Gruhalakshmi Amount: ಗೃಹಲಕ್ಷ್ಮೀ ಯೋಜನೆಯಡಿ ಯಾರಿಗೆಲ್ಲ ಸಿಗಲಿದೆ ಮೊದಲನೆ ಕಂತಿನ ಹಣ? ಅಂತಿಮ ಪಟ್ಟಿ ಬಿಡುಗಡೆ!

ಗೃಹಲಕ್ಷ್ಮೀ(Gruhalakshmi) ಯೋಜನೆಯ ಚಾಲನೆಗೆ ಅಂತಿಮವಾಗಿ ದಿನಾಂಕ ಮತ್ತು ಸ್ಥಳ ನಿಗದಿಪಡಿಸಲಾಗಿದ್ದು ಕಾರ್ಯಕ್ರಮ ಸಿದ್ದತೆ ಬರದಿಂದ ಸಾಗುತ್ತಿದೆ. ಈ ಯೋಜನೆಯ ಮೊದಲ ಕಂತಿನ ಹಣ ಯಾವಾಗ ಫಲಾನುಭವಿ ಖಾತೆಗೆ ಬರಲಿದೆ ಮತ್ತು ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

Gruhalakshmi Amount: ಗೃಹಲಕ್ಷ್ಮೀ ಯೋಜನೆಯಡಿ ಯಾರಿಗೆಲ್ಲ ಸಿಗಲಿದೆ ಮೊದಲನೆ ಕಂತಿನ ಹಣ? ಅಂತಿಮ ಪಟ್ಟಿ ಬಿಡುಗಡೆ!
Gruhalakshmi 1st instalment details

ಗೃಹಲಕ್ಷ್ಮೀ(Gruhalakshmi) ಯೋಜನೆಯ ಚಾಲನೆಗೆ ಅಂತಿಮವಾಗಿ ದಿನಾಂಕ ಮತ್ತು ಸ್ಥಳ ನಿಗದಿಪಡಿಸಲಾಗಿದ್ದು ಕಾರ್ಯಕ್ರಮ ಸಿದ್ದತೆ ಬರದಿಂದ ಸಾಗುತ್ತಿದೆ. ಈ ಯೋಜನೆಯ ಮೊದಲ ಕಂತಿನ ಹಣ ಯಾವಾಗ ಫಲಾನುಭವಿ ಖಾತೆಗೆ ಬರಲಿದೆ ಮತ್ತು ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಅಧಿಕೃತ ಚಾಲನೆಗೆ ಮೂರ್-ನಾಲ್ಕು ಭಾರಿ ದಿನಾಂಕ ಬದಲಾವಣೆಯಾಗಿ ಈಗ ಅಂತಿಮವಾಗಿ 30 ಆಗಸ್ಟ್  2023 ರಂದು ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ “ಗೃಹಲಕ್ಷ್ಮೀ” ಯೋಜನೆಗೆ ಚಾಲನೆ ದೊರೆಯಲಿದೆ.

ಈ ಹಿಂದೆ ಬೆಳಗಾವಿಯಲ್ಲಿ 27 ಆಗಸ್ಟ್  2023ರಂದು ಯೋಜನೆ ಚಾಲನೆಗೆ ದಿನಾಂಕ ಮತ್ತು ಸ್ಥಳ ನಿಗದಿಪಡಿಸಲಾಗಿತ್ತು ಅದರೆ ಸ್ಥಳ ಬದಲಾವಣೆ ಕುರಿತು ಸ್ಪಷ್ಟನೆ ನೀಡಿರುವ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಲಕರ್ ಕಾರ್ಯಕ್ರಮ ಉದ್ಗಾಟನೆಗೆ ಬರಲಿರುವ ರಾಷ್ಟ್ರಿಯ ನಾಯಕರಿಗೆ ಈ ದಿನ ಬೇರೊಂದು ಕಾರ್ಯಕ್ರಮಕ್ಕೆ ಹೋಗಬೇಕಿರುವುದರಿಂದ ಬೆಂಗಳೂರಿಗೆ ಹತ್ತಿರವಿರುವ ಜಿಲ್ಲೆಯಲ್ಲಿ ಸ್ಥಳ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Gruha jyothi status: ಗೃಹಲಕ್ಷ್ಮೀ ಯೋಜನೆಯಡಿ ಯಾರಿಗೆಲ್ಲ ಸಿಗಲಿದೆ ಮೊದಲನೆ ಕಂತಿನ ಹಣ? 

ಗೃಹಲಕ್ಷ್ಮೀ ಯೋಜನೆಯಡಿ ಇಲ್ಲಿಯವರೆಗೆ 1.28 ಕೋಟಿ ಕುಟುಂಬದ ಯಜಮಾನಿಯರು ನೋಂದಣಿ ಮಾಡಿಕೊಂಡಿದ್ದು ಇದರಲ್ಲಿ ಅರ್ಹ ಎಲ್ಲಾ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣ ದೊರೆಯಲಿದೆ. 

ಅದರೆ ಈ ನಿಯಮಗಳನ್ನು ಪಾಲಿಸದವರಿಗಿಲ್ಲ ಮೊದಲ ಕಂತು: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ರೇಷನ್ ಕಾರ್ಡ ತಿದ್ದಿಪಡಿಗೆ ಅರ್ಜಿ ಸಲ್ಲಿಸಿ ಅರ್ಜಿ ತಿದ್ದುಪಡಿ ಅಗದಿರುವವರಿಗೆ ಹಣ ಜಮಾ ಅಗುವುದಿಲ್ಲ. ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿ ಮಂಜೂರು ಪತ್ರ ದೊರೆಯದೆ ಒಂದು ವಾರದ ನಂತರ ಮಂಜೂರು ಪತ್ರ(Sanction order) ಡೌನ್ಲೋಡ್ ಮಾಡಿಕೊಳ್ಳಿ ಎಂದು ಬಂದು ಆಗಸ್ಟ್ 30 ಒಳಗಾಗಿ ಮಂಜೂರು ಪತ್ರ ದೊರೆಯದವರಿಗೂ ಸಿಗುವುದಿಲ್ಲ ಮೊದಲನೆ ಕಂತಿನ ಹಣ.

ಇದನ್ನೂ ಓದಿ: Ration card correction guidelines- ಪಡಿತರ ಚೀಟಿಯಲ್ಲಿ ತಿದ್ದುಪಡಿ ಮತ್ತು ಸೇರ್ಪಡೆಗೆ ಯಾವೆಲ್ಲ ನಿಯಮ ಪಾಲಿಸಬೇಕು ಎಂದು ಮಾರ್ಗಸೂಚಿ ಬಿಡುಗಡೆ!

ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಖಾತೆಯ ವಿವರ ಕೊಡದೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸಲು ತಿಳಿಸಿ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದಿದರೆ ಹಣ ಜಮಾ ಅಗುವುದಿಲ್ಲ.  ಈ ಮೇಲಿನ ಕಾರಣಗಳಿಂದ ಮೊದಲನೆ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಅಗುವುದನ್ನು ತಪ್ಪಿಸಿಕೊಳ್ಳಲು ಅರ್ಜಿ ಸಲ್ಲಿಸದವರು ಕೂಡಲೇ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಮಂಜೂರು ಪತ್ರ ಪಡೆಯಿರಿ.

ಅರ್ಜಿ ಸಲ್ಲಿಸಿದ ನಂತರ ಇ-ಕೆವೈಸಿ ಅಗಿರುತ್ತದೆ ಮಂಜೂರು ಪತ್ರ ಡೌನ್ಲೋಡ್ ಮಾಡಲು ಒಂದು ವಾರದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಡೌನ್ಲೋಡ್ ಲಿಂಕ್ ಮೇಲೆ ಒತ್ತಿ ಮಂಜೂರು ಪತ್ರ ಬಂದಿರುವುದನ್ನು ಖಚಿತಪಡಿಸಿಕೊಳ್ಳಿ.

ಆಧಾರ್ ಲಿಂಕ್ ಆಗಿರುವ ಖಾತೆಗೆ ಹಣ ವರ್ಗಾವಣೆ ಆಯ್ಕೆಯನ್ನು ಕೊಟ್ಟಿರುವವರು ಒಮ್ಮೆ Myadhar app ಡೌನ್ಲೋಡ್ ಮಾಡಿಕೊಂಡುನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿರುವುದಲ್ಲಿ ಖಚಿತಪಡಿಸಿಕೊಳ್ಳಿ.

Gruhalakshmi final list- ಗೃಹಲಕ್ಷ್ಮೀ ಯೋಜನೆ ಅಂತಿಮ ಪಟ್ಟಿ ಬಿಡುಗಡೆ:

ಈ ಲಿಂಕ್ https://www.krushikamitra.com/Gruhalakshmi-application-status ಮೇಲೆ ಕ್ಲಿಕ್ ಮಾಡಿ ಈ ಅಂಕಣದಲ್ಲಿ ವಿವರಿಸಿದ ವಿಧಾನ ಅನುಸರಿಸಿ ಸಹಾಯವಾಣಿಗೆ ನಿಮ್ಮ ರೇಷನ್ ಕಾರ್ಡ ನಂಬರ್ ಮೇಸೆಜ್ ಮಾಡಿ ಅಂತಿಮ ಪಟ್ಟಿಯಲ್ಲಿ ನಿಮ್ಮ  ಹೆಸರಿರುವುದನ್ನು ಪರಿಶೀಲಿಸಿಕೊಳ್ಳಬವುದು. 

ಗೃಹಲಕ್ಷ್ಮೀ ಯೋಜನೆಗೆ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ಪಡೆಯಲು ಈ https://ahara.kar.nic.in/Home/EServices ಲಿಂಕ್ ಮೇಲೆ ಕ್ಲಿಕ್ ಮಾಡಿ "ಹಳ್ಳಿಯ ಪಟ್ಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ, ಹಳ್ಳಿ ಆಯ್ಕೆಯನ್ನು ಮಾಡಿಕೊಂಡು "GO" ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮೀ ಯೋಜನೆಯ ಅರ್ಹ ಪಟ್ಟಿ ಪಡೆಯಬವುದು.

ಕಾರ್ಯಕ್ರಮದ ಸ್ಥಳ ಪರಿಶೀಲನೆ ಮಾಡಿದ: ಸಚಿವೆ ಲಕ್ಷ್ಮೀ ಹೆಬ್ಬಾಲಕರ್ 

ಆಗಸ್ಟ್ 30 ರಂದು ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ “ಗೃಹಲಕ್ಷ್ಮೀ” ಯೋಜನೆಗೆ ಚಾಲನೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಮೈದಾನದಲ್ಲಿ ನಡೆಯುತ್ತಿರುವ ಪೂರ್ವ ಸಿದ್ಧತೆಗಳನ್ನು ವೀಕ್ಷಿಸಿದೆ. 

ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಡಿ. ರವಿಶಂಕರ್, ಹರೀಶ್ ಗೌಡ, ದರ್ಶನ್ ಧ್ರುವ ನಾರಾಯಣ್ , ಮೈಸೂರು ಜಿಲ್ಲಾಧಿಕಾರಿ ರಾಜೇಂದ್ರ, ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದರು ಎಂದು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಗ್ಯಾರಂಟಿ ಯೋಜನೆಗಳ ಇನ್ನು ಹೆಚ್ಚಿನ ಅಂಕಣಗಳು ಹೀಗಿವೆ:

ಇದನ್ನೂ ಓದಿ: How to check Gruhalakshmi application status: ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?

ಇದನ್ನೂ ಓದಿ: Gruha Lakshmi : ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಮತ್ತಷ್ಟು ಸರಳ! ಅರ್ಜಿ ಸಲ್ಲಿಸಲು ಇನ್ನು ಮುಂದೆ ಮೇಸೆಜ್ ಗಾಗಿ ಕಾಯಬೇಕಿಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಲಕರ್.

ಇದನ್ನೂ ಓದಿ: Annabhagya August amount: ಅನ್ನಭಾಗ್ಯ  ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.

ಇದನ್ನೂ ಓದಿ: Electricity bill download: ಪ್ರತಿ ತಿಂಗಳ ಕರೆಂಟ್ ಬಿಲ್ ಅನ್ನು ನಿಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬವುದು! ಇಲ್ಲಿದೆ ವೆಬ್ಸೈಟ್ ಲಿಂಕ್.

ಇದನ್ನೂ ಓದಿ: ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ | Release of canceled ration card list by food department