Social Welfare Department: ಕೃಷಿ ಜಮೀನು ಖರೀದಿಸಲು ಭೂ ಒಡೆತನ ಯೋಜನೆಯಡಿ ಶೇ 50 ಸಹಾಯಧನದಲ್ಲಿ 25 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

Social Welfare Department schemes-2023: ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಜನರಿಗೆ ಅರ್ಥಿಕವಾಗಿ  ನೆರವು ನೀಡಲು ಭೂ ಒಡೆತನ ಯೋಜನೆ ಸೇರಿ 6 ಯೋಜನೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

Social Welfare Department: ಕೃಷಿ ಜಮೀನು ಖರೀದಿಸಲು ಭೂ ಒಡೆತನ ಯೋಜನೆಯಡಿ ಶೇ 50 ಸಹಾಯಧನದಲ್ಲಿ 25 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!
Social Welfare Department schemes-2023

ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಜನರಿಗೆ ಅರ್ಥಿಕವಾಗಿ ನೆರವು ನೀಡಲು ಭೂ ಒಡೆತನ ಯೋಜನೆ ಸೇರಿ 6 ಯೋಜನೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿಗಳ ಸಮೇತ ಆನ್ಲೈನ್ ಮೂಲಕ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆಯಬವುದು ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

Social Welfare Department schemes: 2023-24ನೇ ಸಾಲಿನಲ್ಲಿ ಈ ಕೆಳಕಂಡ ಯೋಜನೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ:

1)ಭೂ ಒಡೆತನ ಯೋಜನೆ.
2)ಗಂಗಾ ಕಲ್ಯಾಣ ಯೋಜನೆ.
3)ಸ್ವಯಂ ಉದ್ಯೋಗ ನೇರಸಾಲ ಯೋಜನೆ.
4)ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ.
5)ಸ್ವಾವಲಂಭಿ ಸಾರಥಿ.
6)ಮೈಕ್ರೋಕ್ರೆಡಿಟ್ ಯೋಜನೆ.

ಇದನ್ನೂ ಓದಿ: Karnataka DBT schemes: ಪಿಂಚಣಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್! ಪ್ರತಿ ತಿಂಗಳು ಈ ದಿನಾಂಕದ ಒಳಗೆ ನಿಮ್ಮ ಖಾತೆಗೆ ಹಣ.

1)ಭೂ ಒಡೆತನ ಯೋಜನೆ:

ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಈ ಕೆಳಕಂಡ ಘಟಕ ವೆಚ್ಚದಲ್ಲಿ ಕೃಷಿ ಜಮೀನು ಖರೀದಿಗೆ ಘಟಕ ವೆಚ್ಚ ರೂ. 25  ಲಕ್ಷಕ್ಕೆ ಶೇ. 50 ಸಹಾಯಧನದಲ್ಲಿ ಸಾಲ ಮತ್ತು ಉಳಿಕೆ 50 % ಸಾಲಕ್ಕೆ ಶೇ 6ರ ಬಡ್ಡಿದರದಲ್ಲಿ ಸಾಲ ಪಡೆಯಬವುದು.

ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

2)ಗಂಗಾ ಕಲ್ಯಾಣ ಯೋಜನೆ:

1.20 ಎಕರೆ ಯಿಂದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೊಳವೆಬಾವಿ ಕೊರೆದು ಪಂಪ್‌ಸೆಟ್ ಅಳವಡಿಸಿ, ವಿದ್ಯುದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗುವುತ್ತದೆ. 

ಘಟಕ ವೆಚ್ಚ: ರೂ. 4.75 ಲಕ್ಷ  ಅಥವಾ ರೂ. 3.75 ಲಕ್ಷ - ಇದರಲ್ಲಿ ರೂ. 50,000/- ಸಾಲವೂ ಸೇರಿರುತ್ತದೆ.

ಸಮಾಜ ಕಲ್ಯಾಣ ಇಲಾಖೆ           1)ಭೂ ಒಡೆತನ ಯೋಜನೆ 2)ಗಂಗಾ ಕಲ್ಯಾಣ ಯೋಜನೆ 3)ಸ್ವಯಂ ಉದ್ಯೋಗ ನೇರಸಾಲ ಯೋಜನೆ 4)ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ 5)ಸ್ವಾವಲಂಭಿ  ರಥಿ.
6)ಮೈಕ್ರೋಕ್ರೆಡಿಟ್ ಯೋಜನೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  29-11-2023
ಆನ್ಲೈನ್ ಅರ್ಜಿ ಸಲ್ಲಿಸಲು ಲಿಂಕ್  Apply Now

3)ಸ್ವಯಂ ಉದ್ಯೋಗ ನೇರಸಾಲ ಯೋಜನೆ:

ಕಿರು ಅರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಮತ್ತು ಸಾಲ ಒದಗಿಸುವ ಯೋಜನೆ ಇದಾಗಿದೆ.

ಈ ಯೋಜನೆಯಡಿ ರೂ 1 ಲಕ್ಷ ಶೇ 50% ಸಹಾಯಧನ ಉಳಿದ 50,000 ಸಾವಿರಕ್ಕೆ ಶೇಕಡ 4ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

ಇದನ್ನೂ ಓದಿ: New ration card-  ಆಹಾರ ಇಲಾಖೆಯಿಂದ ಗ್ರಾಹಕರಿಗೆ ಸಿಹಿ ಸುದ್ದಿ!

4)ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ:

ಈ ಯೋಜನೆಯಡಿ ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಸಹಾಯಧನ ಮತ್ತು ಉಳಿದ ಮೊತ್ತಕ್ಕೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಒದಗಿಸಲಾಗುತ್ತದೆ.

ಒಟ್ಟು ಘಟಕ ವೆಚ್ಚದ ಶೇ 70 ರಷ್ಟು ಸಹಾಯಧನ ಅಥವಾ ರೂ ಗರಿಷ್ಠ 1 ಲಕ್ಷದಿಂದ 2 ಲಕ್ಷದ ವರೆಗೆ ಸಹಾಯಧನ ನೀಡಲಾಗಿತ್ತದೆ.

5)ಸ್ವಾವಲಂಭಿ ಸಾರಥಿ:

ಈ ವರ್ಗಕ್ಕೆ ಸೇರಿದ ಹಿಂದುಳಿದ ಯುವಕರಿಗೆ ಸ್ವ-ಉದ್ಯೋಗ ನಡೆಸಲು ಹಳದಿ ನೋರ್ಡ ಸರಕು ವಾಹನ ಅಥವಾ ಟ್ಯಾಕ್ಸಿ ಖರೀದಿಸಲು ಒಟ್ಟು ಘಟಕ ವೆಚ್ಚಕ್ಕೆ ರೂ 4.00 ಲಕ್ಷ ಸಹಾಯಧನ ನೀಡಲಾಗುತ್ತದೆ.

6)ಮೈಕ್ರೋಕ್ರೆಡಿಟ್ ಯೋಜನೆ:

ಮಹಿಳಾ ಸ್ವ-ಸಹಾಯ ಸಂಘಗಳಿಗೆ(ಕನಿಷ್ಠ 10 ಸದಸ್ಯರು) ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುತ್ತದೆ.

ಒಟ್ಟು ರೂ 2.5 ಲಕ್ಷ ಕ್ಕೆ ರೂ 1.5 ಲಕ್ಷ ಸಹಾಯಧನ ನೀಡುವುದರ ಜೊತೆಗೆ ಬಾಕಿ ಉಳಿಕೆ 1 ಲಕ್ಷಕ್ಕೆ ರೂ 1.00 ಲಕ್ಷ ಶೇಕಡ 4ರ ಬಡ್ಡಿದರದಲ್ಲಿ ಸಾಲ ಒದಗಿಸಲಾಗುತ್ತದೆ.

ಇದನ್ನೂ ಓದಿ: Karnataka Drought Fund : ರಾಜ್ಯ ಸರಕಾರದಿಂದ 324 ಕೋಟಿ ರೂ. ಬರ ಪರಿಹಾರ ಬಿಡುಗಡೆ! ಯಾವ ಜಿಲ್ಲೆಗೆ ಎಷ್ಟು ಹಣ ಬಿಡುಗಡೆ?

ಅಗತ್ಯವಾಗಿ ಒದಗಿಸಬೇಕಾದ ದಾಖಲಾತಿಗಳು:

  1. ಆಧಾರ್ ಕಾರ್ಡ್
  2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  3. ರೇಷನ್ ಕಾರ್ಡ್ಪ್ರತಿ
  4. ಪೋಟೋ-01
  5. ಪಹಣಿ
  6. ಬ್ಯಾಂಕ್ ಪಾಸ್ ಬುಕ್ ಪ್ರತಿ

How to apply- ಎಲ್ಲಿ ಅರ್ಜಿ ಸಲ್ಲಿಸಬೇಕು?

ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು ಅಥವಾ ಸ್ವಂತ ನೀವೆ ನೇರವಾಗಿ ಸೇವಾ ಸಿಂಧು ಪೋರ್ಟಲ್(https://sevasindhu.karnataka.gov.in) ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು.

ಇದನ್ನೂ ಓದಿ: Voter ID list-2023: ಚುನಾವಣಾ ಆಯೋಗದಿಂದ ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಸರಿ ಇದೆಯೇ ಚೆಕ್ ಮಾಡಿ.

Application last date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು  29 ನವೆಂಬರ್ 2023 ಕೊನೆಯ ದಿನವಾಗಿದೆ.

Social Welfare Department helpline-ಹೆಚ್ಚಿನ ಮಾಹಿತಿಗಾಗಿ:

ಹೆಚ್ಚಿನ ಮಾಹಿತಿಗಾಗಿ ಈ 9482300400 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬವುದು ಅಥವಾ  ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಛೇರಿ ಅಥವಾ ನಿಗಮಗಳ ವೆಬ್ ಸೈಟ್ ಭೇಟಿ ಮಾಡಿ.