Aadhar Card- ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ನಿಮ್ಮ ಆಧಾರ್ ಗೆ ತಪ್ಪದೇ ಈ ಆಯ್ಕೆಯನ್ನು ಸಕ್ರಿಯಗೊಳಿಸಿ!

March 14, 2025 | Siddesh
Aadhar Card- ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ನಿಮ್ಮ ಆಧಾರ್ ಗೆ ತಪ್ಪದೇ ಈ ಆಯ್ಕೆಯನ್ನು ಸಕ್ರಿಯಗೊಳಿಸಿ!
Share Now:

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರನ್ನು ಗೌಪ್ಯ ಮಾಹಿತಿಯನ್ನು ಕಲೆಹಾಕಲು ಸೈಬರ್ ದಾಳಿ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಆಧಾರ್ ಕಾರ್ಡಗೆ(Aadhar Card) ಮಾಸ್ಕ್ ಭದ್ರತೆಯನ್ನು ಒದಗಿಸಲು ಮುಂದಾಗಿದ್ದು ಇದನ್ನು ಪಡೆಯುವುದು ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

Masked Adhar Card-ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ದೇಶದ ಪ್ರತಿಯೊಬ್ಬ ನಾಗರಿಕರ ಗೌಪ್ಯತೆಯನ್ನು ಕಾಪಾಡುವುದರ ಸಲುವಾಗಿ ಒಂದು ಹೊಸ ಮಾದರಿಯ ಆಧಾರ್ ಕಾರ್ಡ್ ಆಯ್ಕೆ ನೀಡಿದ್ದು, ಇದರಿಂದ ಸಾರ್ವಜನಿಕರಿಗೆ ಹಲವು ರೀತಿಯ ಪ್ರಯೋಜನಗಳಿವೆ.

ಇದನ್ನೂ ಓದಿ: UAE ನಲ್ಲಿ 10ನೇ ತರಗತಿ ಪಾಸಾದವರಿಗೆ ತಿಂಗಳಿಗೆ ರೂ 53,584/- ವೇತನ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

ಈ ಹೊಸ ಮಾದರಿಯ ಆಧಾರ್ ಕಾರ್ಡಿನ ಹೆಸರೇ ಮಾಸ್ಕ್ಡ್ ಆಧಾರ್ ಕಾರ್ಡ್(How To Get Masked Adhar card), ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ ಪರಿಚಯಿಸಿರುವ ಈ ಹೊಸ ವ್ಯವಸ್ಥೆಯಿಂದ ನಿಮ್ಮ ಗೌಪ್ಯತೆ ಮಾಹಿತಿ ಕಾಪಾಡಿಕೊಳ್ಳುವುದರ ಜೊತೆಗೆ ವಿವಿಧ ರೀತಿಯಲ್ಲಿ ಹಲವಾರು ಪ್ರಯೋಜನಗಳಿದ್ದು, ಇದನ್ನು ಮೊಬೈಲ್ ನಲ್ಲಿಯೆ ಇದನ್ನು ಪಡೆದುಕೊಳ್ಳುವುದು ಎನ್ನುವ ಮಾಹಿತಿ ಇಲ್ಲಿದೆ.

What is Masked Aadhar card-ಮಾಸ್ಕ್ಡ್ ಆಧಾರ್ ಕಾರ್ಡ್ ಎಂದರೇನು?

ಮಾಸ್ಕಡ್ ಆಧಾರ್ ಕಾರ್ಡ್ ಎಂಬುವುದನ್ನು ಸುಲಭವಾದ ಭಾಷೆಯಲ್ಲಿ ಹೇಳುವುದಾದರೆ, ಸಾಮಾನ್ಯವಾಗಿ ಆಧಾರ್ ಕಾರ್ಡಿಗೆ 12 ಅಂಕೆಗಳಿರುತ್ತವೆ. ಆದರೆ ಈ ಮಾಸ್ಕಡ್ ಆಧಾರ್ ಕಾರ್ಡ್ ನಲ್ಲಿ ಮೊದಲನೆಯ 8 ಅಂಕಿಗಳು ಕಾಣದೆ ಕೇವಲ ಕೊನೆಯ 4 ಅಂಕೆಗಳು ಮಾತ್ರ ಕಾಣುತ್ತವೆ.

ಇದನ್ನೂ ಓದಿ: Vasati Yojane-ವಿವಿಧ ವಸತಿ ಯೋಜನೆಯಡಿ ಈ ವರ್ಷ 2.30 ಲಕ್ಷ ಮನೆ ಮಂಜೂರು!

ಉದಾಹರಣೆಗೆ : ನಿಮ್ಮ ಆಧಾರ್ ಸಂಖ್ಯೆ "1234 5678 9876" ಆಗಿದ್ದರೆ, ಸಾಮಾನ್ಯ ಆಧಾರ್ ಕಾರ್ಡ್ ನಲ್ಲಿ ಈ ಎಲ್ಲಾ 12 ಸಂಖ್ಯೆಗಳು ಕಾಣುತ್ತವೆ. ಅದೇ ಒಂದು ವೇಳೆ ನೀವು ಮಾಸ್ಕಡ್ ಆಧಾರ್ ಕಾರ್ಡ್ ಹೊಂದಿದ್ದಲ್ಲಿ, ಇದರಲ್ಲಿ ಕೇವಲ ನಿಮ್ಮ ಆಧಾರ್ ಕಾರ್ಡ್ ನ ಕೊನೆಯ 4 ಸಂಖ್ಯೆಗಳು ಮಾತ್ರ ಕಾಣುತ್ತವೆ. ಉದಾ- ×××× ×××× 9876".

ಇದನ್ನೂ ಓದಿ: Job Fair- ಬೃಹತ್ ಉದ್ಯೋಗ ಮೇಳ! ಇಲ್ಲಿದೆ ನೋಂದಣಿ ಲಿಂಕ್!

aadhar card (5)

Masked Aadhar card Benefits-ಇದರ ಪ್ರಯೋಜನಗಳೇನು?

ಭಾರತದ ವಿಶಿಷ್ಟ ಕುರಿತುನ ಪ್ರಾಧಿಕಾರವು ಪರಿಚಯಿಸಿರುವ ಈ ಆಧಾರ್ ಕಾರ್ಡಿನ ಪ್ರಮುಖ ಉದ್ದೇಶವೇನೆಂದರೆ ಯಾವುದೇ ಒಬ್ಬ ನಾಗರಿಕನ ಆಧಾರ್ ಕಾರ್ಡಿನ ಸಹಾಯದಿಂದ ಅವನ ವೈಯಕ್ತಿಕ ಮಾಹಿತಿ ದುರ್ಬಳಕೆ ಆಗದಂತೆ ತಡೆಯುವುದು. ನೀವು ಇದನ್ನು ಒಂದು ಬಾರಿ ಪಡೆದರೆ ಹಲವಾರು ರೀತಿಯ ಸೈಬರ್ ವಂಚನೆಗಳಿಂದ ತಪ್ಪಿಸಿಕೊಳ್ಳಬಹುದು.

ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಯಾವುದೇ ಸಮಯದಲ್ಲಿ ಕಳೆದು ಹೋದಲ್ಲಿ, ಅದನ್ನು ವಂಚಕರು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿರುವುದಿಲ್ಲ ಹಾಗೂ ನಿಮ್ಮ ಗೌಪ್ಯ ಮಾಹಿತಿಯನ್ನು ಕೂಡ ಪಡೆದುಕೊಳ್ಳಲು ಅವರಿಗೆ.

ಇಷ್ಟೇ ಅಲ್ಲದೆ, ನಿಮ್ಮ ಆಧಾರ್ ಕಾರ್ಡನ್ನು ಸಹಾಯದಿಂದಾಗಿ ವಂಚಕರು ನಕಲಿ ಸಿಮ್ ಖರೀದಿಸಿ ಅದನ್ನು ವಂಚಿಗಳಿಗಾಗಿ ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇದರಿಂದಲೂ ಕೂಡ ಮಾಸ್ಕಡ್ ಆಧಾರ್ ಕಾರ್ಡ್ ನಿಮಗೆ ಸುರಕ್ಷತೆ ನೀಡುತ್ತದೆ.

ಇದನ್ನೂ ಓದಿ: BPL Ration Card- ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ನೂತನ ಕ್ರಮ!

How To Get Masked Adhar card -ಹಾಗಿದ್ದರೆ ಇದನ್ನು ಪಡೆಯುವುದು ಹೇಗೆ?

Step-1: ಮೊದಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕೃತ ಜಾಲತಾಣ https://uidai.gov.in ಗೆ ಭೇಟಿ ನೀಡಿ

Step-2: ಆಧಾರ್ ಡೌನ್ಲೋಡ್ ಎಂಬ ಆಯ್ಕೆ ಮೇಲೆ ಒತ್ತಿ ಮುಂದುವರಿಯಿರಿ.

Step-3: My adhar ಎಂಬ ಆಯ್ಕೆ ಆಯ್ಕೆ ಮಾಡಿಕೊಳ್ಳಿ.

Step-4: ನಂತರ ಆಧಾರ್ ಡೌನ್ಲೋಡ್ ಆಯ್ಕೆ ಮೇಲೆ ಒತ್ತಿ, ನಿಮ್ಮ 12 ಸಂಖ್ಯೆಯ ಆಧಾರ್ ಸಂಖ್ಯೆ ನಮೂದಿಸಿ ನಿಮ್ಮ ಆಧಾರ್ ಕಾರ್ಡ್ ಗೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ಎಂಟರ್ ಮಾಡಿ ಮುಂದುವರೆಯಿರಿ.

Step-5: ನಂತರದಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ಸಮಯದಲ್ಲಿ "Masked Adhar" ಎಂಬ ಆಯ್ಕೆಯನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಂಡು ಮಾಸ್ಕಡ್ ಆಧಾರ್ ಕಾರ್ಡ್ ಸುಲಭವಾಗಿ ಪಡೆಯಿರಿ.

ಇದನ್ನೂ ಓದಿ: Bagar Hukum-ಬಗರ್ ಹುಕುಂ ಅರ್ಜಿ ವಿಲೇವಾರಿ ಕುರಿತು ಮಹತ್ವದ ಮಾಹಿತಿ ಪ್ರಕಟ!

ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿ ಇದನ್ನು ಪಡೆಯಲು ನಿಮಗೆ ಗೊತ್ತಾಗದಿದ್ದಲ್ಲಿ ನಿಮ್ಮ ಹತ್ತಿರದ ಕಂಪ್ಯೂಟರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಮಾಸ್ಕಡ್ ಆಧಾರ್ ಕಾರ್ಡ್ ಪಡೆಯಿರಿ ಹಲವು ವಂಚನೆಗಳಿಂದ ಸುರಕ್ಷಿತವಾಗಿರಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: