Bara parihara list-2024: ಬರ ಪರಿಹಾರ ಹಣ ಬಿಡುಗಡೆಯಾದ ರೈತರ ಪಟ್ಟಿ ಬಿಡುಗಡೆ!

2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಊಂಟಾದ ಭೀಕರ ಬರಗಾಲದಿಂದಾಗಿ ರೈತರ ಬೆಳೆ ನಷ್ಟಕ್ಕೆ ರಾಜ್ಯ ಸರಕಾರದಿಂದ ಬಿಡುಗಡೆಯಾದ ಬರ ಪರಿಹಾರದ ಹಣ(Parihara Payment) ವರ್ಗಾವಣೆ ಮಾಡಲಾದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

Bara parihara list-2024: ಬರ ಪರಿಹಾರ ಹಣ ಬಿಡುಗಡೆಯಾದ ರೈತರ ಪಟ್ಟಿ ಬಿಡುಗಡೆ!
parihara payment status check-2024

2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಊಂಟಾದ ಭೀಕರ ಬರಗಾಲದಿಂದಾಗಿ ರೈತರ ಬೆಳೆ ನಷ್ಟಕ್ಕೆ ರಾಜ್ಯ ಸರಕಾರದಿಂದ ಬಿಡುಗಡೆಯಾದ ಬರ ಪರಿಹಾರದ ಹಣ(Parihara Payment) ವರ್ಗಾವಣೆ ಮಾಡಲಾದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಕಂದಾಯ ಇಲಾಖೆಯ ಅಧಿಕೃತ ಪರಿಹಾರ ತಂತ್ರಾಂಶವನ್ನು(Parihara website) ಸಾರ್ವಜನಿಕರು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು ನೇರವಾಗಿ ಭೇಟಿ ಮಾಡಿ ಈ ಲೇಖನದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ  ನಿಮ್ಮ ಹಳ್ಳಿಯ ಸಂಪೂರ್ಣ ಮಾಹಿತಿಯನ್ನು ಬೆರಳ ತುದಿಯಲ್ಲಿ ಕ್ಷಣಾರ್ಧದಲ್ಲಿ ಪಡೆಯಬಹುದು.

ರೈತರು ತಮ್ಮ ಹಳ್ಳಿಯಲ್ಲಿ ಹಾಗೂ ತಮಗೆ ಎಷ್ಟು ಬೆಳೆ ಪರಿಹಾರ ಜಮಾ ಅಗಿದೆ ಮತ್ತು ಯಾವ ದಿನಾಂಕದಂದು, ಸರ್ವೆ ನಂಬರ್, ಜಮೀನಿನ ವಿವರ ಎಲ್ಲಾ ಮಾಹಿತಿಯನ್ನು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ: DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

Bara parihara list- ನಿಮ್ಮ ಹಳ್ಳಿಯ ಬರ ಪರಿಹಾರ ಹಣ ಬಿಡುಗಡೆಯಾದ ರೈತರ ಪಟ್ಟಿ ನೋಡುವ ವಿಧಾನ:

ಕಂದಾಯ ಇಲಾಖೆಯ parihara ವೆಬ್ಸೈಟ್ ಭೇಟಿ ಮಾಡಿ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಬರ ಪರಿಹಾರ ಜಮಾ ವಿವರದ ಸಂಪೂರ್ಣ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಈ ಲಿಂಕ್ parihara payment status ಮೇಲೆ ಕ್ಲಿಕ್ ಮಾಡಿ ಅಧಿಕೃತ Parihara payment  ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು. ನಂತರದಲ್ಲಿ "Select year/ವರ್ಷ ಆಯ್ಕೆ ಮಾಡಿ", Select season/ಋತು ಆಯ್ಕೆಮಾಡಿ, Calamity Type/ವಿಪತ್ತಿನ ವಿಧ, ನಿಮ್ಮ District/ಜಿಲ್ಲೆ, Taluk/ತಾಲ್ಲೂಕು, Hobli/ಹೋಬಳಿ, ಕೊನೆಯಲ್ಲಿ ನಿಮ್ಮ Village/ಗ್ರಾಮ ಆಯ್ಕೆ ಮಾಡಿಕೊಂಡು "Get Report" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: "Get Report" ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ "ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Payment Details" ಎಂದು ತೋರಿಸಿ ಇದರ ಕೆಳಗೆ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಬರ ಪರಿಹಾರದ ಹಣ ಜಮಾ ಅಗಿದೆ ಎಂದು ಎನ್ನುವುದರ ಸಂಪೂರ್ಣ ವಿವರ ತೋರಿಸುತ್ತದೆ.

ಇದನ್ನೂ ಓದಿ: Annabhagya Payment- ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

ಇದನ್ನೂ ಓದಿ: Gruhalakshmi Payment- ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಇಲ್ಲ ಗೃಹಲಕ್ಷ್ಮಿ ಯೋಜನೆ ರೂ 2,000 ಹಣ!

ಪಟ್ಟಿಯಲ್ಲಿ ರೈತರ ಆಧಾರ್ ಕಾರ್ಡನ ಕೊನೆಯ ನಾಲ್ಕು(4) ಸಂಖ್ಯೆ ಫಲಾನುಭವಿಯ ಹೆಸರುಫಲಾನುಭವಿಯ ಹೆಸರು/Applicant Name, ಸರ್ವ ನಂಬರ್ /Survey Number, ಬೆಳೆ ಹೆಸರು/Crop Name, ಬೆಳೆಯ ವಿಧ /Crop Category, ಹಣ ಸಂದಾಯದ ಸ್ಥಿತಿ/Payment Status, ಸಂದಾಯದ ದಿನಾಂಕ/Payment Date ಮತ್ತು ಕೊನೆಯಲ್ಲಿ ಒಟ್ಟು ಸಂದಾಯವಾದ ಹಣದ ವಿವರ ತೋರಿಸುತ್ತದೆ.

ಸಂಬಂಧಪಟ್ಟ ವೆಬ್ಸೈಟ್ ಲಿಂಕ್ ಗಳು:

parihara payment status check link- click here