MSP price-2023: ಬೆಂಬಲ ಬೆಲೆಯಲ್ಲಿ ರಾಗಿ,ಜೋಳ,ಭತ್ತ ಖರೀದಿ! ಬೆಲೆ ಎಷ್ಟು? ನೊಂದಣಿ ಪ್ರಕ್ರಿಯೆ ಹೇಗಿರಲಿದೆ?

MSP price details-2023: ರಾಜ್ಯದ್ಯಂತ ರೈತರಿಂದ ನೇರವಾಗಿ ಕೇಂದ್ರ ಸರಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ದರದಲ್ಲಿ(MSP) ರಾಗಿ, ಬಿಳಿಜೋಳ, ಭತ್ತವನ್ನು ಖರೀದಿ ಮಾಡಿಕೊಳ್ಳು ನೊಂದಣಿಯನ್ನು ಆರಂಭಿಸಿದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವ ಕ್ರಮ ಅನುಸರಿಸಬೇಕು? ಯಾವೆಲ್ಲ ಉತ್ಪನ್ನಗಳನ್ನು ಮಾರಾಟ ಮಾಡಬವುದು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

MSP price-2023: ಬೆಂಬಲ ಬೆಲೆಯಲ್ಲಿ ರಾಗಿ,ಜೋಳ,ಭತ್ತ ಖರೀದಿ! ಬೆಲೆ ಎಷ್ಟು? ನೊಂದಣಿ ಪ್ರಕ್ರಿಯೆ ಹೇಗಿರಲಿದೆ?
MSP price details-2023

ರಾಜ್ಯದ್ಯಂತ ರೈತರಿಂದ ನೇರವಾಗಿ ಕೇಂದ್ರ ಸರಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ದರದಲ್ಲಿ(MSP) ರಾಗಿ, ಬಿಳಿಜೋಳ, ಭತ್ತವನ್ನು ಖರೀದಿ ಮಾಡಿಕೊಳ್ಳು ನೊಂದಣಿಯನ್ನು ಆರಂಭಿಸಿದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವ ಕ್ರಮ ಅನುಸರಿಸಬೇಕು? ಯಾವೆಲ್ಲ ಉತ್ಪನ್ನಗಳನ್ನು ಮಾರಾಟ ಮಾಡಬವುದು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಸರ್ಕಾರವು 2023-24ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಮತ್ತು ಜೋಳ ಆಹಾರ ಧಾನ್ಯಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದೆ ರೈತರಿಗೆ ಸಹಾಯಕವಾಗುವಂತೆ ಮುಂಗಾರು ಬೆಳೆಗಳ ಖರೀದಿಗೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಿಗೆ ಖರೀದಿ ಏಜೆನ್ಸಿಯನ್ನು ಸಹ ನೇಮಕ ಮಾಡಲಾಗುತ್ತಿದೆ. 

ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಬೆಳೆಗಳ ಕಟಾವು ಆರಂಭವಾಗಿದ್ದು, ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ರೈತರ ನೊಂದಣಿ ಆರಂಭಿಸಲಾಗಿದ್ದು, ನವೆಂಬರ್ ಅಂತ್ಯ, ಡಿಸೆಂಬರ್‌ನಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Udyogini Yojane-2023: ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ಮಹಿಳಾ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ!

MSP rate details-2023: ಪ್ರಸ್ತುತ ರಾಜ್ಯದಲ್ಲಿ ಬೆಂಬಲ ಬೆಳೆಯಲ್ಲಿ ರೈತರಿಂದ ಖರೀದಿ ಮಾಡುತ್ತಿರುವ ಬೆಳೆಗಳ ವಿವರ:

  • ಭತ್ತ (ಸಾಮಾನ್ಯ) ಪ್ರತಿ ಕ್ವಿಂಟಾಲ್‌ಗೆ ದರ ರೂ. 2183
  • ಭತ್ತ (ಗ್ರೇಡ್-ಎ) ಪ್ರತಿ ಕ್ವಿಂಟಾಲ್‌ಗೆ ದರ ರೂ.2203
  • ಬಿಳಿಜೋಳ (ಹೈಬ್ರಿಡ್) ಪ್ರತಿ ಕ್ವಿಂಟಾಲ್‌ಗೆ ದರ ರೂ. 3180 
  • ಬಿಳಿಜೋಳ ಮಾಲ್ದಂಡಿ ಪ್ರತಿ ಕ್ವಿಂಟಾಲ್‌ಗೆ ದರ ರೂ. 3225 
  • ರಾಗಿ ಪ್ರತಿ ಕ್ವಿಂಟಾಲ್‌ಗೆ ದರ ರೂ. 3846 ರಂತೆ ಸರ್ಕಾರವು ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಉತ್ಪನ್ನಗಳನ್ನು ಖರೀದಿಸಲು ಮುಂದಾಗಿದೆ. 

Benbala Bele Yojane-ರೈತರು ಬೆಂಬಲ ಬೆಲೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವುದು ಹೇಗೆ? 

ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು(ರಾಗಿ, ಬಿಳಿಜೋಳ, ಭತ್ತ) ಕೇಂದ್ರ ಸರಕಾರ ನಿಗದಿಪಡಿಸಿದ ಬೆಂಬಲ ಬೆಲೆ ದರದಲ್ಲಿ ಮಾರಾಟ ಮಾಡಲು ಮೊದಲು ನಿಮ್ಮ ಜಿಲ್ಲೆಯಲ್ಲಿ ನಿಗದಿಪಡಿಸಿದ ಖರೀದಿ ಕೇಂದ್ರ ಭೇಟಿ ಮಾಡಿ ಉತ್ಪನ್ನ ಮಾರಾಟ ಮಾಡಲು ಪ್ರಥಮ ಹಂತದಲ್ಲಿ ನೊಂದಣಿ ಮಾಡಿಕೊಳ್ಳಬೇಕು.

ನಂತರ ಖರೀದಿ ಕೇಂದ್ರದ ಅಧಿಕಾರಿಗಳು ಸೂಚಿಸಿದ ದಿನಾಂಕದಂದು ನಿಮ್ಮ ಉತ್ಪನ್ನವನ್ನು ತೆಗೆದುಕೊಂಡು ಹೋಗಿ ತೂಕ ಮಾಡಿಸಿ ಮಾರಾಟ ಮಾಡಬೇಕು ಹೀಗೆ ಮಾರಾಟ ಮಾಡಿದ ಬಳಿಕ ಮಾರಾಟ ರಶೀದಿಯಲ್ಲಿ ಗೊತ್ತುಪಡಿಸಿದ ದಿನಾಂಕದ ಒಳಗಾಗಿ ನೇರ ನಗದು ವರ್ಗಾವಣೆ ಮೂಲಕ ನಿಮ್ಮ ಖಾತೆಗೆ ಉತ್ಪನ್ನದ ಹಣ ಜಮಾ ಅಗುತ್ತದೆ.

ಇದನ್ನೂ ಓದಿ: DBT Status App-ಅರ್ಜಿದಾರರಿಗೆ ಗ್ಯಾರಂಟಿ ಯೋಜನೆಗಳ ಹಣ ಜಮಾ ಅಗಿರುವುದನ್ನು ತಿಳಿಯಲು ಮೊಬೈಲ್ ಅಪ್ಲಿಕೇಶನ್!

ಬೇಕಾಗುವ ದಾಖಲಾತಿಗಳು:

(1) FID/ ಪ್ರೂಟ್ಸ್ ಐಡಿ.
(2) ರೈತರ ಆಧಾರ್ ಕಾರ್ಡ
(3) ಪಹಣಿ/ಉತಾರ್
(4) ಬ್ಯಾಂಕ್ ಪಾಸ್ ಬುಕ್ ಪ್ರತಿ

ಪ್ರಸ್ತುತ ಮುಂಗಾರು ಬೆಳೆ ಖರೀದಿಗೆ ಸಂಬಂಧಿಸಿದಂತೆ ಖರೀದಿ ಏಜೆನ್ಸಿ ನೇಮಕ ಮಾಡಲಾಗಿದೆ. ಬೆಳೆಗಳ ಖರೀದಿಗೆ ರೈತರಿಂದ ನೋಂದಣಿ ಕಾರ್ಯವನ್ನು ವಿವಿಧ ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ. ರೈತರು ನಿಗದಿತ ದಿನಾಂಕದೊಳಗೆ ಖರೀದಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಕೇಂದ್ರ ಸರ್ಕಾರವು ನಿಗದಿಪಡಿಸಿದ ಎಫ್‌ಎಕ್ಯೂ ಗುಣಮಟ್ಟದ ಭತ್ತವನ್ನು ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಗರಿಷ್ಠ 40 ಕ್ವಿಂಟಾಲ್ ಮೀರದಂತೆ ಖರೀದಿಸಲಾಗುವುದು ಹಾಗೂ ಭತ್ತವನ್ನು ಸರಬರಾಜು ಮಾಡಿದ ರೈತರಿಗೆ 15 ದಿನಗಳೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರನಗದು ವರ್ಗಾವಣೆ (ಡಿಬಿಟಿ) ಮುಖಾಂತರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಜಿಲ್ಲೆಗಳಲ್ಲಿ ನಿಗದಿತ ಸ್ಥಳದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಪ್ರತಿ ಖರೀದಿ ಕೇಂದ್ರಗಳಿಗೆ ನುರಿತ ಗುಣಮಟ್ಟ ಪರೀಕ್ಷಕರನ್ನು ನೇಮಿಸಲಾಗುತ್ತದೆ ಹಾಗೂ ಗುಣಮಟ್ಟ ಪರಿಶೀಲನೆ ಹೆಸರಲ್ಲಿ ರೈತರಿಗೆ ಯಾವುದೇ ಅನಾನುಕೂಲವಾಗದಂತೆ ಎಚ್ಚರವಹಿಸಲಾಗುತ್ತಿದು. ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುತ್ತಿರುವುದರ ಕುರಿತು ರೈತರಿಗೆ ತಿಳಿಸಲು ಕೃಷಿ ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆಗಳು ಕರಪತ್ರ, ಡಂಗೂರ, ಬ್ಯಾನರ್ ಮೂಲಕ ಪ್ರಚಾರ ನೀಡಿ ರೈತರಿಗೆ ಮಾಹಿತಿ ನೀಡಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Gruhalakshmi status update: ನಿಮಗೆ ಒಂದು ಬಾರಿಯು ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದರೆ ತಪ್ಪದೇ ಈ ಕೆಲಸ ಮಾಡಿ!

ರೈತರು ಕೃಷಿ ಇಲಾಖೆಯಿಂದ ಈಗಾಗಲೇ ಜಾರಿಗೊಳಿಸಿರುವ ಫ್ರೂಟ್ಸ್ ದತ್ತಾಂಶದಲ್ಲಿರುವ ರೈತರ ಫ್ರೂಟ್ಸ್ ಐಡಿ ಮಾಹಿತಿಯನ್ನು ಪಡೆದು, ಕೃಷಿ ಇಲಾಖೆ ಒದಗಿಸಿರುವ ಸರಾಸರಿ ಬೆಳೆ ಮಾಹಿತಿಗಳನ್ವಯ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಿ ಬೆಳೆಗಳನ್ನು ಮಾರಾಟ ಮಾಡಬಹುದಾಗಿದೆ.

MSP price details-2023: ಈ ವರ್ಷ ವಿವಿಧ ಬೆಳೆಗಳಿಗೆ ಕೇಂದ್ರ ಸರಕಾರದಿಂದ ನಿಗದಿಪಡಿಸಿರುವ ಬೆಂಬಲ ಬೆಲೆ(MSP) ವಿವರ ಹೀಗಿದೆ:

ಇದನ್ನೂ ಓದಿ: fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!

ಇದನ್ನೂ ಓದಿ:  Mixed breed cow Unit: ಶೇ.90 ರ ಸಹಾಯಧನದಲ್ಲಿ ಮಿಶ್ರ ತಳಿ ಹಸು ವಿತರಣೆ