Subsidy for Digital Media- ಶೇ 70% ಸಬ್ಸಿಡಿಯಲ್ಲಿ 5 ಲಕ್ಷದವರೆಗೆ ಸಹಾಯಧನದಲ್ಲಿ ಡಿಜಿಟಲ್ ಮಾಧ್ಯಮ ಸ್ಥಾಪನೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!

ಶೇ 70% ಸಬ್ಸಿಡಿಯಲ್ಲಿ 5 ಲಕ್ಷದವರೆಗೆ ಸಹಾಯಧನದಲ್ಲಿ ಡಿಜಿಟಲ್ ಮಾಧ್ಯಮ ಸ್ಥಾಪನೆ(Subsidy for Digital Media) ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Subsidy for Digital Media- ಶೇ 70% ಸಬ್ಸಿಡಿಯಲ್ಲಿ 5 ಲಕ್ಷದವರೆಗೆ ಸಹಾಯಧನದಲ್ಲಿ ಡಿಜಿಟಲ್ ಮಾಧ್ಯಮ ಸ್ಥಾಪನೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ!
Subsidy for Digital Media application-2024

ಶೇ 70% ಸಬ್ಸಿಡಿಯಲ್ಲಿ 5 ಲಕ್ಷದವರೆಗೆ ಸಹಾಯಧನದಲ್ಲಿ ಡಿಜಿಟಲ್ ಮಾಧ್ಯಮ ಸ್ಥಾಪನೆ(Subsidy for Digital Media) ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಕೆ ವಿಧಾನ ಹೇಗೆ? ಯಾವ ಯೋಜನೆಯಡಿ ಸಹಾಯಧನ ನೀಡಲಾಗುತ್ತದೆ? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಈ ಯೋಜನೆಯಡಿ ಎಷ್ಟು? ಸಹಾಯಧನ ಪಡೆಯಬಹುದು?

ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಉದ್ಯಮ ಸ್ಥಾಪನೆ ಮಾಡಲು ಶೇ 70 ರಷ್ಟು ಅಥವಾ ರೂ 5 ಲಕ್ಷಗಳ ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ: HSRP number plate-2024: HSRP ನಂಬರ್ ಪ್ಲೇಟ್ ಏಕೆ? ಹಾಕಿಸಬೇಕು, ನಂಬರ್ ಪ್ಲೇಟ್ ಹೇಗಿರುತ್ತದೆ? ಇಲ್ಲಿದೆ ಆನ್ಲೈನ್ ನಲ್ಲಿ ಬುಕ್ ಮಾಡಲು ವೆಬ್ಸೈಟ್ ಲಿಂಕ್

Subsidy for Digital Media Eligibility- ಅರ್ಜಿ ಸಲ್ಲಿಸಲು ಅರ್ಹತೆಗಳು:

  • ಅರ್ಜಿದಾರರು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರಾಗಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ.10.00 ಲಕ್ಷಗಳ ಮಿತಿಯಲ್ಲಿರಬೇಕು. 
  • ಅರ್ಜಿದಾರರ ವಯಸ್ಸು 30 ವರ್ಷದಿಂದ 50 ವರ್ಷದ ವಯೋಮಾನದವರಾಗಿರಬೇಕು.
  • ಅರ್ಜಿದಾರರು ಯಾವುದಾದರೂ ಪದವಿಯ ಜೊತೆಗೆ 10 ವರ್ಷಗಳ ಸೇವಾನುಭವ (ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಹೆಸರಿರುವ ಪ್ರಮುಖ ಮಾಧ್ಯಮ ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಹೊಂದಿರಬೇಕು. 
  • ಅರ್ಜಿದಾರರು ಈ ಹಿಂದೆ ನಿಗಮಗಳಿಂದ ಯಾವುದೇ ಆರ್ಥಿಕ ಸೌಲಭ್ಯವನ್ನು ಪಡೆದಿರಬಾರದು.
  • ಅರ್ಜಿದಾರರು ಕಡ್ಡಾಯವಾಗಿ UAM (Udyog Aadhaar Memorandum) ನಲ್ಲಿ ನೊಂದಾಯಿತವಾಗಿರಬೇಕು.
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ/ ನಿಗಮ ಮಂಡಳಿ ಮತ್ತು ಇತರೆ ಸಂಸ್ಥೆಗಳಲ್ಲಿ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಹುದ್ದೆಯಲ್ಲಿ ಇರಬಾರದು.
  • ಅರ್ಜಿದಾರರು ಪ್ರಾಜೆಕ್ಟ್ ರಿಪೋರ್ಟನೊಂದಿಗೆ ಅರ್ಜಿಯನ್ನು ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರಿಗೆ ಸಲ್ಲಿಸುವುದು.

ಇದನ್ನೂ ಓದಿ: HSRP number plate-ನಿಮ್ಮ ಮೊಬೈಲ್ ನಲ್ಲೇ HSRP ನಂಬರ್ ಪ್ಲೇಟ್ ಬುಕ್ ಮಾಡಲು ಲಿಂಕ್ ಬಿಡುಗಡೆ!

  • ಘಟಕ ಸ್ಥಾಪಿಸಿದ ಉದ್ಯಮದಲ್ಲಿ ಒಬ್ಬ ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕ/ಯುವತಿಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡತಕ್ಕದ್ದು.
  • ಡಿಜಿಟಲ್ ಉದ್ಯಮ ಆರಂಭಿಸುವ ಫಲಾನುಭವಿಯು ಕಡ್ಡಾಯವಾಗಿ ಪರಿಶಿಷ್ಟ ಜಾತಿಯ ಒಬ್ಬ ನಿರುದ್ಯೋಗಿಗೆ 7 ತಿಂಗಳ ಕಾಲ ಡಿಜಿಟಲ್ ಪತ್ರಿಕೋದ್ಯಮ ತರಬೇತಿ ನೀಡಬೇಕು ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ, ಜಾಗೃತಿ ಮೂಡಿಸುವ ಸುದ್ದಿಗಳನ್ನು ಪ್ರಸಾರ ಮಾಡಬೇಕು.

Subsidy for Digital Media application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಜಿದಾರರು ಪ್ರಾಜೆಕ್ಟ್ ರಿಪೋರ್ಟನೊಂದಿಗೆ ಅರ್ಜಿಯನ್ನು ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರಿಗೆ ಸಲ್ಲಿಸುವುದು.

Application link-ನಮೂನೆ ಡೌನ್ಲೋಡ್ ಲಿಂಕ್:

ಆಸಕ್ತ ಅಭ್ಯರ್ಥಿಗಳು ಈ Download Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: PMFME ಯೋಜನೆಯಡಿ ಸ್ವ-ಉದ್ಯೋಗ ಆರಂಭಿಸಲು 15 ಲಕ್ಷ ದವರೆಗೆ ಶೇ 50% ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ವಿಶೇಷ ಸೂಚನೆ: ಬೆಂಗಳೂರು ನಗರ/ ಮೈಸೂರು/ ದಾರವಾಡ-ಹುಬ್ಬಳ್ಳಿ/ಬೆಳಗಾವಿ/ಮಂಗಳೂರು/ಕಲಬುರಗಿ/ಬಳ್ಳಾರಿ/ದಾವಣಗೆರೆ/ತುಮಕೂರು/ವಿಜಯಪುರ/ಶಿವಮೊಗ್ಗ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಾತ್ರ ಉದ್ದಿಮೆ ಸ್ಥಾಪಿಸಲು ಉದ್ದೇಶಿಸಿರುವವರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ದಿನಾಂಕಗಳು: 

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 09 ಫೆಬ್ರವರಿ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  26 ಫೆಬ್ರವರಿ 2024

ಸಂಬಂಧಪಟ್ಟ ಉಪಯುಕ್ತ ಲಿಂಕ್ ಗಳು:

ಮಾರ್ಗಸೂಚಿ ಮತ್ತು ಅರ್ಜಿ ನಮೂನೆ : Download Now
ಅಧಿಕೃತ ವೆಬ್ಸೈಟ್ ಲಿಂಕ್: click here

ಇದನ್ನೂ ಓದಿ: Nadakacheri- ನಾಡಕಚೇರಿಯಲ್ಲಿ ಯಾವೆಲ್ಲ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದು? ಎಷ್ಟು ಶುಲ್ಕ ಪಾವತಿ ಮಾಡಬೇಕು?