Karnataka weather- ಕರ್ನಾಟಕ ಮಳೆ ಮುನ್ಸೂಚನೆ ದಿ,23 ರಿಂದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!
weather forecast: ಕರ್ನಾಟಕ ಮಳೆ ನಕ್ಷೆಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕ್ಯಾಸಂಬಳ್ಳಿ ವ್ಯಾಪ್ತಿಯಲ್ಲಿ ಅತ್ಯಧಿಕ 8 ಮೀ ಮೀ ಮಳೆ ದಾಖಲಾಗಿರುತ್ತದೆ.
ಕರ್ನಾಟಕ ಮಳೆ ನಕ್ಷೆಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಕ್ಯಾಸಂಬಳ್ಳಿ ವ್ಯಾಪ್ತಿಯಲ್ಲಿ ಅತ್ಯಧಿಕ 8 ಮೀ ಮೀ ಮಳೆ ದಾಖಲಾಗಿರುತ್ತದೆ.
ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಮೋಡದ ವಾತಾವರಣದಿಂದ ಕೂಡಿರುತ್ತದೆ, ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಲ್ಲಿಲ್ಲಿ ತುಂತುರು ಮಳೆ ದಾಖಲಾಗಿರುತ್ತದೆ.
ಹವಾಮಾನ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಹಿಂಗಾರು ಮಳೆಯು ಚುರುಕಾಗಿದ್ದು ನಾಳೆಯಿಂದ ಅಂದರೆ 23 ನವೆಂಬರ್ ನಿಂದ ಒಂದು ವಾರದ ವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Udyogini Yojane-2023: ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ಮಹಿಳಾ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ!
Karnataka weather forecast-ನಾಳೆ ಬೆಳಿಗ್ಗೆ 8-00 ಗಂಟೆಯವರೆಗಿನ ಮಳೆ ಮುನ್ಸೂಚನೆ ವಿವರ ಹೀಗಿದೆ:
ಹವಾಮಾನ ಮುನ್ಸೂಚನೆ ತಜ್ಞರ ಮಾಹಿತಿಯ ಪ್ರಕಾರ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ. ಉತ್ತರ ಕನ್ನಡ ಒಣ ಹವೆ ಮುಂದುವರೆಯುವ ಸಾಧ್ಯತೆ ಇರುತ್ತದೆ.
ಹಾಸನ, ಚಿಕ್ಕಮಗಳೂರು, ಕೊಡಗು ಅಲ್ಲಲ್ಲಿ ಮೋಡ ವಾತಾವರಣದ ಮುನ್ಸೂಚನೆ ಇದೆ. ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಮುನ್ಸೂಚನೆ ನೀಡಲಾಗಿದೆ.
ಉಳಿದಂತೆ ಪಾವಗಡ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇರುತ್ತದೆ ರಾಮನಗರ, ಬೆಂಗಳೂರು, ತುಮಕೂರು ಜಿಲ್ಲೆಗಳಲ್ಲಿ ಮೋಡದ ವಾತಾವರಣದ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇರುತ್ತದೆ. ಚಿಕ್ಕಮಗಳೂರು,ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳ ಅಲ್ಲಲ್ಲಿ ಮೋಡ ಕವಿದ ವಾತಾವರಣದ ಮುನ್ಸೂಚನೆ ನೀಡಲಾಗಿದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ಇದನ್ನೂ ಓದಿ: DBT Status App-ಅರ್ಜಿದಾರರಿಗೆ ಗ್ಯಾರಂಟಿ ಯೋಜನೆಗಳ ಹಣ ಜಮಾ ಅಗಿರುವುದನ್ನು ತಿಳಿಯಲು ಮೊಬೈಲ್ ಅಪ್ಲಿಕೇಶನ್!
Next 7 days weather- ಮುಂದಿನ ಒಂದು ವಾರದ ಮಳೆ ಮುನ್ಸೂಚನೆ:
ಕರ್ನಾಟಕ ಮಳೆ ಮುನ್ಸೂಚನೆ ನಕ್ಷೆಯ ಪ್ರಕಾರ ದಿನಾಂಕ: 22 ನವೆಂಬರ್ 2023 ರಿಂದ 30 ನವೆಂಬರ್ 2023 ರವರೆಗೆ ರಾಜ್ಯದ ಬಹುತೇಕ ಹಲವು ಜಿಲ್ಲೆಗಳಲ್ಲಿ ಮೋಡ ಮತ್ತು ತುಂತುರು ಮಳೆ ವಾತಾವರಣ ಇರಲಿದೆ ಎಂದು ಸೂಚಿಸಲಾಗಿದೆ.
ಈ ಮೇಲಿನ ನಕ್ಷೆಯಲ್ಲಿ ಹಸಿರು ಬಣ್ಣದಿಂದ ಗುರುತಿಸಿದ ಜಿಲ್ಲೆಗಳಾದ ಉಡುಪಿ, ದಕ್ಷಿಣಕನ್ನಡ, ಕೊಡಗು,ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಉತ್ತಮ(25 ಮಿಲಿ ಮೀಟರ್ ನಿಂದ 50 ಮಿ ಮೀ) ಮಳೆ ಸಾಧ್ಯತೆ ಇರುತ್ತದೆ.
ಅಚ್ಚ ನೀಲಿ ಬಣ್ಣದಿಂದ ಗುರುತಿಸಲಾದ ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ರಾಮನಗರ, ತುಮಕೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಸಾಧಾರಣ(13 ಮಿಲಿ ಮೀಟರ್ ನಿಂದ 20 ಮಿಮಿ) ಮಳೆ ಮುನ್ಸೂಚನೆ ನೀಡಲಾಗಿದೆ.
ತಿಳಿ ನೀಲಿ ಬಣ್ಣದಿಂದ ಗುರುತಿಸಿದ ಚಿತ್ರದುರ್ಗ, ದಾವಣಗೆರೆ, ಹಾವೇರಿ, ದಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಾಪುರ, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ತುಂತುರು ಮಳೆ(2.5 ಮಿ ಮಿ ನಿಂದ 5 ಮಿ ಮಿ ಮಳೆ) ಮುನ್ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Gruhalakshmi status update: ನಿಮಗೆ ಒಂದು ಬಾರಿಯು ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದರೆ ತಪ್ಪದೇ ಈ ಕೆಲಸ ಮಾಡಿ!
kharif rain-ಹಿಂಗಾರು ಮಳೆ ಮಾಹಿತಿ:
ಹಿಂಗಾರು ಹಾಗೂ ಅರಬ್ಬಿ ಸಮುದ್ರದಲ್ಲಿ ಗಾಳಿಯ ಅಸಹಜ ಚಲನೆಯ ಪರಿಣಾಮದಿಂದ ನವೆಂಬರ್ 23 ಹಾಗೂ 24ರಂದು ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ನವೆಂಬರ್ 30ರ ತನಕವೂ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಮಾಹಿತಿ ಕೃಪೆ: ಸಾಯಿಶೇಖರ್ ಬಿ & KSNDMC
ಇದನ್ನೂ ಓದಿ: fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!