Ayushman card- ಆಯುಷ್ಮಾನ್ ಕಾರ್ಡ್ ರೇಷನ್ ಕಾರ್ಡ ಹೊಂದಿರುವವರಿಗೆ 5 ಲಕ್ಷದವರೆಗೆ ಉಚಿತ ಆರೋಗ್ಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನಾರೋಗ್ಯ - ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್(Ayushman card) ಮಾಡಿಸಿ ಉಚಿತ ಆರೋಗ್ಯ ಸೌಲಭ್ಯ ಪಡೆಯಲು ಅರ್ಹ ಅರ್ಜಿದಾರರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

Ayushman card- ಆಯುಷ್ಮಾನ್ ಕಾರ್ಡ್ ರೇಷನ್ ಕಾರ್ಡ ಹೊಂದಿರುವವರಿಗೆ 5 ಲಕ್ಷದವರೆಗೆ ಉಚಿತ ಆರೋಗ್ಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!
Ayushman card application-2024

ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನಾರೋಗ್ಯ - ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್(Ayushman card) ಮಾಡಿಸಿ ಉಚಿತ ಆರೋಗ್ಯ ಸೌಲಭ್ಯ ಪಡೆಯಲು ಅರ್ಹ ಅರ್ಜಿದಾರರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಈ ಅಂಕಣದಲ್ಲಿ ಆಯುಷ್ಮಾನ್ ಕಾರ್ಡ್ ಮಾಡಿಕೊಳ್ಳುವುದರಿಂದ ಯಾವೆಲ್ಲ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದು ಮತ್ತು ಅರ್ಜಿ ಸಲ್ಲಿಕೆ ವಿಧಾನ ಹೇಗೆ? ಅಗತ್ಯ ದಾಖಲಾತಿಗಳೇನು? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Nadakacheri- ನಾಡಕಚೇರಿಯಲ್ಲಿ ಯಾವೆಲ್ಲ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದು? ಎಷ್ಟು ಶುಲ್ಕ ಪಾವತಿ ಮಾಡಬೇಕು?

Ayushman card benefits-ಆಯುಷ್ಮಾನ್ ಯೋಜನಾ ಸೌಲಭ್ಯಗಳು:

1) ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ವಾರ್ಷಿಕ 5 ಲಕ್ಷದವರೆಗೂ ಉಚಿತ ಮತ್ತು ಎಪಿಎಲ್ ಕುಟುಂಬಕ್ಕೆ 1.5 ಲಕ್ಷದವರೆಗೂ ಸಹಪಾವತಿ ಆಧಾರದ ಮೇಲೆ ಒಟ್ಟು 1650 ವಿವಿಧ ಬಗೆಯ ಚಿಕಿತ್ಸೆಗಳಿಗೆ ಎಲ್ಲಾ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ(ayushman card benefits hospital list) ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ

2) ತುರ್ತು ಸಂದರ್ಭಗಳಲ್ಲಿ 171 ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ಚಿಕಿತ್ಸೆ ಪಡೆಯಬಹುದು.

ಇದನ್ನೂ ಓದಿ: HSRP number plate-ನಿಮ್ಮ ಮೊಬೈಲ್ ನಲ್ಲೇ HSRP ನಂಬರ್ ಪ್ಲೇಟ್ ಬುಕ್ ಮಾಡಲು ಲಿಂಕ್ ಬಿಡುಗಡೆ!

Ayushman yojana benefits- ಆಯುಷ್ಮಾನ್ ಕಾರ್ಡ್ ಸೌಲಭ್ಯಗಳು :

ಫಲಾನುಭವಿಗಳಿಗೆ ಉಚಿತವಾಗಿ ಪಿವಿಸಿ ಮಾದರಿಯ ಹೆಲ್ತ್ ಕಾರ್ಡ್ ವಿತರಣೆ.

ದೇಶಾದ್ಯಂತ ಶೀಘ್ರ ಚಿಕಿತ್ಸಾ ಸೇವೆ ಪಡೆಯಲು ಅವಕಾಶ.

ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆ ಆಸ್ಪತ್ರೆಗೆ ಆನ್ ಲೈನ್ ಮೂಲಕ ರೆಫರಲ್ ಮಾಡಲು ಅನುಕೂಲ.

ಚಿಕಿತ್ಸಾ ಆರೋಗ್ಯ ದತ್ತಾಂಶ ಸಂಗ್ರಹಿಸಿ ನಂತರದ ಚಿಕಿತ್ಸೆ ಸಂದರ್ಭದಲ್ಲಿ ಹಿಂದಿನ ಚಿಕಿತ್ಸಾ ದತ್ತಾಂಶದ ಮೇಲೆ ಶೀಘ್ರ ಚಿಕಿತ್ಸೆಗೆ ಅನುಕೂಲ.

ಇದನ್ನೂ ಓದಿ: ration card- ಇಂದು ಮತ್ತು ನಾಳೆ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

Ayushman card Application link- ಆಯುಷ್ಕಾನ್ ಕಾರ್ಡ್ ನೋಂದಣಿ ವಿಧಾನ :

ಹತ್ತಿರದ ಗ್ರಾಮ ಒನ್/ ಕರ್ನಾಟಕ ಒನ್/ಬೆಂಗಳೂರು ಒನ್/ CSC ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ದಾಖಲೆ ನೀಡಿ ಕಾರ್ಡ್ ಮಾಡಿಸಿಕೊಳ್ಳಬಹುದು ಅಥವಾ ಈ ಯೋಜನೆಯ ಅಧಿಕೃತ ವೆಬ್ಸೈಟ್  https://nha.gov.in/index ಅಥವಾ PMJAY MOBILE APP ಡೌನ್ಲೋಡ್ ಮಾಡಿಕೊಂಡು ಸ್ವಯಂ ಅರ್ಜಿದಾರರೇ ತಮ್ಮ ಮೊಬೈಲ್ ಮೂಲಕ ನೋಂದಾಯಿಸಿಕೊಂಡು PDF ಕಾರ್ಡ ಪಡೆಯಬಹುದಾಗಿದೆ.

Ayushman yojana Helpline- ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಕ್ಯೆಗಳು 14555 ಅಥವಾ 1800 425 8330 ಗೆ ಕರೆ ಮಾಡಿ.

ಇದನ್ನೂ ಓದಿ: ಈ ಜಿಲ್ಲೆಗಳಲ್ಲಿ ಮೊದಲ ಕಂತಿನ ಬರ ಪರಿಹಾರ ರೈತರ ಖಾತೆಗೆ ಬಿಡುಗಡೆ!