Udyogini Yojane-2023: ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ಮಹಿಳಾ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ!

Udyogini Yojana application: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುವ ರಾಜ್ಯದ ಮಹಿಳಾ ಅಭಿವೃದ್ಧಿ ನಿಗಮ 2023-24ನೇ ಸಾಲಿನ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Udyogini Yojane-2023: ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ಮಹಿಳಾ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ!
ಮಹಿಳಾ ಅಭಿವೃದ್ಧಿ ನಿಗಮ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಕಾರ್ಯನಿರ್ವಹಿಸುವ ರಾಜ್ಯದ ಮಹಿಳಾ ಅಭಿವೃದ್ಧಿ ನಿಗಮ 2023-24ನೇ ಸಾಲಿನ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಫಲಾನುಭವಿಗಳು ಈ ಅಂಕಣದಲ್ಲಿರುವ ಮಾಹಿತಿಯನ್ನು ಸರಿಯಾಗಿ ಒಂದು ಬಾರಿ ಸಂಪೂರ್ಣವಾಗಿ ತಿಳಿದು ಅಗತ್ಯ ದಾಖಲಾತಿಗಳ ಸಮೇತ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬವುದು.

ಪ್ರತಿ ವರ್ಷದಂತೆ ಈ ವರ್ಷವು ಮಹಿಳಾ ಅಭಿವೃದ್ಧಿ ನಿಗಮದಿಂದ ಉದ್ಯೋಗಿನಿ ಯೋಜನೆ, ಚೇತನ ಯೋಜನೆ, ಧನಶ್ರೀ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕೆಳಗೆ ಒಂದೊಂದು ಯೋಜನೆಗಳ ಕುರಿತು ಸಂಪೂರ್ಣ ವಿವರ ಮತ್ತು ಅರ್ಜಿ ಸಲ್ಲಿಕೆ ವಿಧಾನದ ಕುರಿತು ಮಾಹಿತಿ ತಿಳಿಸಲಾಗಿದ್ದು ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪಿಗಳಿಗೆ ಶೇರ್ ಮಾಡಲು ಮರೆಯದಿರಿ.

ಇದನ್ನೂ ಓದಿ: DBT Status App-ಅರ್ಜಿದಾರರಿಗೆ ಗ್ಯಾರಂಟಿ ಯೋಜನೆಗಳ ಹಣ ಜಮಾ ಅಗಿರುವುದನ್ನು ತಿಳಿಯಲು ಮೊಬೈಲ್ ಅಪ್ಲಿಕೇಶನ್!

(1)ಉದ್ಯೋಗಿನಿ ಯೋಜನೆ:

ಈ ಯೋಜನೆಯಡಿ ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ  ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.

ಸಹಾಯಧನ ವಿವರ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚ ಕನಿಷ್ಟ ರೂ.1.00 ಲಕ್ಷದಿಂದ ಗರಿಷ್ಟ ರೂ.3.00 ಲಕ್ಷಗಳು.  ಸಹಾಯಧನದ ಮೊತ್ತ ಶೇ.50 ರಷ್ಟು ಗರಿಷ್ಟ ರೂ.1.50 ಲಕ್ಷಗಳು.  ಕುಟುಂಬದ ವಾರ್ಷಿ‍ಕ  ಆದಾಯದ ಗರಿಷ್ಟ ಮಿತಿ ರೂ.2.00 ಲಕ್ಷಗಳು.

ಸಾಮಾನ್ಯ ವರ್ಗ ಮತ್ತು ವಿಶೇಷ  ವರ್ಗದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚ ಗರಿಷ್ಟ ರೂ.3.00 ಲಕ್ಷಗಳು.  ಸಹಾಯಧನದ ಮೊತ್ತ  ಶೇ30 ರಷ್ಟು ಗರಿಷ್ಟ ರೂ.90,000/-. ಕುಟುಂಬದ ವಾರ್ಷಿಕ ಆದಾಯದ ಗರಿಷ್ಟ ಮಿತಿ ರೂ.1.50 ಲಕ್ಷಗಳು.  ಎಲ್ಲಾ ವರ್ಗದ ಮಹಿಳೆಯರಿಗೆ ವಯೋಮಿತಿ 18 ರಿಂದ 55 ವ‍‍ರ್ಷಗಳು.

ಇದನ್ನೂ ಓದಿ: Gruhalakshmi status update: ನಿಮಗೆ ಒಂದು ಬಾರಿಯು ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದರೆ ತಪ್ಪದೇ ಈ ಕೆಲಸ ಮಾಡಿ!

ವಯೋಮಿತಿ: 18ರಿಂದ 55 ವರ್ಷಗಳು.

(2)ಚೇತನ ಯೋಜನೆ:

ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ದಮನಿತ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ. 

ವಯೋಮಿತಿ: 18 ವರ್ಷ ಮೇಲ್ಪಟ್ಟು.

(3)ಧನಶ್ರೀ ಯೋಜನೆ:

ಧನಶ್ರೀ ಯೋಜನೆ ಮುಖಾಂತರ ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ 18 ರಿಂದ 60 ವಯೊಮಿತಿಯ ಹೆಚ್.ಐ.ವಿ. ಸೋಂಕಿತ/ಬಾಧಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ತಲಾ ರೂ.30,000/- ಗಳ ಪ್ರೋತ್ಸಾಹಧನವನ್ನು ಇ.ಡಿ.ಪಿ. ತರಬೇತಿಯೊಂದಿಗೆ ನೀಡಲಾಗುತ್ತದೆ. 

(4)ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ:

ಈ ಯೋಜನೆಯಡಿ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

(5)ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ:

1993-94 & 2007-08 ರ ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

ಆರ್ಥಿಕವಾಗಿ ಮಾಜಿ ದೇವದಾಸಿಯರನ್ನು ಸಬಲೀಕರಣಗೊಳಿಸಲು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳುವ ಉದ್ದೇಶಕ್ಕಾಗಿ ನಿಗಮದಿಂದ ಈ ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತದೆ.

ಇದನ್ನೂ ಓದಿ: fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!

ಯೋಜನೆ ಮಾರ್ಗಸೂಚಿ
ಉದ್ಯೋಗಿನಿ ಯೋಜನೆ Download Now
ಧನಶ್ರೀ ಯೋಜನೆ Download Now
ಮಹಿಳಾ ಅಭಿವೃದ್ಧಿ ನಿಗಮದ ವೆಬ್ಸೈಟ್ Click here
Seva sindhu link Click here

ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ : 22-11-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-12-2023 

ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಛೇರಿ ಭೇಟಿ ಮಾಡಿ ಮಾಹಿತಿ ಪಡೆಯಬವುದು.

ಮಹಿಳಾ ಅಭಿವೃದ್ಧಿ ನಿಗಮದ ಕಚೇರಿ ವಿಳಾಸ: 6ನೇ ಮಹಡಿ. ಜಯನಗರ ವಾಣಿಜ್ಯ ಸಂಕೀರ್ಣ. 4ನೇ ಬ್ಲಾಕ್, ಜಯನಗರ, ಬೆಂಗಳೂರು-560011
ದೂರವಾಣಿ ಸಂಖ್ಯೆ: 080-26632973/26542307

ಇದನ್ನೂ ಓದಿ: Karnataka weather- ಕರ್ನಾಟಕ ಮಳೆ ಮುನ್ಸೂಚನೆ ದಿ,23 ರಿಂದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!

ಅರ್ಜಿ ಸಲ್ಲಿಸುವವರಿಗೆ ವಿಶೇಷ ಸೂಚನೆ:

  • ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್/ಲಿಂಕ್ ಮಾಡಿಸಿರಬೇಕು. 
  • ಉದ್ಯೋಗಿನಿ ಯೋಜನೆಯಡಿ ಬಳಕೆಯಾಗದ ಅನುದಾನದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು / ಅರ್ಜಿದಾರರು ಸಹ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವುದು.
  • ಈ ಮೇಲಿನ ಎಲ್ಲಾ ಯೋಜನೆಗಳಿಗೆ ಅರ್ಜಿಗಳು ಸೇವಾಸಿಂಧು ಪೋರ್ಟಲ್ ನಲ್ಲಿ ಲಭ್ಯವಿರುತ್ತವೆ. 
  • ಫಲಾಪೇಕ್ಷಿಗಳು/ಅರ್ಜಿದಾರರು ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವುದು.
  • ಸರ್ಕಾರದ ವಿವೇಚನಾ ಕೋಟಾ ಮತ್ತು ನಿಗಮದ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾಪೇಕ್ಷಿಗಳು/ ಅರ್ಜಿದಾರರು ಮಾನ್ಯ ಸಚಿವರು/ಮಾನ್ಯ ಶಾಸಕರು, ಕರ್ನಾಟಕ ಸರ್ಕಾರ/ಮಾನ್ಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಇವರ ಶಿಫಾರಸ್ಸು ಪತ್ರ ಪಡೆದು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.