಯೆಯನ್ನು ಹಾಕಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ಆಸ್ತಿ/ಮನೆ/ನಿವೇಶನದ ಮಾಲೀಕರ ವಿವರ ಮತ್ತು ಸರ್ವೆ ನಂಬರ್ ಮಾಹಿತಿ ತೋರಿಸುತ್ತದೆ.

Property Details- ಜಾಗ/ಮನೆಯ ವಿಸ್ತೀರ್ಣದ ವಿವರವನ್ನು ಪಡೆಯುವುದು ಹೇಗೆ?

ಇ-ಸ್ವತ್ತಿನ ಸಂಖ್ಯೆಯನ್ನು ಮೇಲಿನ ವಿಧಾನವನ್ನು ಅನುಸರಿಸಿ ಪಡೆದ ಬಳಿಕ ಈ Property Details ಲಿಂಕ್ ಮೇಲೆ ಕ್ಲಿಕ್ ಮಾಡಿ Property Id/ಸ್ವತ್ತಿನ ಸಂಖ್ಯೆಯನ್ನು ಹಾಕಿ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "SUBMIT" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಸ್ತಿ/ಜಾಗ/ಮನೆಯ ವಿಸ್ತೀರ್ಣ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬಹುದು.

ಇಲ್ಲಿ "Sakala Property Details" ವಿಭಾಗದಲ್ಲಿ ಕಾಣುವ SakalaNo ಅನ್ನು ಒಂದು ಕಡೆ ಬರೆದುಕೊಂಡು ಕೆಳಗಿನ ವಿಧಾನವನ್ನು ಅನುಸರಿಸಿ ಆಸ್ತಿ ದಾಖಲೆಗಳನ್ನು ವಿಕ್ಷಣೆ ಮಾಡಬಹುದು.

ಇದನ್ನೂ ಓದಿ: Education Scholarship-ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಆಹ್ವಾನ!

E-swathu Status-ಆಸ್ತಿಯ ದಾಖಲೆಯನ್ನು ಪರಿಶೀಲಿಸುವುದು ಹೇಗೆ?

ಮೇಲಿನ ವಿಧಾನವನ್ನು ಅನುಸರಿಸಿ Sakala No ಅನ್ನು ಪಡೆದುಕೊಂಡ ಬಳಿಕ Click Here ಇಲ್ಲಿ ಕ್ಲಿಕ್ ಮಾಡಿ Enter Document No/Sakala No.(GSC Code) ಈ ಕಾಲಂ ನಲ್ಲಿ Sakala No ಹಾಕಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ View Document ಬಟನ್ ಮೇಲ್ ಕ್ಲಿಕ್ ಮಾಡಿ ಆಸ್ತಿಯ ದಾಖಲೆಯನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬಹುದು.

WhatsApp Group Join Now
Telegram Group Join Now
Share Now: